District News – #1 Latest News Updates Portal – 24×7 | Kannada News Now
Kannada news, Kannadanewsnow, News in Kannada, Kannada, ಕನ್ನಡ ವಾರ್ತೆಗಳು, ಕನ್ನಡ ಸುದ್ದಿಗಳು, kannada online news portal, Kannada news online, Movie News in Kannada, Sports News in Kannada, Business . politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada
suvarna news live, public tv kannada news live, news18 kannada live, public news live, public tv news, tv5 kannada news live, yupptv kannada public tv live, btv kannada live, ಕನ್ನಡ ವಾರ್ತೆಗಳು, kannada online news, Kannada news online portal, Movie News in Kannada, Sports News in Kannada, Business news, politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada
kannada news now, kannada news 24x7, online Kannada Newspaper, Online Kannada news portal, kannada live news updates, latest sandalwood cinema News, controversial news, gossips coverage in karnataka, gossips news in Kannada, all Kannada News updates, current Affairs in Karnataka, political news in kannada, news from india in Kannada language, Insurance, Gas/Electricity, Loans, Mortgage, Attorney, Lawyer , Donate, , Conference Call, Degree, Credit, credit card, car loans, home appliances, flipkart home appliances, flipkart , amazon home appliances, online shoping, cricket, onlinegame, medicare, weight loss, hairloss, helthtips, weight loss, online classes, Snapdeal., eBay, Myntra. Shopclues.
breaking news, kannada latest news, kannada news, kannada news live, kannada online news, kannadanewsnow.com, kannadanewsnowdotcom, kanndanew newsnow dot com, karnataka latest news, karnataka news, latest news. indianews. Narendra Damodardas Modi, india breaking news, coronavirus, covid 19 india, yeddyurappa, siddaramaiah, Politicians in India, Current affairs, Elections, Political News, Current Affairs politics, Rahul Gandhi, Indian National Congress, Amit Shah, Bharatiya Janata Party, Priyanka Gandhi, Mamata Banerjee
All India Trinamool Congress, Arvind Kejriwal, Aam Aadmi Party, Asaduddin Owaisi, All India Majlis-e-Ittehadul Muslimeen, Follow, H D Deve Gowda, Janata Dal (Secular), Harsh Vardhan, Bharatiya Janata Party, KCR, Telangana Rashtra Samithi, Kamal Hassan, Makkal Neethi, MaiamLal, Krishna, Advani, Bharatiya Janata Party, Mamata Banerjee All India Trinamool Congress, Manmohan Singh, Congress, mallikarjun kharge, Indian National Congress, Nirmala Sitharaman, Bharatiya Janata Party, Nitin Gadkari, Bharatiya Janata Party, Raj Thackeray, Maharashtra Navnirman Sena, Uma Bharti, Shivsena, V K Singh, General VK Singh, Sourav Ganguly, MS Dhoni , Virat Kohli, yogi, Adithyanath
ಬೆಂಗಳೂರು : ಆಗಸ್ಟ್ 2021ರೊಳಗೆ ಒಂದು ರಾಷ್ಟ್ರ ಒಂದು ಕಾರ್ಡ್ ವ್ಯವಸ್ಥೆ ಜಾರಿಗೆ ಕ್ರಮ. ನಮ್ಮ ಮೆಟ್ರೋ ಹಾಗೂ ಬಿಎಂಟಿಸಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಈ ಕಾರ್ಡ್ ಬಳಕೆಗೆ ಅವಕಾಶ ನೀಡಲಾಗುತ್ತಿದೆ ಎಂಬುದಾಗಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಈ ಮೂಲಕ ಬಿಎಂಟಿಸಿ ಹಾಗೂ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಒಂದೇ ಸ್ಮಾರ್ಟ್ ಕಾರ್ಡ್ ಬಳಕೆ ಮಾಡಿಕೊಂಡು, ಪ್ರಯಾಣಿಸಲು ಅವಕಾಶ ಸದ್ಯದಲ್ಲೇ ದೊರೆಯಲಿದೆ.
ಈ ಕುರಿತಂತೆ ಇಂದು ಸಿಎಂ ಯಡಿಯೂರಪ್ಪ 2021-22ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡುತ್ತಾ ಮಾಹಿತಿ ನೀಡಿದಂತ ಅವರು, ಬೆಂಗಳೂರಿಗೆ ಪ್ರತ್ಯೇಕವಾಗಿ ವಲಯವಾರು ಅನುದಾನವನ್ನು ಘೋಷಣೆ ಮಾಡಿದ್ದಾರೆ. ತಮ್ಮ ಇಂದಿನ ಬಜೆಟ್ ನಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅನುದಾನ ರೂಪಿಸಿದ್ದಾರೆ. ಅಂತಹ ಬೆಂಗಳೂರು ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತ ಹೈಲೈಟ್ಸ್ ಈ ಕೆಳಗಿನಂತಿದೆ.
ಬೆಂಗಳೂರು ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ರಾಜ್ಯ ಬಜೆಟ್ ಹೈಲೈಟ್ಸ್
ಬೆಂಗಳೂರಿನ ಮಲ್ಲೇಶ್ವರದಲ್ಲಿ ಮೈಸೂರು ಲ್ಯಾಂಪ್ಸ್ ವರ್ಕ್ಸ್ ನಿಯಮಿತಕ್ಕೆ ಸೇರಿದ ಪ್ರದೇಶದಲ್ಲಿ ಎಕ್ಸಪೀರಿಯನ್ಸ್ ಬೆಂಗಳೂರು ಕೇಂದ್ರ ಅಭಿವೃದ್ಧಿ
ಬೈಯ್ಯಪ್ಪನಹಳ್ಳಿಯಲ್ಲಿರುವ ಎನ್ ಜಿ ಇ ಎಫ್ ನಲ್ಲಿ ಹಾಗೂ ಇನ್ನೂ ಮೂರು ಕಡೆಗಳ್ಲಲಿ ವೃಕ್ಷೋದ್ಯಾನಗಳ ಅಭಿವೃದ್ಧಿ
ಬೆಂಗಳೂರು ಪೆರಿಫೆರಲ್ ರಿಂಗ್ ರಸ್ತೆ ಕಾಮಗಾರಿ ಪ್ರಾರಂಭಿಸಲು ಕ್ರಮ
14,788 ಕೋಟಿ ರೂಗಳ ಅಂದಾಜು ವೆಚ್ಚದಲ್ಲಿ 58.2 ಕಿಲೋಮೀಟರ್ ಉದ್ದದ ಹೊರ ವರ್ತುಲ ರಸ್ತೆ, ಏರ್ಪೋರ್ಟ್ ಮೆಟ್ರೋ ಜಾಲ ಹಂತ 2ಎ ಮತ್ತು 2 ಬಿ ಅನುಷ್ಠಾನ.
ಉಪ ನಗರ ರೈಲು ಯೋಜನೆಗೆ 2021-22ನೇ ಸಾಲಿಗೆ 850 ಕೋಟಿ ರೂ ಅನುದಾನ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್ ಕಟ್ಟಡ ನಿರ್ಮಾಣ ಶೀಘ್ರ ಪೂರ್ಣ. ಗರಿಷ್ಠ ವಾರ್ಷಿಕ ಪ್ರಯಾಣಿಕರ ಸಾಮರ್ಥ್ಯ 60 ದಶಲಕ್ಷಕ್ಕೆ ಹೆಚ್ಚಳ
ಕೋರಮಂಗಲ ಕಣಿವೆಯನ್ನು ಪ್ರವಾಸಿ ಆಕರ್ಷಣೆಗಾಗಿ ಅಭಿವೃದ್ಧಿ ಪಡಿಸುವ 169 ಕೋಟಿ ರೂ ವೆಚ್ಚದಲ್ಲಿ ಕೋರಮಂಗಲ ಕಣಿವೆ ರಾಜ ಕಾಲುವೆ ಅಭಿವೃದ್ಧಿ ಮತ್ತು ನಿರ್ವಹಣೆ (ಕೆ-100) ಯೋಜನೆ ಅನುಷ್ಠಾನ
ಬೆಂಗಳೂರು ನಗರದ ಘನತ್ಯಾಜ್ಯ ಸಂಗ್ರಹಣ, ಸಾಗಾಣಿಕೆ, ಸಂಸ್ಕರಣೆಯನ್ನು ನಿರ್ವಹಿಸಲು ಪ್ರತ್ಯೇಕ ಕಂಪನಿ ಸ್ಥಾಪನೆ
ಆಗಸ್ಟ್ 2021ರೊಳಗೆ ಒಂದು ರಾಷ್ಟ್ರ ಒಂದು ಕಾರ್ಡ್ ವ್ಯವಸ್ಥೆ ಜಾರಿಗೆ ಕ್ರಮ. ನಮ್ಮ ಮೆಟ್ರೋ ಹಾಗೂ ಬಿಎಂಟಿಸಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಈ ಕಾರ್ಡ್ ಬಳಕೆಗೆ ಅವಕಾಶ
ಕಲಬುರಗಿ : ಸಂಚಾರ ದಟ್ಟಣೆ ನಿಯಂತ್ರಣ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಡಿ. ದೇವರಾಜ ಅರಸ್ ಟ್ರಕ್ ಟರ್ಮಿನಲ್ ನಿಗಮದಿಂದ ಸಕಲ ಮೂಲಸೌಕರ್ಯವುಳ್ಳ ಸುಸಜ್ಜಿತ ಟ್ರಕ್ ಟರ್ಮಿನಲ್ ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದು ನಿಗಮದ ಅಧ್ಯಕ್ಷ ಡಿ.ಎಸ್ ವೀರಯ್ಯ ತಿಳಿಸಿದರು.
ಶನಿವಾರ ನಗರದ ಗ್ರ್ಯಾಂಡ್ ಹೋಟೆಲ್ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಿಗಮದಲ್ಲಿ ಹೆಚ್ಚಿನ ಅನುದಾನ ಇಲ್ಲದ ಕಾರಣ ಟ್ರಕ್ ಟರ್ಮಿನಲ್ ನಿರ್ಮಾಣವನ್ನು ಪಿ.ಪಿ.ಪಿ. ಅಥವಾ ಜಂಟಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ಚಿಂತಿಸಲಾಗುತ್ತಿದೆ. ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ನೀಡಿದಲ್ಲಿ ನಿಗಮದಿಂದಲೇ ನಿರ್ಮಿಸಲಾಗುವುದು ಎಂದರು.
ಪ್ರಸ್ತುತ ರಾಜ್ಯದಲ್ಲಿ ಯಶವಂತಪೂರ, ಧಾರವಾಡ ಹಾಗೂ ಮೈಸೂರು-ನಂಜನಗೂಡು ರಸ್ತೆಯಲ್ಲಿ ನಿರ್ಮಿಸಿರುವ ಟರ್ಮಿನಲ್ಗಳು ಚಾಲ್ತಿಯಲ್ಲಿವೆ. ಬೆಂಗಳೂರಿನ ದಾಸನಪೂರದಲ್ಲಿ 46 ಎಕರೆ ಪ್ರದೇಶದಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಿದೆ. ಇದಲ್ಲದೆ ಹುಬ್ಬಳ್ಳಿಯಲ್ಲಿ 56 ಎಕರೆ, ಹೊಸಪೇಟೆಯಲ್ಲಿ 48 ಎಕರೆ ಜಮೀನು ನಿರ್ಮಾಣಕ್ಕೆ ಲಭ್ಯವಿದೆ. ಮಂಗಳೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ನಿವೇಶನ ಮೀಸಲಿಡಲಾಗಿದೆ ಎಂದರು.
ಸಿಮೆಂಟ್ ನಗರಿಯಾಗಿರುವ ಕಲಬುರಗಿಯಲ್ಲಿ ಲಾರಿಗಳ ಸಂಚಾರ ದಟ್ಟಣೆ ಹೆಚ್ಚಿದ್ದು, ಇಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ ಅತ್ಯಗತ್ಯ. ಈ ಸಂಬಂಧ ಇಂದು ಅಧಿಕಾರಿಗಳ ಸಭೆ ನಡೆಸಿ ಸೂಕ್ತ ಜಮೀನು ಗುರುತಿಸಲು ನಿರ್ದೇಶನ ನೀಡಿದ್ದೇನೆ. ಜಿಲ್ಲೆಯ ಕಮಲಾಪುರದ ಮತ್ತು ಕಲಬುರಗಿ-ಶಹಾಬಾದ ರಸ್ತೆಯ ನಂದೂರ ಬಳಿ ನಿವೇಶನವಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಸುಮಾರು 40 ರಿಂದ 50 ಎಕರೆ ಪ್ರದೇಶದಲ್ಲಿ ಸಕಲ ವ್ಯವಸ್ಥೆವುಳ್ಳ ಒಂದು ಮಾದರಿ ಟ್ರಕ್ ಟರ್ಮಿನಲ್ ನಿರ್ಮಿಸುವ ಉದ್ದೇಶಿಸಿದ್ದು, ಇದಕ್ಕೆ ಪೂರಕವಾಗಿ ನಿವೇಶನ ಗುರುತಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ರಾಜ್ಯ ಹಾಗೂ ಅಂತರ ರಾಜ್ಯ ವಾಹನಗಳು ದಿನನಿತ್ಯ ಸಂಚಾರದ ಮೇಲಿರುವುದರಿಂದ ಹಾಗೂ ವಾಹನ ಚಾಲಕರಿಗೆ ತಂಗಲು ಸೂಕ್ತ ವ್ಯವಸ್ಥೆ ಕಲ್ಪಿಸುವುದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಟ್ರಕ್ ಟರ್ಮಿನಲ್ ಬಳಿ ಕುಡಿಯುವ ನೀರು, ಶೌಚಾಲಯ, ಲಾಡ್ಜ್, ರೀಕ್ರಿಯೇಷನ್ ಕ್ಲಬ್, ಹೊಟೆಲ್ ಸ್ಥಾಪಿಸಲಾಗುವುದು. ಲಾಜಿಸ್ಟಿಕ್ಸ್, ಪೆಟ್ರೋಲ್ ಬಂಕ್, ಎಟಿಎಂ, ಪೆÇಲೀಸ್ ಸ್ಟೇಷನ್, ಸ್ಪೇರ್ ಪಾಟ್ರ್ಸ್ ಅಂಗಡಿ, ಮೆಡಿಕಲ್, ಕ್ಲಿನಿಕ್ ಹೀಗೆ ಎಲ್ಲಾ ಮೂಲಸೌಕರ್ಯಗಳ ಸೇವೆ ಜೊತೆಗೆ ನಿಗಮದ ಆರ್ಥಿಕ ಚೇತರಿಕೆಗೆ ಶಾಪಿಂಗ್ ಕಾಂಪ್ಲೆಕ್ಸ್ ಸಹ ನಿರ್ಮಿಸುವ ಯೋಜನೆ ನಮ್ಮ ಮುಂದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ದೇವಿಂದ್ರ ಎಸ್. ಸೀನೂರ ಮತ್ತು ಆನಂದ ಇಂಗಳಗಿ ಇದ್ದರು.
ಮಂಗಳೂರು : ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ,ಮಂಗಳೂರು ಪ್ರೆಸ್ ಕ್ಲಬ್ ಮತ್ತು ಪತ್ರಿಕಾಭವನ ಟ್ರಸ್ಟ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ ಮಂಗಳೂರಿನ ನೆಹರೂ ಮೈದಾನದ ಪಕ್ಕದ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯಿತು. ಮಂಗಳೂರು ಪೋಲಿಸ್ ಆಯುಕ್ತ ಎನ್.ಶಶಿಕುಮಾರ್ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ ವರ್ಷವಿಡೀ ಪತ್ರಕರ್ತರು ಹಾಗೂ ಪೊಲೀಸರು ಕರ್ತವ್ಯದಲ್ಲಿರುತ್ತಾರೆ. ಅವರಿಗೆ ಇಂತಹ ಕ್ರೀಡಾ ಕೂಟ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿ ಎಂದರು.
ಸಮಾಜದ ಓರೆಕೋರೆ ತಿದ್ದುವವರು ಪತ್ರಕರ್ತರು. ಪತ್ರಕರ್ತರು ಸಂಘಟಿತರಾಗಿದ್ದರೆ ಇನ್ನಷ್ಟು ಕ್ರಿಯಾಶೀಲರಾಗಿರಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಏಷ್ಯ ನ್ ಪತ್ರಕರ್ತರ ಒಕ್ಕೂಟ ದ ಸಂಚಾಲಕ ಮದನ್ ಗೌಡ ಮಾತನಾಡಿ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕಾರ್ಯ ಚಟುವಟಿಕೆಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮಂಗಳೂರು ಸೌಹಾರ್ದತೆಯ ನೆಲ. ಇಲ್ಲಿನ ಪತ್ರಕರ್ತರ ಸಂಘದ ಕಾರ್ಯಚಟುವಟಿಕೆ ಮಾದರಿಯಾಗಿದೆ ಎಂದು ಹೇಳಿದರು.
ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಆನಂದ ಶೆಟ್ಟಿ. ಕೆ, ಕೆಯುಡಬ್ಲ್ಯುಜೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಹಿರಿಯ ಪತ್ರಕರ್ತ ರವೀಂದ್ರ ಶೆಟ್ಟಿ ಉಪಸ್ಥಿತರಿದ್ದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಸ್ವಾಗತಿಸಿದರು. ದ.ಕ.ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ
ಪ್ರಧಾನ ಕಾರ್ಯದರ್ಶಿ, ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಪತ್ರಕರ್ತ ವಿಜಯ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.
ಬೆಂಗಳೂರು : ಈಗಾಗಲೇ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಫ್ರೈ ಬಸ್ ಸಾರಿಗೆ ಸಂಚಾರವನ್ನು ಆರಂಭಿಸಲಾಗಿತ್ತು. ಇದೀಗ ಮುಂದುವರೆದು ಸಾರ್ವಜನಿಕರ ಪ್ರಯಾಣಿಕರ ಅನುಕೂಲಕ್ಕಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಡಿಕೇರಿ, ಕುಂದಾಪುರಕ್ಕೆ ಫ್ಲೈ ಬಸ್ ಸಾರಿಗೆ ಸಂಚಾರ ಆರಂಭಿಸಿದೆ.
ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ್ರಕಟಣೆ ಹೊರಡಿಸಿದ್ದು, ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ಫ್ಲೈ ಬಸ್ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.
ಮುಂದುವರೆದು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಡಿಕೇರಿಗೆ ಫ್ಲೈ ಬಸ್ ಸಾರಿಗೆಗಳನ್ನು ಹಾಗೂ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕುಂದಾಪುರ ಮಾರ್ಗದಲ್ಲಿ ಫ್ಲೈ ಬಸ್ ಸಾರಿಗೆಗಳು ಕಾರ್ಯಾಚರಣೆಯನ್ನು ದಿನಾಂಕ 05-03-2021ರಿಂದ ಆರಂಭಿಸುತ್ತಿರುವುದಾಗಿ ತಿಳಿಸಿದೆ.
ವೇಳಾಪಟ್ಟಿ ಮತ್ತು ಪ್ರಯಾಣದರದ ವಿವರ ಹೀಗಿದೆ..
ಬೆಂಗಳೂರಿನಿಂದ ಮಡಿಕೇರಿಗೆ ಫ್ಲೈ ಬಸ್ ಸಂಚಾರ ಕೆಐಎಲ್ ನಿಂದ 00:30, 12:00ಕ್ಕೆ ಹೊರಡಲಿದೆ. ಮಡಿಕೇರಿಯಲನ್ನು 06:45, 18:30ಗೆ ತಲುಪಲಿದೆ. ಮಡಿಕೇರಿಯಿಂದ 08.30, 20.30ಗೆ ಹೊರಡಲಿರುವಂತ ಫ್ಲೈ ಬಸ್, ಕೆಐಎಎಲ್ ಅನ್ನು 15.30, 03.30 ಸಮಯಕ್ಕೆ ತಲುಪಲಿದೆ. ಇಂತಹ ಬಸ್ ಸಂಚಾರಕ್ಕೆ ರೂ.1000 ಟಿಕೆಟ್ ದರವನ್ನು ನಿಗದಿ ಪಡಿಸಲಾಗಿದೆ.
ಬೆಂಗಳೂರಿನಿಂದ ಕುಂದಾಪುರಕ್ಕೆ ಕೆಐಎಎಲ್ ನಿಂದ ಫ್ಲೈ ಬಸ್ 21.00ಕ್ಕೆ ಹೊರಟು, ಕುಂದಾಪುರವನ್ನು 08.30ಕ್ಕೆ ತಲುಪಲಿದೆ. ಕುಂದಾಪುರದಿಂದ 19.00ಕ್ಕೆ ಹೊರಡಲಿರುವಂತ ಪ್ಲೈ ಬಸ್, ಕೆಐಎಎಲ್ ಅನ್ನು 05.15ಕ್ಕೆ ತಲುಪಲಿದೆ. ಬಸ್ ಟಿಕೆಟ್ ದರ ರೂ.1,210 ಆಗಿದೆ.
ಬೆಂಗಳೂರು : ತಮ್ಮ ವಿರುದ್ಧದ ಯಾವುದೇ ಸುದ್ದಿಗಳನ್ನು ಪ್ರಸಾರ ಮಾಡದಂತೆ ತಡೆ ಕೋರಿ ಆರು ಸಚಿವರು ಸಿಟಿ ಸಿವಿಲ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇಂತಹ ಅರ್ಜಿಯನ್ನು ಇದೀಗ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಮಾನ್ಯ ಮಾಡಿದೆ. ಅಲ್ಲದೇ ಮಾರ್ಚ್ 30ರವರೆಗೆ ಮಾನಹಾರಿ ವರದಿ ಪ್ರಸಾರಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಆದೇಶಿಸಿದೆ.
ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆಯ ನಂತ್ರ, ಇನ್ನೂ ಹಲವು ಸಚಿವರ ಸಿಡಿ ಬಿಡುಗಡೆಯಾಗಲಿದೆ ಎಂದೇ ಹೇಳಲಾಗುತ್ತಿತ್ತು. ಇದೇ ಸಂದರ್ಭದಲ್ಲಿ ತಮ್ಮ ತೇಜೋವಧೆಗಾಗಿ ಷಡ್ಯಂತ್ರ ರೂಪಿಸಲಾಗಿದೆ ಎಂಬುದಾಗಿ ಆರೋಪಿಸಿದಂತ ಆರು ಸಚಿವರು, ತಮ್ಮ ವಿರುದ್ಧದ ಯಾವುದೇ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗದಂತೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದರು.
ಇಂದು ಇಂತಹ ಅರ್ಜಿಯ ಕುರಿತಂತೆ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ನ ಸಿಸಿಹೆಚ್-20ರ ನ್ಯಾಯಾಧೀಶರಾದಂತ ಬಿ.ಎಸ್.ವಿಜಯಕುಮಾರ್ ಅವರ ನ್ಯಾಯಪೀಠವು, ಅರ್ಜಿಯನ್ನು ಮಾನ್ಯಮಾಡಿ, ರಾಜ್ಯದ ಎಲ್ಲಾ ಮಾಧ್ಯಮಗಳಿಗೆ 6 ಸಚಿವರ ಬಗ್ಗೆ ಯಾವುದೇ ಮಾನಹಾರಿ ವರದಿಯನ್ನು ಪ್ರಸಾರ ಮಾಡದಂತೆ ಮಧ್ಯಂತರ ತಡೆಯಾಜ್ಞೆಯನ್ನು ನೀಡಿ, ತುರ್ತು ನೋಟಿಸ್ ಜಾರಿಗೊಳಿಸಿದೆ. ಅಲ್ಲದೇ ಅರ್ಜಿಯ ವಿಚಾರಣೆ ಮಾರ್ಚ್ 30ಕ್ಕೆ ಮುಂದೂಡಿಕೆ ಮಾಡಿದ್ದಾರೆ.
ಅಂದಹಾಗೇ ಸಚಿವ ಶಿವರಾಮ್ ಹೆಬ್ಬಾರ್, ಬಿ.ಸಿ.ಪಾಟೀಲ್, ಹೆಚ್ ಟಿ ಸೋಮಶೇಖರ್, ನಾರಾಯಣಗೌಡ, ಡಾ.ಕೆ.ಸುಧಾಕರ್ ಹಾಗೂ ಭೈರತಿ ಬಸವರಾಜ್ ತಮ್ಮ ವಿರುದ್ಧದ ಸುದ್ದಿಗಳ ಪ್ರಸಾರವನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡದಂತೆ ತಡೆ ಕೋರಿ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇಂತಹ ಅರ್ಜಿಯನ್ನು ನ್ಯಾಯಾಲಯ ಮಾನ್ಯ ಮಾಡಿದೆ.
ಬೆಂಗಳೂರು : ತಮ್ಮ ವಿರುದ್ಧದ ಯಾವುದೇ ಸುದ್ದಿಗಳನ್ನು ಪ್ರಸಾರ ಮಾಡದಂತೆ ತಡೆ ಕೋರಿ ಆರು ಸಚಿವರು ಸಿಟಿ ಸಿವಿಲ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇಂತಹ ಅರ್ಜಿಯನ್ನು ಇದೀಗ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಮಾನ್ಯ ಮಾಡಿದೆ.
ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆಯ ನಂತ್ರ, ಇನ್ನೂ ಹಲವು ಸಚಿವರ ಸಿಡಿ ಬಿಡುಗಡೆಯಾಗಲಿದೆ ಎಂದೇ ಹೇಳಲಾಗುತ್ತಿತ್ತು. ಇದೇ ಸಂದರ್ಭದಲ್ಲಿ ತಮ್ಮ ತೇಜೋವಧೆಗಾಗಿ ಷಡ್ಯಂತ್ರ ರೂಪಿಸಲಾಗಿದೆ ಎಂಬುದಾಗಿ ಆರೋಪಿಸಿದಂತ ಆರು ಸಚಿವರು, ತಮ್ಮ ವಿರುದ್ಧದ ಯಾವುದೇ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗದಂತೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದರು.
ಇಂದು ಇಂತಹ ಅರ್ಜಿಯ ಕುರಿತಂತೆ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ನ ಸಿಸಿಹೆಚ್-20ರ ನ್ಯಾಯಾಧೀಶರಾದಂತ ಬಿ.ಎಸ್.ವಿಜಯಕುಮಾರ್ ಅವರ ನ್ಯಾಯಪೀಠವು, ಅರ್ಜಿಯನ್ನು ಮಾನ್ಯಮಾಡಿ, ರಾಜ್ಯದ ಎಲ್ಲಾ ಮಾಧ್ಯಮಗಳಿಗೆ ತುರ್ತು ನೋಟಿಸ್ ಜಾರಿಗೊಳಿಸಿದ್ದಲ್ಲದೇ, ಅರ್ಜಿಯ ವಿಚಾರಣೆ ಮಾರ್ಚ್ 31ಕ್ಕೆ ಮುಂದೂಡಿಕೆ ಮಾಡಿದ್ದಾರೆ.
ಅಂದಹಾಗೇ ಸಚಿವ ಶಿವರಾಮ್ ಹೆಬ್ಬಾರ್, ಬಿ.ಸಿ.ಪಾಟೀಲ್, ಹೆಚ್ ಟಿ ಸೋಮಶೇಖರ್, ನಾರಾಯಣಗೌಡ, ಡಾ.ಕೆ.ಸುಧಾಕರ್ ಹಾಗೂ ಭೈರತಿ ಬಸವರಾಜ್ ತಮ್ಮ ವಿರುದ್ಧದ ಸುದ್ದಿಗಳ ಪ್ರಸಾರವನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡದಂತೆ ತಡೆ ಕೋರಿ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇಂತಹ ಅರ್ಜಿಯನ್ನು ನ್ಯಾಯಾಲಯ ಮಾನ್ಯ ಮಾಡಿದೆ.
ಬೆಂಗಳೂರು : ವಿಶ್ವವಿಖ್ಯಾತ ನಂದಿ ಗಿರಿಧಾಮಕ್ಕೆ ರೋಪವೇ ನಿರ್ಮಾಣ ಮಾಡಲು ಮಾಸ್ಟರ್ ಪ್ಲಾನ್ ಮಾಡಲಾಗಿದೆ. ಒಂದು ವರ್ಷದಲ್ಲಿ ಯೋಜನೆಯನ್ನು ಪೂರ್ಣಗೊಳಿಸಲು ನಿರ್ಧಾರವನ್ನು ರಾಜ್ಯ ಸರ್ಕಾರ ನಿರ್ಧರಿಸಿದೆ. ಅದರ ಪ್ಲಾನ್ ಹೇಗಿದೆ..? ಹೇಗೆ ನಿರ್ಮಾಣಗೊಳ್ಳಲಿದೆ ರೂಪ್ ವೇ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ..
ಇಂದು ವಿಶ್ವವಿಖ್ಯಾತ ನಂದಿ ಬೆಟ್ಟ ಹತ್ತಲು ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ರೋಪ್ವೇ ನಿರ್ಮಾಣ ಮಾಡಲು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಸಿ.ಪಿ.ಯೋಗೇಶ್ವರ ರವರ ಅಧ್ಯಕ್ಷತೆಯಲ್ಲಿ ವಿಕಾಸಸೌಧದಲ್ಲಿ ಸಭೆ ನಡೆಯಿತು.
ಐಡೇಕ್ ಸಂಸ್ಥೆಯು ನಂದಿ ಬೆಟ್ಟಕ್ಕೆ ರೋಪ್ವೇ ನಿರ್ಮಾಣ ಮಾಡುವ ಯೋಜನೆಯ ಪ್ರಾತ್ಯಕ್ಷಿಕೆಯನ್ನು ಪ್ರಚುರಪಡಿಸಿತು.
2.90 ಕಿ.ಮೀ ಎತ್ತರವಿರುವ ನಂದಿ ಗಿರಿಧಾಮಕ್ಕೆ ರೋಪ್ವೇ ನಿರ್ಮಿಸಲಾಗುವುದು. ನಂದಿ ಬೆಟ್ಟದ ಕೆಳಗಡೆ ಅಂದಾಜು 25 ಎಕರೆ ಪ್ರದೇಶದಲ್ಲಿ ವಾಹನ ಪಾರ್ಕಿಂಗ್, ಫುಡ್ಕೋರ್ಟ್, ಶೌಚಾಲಯ, ಕರ್ನಾಟಕದ ಕಲೆ ಸಂಸ್ಕೃತಿಯನ್ನು ಬಿಂಬಿಸುವ ಮಳಿಗೆಗಳು, ವೈನ್ ಪ್ರವಾಸೋದ್ಯಮ ಸೇರಿದಂತೆ ಪ್ರವಾಸಿಗರಿಗೆ ಎಲ್ಲಾ ರೀತಿಯ ಮೂಲಸೌಲಭ್ಯಗಳನ್ನು ಕಲ್ಪಿಸಲು ನಿರ್ಧರಿಸಲಾಯಿತು.
ಭಾರತೀಯ ತಂತ್ರಜ್ಞಾನವನ್ನು ಬಳಸಿ ರೋಪ್ವೇ ನಿರ್ಮಾಣ ಮಾಡಿದರೆ ಅಂದಾಜು ರೂ.80.00 ಕೋಟಿ ವೆಚ್ಚದಲ್ಲಿ ಯೋಜನೆ ಪೂರ್ಣಗೊಳ್ಳಲಿದೆ.
ಯೂರೋಪಿಯನ್ ತಂತ್ರಜ್ಞಾನವನ್ನು ಬಳಸಿ ರೋಪ್ವೇ ನಿರ್ಮಾಣ ಮಾಡಿದರೆ ಅಂದಾಜು ರೂ.182.00 ರಿಂದ ರೂ.240.00 ಕೋಟಿ ವೆಚ್ಚವಾಗಲಿದೆ. ಒಮ್ಮೆಗೆ 10 ಜನ ಪ್ರಯಾಣಿಕರು ಕೇಬಲ್ ಕಾರಿನಲ್ಲಿ ತಲುಪಬಹುದು.
ಕೇಂದ್ರ ಜಲಸಾರಿಗೆ ಇಲಾಖೆಯು ಶೇ.20ರಷ್ಟು ಹಣವನ್ನು ಈ ರೋಪ್ವೇ ಯೋಜನೆಗೆ ಹಣ ನೀಡಲಿದೆ.
ಈ ಯೋಜನೆಯು ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಸರಹದ್ದಿನಲ್ಲಿ ಬರಲಿದ್ದು, ಎರಡು ಜಿಲ್ಲೆಗಳ ಕಂದಾಯ ಅಧಿಕಾರಿಗಳಿಗೆ ಅಗತ್ಯ ಜಮೀನನ್ನು ಸ್ವಾಧಿನಪಡಿಸಿಕೊಂಡು ನೀಡುವಂತೆ ಸಚಿವರು ನಿರ್ದೇಶಿಸಿದರು.
ಈ ಯೋಜನೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಮಾಡಲಿದ್ದು, ಒಂದು ವರ್ಷದಲ್ಲಿ ಪೂರ್ಣಗೊಳಿಸಲಾಗುವುದು. ಕಳೆದ 30 ವರ್ಷಗಳಿಂದ ನಂದಿ ಬೆಟ್ಟಕ್ಕೆ ರೋಪ್ವೇ ನಿರ್ಮಿಸುವ ಬಗ್ಗೆ ಮಾತನಾಡಲಾಗುತ್ತಿದೆ. ದಿ.ಖ್ಯಾತ ನಟ ಶಂಕರನಾಗರವರು ಮೂರು ದಶಕಗಳ ಹಿಂದೆಯೇ ಈ ಯೋಜನೆಯ ಕನಸು ಕಂಡಿದ್ದರು. ಇದೀಗ ಕಾಲ ಕೂಡಿಬಂದಿದ್ದು, ಮುಂದಿನ ಒಂದು ವರ್ಷದಲ್ಲಿ ನಂದಿಬೆಟ್ಟಕ್ಕೆ ರೋಪ್ವೇ ನಿರ್ಮಿಸಲಾಗುವುದು.
ದೇಶದ ಇತರ ರಾಜ್ಯಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ರೋಪ್ವೇ ಗಳನ್ನು ನಿರ್ಮಾಣ ಮಾಡಲಾಗಿದೆ. ಯಾವುದಾದರು ಒಂದು ಸಂಸ್ಥೆಯನ್ನು ಆಯ್ಕೆ ಮಾಡಿ ನಂದಿ ಗಿರಿಧಾಮ ಯೋಜನೆಯನ್ನು ನೀಡಲಾಗುವುದು ಎಂದು ಸಚಿವರು ಇದೇ ವೇಳೆ ಹೇಳಿದರು.
ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಪಂಕಜ್ ಕುಮಾರ್ ಪಾಂಡೇ, ಕೆ.ಎಸ್.ಟಿ.ಡಿ.ಸಿ ವ್ಯವಸ್ಥಾಪಕ ನಿರ್ದೇಶಕರಾದ ವಿಜಯ ಶರ್ಮ, ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕುಮಾರ್ ಪುಷ್ಕರ್ ಮತ್ತು ಮೆ|| ಐಡೆಕ್ ಸಂಸ್ಥೆಯ ಅಧಿಕಾರಿಗಳು ಹಾಗೂ ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕಿನ ತಹಸೀಲ್ದಾರಗಳು ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಹೊಸದಾಗಿ ಬೆಂಗಳೂರು ನಗರದಲ್ಲಿ 444 ಜನರು ಸೇರಿದಂತೆ ರಾಜ್ಯಾಧ್ಯಂತ 677 ಜನರಿಗೆ ಹೊಸದಾಗಿ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 9,53,813ಕ್ಕೆ ಏರಿಕೆಯಾಗಿದೆ ಎಂಬುದಾಗಿ ತಿಳಿಸಿದೆ.
ಇಂದು ಕೊರೋನಾ ಸೋಂಕಿತರಾದಂತ ಬೆಂಗಳೂರು ನಗರದ 208 ಜನರು ಸೇರಿದಂತೆ ರಾಜ್ಯಾಧ್ಯಂತ 427 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ಸಕ್ರೀಯ ಸೋಂಕಿತರ ಸಂಖ್ಯೆ ಬೆಂಗಳೂರು ನಗರದಲ್ಲಿ 4,592 ಸಕ್ರೀಯ ಸೋಂಕಿತರು ಸೇರಿದಂತೆ ರಾಜ್ಯಾಧ್ಯಂತ 6,374 ಸಕ್ರೀಯ ಸೋಂಕಿತರು ಇರುವುದಾಗಿ ತಿಳಿಸಿದೆ.
ಇನ್ನೂ ಇಂದು ಕೊರೋನಾ ಸೋಂಕಿತರಾದಂತ ಬೆಂಗಳೂರು ನಗರದಲ್ಲಿ ಇಬ್ಬರು, ಬೀದರ್ ಹಾಗೂ ಚಿಕ್ಕಬಳ್ಳಾಪುರದಲ್ಲಿ ಒಬ್ಬರು ಸೇರಿದಂತೆ ನಾಲ್ವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದರಿಂದಾಗಿ ಕಿಲ್ಲರ್ ಕೊರೋನಾಗೆ ಇದುವರೆಗೆ ಬಲಿಯಾದವರ ಸಂಖ್ಯೆ 12,354ಕ್ಕೆ ಏರಿಕೆಯಾಗಿದೆ.
ಬೆಂಗಳೂರು : ನಗರದಲ್ಲಿ ಸರಣಿ ಅಪಘಾತ ಉಂಟಾಗಿ, ಬೈಕ್ ಸವಾರನ ಕಾಲಿನ ಮೇಲೆ ಲಾರಿ ಹರಿದು ರಕ್ತಸ್ರಾವವಾಗುತ್ತಿದ್ದರೂ, ಆತನ ನೆರವಿಗೆ ಬಾರದ ಕಾರಣ, ರಸ್ತೆಯಲ್ಲೇ ತೀವ್ರ ರಕ್ತಸ್ರಾವವಾಗಿ ನರಳಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಂಗಳೂರಿನ ನಾಗರಭಾವಿ ದುರ್ಗಾ ಪರಮೇಶ್ವರಿ ದೇಗುಲದ ಬಳಿಯಲ್ಲಿ ಮೂರು ಕಾರು, ಲಾರಿ ಹಾಗೂ ಬೈಕ್ ನಡುವೆ ಸರಣಿ ಅಪಘಾತ ಉಂಟಾಗಿದೆ. ಲಾರಿ ಬೈಕ್ ಸವಾರನೊಬ್ಬನ ಕಾಲಿನ ಮೇಲೆ ಹರಿದ ಪರಿಣಾಣ, ಕಾಲು ನಜ್ಜುಗುಜ್ಜಾಗಿ ತೀವ್ರ ರಕ್ತಸ್ರಾವ ಉಂಟಾಗುತ್ತಿತ್ತು.
ಇಂತಹ ಅಪಘಾತವನ್ನು ನೋಡಿದಂತ ಸಾರ್ವಜನಿಕರು ಕೇವಲ ಮೊಬೈಲ್ ಹಿಡಿದು ಚಿತ್ರೀಕರಣದಲ್ಲಿ ತೊಡಗಿದ್ದರೇ ವಿನಹ, ಬೈಕ್ ಸವಾರನ ನೆರವಿಗೆ ಧಾವಿಸಿ, ಆಸ್ಪತ್ರೆಗೆ ಸಾಗಿಸುವಂತ ಕೆಲಸ ಮಾಡಿಲ್ಲ. ಇದರಿಂದಾಗಿ ರಸ್ತೆಯಲ್ಲೇ ಒದ್ದಾಡಿ ಬೈಕ್ ಸವಾರ ಮೃತಪಟ್ಟಿದ್ದಾನೆ. ಈ ಸಂಬಂಧ ಬ್ಯಾಟರಾಯನಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ತಾಲೂಕಿನ ಅರ್ಲಪದವು ಎಂಬಲ್ಲಿ ಗುಂಡಿ ನಿರ್ಮಾಣ ಕಾರ್ಯದಲ್ಲಿ ಇಬ್ಬರು ಕಾರ್ಮಿಕರು ತೊಡಗಿದ್ದರು. ಇಂತಹ ಸಂದರ್ಭದಲ್ಲಿ, ದಿಢೀರ್ ಮಣ್ಣು ಕುಸಿತಗೊಂಡ ಪರಿಣಾಮ, ಮಣ್ಣಿನಡಿಯಲ್ಲಿ ಸಿಲುಕಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.
ಗುಂಡಿ ನಿರ್ಮಾಣದ ವೇಳೆ ಮಣ್ಣು ಕುಸಿದು ಅವಘಡ ಸಂಭವಿಸಿದ್ದರಿಂದಾಗಿ, ಪಾರ್ಪಳ್ಳಿ ನಿವಾಸಿಗಳಾದ ಬಾಬು, ರವಿ ಎಂಬುವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಈ ಸಂಬಂಧ ಮತ್ತಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಬೆಂಗಳೂರು : ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಮೈತ್ರಿ ಕುರಿತಂತೆ ಕಾಂಗ್ರೆಸ್ ಪಕ್ಷದಿಂದ ನನಗೆ ಇದುವರೆಗೆ ಯಾವುದೇ ನೋಟಿಸ್ ಬಂದಿಲ್ಲ. ನಾನು ಪಕ್ಷದ ವರಿಷ್ಠರು ಹೇಳಿದಂತೆ ನಡೆದುಕೊಂಡಿದ್ದೇನೆ. ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ ನಾನು ಎಂಬುದಾಗಿ ಶಾಸಕ ತನ್ವಿರ್ ಸೇಠ್ ಹೇಳಿದ್ದಾರೆ.
ಈ ಕುರಿತಂತೆ ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದಂತ ಅವರು, ನನಗೆ ಯಾವುದೇ ನೋಟಿಸ್ ಬಂದಿಲ್ಲ. ನೋಟಿಸ್ ಬಂದರೇ ಉತ್ತರ ಕೊಡುತ್ತೇನೆ. ಜೆಡಿಎಸ್ ಜೊತೆಗಿನ ಮೈತ್ರಿ ವಿಷಯವನ್ನು ವಿವರಿಸಿದ್ದೇನೆ. ಮಧು ಯಕ್ಷಿಗೌಡ ಜೊತೆಗೂ ಈಗಾಗಲೇ ಚರ್ಚಿಸಲಾಗಿದೆ ಎಂದರು.
ಮೈಸೂರು ಮಹಾನಗರ ಪಾಲಿಕೆಯಲ್ಲಿನ ಮೇಯರ್ ಹಾಗೂ ಉಪ ಮೇಯರ್ ಆಯ್ಕೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಕೂಡ ಸಮ್ಮತಿಸಿದ್ದರು. ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷ ಹೇಳಿದಂತೆ ನಡೆದುಕೊಂಡಿದ್ದೇನೆ. ಪಕ್ಷ ಜೊತೆಗೆ ನಿಲ್ಲುತ್ತದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
ಮಂಡ್ಯ : ಜಿಲ್ಲೆಯ ಕೃಷ್ಣರಾಜ ಸಾಗರ ಅಣೆಕಟ್ಟೆಯ ಹಿನ್ನೀರಿನಲ್ಲಿ ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯ ಸದಸ್ಯರು ತಮ್ಮ ಕುಟುಂಬದವರೊಂದಿಗೆ ಹಿನ್ನೀರಿಗೆ ಬಂದು ಸಖತ್ ಮೋಜು, ಮಸ್ತಿ, ಪಾರ್ಟಿ ಮಾಡಿರುವ ಘಟನೆ, ಈಗ ಬೆಳಕಿಗೆ ಬಂದಿದೆ. ಇಂತಹ ಘಟನೆಯಿಂದಾಗಿ ಸಾರ್ವಜನಿಕರು ನಮಗಿಲ್ಲದ ಅವಕಾಶ ಅವರಿಗ್ಯಾಕೆ ಎಂಬುದಾಗಿ ಕಿಡಿಕಾರಿದ್ದಾರೆ.
ಕೆಎಆರ್ ಎಸ್ ಡ್ಯಾಂ ನ ಹಿನ್ನೀರಿನಲ್ಲೇ ಶಾಮಿಯಾನ ಹಾಕಿ, ಭರ್ಜರಿ ಭೋಜನ ಕೂಟ, ಸೇರಿದಂತೆ ಅನೇಕ ಮೋಜು ಮಸ್ತಿಯನ್ನು ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯ ಸದಸ್ಯರು ತಮ್ಮ ಕುಟುಂಬದವರೊಂದಿಗೆ ಮಾಡಿರುವುದಾಗಿ ತಿಳಿದು ಬಂದಿದೆ.
ಅಂದಹಾಗೇ ಡ್ಯಾಂ ಹಿನ್ನೀರಿನ ಪ್ರದೇಶ ನಿರ್ಬಂಧಿತ ಪ್ರದೇಶವಾಗಿದೆ. ನಡೆದಾಡಕ್ಕೂ ಅವಕಾಶವಿಲ್ಲ. ಇಂತದ್ದರಲ್ಲಿ ಅಲ್ಲಿಯೇ ಶಾಮಿಯಾನ ಹಾಕಿ, ಭೋಜನಕೂಟ ಮಾಡಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ಹಿಂದೆ ಇಲ್ಲಿ ಪಾರ್ಟಿ ಮಾಡಿದ್ದಕ್ಕೆ ಆಯೋಜಕರು, ಭಾಗವಹಿಸಿದ್ದವರ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದರು. ಈಗ ಪೊಲೀಸರೇ ಮಾಡಿದ್ದಾರೆ. ಅವರವಿರುದ್ಧವೂ ದೂರು ದಾಖಲಿಸುವಂತೆ ಒತ್ತಾಯಿಸಿದ್ದಾರೆ.
ಬೆಂಗಳೂರು : ನೇರಳೆ ಮಾರ್ಗದಲ್ಲಿ ದುರಸ್ತಿ ಕಾಮಗಾರಿ ನಡೆಸುತ್ತಿರುವುದರಿಂದಾಗಿ, ನಾಳೆ ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ 2 ಗಂಟೆಗಳ ಕಾಲ ಭೈಯ್ಯಪ್ಪನಹಳ್ಳಿಯಿಂದ ಎಂ.ಜಿ.ರಸ್ತೆಯವರೆಗೆ ನಮ್ಮ ಮೆಟ್ರೋ ಸಂಚಾರ ಸ್ಥಗಿತಗೊಳ್ಳಲಿದೆ.
ಈ ಕುರಿತಂತೆ ಬಿಎಂಆರ್ ಸಿ ಎಲ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಟ್ರಿನಿಟಿ ಟು ಹಲಸೂರು ಮೆಟ್ರೋ ನಿಲ್ದಾಣದ ನಡುವೆ ದುರಸ್ತಿ ಕಾಮಗಾರಿ ನಡೆಯುತ್ತಿರುವ ಹಿನ್ನಲೆಯಲ್ಲಿ, ಎಂ.ಜಿ.ರೋಡ್ ಮೆಟ್ರೋ ನಿಲ್ದಾಣದಿಂದ ಭೈಯ್ಯಪ್ಪನಹಳ್ಳಿಯ ಮೆಟ್ರೋ ನಿಲ್ದಾಣದವರೆಗೆ ತಾತ್ಕಾಲಿಕವಾಗಿ ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತಿದೆ. ಹೀಗಾಗಿ ನಾಳೆ ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ನೇರಳೆ ಮಾರ್ಗದ ಮೆಟ್ರೋ ಸಂಚಾರ ಎರಡು ಗಂಟೆ ಬಂದ್ ಆಗಲಿದೆ. ದುರಸ್ತಿ ಕಾಮಗಾರಿ ಮುಕ್ತಾಯಗೊಂಡ ನಂತ್ರ 9 ಗಂಟೆಗೆ ಎಂದಿನಂತೆ ನಮ್ಮ ಮೆಟ್ರೋ ಸಂಚಾರ ಆರಂಭಗೊಳ್ಳಲಿದೆ.
ಉಡುಪಿ : ವಾಹನವೊಂದು ಅಪಘಾತಕ್ಕೆ ಒಳಗಾಗಿ, ಚಾಲಕನ ವಾಹನ ಚಾಲನಾ ಪರವಾನಗಿಯ ಅವಧಿ ಮುಕ್ತಾಯಗೊಂಡಿದ್ದರೂ, ವಿಮಾ ಪರಿಹಾರದ ಮೊತ್ತವನ್ನು ಪಾವತಿಸಲು ಆಗುವುದಿಲ್ಲ ಎಂಬುದಾಗಿ ಉಡುಪಿಯ ಗ್ರಾಹಕ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ಈ ಮೂಲಕ ವಾಹನ ಸವಾರರಿಗೆ ಎಚ್ಚರಿಕೆಯ ಗಂಟೆಯನ್ನು ನೀಡಿದೆ.
ಅಂದಹಾಗೇ ಉಡುಪಿ ಜಿಲ್ಲೆಯ ಬೈಂದೂರಿನ ಕಲ್ತೋಡು ಗ್ರಾಮದ ಚಂದ್ರಶೇಖರ್ ಅವರ ಕಾರು, ಮೇ.25, 2019ರಂದು ಗೋಳಿಹೊಳೆಯ ಬಳಿ ಅಪಘಾತಕ್ಕೆ ಒಳಗಾಗಿತ್ತು. ಇಂತಹ ಅಪಘಾತದಿಂದಾಗಿ ಕಾರು ಚಾಲನೆ ಮಾಡುತ್ತಿದ್ದಂತ ಚಂದ್ರಶೇಖರ್(48) ಗಂಭೀರವಾಗಿ ಗಾಯಗೊಂಡು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು.
ಇದರಿಂದಾಗಿ ಚಂದ್ರಶೇಖರ್ ಅವರ ಮಗ ವಿಮಾ ಕಂಪನಿಯಾದಂತ ರಾಯಲ್ ಸುಂದರಂಗೆ 15 ಲಕ್ಷ ವಿಮಾ ಮೊತ್ತಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪರಿಶೀಲಿಸಿದ್ದಂತ ರಾಯಲ್ ಸುಂದರಂ ವಿಮಾ ಕಂಪನಿಯು, ಮೃತರ ವಾಹನ ಚಾಲನಾ ಪರವಾನಗಿಯ ಅವಧಿ ಮುಕ್ತಾಯಗೊಂಡಿದೆ. ಹೀಗಾಗಿ ವಿಮಾ ಮೊತ್ತವನ್ನು ಕಂಪನಿ ನೀಡಲು ಆಗುವುದಿಲ್ಲ ಎಂದು ತಿಳಿಸಿತ್ತು.
ರಾಯಲ್ ಸುಂದರಂ ವಿಮಾ ಕಂಪನಿಯ ಇಂತಹ ನಿರ್ಧಾರದ ವಿರುದ್ಧ ಚಂದ್ರಶೇಖರ್ ಅವರ ಪುತ್ರ ಉಡುಪಿಯ ಗ್ರಾಹಕರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ನಡೆಸಿದಂತ ನ್ಯಾಯಾಲಯವು, ಮೃತ ವ್ಯಕ್ತಿಯ ಚಾಲನಾ ಪರವಾನಗಿ ಅವಧಿ ಮುಕ್ತಾಯಗೊಂಡಿದೆ. ಚಾಲನಾ ಪರವಾನಗಿ ಮಾನ್ಯವಾಗಿಲ್ಲದಿದ್ದರಿಂದಾಗಿ ವೈಯಕ್ತಿಕ ಅಪಘಾತ ವಿಮೆಯನ್ನು ವಿತರಿಸಲು ವಿಮಾ ಕಂಪನಿಯು ಜವಾಬ್ದಾರಿಯಾಗುವುದಿಲ್ಲ ಎಂಬುದಾಗಿ ಅಭಿಪ್ರಾಯ ಪಟ್ಟಿದೆ. ಈ ಮೂಲಕ ವಾಹನ ಸವಾರರ ಚಾಲನಾ ಪರವಾನಗಿ ಅವಧಿ ಮಾನ್ಯವಾಗಿದ್ದರೇ ಮಾತ್ರವೇ ವೈಯಕ್ತಿಕ ಅಪಘಾತ ವಿಮೆ ನೀಡಬಹುದು ಎಂಬುದಾಗಿ ಅಭಿಪ್ರಾಯ ಪಟ್ಟಿದೆ.
ಮೈಸೂರು : ಹಿರಿಯರು ಅಂದ್ರೇ, ಬುದ್ಧಿ ಮಾತನ್ನು ಹೇಳೋದು ಕಾಮನ್. ಇದೇ ಕಾರಣಕ್ಕಾಗಿ ತಮ್ಮನಿಗೆ ಅಣ್ಣ ಕೂಡ ಬುದ್ಧಿಯ ಮಾತುಗಳನ್ನು ಹೇಳಿದ್ದಾನೆ. ಅಣ್ಣನ ಮಾತುಗಳನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳಬೇಕಾದಂತ ತಮ್ಮ ಮಾತ್ರ, ನೆಗೆಟಿವ್ ಆಗಿ ತೆಗೆದುಕೊಂಡು, ನಿರ್ಧಾರ ಕೈಗೊಂಡಿದ್ದು ಮಾತ್ರ ಬೇರೆಯೇ ಆಗಿತ್ತು. ತಮ್ಮ ಹೀಗೆ ಮಾಡಿಕೊಳ್ಳೋದಕ್ಕೆ ತಾನೂ ಕಾರಣ ಎಂಬುದಾಗಿ ಅಣ್ಣನೂ ಅದೇ ಹಾದಿ ಹಿಡಿದು ಬಿಟ್ಟಿದ್ದನು. ಹೀಗೆ ಅಣ್ಣ-ತಮ್ಮಂದಿರ ಚಿತೆಗಳು ಅಕ್ಕಪಕ್ಕದಲ್ಲಿಯೇ ಉರಿಯುತ್ತಿದ್ದನ್ನು ಕಂಡ ಕುಟುಂಬಸ್ಥರಲ್ಲದೇ ಇಡೀ ಗ್ರಾಮಸ್ಥರು ಕಣ್ಣೀರು ಹಾಕಿರುವ ಘಟನೆ ಮೈಸೂರಿನ ಹೆಚ್ ಡಿ ಕೋಟೆ ತಾಲೂಕಿನ ಎಲೆಗುಂಡಿ ಗ್ರಾಮದಲ್ಲಿ ನಡೆದಿದೆ.
ಮೈಸೂರಿನ ಹೆಚ್ ಡಿ ಕೋಟೆ ತಾಲೂಕಿನ ಎಲೆಗುಂಡಿ ಗ್ರಾಮದಲ್ಲಿ ರೈತನಾಗಿದ್ದಂತ ಹರೀಶ್ ಟ್ರ್ಯಾಕ್ಟರ್ ಚಾಲಕನಾಗಿಯೂ ಕೆಲಸ ಮಾಡ್ತಾ ಇದ್ದ. ಆದ್ರೇ ಟ್ರ್ಯಾಕ್ಟರ್ ಅನ್ನು ಅಜಾಗರೂಕತೆಯಿಂದ ಓಡಿಸ್ತಾ ಇದ್ದ ಕಾರಣ, ತಂದೆಯಲ್ಲದೇ ಅಣ್ಣ ವೆಂಕಟೇಶ್ ಕೂಡ ಬೈದು ಬುದ್ದಿ ಹೇಳಿದ್ದರು. ಹಾಗೆಲ್ಲಾ ಓಡಿಸಬೇಡ. ಏನಾದ್ರೂ ಅನಾಹುತ ಆದ್ರೇ ಗತಿಯೇನು ಎಂಬುದಾಗಿ ಬುದ್ಧಿ ಮಾತು ಹೇಳಿದ್ದರು. ತಂದೆಯಲ್ಲದೇ ಅಣ್ಣ ಕೂಡ ಬೈದು ಬುದ್ಧಿ ಹೇಳಿದ್ದರಿಂದ ಮನನೊಂದು, ಹರೀಶ್ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದನು.
ಹರೀಶ್ ಆತ್ಮಹತ್ಯೆ ಮಾಡಿಕೊಂಡಿರುವ ವೀಡಿಯೋವನ್ನು ಆತನ ಅಣ್ಣ ವೆಂಕಟೇಶ್ ಗೆ ಸ್ನೇಹಿತರು ವಾಟ್ಸ್ ಆಪ್ ಮಾಡಿದ್ದರು. ಇಂತಹ ವೀಡಿಯೋ ನೋಡಿದಂತ ವೆಂಕಟೇಶ್, ತಮ್ಮನ ಸಾವಿಗೆ ನಾನೇ ಕಾರಣವಾಗಿಬಿಟ್ಟೆ ಎಂಬುದಾಗಿ ಮನನೊಂದು ಬಿಟ್ಟಿದ್ದನು. ಜೊತೆಗೆ ಮಾನಸಿಕವಾಗಿ ಕುಗ್ಗಿ ಹೋಗಿದ್ದಂತ ಆತ, ರಸ್ತೆ ಬದಿಯ ಮರವೊಂದಕ್ಕೆ ತಾನೂ ನೇಣುಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದನು.
ಹೀಗೆ ಅಣ್ಣ ಬೈದ ಅಂತ ತಮ್ಮ ಹರೀಶ್ ಆತ್ಮಹತ್ಯೆಗೆ ಶರಣಾಗಿದ್ದರೇ, ತಮ್ಮ ನನ್ನ ಮಾತಿನಿಂದಲೇ ಹೀಗೆ ಮಾಡಿಕೊಂಡ, ನಾನೇ ಕಾರಣವಾಗಿಬಿಟ್ಟೆ ಆತನ ಸಾವಿಗೆ ಎಂಬುದಾಗಿ ವೆಂಕಟೇಶ್ ಆತ್ಮಹತ್ಯೆಗೆ ಶರಣಾಗಿದ್ದರು. ಈ ಇಬ್ಬರು ಅಣ್ಣ-ತಮ್ಮಂದಿರ ಮೃತದೇಹಗಳನ್ನು ಅಕ್ಕ ಪಕ್ಕದಲ್ಲಿ ಚಿತೆಯ ಮೇಲಿಟ್ಟು, ಅಂತಿಮ ಸಂಸ್ಕಾರ ನೆರವೇರಿಸಿದ್ಧನ್ನು ಕಂಡ ಕುಟುಂಬಸ್ಥರಲ್ಲದೇ, ಇಡೀ ಊರಿಗೆ ಊರೇ ಕಣ್ಣೀರನ್ನು ಸುರಿಸುತ್ತಿತ್ತು.
ಬೆಂಗಳೂರು : ಕಳೆದ ವರ್ಷ ಮಾಜಿ ಕರ್ನಾಟಕ ರಾಜ್ಯ ಪೊಲೀಸ್ ಮುಖ್ಯಸ್ಥ ಅಜಯ್ ಕುಮಾರ್ ಸಿಂಗ್ ಬ್ಯಾಂಕ್ ಖಾತೆಗೆ ಕನ್ನ ಹಾಕಿರುವಂತ ಹ್ಯಾಕರ್ಸ್ 2.13 ಲಕ್ಷ ರೂಪಾಯಿ ಕದ್ದಿರುವುದಾಗಿ, ದೂರು ನೀಡಿದ್ದಾರೆ.
ಕಳೆದ 2020ರ ಜುಲೈನಲ್ಲಿ ಈ ಸೈಬರ್ ವಂಚನೆ ನಡೆದಿದ್ದು, ಮಾಜಿ ರಾಜ್ಯ ಪೊಲೀಸ್ ಮುಖ್ಯಸ್ಥ ಅಜಯ್ ಕುಮಾರ್ ಸಿಂಗ್ ದೂರಿನ ಆಧಾರದ ಮೇಲೆ, ಸೋಮವಾರ ಪೂರ್ವ ಸಿಇಎನ್ ಪೊಲೀಸ್ ಉಪ ಪೊಲೀಸ್ ಆಯುಕ್ತರ(ಪೂರ್ವ) ಸೂಚನೆ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅವರು ನೀಡಿರುವಂತ ದೂರಿನಲ್ಲಿ, ಅಜಯ್ ಕುಮಾರ್ ಸಿಂಗ್ ಬ್ಯಾಂಕ್ ಖಾತೆಗೆ ನೀಡಿರುವಂತ ಮೊಬೈಲ್ ಸಂಖ್ಯೆಗೆ ನಿರಂತರವಾಗಿ ಸಂದೇಶ ರವಾನೆಯಾಗಿತ್ತು. ಅದರಲ್ಲಿ ಬ್ಯಾಂಕ್ ಖಾತೆಯ ಓಟಿಪಿ ಕೂಡ ಸೇರಿದ್ದವು. ಸುಮಾರೂ 50 ರಿಂದ 61 ಓಟಿಪಿ ಬ್ಯಾಂಕ್ ಹಣ ವರ್ಗಾವಣೆ ಸಂಬಂಧ ಬಂದಿದ್ದವು. ಅದು ರಾತ್ರಿ 11.15ರಿಂದ 11.30ರ ಜುಲೈ ನಲ್ಲಿ ಎಂಬುದಾಗಿ ತಿಳಿಸಿದ್ದಾರೆ.
ಈ ಬಳಿಕ ಮಾರನೇ ದಿನ ಬ್ಯಾಂಕ್ ಗೆ ಹೋಗಿ ಈ ಬಗ್ಗೆ ವಿಚಾರಿಸಿದಾಗ, ನನಗೆ ಶಾಕ್ ಆಯ್ತು. ನನ್ನ ಬ್ಯಾಂಕ್ ಖಾತೆಯನ್ನೇ ಹ್ಯಾಕ್ ಮಾಡಿದ್ದಂತ ಸೈಬರ್ ವಂಚಕರು, ನನ್ನ ಬ್ಯಾಂಕ್ ಖಾತೆಯಿಂದ 2.13 ಲಕ್ಷ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾಗಿ ತಿಳಿಯಿತು ಎಂಬುದಾಗಿ ಹೇಳಿದ್ದಾರೆ.
ಮೈಸೂರು : ನಿನ್ನೆ ನಡೆದಂತ ಮೈಸೂರು ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಸ್ಥಾನದ ಆಯ್ಕೆ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದವು. ಇದರಿಂದಾಗಿ ಬಿಜೆಪಿಗೆ ಬಿಗ್ ಶಾಕ್ ನೀಡಲಾಗಿತ್ತು. ಕಾಂಗ್ರೆಸ್ ಬೆಂಬಲದೊಂದಿಗೆ ಜೆಡಿಎಸ್ ನ ರುಕ್ಮಿಣಿ ಮೇಯರ್ ಆಗಿ ಆಯ್ಕೆಗೊಂಡರೇ, ಜೆಡಿಎಸ್ ಬೆಂಬಲದೊಂದಿಗೆ ಕಾಂಗ್ರೆಸ್ ನ ಅನ್ವರ್ ಬೇಗ್ ಉಪ ಮೇಯರ್ ಆಗಿ ಆಯ್ಕೆಗೊಂಡಿ, ಬಿಜೆಪಿಗೆ ಶಾಕ್ ನೀಡಲಾಗಿತ್ತು. ಹೀಗಾಗಿ ಬಿಜೆಪಿಗೆ ಮೈಸೂರು ಮೇಯರ್ ಸ್ಥಾನ ಸಿಗದ ಹಿನ್ನಲೆ, ಇದೀಗ ಪಾಲಿಕೆ ಸದಸ್ಯೆ ಸ್ಥಾನಕ್ಕೆ ಬಿಜೆಪಿ ಸದಸ್ಯೆ ರಾಜೀನಾಮೆಗೆ ಮುಂದಾಗಿದ್ದಾರೆ.
ಈ ಕುರಿತಂತೆ ಮೈಸೂರಿನ ಕುವೆಂಪುನಗರ ವಾರ್ಡ್ ನಂ.59ರ ಸದಸ್ಯೆ ಸುನಂದಾ ಪಾಲನೇತ್ರಾ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದು, ಬಿಜೆಪಿಗೆ ಪಾಲಿಕೆ ಮೇಯರ್ ಸ್ಥಾನ ಸಿಗದಿದ್ದಕ್ಕೆ ಬೇಸರಗೊಂಡು, ರಾಜೀನಾಮೆಗೆ ಮುಂದಾಗಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಈ ಬಗ್ಗೆ ಮಾರ್ಗದರ್ಶನ ನೀಡುವಂತೆಯೂ ಸಿಎಂಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಮೈಸೂರು : ಇಂದು ಮೈಸೂರು ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಆಯ್ಕೆ ಪ್ರಕ್ರಿಯೆ ನಡೆಯಿತು. ಇಂತಹ ಆಯ್ಕೆ ಪ್ರಕ್ರಿಯೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಮೇಯರ್ ಆಗಿ ಜೆಡಿಎಸ್ ನ ರುಕ್ಮಿಣಿ ಅಧಿಕಾರದ ಗದ್ದುಗೆ ಹಿಡಿದರು. ಇಂತಹ ಖುಷಿಯಲ್ಲಿ ಪತ್ನಿ ಮೇಯರ್ ಆಗಿದ್ದಕ್ಕೆ ಪತಿ ಮಾದೇಗೌಡ, ಸಭಾಂಗಣದಲ್ಲೇ ಮುತ್ತಿಟ್ಟರು.
ತೀವ್ರ ಕುತೂಹಲ ಮೂಡಿಸಿದ್ದಂತ ಮೈಸೂರು ಮಹಾನಗರ ಪಾಲಿಕೆ ಗದ್ದುಗೆ ಗುದ್ದಾಟದಲ್ಲಿ ಕೊನೆಗೂ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಯಶಸ್ವಿಯಾಯಿತು. ಮೈಸೂರಿನ 23ನೇ ಮೇಯರ್ ಆಗಿ ಜೆಡಿಎಸ್ ನ ರುಕ್ಮಿಣಿ ಮಾದೇಗೌಡ ಆಯ್ಕೆಯಾದ್ರೇ, ಉಪ ಮೇಯರ್ ಆಗಿ ಜೆಡಿಎಸ್ ಬೆಂಬಲದೊಂದಿಗೆ ಅನ್ವರ್ ಬೇಗ್ ಆಯ್ಕೆಯಾದ್ರು.
ಕಾಂಗ್ರೆಸ್ ಬೆಂಬಲದೊಂದಿಗೆ ಮೈಸೂರು ಮೇಯರ್ ಆಗಿ ಪತ್ನಿ ರುಕ್ಮಿಣಿ ಆಯ್ಕೆಯಾಗುತ್ತಿದ್ದಂತೆ, ಅದೇ ಖುಷಿಯಲ್ಲಿ ಮೈಸೂರು ಪಾಲಿಕೆ ಸಭಾಂಗಣದಲ್ಲೇ ಪತ್ನಿ ರುಕ್ಮಿಣಿಗೆ, ಪತಿ ಮಾದೇಗೌಡ ಮುತ್ತಿಟ್ಟು ಖುಷಿ ಹಂಚಿಕೊಂಡರು.
ಮೈಸೂರು : ಅಂತೂ ಇಂತೂ ಕೊನೆಗೂ ಮೈಸೂರು ಮಹಾನಗರ ಪಾಲಿಕೆ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಯಶಸ್ವಿಯಾಗಿದೆ. ಮೈಸೂರು ನೂತನ ಮೇಯರ್ ಆಗಿ ಜೆಡಿಎಸ್ ನ ರುಕ್ಮಿಣಿ ಮಾದೇಗೌಡ ಆಯ್ಕೆಯಾಗಿದ್ದರೇ, ಉಪ ಮೇಯರ್ ಆಗಿ ಕಾಂಗ್ರೆಸ್ ನ ಅನ್ವರ್ ಬೇಗ್ ಆಯ್ಕೆಯಾಗಿದ್ದಾರೆ.
ಇಂದು ಮೈಸೂರು ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ನಡೆಯಿತು. ಇಂತಹ ಆಯ್ಕೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಗದ್ದುಗೆ ಏರುವಂತ ಕನಸ್ಸು ಕಾಣುಟ್ಟಿದ್ದಂತ ಬಿಜೆಪಿ ಕನಸು ಭಗ್ನವಾಗಿದೆ.
ಮೇಯರ್, ಉಪ ಮೇಯರ್ ಸ್ಥಾನಕ್ಕೆ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿವೆ. ಪರಿಣಾಮವಾಗಿ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಆಗಿ ಜೆಡಿಎಸ್ ನ ರುಕ್ಮಿಣಿ ಮಾದೇಗೌಡ ಆಯ್ಕೆಯಾದ್ರೇ, ಉಪ ಮೇಯರ್ ಆಗಿ ಕಾಂಗ್ರೆಸ್ ನ ಅನ್ವರ್ ಬೇಗ್ ಆಯ್ಕೆಯಾಗಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಮೇಯರ್ ಪಟ್ಟದ ಅಲಂಕರಿಸುವಂತ ಬಿಜೆಪಿಯ ಆಸೆಗೆ ಭಗ್ನವಾಗಿದೆ.
ಬೆಂಗಳೂರು : ಅರಣ್ಯ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಹಣ್ಣಿನ ಮರಗಳನ್ನು ಹೆಚ್ಚು ಬೆಳೆಸಲು ಕ್ರಮ ತೆಗೆದುಕೊಳ್ಳಿ, ಇದರಿಂದ ಪ್ರಾಣಿ-ಪಕ್ಷಿಗಳಿಗೆ ಆಹಾರವನ್ನು ಒದಗಿಸುವುದರ ಜೊತೆ ಅರಣ್ಯ ಪ್ರದೇಶದ ಹೆಚ್ಚಳ ಆಗುತ್ತದೆ, ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಅದು ಇಂದು ಬೆಂಗಳೂರಿನ ಅರಣ್ಯ ಭವನದಲ್ಲಿ ಎಲ್ಲಾ ವೃತ್ತಗಳ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಪ್ರಾದೇಶಿಕ ವನ್ಯಜೀವಿ /ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ ಅವರು, ಅರಣ್ಯ ಅಭಿವೃದ್ಧಿಗೆ ಅರಣ್ಯವಾಸಿಗಳ ಮತ್ತು ರೈತರ ಸಹಕಾರ ಬಹಳ ಮುಖ್ಯ ,ಅವರೊಂದಿಗೆ ಸೌಹಾರ್ದಯುತ ಸಂಬಂಧ ಬೆಳೆಸಿಕೊಳ್ಳುವುದು ಅರಣ್ಯ ಅಧಿಕಾರಿಗಳ ಕರ್ತವ್ಯ ಎಂದು ಕಿವಿಮಾತು ಹೇಳಿದರು.
ರಾಜ್ಯದಲ್ಲಿ ಹಸಿರು ವಲಯ ಹೆಚ್ಚಳ ಮಾಡಬೇಕಿದೆ. ಈಗ ಶೇಕಡ 22.8 ರಷ್ಟಿದೆ .ಅದನ್ನು ಶೇಕಡಾ 33 ರಷ್ಟು ಹೆಚ್ಚಿಸಬೇಕು, ಅದಕ್ಕೆ ಅಗತ್ಯವಾದ ಎಲ್ಲಾ ರೀತಿಯ ನೆರವನ್ನು ಒದಗಿಸುವುದಾಗಿ ಅವರು ತಿಳಿಸಿದರು.
ಬೇಸಿಗೆ ಸಮೀಪಿಸುತ್ತಿದೆ, ಕಾಡ್ಗಿಚ್ಚು ಹಬ್ಬ ಬಹುದು, ಅದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಿ, ಅರಣ್ಯ ಅಭಿವೃದ್ಧಿಗೆ ಬೇಕಾದ ಅನುದಾನವನ್ನು ನೀಡಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಮಾತನಾಡಿದ ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಶ್ರೀ ಅರವಿಂದ ಲಿಂಬಾವಳಿ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ಕಟ್ಟುನಿಟ್ಟಾಗಿ ತಡೆಯಬೇಕು ಅರಣ್ಯ ಪ್ರದೇಶಗಳಲ್ಲಿ ಗಣಿಗಾರಿಕೆಗೆ ಅನುಮತಿ ನೀಡಬಾರದು, ಗಣಿಗಾರಿಕೆಯಿಂದ ಪ್ರಾಣಿಗಳ ಆಹಾರ ಪದ್ಧತಿ ಬದಲಾಗಿದೆ, ಹಾಗೂ ಆ ಶಬ್ದಗಳಿಂದ ಹೆದರಿ ಅವು ಸಮೀಪ ಇರುವ ನಗರ ಪಟ್ಟಣ ಪ್ರದೇಶಗಳಿಗೆ ನುಗ್ಗುತ್ತಿದೆ ಇದರಿಂದ, ಅನೇಕ ರೀತಿಯ ಆಪತ್ತುಗಳು ಉಂಟಾಗುತ್ತಿವೆ ಎಂದು ಅವರು ಹೇಳಿದರು.
ಮಾನವ ಮತ್ತು ಪ್ರಾಣಿಗಳ ಸಂಘರ್ಷದ ಬಗ್ಗೆ ಅರಣ್ಯ ಇಲಾಖೆ ಹೆಚ್ಚು ಗಮನ ಹರಿಸಿದೆ. ಕಾಡು ಪ್ರಾಣಿಗಳಿಂದ ಮನುಷ್ಯರು ಸಾವಿಗೀಡಾದಾಗ ನೀಡಲಾಗುತ್ತಿರುವ ಪರಿಹಾರವನ್ನು ಹೆಚ್ಚು ಮಾಡಬೇಕು, ದೊಡ್ಡ ಪ್ರಾಣಿಗಳು ಮತ್ತು ಸಣ್ಣ ಪ್ರಾಣಿಗಳು ಸತ್ತಾಗ ನಾವು 5000 ಮತ್ತು ಹತ್ತು ಸಾವಿರ ರೂಪಾಯಿಗಳ ಪರಿಹಾರ ನೀಡುತ್ತಿದ್ದೇವೆ, ಇದನ್ನು ಹೆಚ್ಚಳ ಮಾಡಬೇಕಿದೆ ಎಂದು ಅವರು ಹೇಳಿದರು.
ಮುಖ್ಯವಾಗಿ ಕೆಳಹಂತದ ಅರಣ್ಯ ಇಲಾಖೆಯ ನೌಕರರು ಅರಣ್ಯ ಸಂರಕ್ಷಣೆಗೆ ವಾಹನ ಬಳಸಬೇಕಾದ್ದು ಅನಿವಾರ್ಯ . ಆದರೆ ನಾವು ಅವರಿಗೆ ವಾಹನ ಬದಗಿಸಿಲ್ಲ, ಅವರದ್ದೇ ಸ್ವಂತ ದ್ವಿಚಕ್ರವಾಹನ ಬಳಸುತ್ತಿದ್ದಾರೆ ,ನಾವು ಕನಿಷ್ಠ ಇಂಧನ ಭತ್ಯೆಯನ್ನದರೂ ಕೊಡಬೇಕಿದೆ ಎಂದು ಅವರು ತಿಳಿಸಿದರು.
ಕಾಡು ಪ್ರಾಣಿಗಳು ನಗರಕ್ಕೆ ನುಗ್ಗದಂತೆ ವಿಶೇಷವಾಗಿ ಕಾಡಾನೆಗಳು ಬರದಹಾಗೆ ಬ್ಯಾರಿಕೇಡ್ ನಿರ್ಮಾಣ ಮಾಡಲು ಅನುಮತಿ ಕೋರಿ ಸದ್ಯದಲ್ಲೇ ಸರ್ಕಾರಕ್ಕೆ ನಿಯೋಗದೊಂದಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು
ಬೆಂಗಳೂರು : ಆ ಇಬ್ಬರು ಡಿಲಿವರಿ ಬಾಯ್ ಗಳಾಗಿ ಕೆಲಸ ಮಾಡುತ್ತಿದ್ದರು. ನಡುರಾತ್ರಿಯಲ್ಲಿ ಹಸಿದವರಿಗೆ ಊಟ ಕೊಟ್ಟು, ಹಿಂದಿರುಗುತ್ತಿದ್ದ ವೇಳೆ, ಯಮರೂಪಿಯಾಗಿ ಬಂದಂತ ಕಾರೊಂದು, ದಿಢೀರ್ ಡಿಕ್ಕಿ ಹೊಡೆದಿತ್ತು. ಕಾರು ಡಿಕ್ಕಿಯಾದಂತ ರಭಸಕ್ಕೆ ನೂರು ಮೀಟರ್ ದೂರ ಹಾರಿ ಬಿದ್ದು, ಹಸಿದವರ ಹೊಟ್ಟೆ ತುಂಬಿಸಲು ಹೋಗಿ, ಪ್ರಾಣವನ್ನೇ ತೆತ್ತಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಅಪಘಾದತ ಐದು ಸೆಕೆಂಡ್ ದೃಶ್ಯಾವಳಿ, ಬೆಟ್ಟಿ ಬೀಳಿಸುತ್ತಿದೆ.
ಹೌದು.. ಇಂತದ್ದೊಂದು ಘಟನೆ ಬೆಂಗಳೂರಿನ ಜಾಲಹಳ್ಳಿ ವಿಲೇಜ್ ರಸ್ತೆಯಲ್ಲಿ ನಡೆದಿದೆ. ಗೌತಮ್ ಹಾಗೂ ಶ್ರೀಕಾಂತ್ ಡಿಸಿಲವರಿ ಬಾಯ್ ಗಳಾಗಿ ಕೆಲಸ ಮಾಡುತ್ತಿದ್ದರು. ಮಂಗಳವಾರ ರಾತ್ರಿ 1.20ರ ವೇಳೆಗೆ ಜಾಲಹಳ್ಳಿ ವಿಲೇಜ್ ರಸ್ತೆಯ ಅಪಾರ್ಟ್ಮೆಂಟ್ ಒಂದರಲ್ಲಿ ಊಟದ ಆರ್ಡರ್ ಬಂದಿದ್ದರಿಂದ ತಮ್ಮ ಸ್ಕೂಟಿಯಲ್ಲಿ ತೆಗೆದುಕೊಂಡು ಹೋಗಿ, ಕೊಟ್ಟು ಹೊರಡುತ್ತಿದ್ದರು.
ಊಟ ಕೊಟ್ಟು ರಸ್ತೆಗೆ ತಮ್ಮ ಸ್ಕೂಟಿ ತಿರುಗಿಸಿದ್ದೇ ತಡ, ದಿಢೀರ್ ಶರವೇಗವಾಗಿ ಬಂದಂತ ಕಾರೊಂದು, ಸ್ಕೂಟಿಗೆ ಡಿಕ್ಕಿ ಹೊಡಿದಿದೆ. ಡಿಕ್ಕಿಯಿಂದಾಗಿ ಗೌತಮ್ ಮತ್ತು ಶ್ರೀಕಾಂತ್ ನೂರು ಮೀಟರ್ ಹಾರಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಡಿಕ್ಕಿಯ ರಭಸಕ್ಕೆ ಸ್ಕೂಟಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರು ಚಾಲಕ ಕಾರು ನಿಲ್ಲಿಸದೇ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಜಸ್ಟ್ ಐದು ಸೆಕೆಂಡ್ ನಲ್ಲಿ ನಡೆದುಹೋದಂತ ಅಪಘಾತದ ದೃಶ್ಯ ಅಪಾರ್ಟ್ಮೆಂಟ್ ಮುಂದಿರುವಂತ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು : ಕೇರಳದಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದಂತ ವಿದ್ಯಾರ್ಥಿನಿಗೆ ಕಾಮುಕನೊಬ್ಬ, ರೈಲಿನಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಇಂತಹ ಕಿರುಕುಳವನ್ನು ವಿದ್ಯಾರ್ಥಿನಿ ರೆಕಾರ್ಡ್ ಮಾಡಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಮಂಗಳೂರಿನಲ್ಲಿ ಬಂದಿಸಿದ್ದಾರೆ.
ಈ ಎಲ್ಲಾ ಲೈಂಗಿಕ ಕಿರುಕುಳದ ಕಾಮುಕನ ಆಟವನ್ನು ವಿದ್ಯಾರ್ಥಿನಿ ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದು, ನಂತ್ರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, ಕಾಮುಕನ ಬಂಧನಕ್ಕೆ ಮನವಿ ಮಾಡಿದ್ದಳು. ಈ ವೀಡಿಯೋ ದೃಶ್ಯಾವಳಿ ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದಂತ ರೈಲ್ವೆ ಪೊಲೀಸರು, ಕಾಮುಕನನ್ನು ಮಂಗಳೂರಿನಲ್ಲಿ ಬಂಧಿಸಿದ್ದಾರೆ.
ಬೆಂಗಳೂರು : ಆಗಸ್ಟ್ 11, 2020ರಂದು ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ಹೊಣೆಗಾರಿಕೆಯನ್ನು ರಾಜ್ಯ ಸರ್ಕಾರ ಎನ್ಐಎಗೆ ವಹಿಸಿತ್ತು. ಇಂತಹ ರಾಷ್ಟ್ರೀಯ ತನಿಖಾ ಸಂಸ್ಥೆ ಫೆ.10ರಂದು ನ್ಯಾಯಾಲಯಕ್ಕೆ 7 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದು, ಅದರಲ್ಲಿ ಏನಿದೆ ಎನ್ನುವ ಬಗ್ಗೆ ಮುಂದೆ ಓದಿ.
ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಫೆಬ್ರವರಿ 10ರಂದು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) 7 ಸಾವಿರ ಪುಟಗಳ ಚಾರ್ಚ್ ಶೀಟ್ ಅನ್ನು ಬೆಂಗಳೂರು ಗಲಭೆ ಪ್ರಕರಣ ಕುರಿತಂತೆ ಸಲ್ಲಿಸಿದೆ. ಇಂತಹ ಚಾರ್ಚ್ ಶೀಟ್ ನಲ್ಲಿ ಮೊದಲೇ ಸಂಚು ರೂಪಿಸಿದ್ದ ಆರೋಪಿಗಳು, ಕೃಷ್ಣ ಜನ್ಮಾಷ್ಟಮಿ ದಿನವನ್ನು ಟಾರ್ಗೆಟ್ ಮಾಡಿದ್ದರು. ಇದೇ ವೇಳೆ ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದ ಶಾಕ ಅಖಂಡ ಶ್ರೀನಿವಾಸ ಮೂರ್ತಿ ಸಂಬಂಧಿ ನವೀನ್, ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದನು. ಇದನ್ನೇ ಸದುಪಯೋಗ ಮಾಡಿಕೊಂಡ ಆರೋಪಿಗಳು, ಗಲಭೆ ಎಬ್ಬಿಸಿದ್ದರು ಎಂದು ಉಲ್ಲೇಖಿಸಲಾಗಿದೆ.
ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ಒಗ್ಗೂಡಿಸಿದ್ದ ಕಾರ್ಯಕರ್ತರು, ಗಲಭೆ ಎಬ್ಬಿಸಿದ್ದಾರೆ. ಪೊಲೀಸ್ ಠಾಣೆಗಳ ಮೇಲಿನ ದಾಳಿಗೆ ಪ್ರೇರಣೆಯಾಗಿದ್ದೂ ಸಹ ಸಾಮಾಜಿಕ ಜಾಲತಾಣವಾಗಿದೆ. ಪ್ರತಿಭಟನಾಕಾರರು ಫೇಸ್ ಬುಕ್ ಹಾಗೂ ಇತರ ಸಾಮಾಜಿಕ ಜಾಲತಾಣಗಳ ಮೂಲಕ ಗಲಭೆಯಲ್ಲಿ ಪಾಲ್ಗೊಳ್ಳುವಂತೆ ಪ್ರಚೋದನೆ ಮಾಡಿದ್ದರಿಂದಾಗಿಯೇ ಹೊರಗಿನಿಂದ ಜನ ಸೇರಲು ಕಾರಣವಾಯಿತು ಎಂಬ ಅಂಶಗಳನ್ನು ಉಲ್ಲೇಖಿಸಲಾಗಿದೆ.
ಬೆಂಗಳೂರು : ನಗರದಲ್ಲಿ ಕೊರೋನಾ 2.0 ಭೀತಿ ಎದುರಾಗಿದೆ. ಅದರಲ್ಲೂ ಕೆಳೆದ 10 ದಿನಗಳಿಂದ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ರಾಜ್ಯ ರಾಜಧಾನಿಯಲ್ಲಿ ಏರಿಕೆ ಕಂಡಿವೆಯಂತೆ. ಇದರ ಜೊತೆಗೆ ನಗರದ 10 ವಾರ್ಡ್ ಗಳಲ್ಲಿ ಕೊರೋನಾ ಸೋಂಕಿನ ಸಂಖ್ಯೆ ಏರಿಕೆ ಕಂಡು, ಈಗ ಡೇಂಜರ್ ಎಂಬುವಂತಾಗಿದೆಯಂತೆ. ಹೀಗಾಗಿ ಸಿಲಿಕಾನ್ ಸಿಟಿಯ ಜನರೇ ಕೊರೋನಾ ಬಗ್ಗೆ ಹುಷಾರ್.!
ಹೌದು.. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ 2.0 ಭೀತಿ ಶುರವಾಗಿದೆ. ಬೆಂಗಳೂರನ್ನೂ ಈಗ ಕೊರೋನಾ ಮಹಾಮಾರಿ ಕಾಡುತ್ತಿದೆ. ನಗರದ ಹಲವೆಡೆ ಹೆಚ್ಚುತ್ತಿದೆ ಕೊರೋನಾ ಕೇಸ್ ಸಂಖ್ಯೆ ಏರಿಕೆಯಾಗುತ್ತಿವೆ. ಬೆಂಗಳೂರಿನ 10 ವಾರ್ಡ್ ಗಳು ಈಗ ಡೇಂಜರ್ ಎಂಬಂತೆ ಆಗಿದೆ. ಯಾಕೆಂದ್ರೇ, ಕಳೆದ 10 ದಿನಗಳಿಂದ ಕೊರೋನಾ ಹೆಚ್ಚಳವಾಗಿದೆಯಂತೆ.
ಬೆಂಗಳೂರಿನ 10 ಕೊರೋನಾ ಸೋಂಕಿನ ಪ್ರಕರಣಗಳು ಏರಿಕೆಯಾಗಿರುವಂತ ವಾರ್ಡ್ ಗಳೆಂದ್ರೇ, ಬಿಳೇಕಹಳ್ಳಿ, ಬೆಳ್ಳಂದೂರು, ಕಾವಲ್ ಭೈರಸಂದ್ರ, ಹೆಚ್ ಎಸ್ ಆರ್ ಲೇಔಟ್, ಹಗದೂರು, ಹೊರಮಾವು, ಬೇಗೂರು ಹಾಗೂ ಉತ್ತರಹಳ್ಳಿ ಎಂಬುದಾಗಿ ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ, ಬೆಂಗಳೂರಿನ 10 ವಾರ್ಡ್ ಗಳ ಮೇಲೆ ತೀವ್ರ ನಿಗಾವನ್ನು ಆರೋಗ್ಯ ಇಲಾಖೆ ವಹಿಸಿದೆ.
ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಹಿರಿಯ ವೈದ್ಯಾಧಿಕಾರಿಗಳು, ತಜ್ಞ ವೈದ್ಯರು ಮತ್ತು ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಇಂತಹ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24-03-2021 ಆಗಿರುತ್ತದೆ.
ಈ ಕುರಿತಂತೆ ಬಿಬಿಎಂಪಿ ಆಯುಕ್ತರು ಅಧಿಸೂಚನೆ ಹೊರಡಿಸಿದ್ದು, ಬಿಬಿಎಪಿಯ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಹಿರಿಯ ವೈದ್ಯಾಧಿಕಾರಿ, ತಜ್ಞರು ಮತ್ತು ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗಳಿಗೆ ಉಳಿಕೆ ಮೂಲ ವೃಂದದ ಮತ್ತು ಹೈದರಾಬಾದ್-ಕರ್ನಾಟಕ ವೃಂದದ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವೈಬ್ ಸೈಟ್ www.bbmp.gov.in ನಲ್ಲಿ ಆನ್ ಲೈನ್ ಮೂಲಕ ಸಲ್ಲಿಸುವಂತೆ ಸೂಚಿಸಿದೆ.
ಅಂದಹಾಗೇ ಅರ್ಜಿ ಸಲ್ಲಿಕೆ ದಿನಾಂಕ 23-02-2021ರಿಂದ ಆರಂಭಗೊಳ್ಳಲಿದೆ. ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 24-03-2021 ಆಗಿರುತ್ತದೆ ಶುಲ್ಕ ಪಾವತಿಸಲು ಕೊನೆಯ ದಿನಾಂಕ 25-03-2021 ಆಗಿರುತ್ತದೆ.
ಆರ್ ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದಂತ ಇಬ್ಬರು ನೈಜಿರಿಯನ್ ಪ್ರಜೆಗಳಾದಂತ ಅಗಸ್ಟೀನ್ ಓಕಾಪೋರ್, ಅಚುನಿಜೆ ನಾಪೋರ್ ನನ್ನು ಬಂಧಿಸಿದ್ದಾರೆ. ಇಂತಹ ಬಂಧಿತರಿಂದ 20 ಗ್ರಾಂ ಕೊಕೇನ್, ಎಂಡಿಎಂಎ, ಆರು ಮೊಬೈಲ್ ಹಾಗೂ ಕಾರು ವಶಪಡಿಸಿಕೊಂಡಿದ್ದಾರೆ.
ಇನ್ನೂ ಉಪ್ಪಾರಪೇಟೆ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರುತ್ತಿದ್ದಂತ ಮದನ್, ರಂಜಿತ್ ಕುಮಾರ್, ಮಹಾರ್ಸಾಯ್ಯ ನಾಯಕ್, ಚಂದನ್ ದಿಗಾಲ್, ಮುಕುಂದ್ ರಾಜ್ ಹಾಗೂ ಮೋನಿಶ್ ಎಂಬ ಆರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 9.5 ಕೆಜಿ ಗಾಂಜಾ, ತೂಕದ ಮಿಷಿನ್, ಐದು ಮೊಬೈಲ್ ಹಾಗೂ ಒಂದು ಬೈಕ್ ವಶ ಪಡಿಸಿಕೊಂಡಿದ್ದಾರೆ. ಈ ಮೂಲಕ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರು : ರಾಜ್ಯದಲ್ಲಿ ಪಂಚಮಸಾಲಿ ಸಮುದಾಯ ಪ್ರತಿಭಟನೆ ಹಿನ್ನಲೆಯಲ್ಲಿ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ವಿಧಾನಸೌಧಕ್ಕೆ ಬಿಗಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಅದರಲ್ಲೂ ಪಂಚಮಸಾಲಿ ಪ್ರತಿಭಟನೆಯ ಹಿನ್ನಲೆಯಲ್ಲಿ ವಿಧಾನಸೌಧದ ಸುತ್ತಮುತ್ತ ಫೆಬ್ರವರಿ 22ರವರೆಗೆ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ರಾಜ್ಯದಲ್ಲಿ ಪಂಚಮಸಾಲಿ ಸಮುದಾಯದಿಂದ ಮೀಸಲಾತಿಗೆ ಆಗ್ರಹಿಸಿ, ಇಂದು ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸಲಾಗುತ್ತಿದೆ. ಈ ಬಳಿಕ, ಮಾರ್ಚ್ 4ರವರೆಗೆ ಸಮುದಾಯದ ಶ್ರೀಗಳು ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದಾರೆ. ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ಡಿಸಿಪಿ ಇಶಾ ಪಂತ್ ನೇತೃತ್ವದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಇನ್ನು ಪಂಚಮಸಾಲಿ ಸಮುದಾಯದಿಂದ ಧರಣಿ ಹಿನ್ನಲೆಯಲ್ಲಿ, ವಿಧಾನಸೌಧ ಸುತ್ತಮುತ್ತ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ವಿಧಾನಸೌಧ ಸುತ್ತ 2 ಕಿಲೋಮೀಟರ್ ನಿಷೇಧಾಜ್ಞೆಯನ್ನು ಫೆ.22ರ ರಾತ್ರಿ 12ರವರೆಗೂ ಜಾರಿಗೊಳಿಸಲಾಗಿದೆ.
ಬೆಂಗಳೂರು : ರಾಜ್ಯದಲ್ಲಿ ಇಂದು ಕೂಡ ಕೊರೋನಾ ಎರಡನೇ ಅಲೆ ಅಬ್ಬರಿಸಲಿದೆ ಎನ್ನುವ ಭೀತಿಯ ನಡುವೆಯೂ, ಸೋಂಕಿನ ಪ್ರಮಾಣ ಇಳಿಕೆಯತ್ತ ಸಾಗಿದೆ. ಇಂದು ಹೊಸದಾಗಿ 490 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಅಲ್ಲದೇ ಸೋಂಕಿತರಾದಂತ ಐವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಬೆಂಗಳೂರು ನಗರದಲ್ಲಿ 278 ಜನರು ಸೇರಿದಂತೆ 490 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 9,47,736ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇಂದು 389 ಸೇರಿದಂತೆ ಇದುವರೆಗೆ 9,29,447 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ 5,978 ಸಕ್ರೀಯ ಸೋಂಕಿತರಿರುವುದಾಗಿ ತಿಳಿಸಿದೆ.
ಇನ್ನೂ ಇಂದು ಬೆಂಗಳೂರು ನಗರದಲ್ಲಿ ನಾಲ್ವರು, ತುಮಕೂರಿನಲ್ಲಿ ಒಬ್ಬರು ಸೇರಿದಂತೆ ಐವರು ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವುದಾಗಿ ತಿಳಿಸಿದೆ. ಇದರಿಂದಾಗಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 12,292ಕ್ಕೆ ಏರಿಕೆಯಾಗಿದೆ.
ಬೆಂಗಳೂರು : ತನ್ನ ಶಾಂತ ಪರಿಸರ, ಉಸಿರಾಡುವ ಗಾಳಿ, ಬಿಡುವಿಲ್ಲದ ಜೀವನಶೈಲಿಯ ನಡುವೆ ಹೆಸರುವಾಸಿಯಾದರೂ, ಇದು ಭಾರತದ ಅತ್ಯಂತ ಸುರಕ್ಷಿತ ನಗರವಲ್ಲ. ಗ್ರೀನ್ ಪೀಸ್ ಸಮೀಕ್ಷೆಯ ಪ್ರಕಾರ, ಗಾರ್ಡನ್ ಸಿಟಿ ಆಫ್ ಇಂಡಿಯಾ 2020ರಲ್ಲಿ ಮೂರನೇ ಅತಿ ಕೆಟ್ಟ ವಾಯುಮಾಲಿನ್ಯವನ್ನು ಹೊಂದಿದ್ದು, ಇದು ಸುಮಾರು 12,000 ಸಾವುಗಳಿಗೆ ಕಾರಣವಾಗಿದೆ. ಉದ್ಯಾನಗಳು ಮತ್ತು ಮರಗಳ ಸಮೃದ್ಧ ತೆಳುವಾದ ನಗರವೆಂದು ಪರಿಗಣಿಸಲ್ಪಟ್ಟಿರುವ ಬೆಂಗಳೂರು ಇಂದಿಗೂ ಭಾರತದ ಅತ್ಯಂತ ಕೆಟ್ಟ ಮಾಲಿನ್ಯಯುಕ್ತ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ, ಆದರೆ ನೀವು ಉತ್ತರದಿಕ್ಕಿಗೆ ಚಲಿಸುವಾಗ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ.
ಗ್ರೀನ್ ಪೀಸ್ ವರದಿಯ ಪ್ರಕಾರ, ದೆಹಲಿ ಇನ್ನೂ ಅತ್ಯಂತ ಕೆಟ್ಟ ಸ್ಥಾನದಲ್ಲಿತ್ತು, ಕಳೆದ ವರ್ಷ ಭಾರತದಲ್ಲೇ ಎರಡನೇ ಅತ್ಯಂತ ಕೆಟ್ಟ ವಾಯುಮಾಲಿನ್ಯವನ್ನು ಹೊಂದಿದ್ದ ಮುಂಬೈ ನಂತರದ ಸ್ಥಾನದಲ್ಲಿತ್ತು. ಆತಂಕಕಾರಿ ಸಂಗತಿ ಎಂದರೆ ದೆಹಲಿಯಲ್ಲಿ ಅಂದಾಜು 54 ಸಾವಿರ ಮಂದಿ ಸಾವನ್ನಪ್ಪಿದ್ದರೆ, ಮುಂಬೈ ವಾಯುಮಾಲಿನ್ಯದಿಂದ 25 ಸಾವಿರ ಮಂದಿ ಮೃತಪಟ್ಟಿದ್ದಾರೆ.
ಜಾಗತಿಕ ಪ್ರಮುಖ ನಗರಗಳಿಗೆ ಹೋಲಿಸಿದರೆ, ದೆಹಲಿಯ ಸಾವು ಆಘಾತಕಾರಿಯಾಗಿದೆ. ವರದಿಯು PM 2.5 ನಿಂದಾ ಸುಮಾರು 160,000 ಸಾವುಗಳು ಸಂಭವಿಸುತ್ತವೆ ಎಂದು ಹೇಳುತ್ತದೆ. ದೇಶಾದ್ಯಂತ ಕೊರೋನಾ ಲಾಕ್ ಡೌನ್ ಜಾರಿಗೆ ಬಂದ ಮೇಲೆ ಈ ಸಮೀಕ್ಷೆ ನಡೆಸಲಾಗಿದೆ ಎಂಬುದು ಗಮನಾರ್ಹ. ಇದರ ಹೊರತಾಗಿಯೂ, ವಾಯು ಮಾಲಿನ್ಯವು ಅತ್ಯಂತ ಕೆಟ್ಟ ಆರೋಗ್ಯ ಅಪಾಯಗಳಲ್ಲಿ ಒಂದಾಗಿದ್ದು, ಸುಸ್ಥಿರ ಪರಿಹಾರಗಳು ಮತ್ತು ಪರಿಸರವನ್ನು ಹಸಿರಾಗಿಸುವ ನಿಟ್ಟಿನಲ್ಲಿ ಹೂಡಿಕೆಗಳು ಅಗತ್ಯವಾಗಿವೆ.
“ನಾವು ಶುದ್ಧ ಇಂಧನದ ಮೇಲೆ ಪಳೆಯುಳಿಕೆ ಇಂಧನವನ್ನು ಆಯ್ಕೆ ಮಾಡಿದಾಗ, ನಮ್ಮ ಆರೋಗ್ಯವು ಅವಿರ್ಮವಾಗಿರುತ್ತದೆ. ಕಲುಷಿತ ಗಾಳಿ ಕ್ಯಾನ್ಸರ್ ಮತ್ತು ಪಾರ್ಶ್ವವಾಯುವಿನಿಂದ ಸಾವುಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಅಸ್ತಮಾ ದಾಳಿಗಳಲ್ಲಿ ಹೆಚ್ಚಳ ಮತ್ತು COVID-19 ಲಕ್ಷಣಗಳ ತೀವ್ರತೆಯನ್ನು ಇನ್ನಷ್ಟು ಉಲ್ಬಣಿಸುತ್ತದೆ” ಎಂದು ಗ್ರೀನ್ ಪೀಸ್ ಇಂಡಿಯಾದ ಹವಾಮಾನ ಪ್ರಚಾರಕ ಅವಿನಾಶ್ ಚಂಚಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ನಮ್ಮ ಬೆಳವಣಿಗೆಯ ಬೇಡಿಕೆ ಸುಸ್ಥಿರ ಮತ್ತು ಶುದ್ಧ ಇಂಧನ ಮೂಲಗಳಿಂದ ಇಂಧನವನ್ನು ಉತ್ತೇಜಿಸಬೇಕು. ನಗರಗಳು ಕಡಿಮೆ ವೆಚ್ಚದ, ಸಕ್ರಿಯ ಮತ್ತು ಇಂಗಾಲ-ತಟಸ್ಥ ಸಾರಿಗೆ ಆಯ್ಕೆಗಳನ್ನು ಉತ್ತೇಜಿಸಬೇಕು. ನಡಿಗೆ, ಸೈಕ್ಲಿಂಗ್ ಮತ್ತು ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡಬೇಕು. ಸ್ವಚ್ಛ ಇಂಧನ ಮತ್ತು ಸ್ವಚ್ಛ ಸಾರಿಗೆಯ ಹೆಚ್ಚಿದ ಬಳಕೆಯು ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವುದು ಮಾತ್ರವಲ್ಲದೆ, ಆರ್ಥಿಕತೆ ಮತ್ತು ಸಾರ್ವಜನಿಕ ಹಣವನ್ನು ಬಲಪಡಿಸುತ್ತದೆ” ಎಂದು ಚಂಚಲ್ ಹೇಳಿದರು.
ಮೈಸೂರಿನ ಜಯನಗರದ ನಿವಾಸಿಯಾಗಿರುವಂತ ಸಿ.ಶಶಿ, ತೃತೀಯ ಲಿಂಗಿಯಾಗಿ, ಎಲ್ ಎಲ್ ಬಿ ಮುಗಿಸಿ, ರಾಜ್ಯದಲ್ಲಿ ಮೊದಲ ತೃತೀಯ ಲಿಂಗಿ ಲಾಯರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವಂತ ಅವರು, 10ನೇ ತರಗತಿ ಓದುತ್ತಿರುವಾಗಲೇ ದೇಹದಲ್ಲಿ ಬದಲಾವಣೆಯಾಗಿ ತೃತೀಯ ಲಿಂಗಿಯಾದೆ. ಆ ಬಳಿಕ ತುಂಬಾ ನೋವು, ಅಪಮಾನ, ನಿಂದನೆ ಕಿರುಕುಳ ಅನುಭವಿಸಿದೆ. ಈಗ ಎಲ್ ಎಲ್ ಬಿ ಮುಗಿಸಿ ವಕೀಲೆಯಾಗಿದ್ದೇನೆ. ನನ್ನ ಕಷ್ಟ ಯಾರಿಗೂ ಬರಬಾರದು ಎಂದು ಭಾವುಕರಾಗಿ ನುಡಿದರು.
ಇನ್ನೂ ಮುಂದುವರೆದು ಮಾತನಾಡಿದಂತ ಅವರು ನನಗೆ ವಿದ್ಯಾವರ್ಧಕ ಕಾಲೇಜಿನಲ್ಲಿ ಎಲ್ ಎಲ್ ಬಿ ಮುಗಿಸಲು ಸಹಾಯ ಮಾಡಿದ ಸ್ನೇಹಿತರಿಗೆ, ಕಾಲೇಜಿನ ಉಪನ್ಯಾಸಕರಿಗೆ ಧನ್ಯವಾದಗಳು. ಆರ್ಥಿಕವಾಗಿ ಕಷ್ಟದಲ್ಲಿದ್ದಂತ ನನಗೆ ಸ್ನೇಹಿತರು ಸಹಾಯ ಮಾಡಿ ಪದವಿ ಮುಗಿಯಲು ಅನುವಾದರು. ನಾನು ಅನುಭವಿಸಿದ ಕಷ್ಟಗಳು ಬೇರಾವುದೇ ತೃತೀಯ ಲಿಂಗಿಗಳು ಅನುಭವಿಸಬಾರದು. ಅವರ ಕಷ್ಟಗಳಿಗೆ ನಾನು ಧ್ವನಿಯಾಗುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.
ಬೆಂಗಳೂರು : ರಾಜ್ಯದಲ್ಲಿನ ಸರ್ಕಾರಿ, ಅನುದಾನ ಮತ್ತು ಅನುದಾನ ರಹಿತ ಪ್ರೌಢ ಶಾಲೆಗಳಲ್ಲಿನ 6 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಫೆಬ್ರವರಿ 22ರಿಂದ ಆರಂಭಗೊಳ್ಳಲಿವೆ ಎಂಬುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕೃತವಾಗಿ ಆದೇಶಿದೆ.
ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರು(ಪ್ರೌಢ ಶಿಕ್ಷಣ) ಇವರು ಸುತ್ತೋಲೆ ಹೊರಡಿಸಿದ್ದು, ರಾಜ್ಯದಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭ ಮತ್ತು ವಿದ್ಯಾಗಮ ಕಾರ್ಯಕ್ರಗಳ ವಿಸ್ತರಣೆ ಕುರಿತು ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಆರೋಗ್ಯ ಇಲಾಖೆಯ ಕೋವಿಡ್-19 ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಹಾಗೂ ವಿವಿಧ ಇಲಾಥೆಯ ಅಧಿಕಾರಿಗಳ ಸಭೆಯಲ್ಲಿ ಬೆಂಗಳೂರು ನಗರದ ಬಿಬಿಎಂಪಿ ವ್ಯಾಪ್ತಿ ಮತ್ತು ಕೇರಳ ರಾಜ್ಯದ ಗಡಿಭಾಗಕ್ಕೆ ಹೊಂದಿಕೊಂಡ ಪ್ರದೇಶಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಕಡೆ 6ನೇ ತರಗತಿಯಿಂದ 8ನೇ ತರಗತಿಯವರೆಗೆಪ್ರತಿ ದಿನ ಪೂರ್ಣಾವಧಿ ಶಾಲೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ.
ಇನ್ನೂ ಬೆಂಗಳೂರು ನಗರದ ಬಿಬಿಎಂಪಿ ವ್ಯಾಪ್ತಿ ಮತ್ತು ಕೇರಳ ರಾಜ್ಯದ ಗಡಿಭಾಗಕ್ಕೆ ಹೊಂದಿಕೊಂಡ ಪ್ರದೇಶಗಳಲ್ಲಿ 8ನೇ ತರಗತಿ ಪೂರ್ಣಾವಧಿ ಶಾಲೆ ಪ್ರಾರಂಭ 6 ಮತ್ತು 7ನೇ ತರಗತಿಗಳು ವಿದ್ಯಾಗಮ ಕಾರ್ಯಕ್ರಮ ಮುಂದುವರಿಸುವಂತೆ ತೀರ್ಮಾನಿಸಲಾಗಿದೆ.
ಬೆಂಗಳೂರು : ರಾಜ್ಯದಲ್ಲಿನ ಸರ್ಕಾರಿ, ಅನುದಾನ ಮತ್ತು ಅನುದಾನ ರಹಿತ ಪ್ರೌಢ ಶಾಲೆಗಳಲ್ಲಿನ 6 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಫೆಬ್ರವರಿ 22ರಿಂದ ಆರಂಭಗೊಳ್ಳಲಿವೆ. ಇಂತಹ ಶಾಲೆಗಳ ಆರಂಭದ ವೇಳೆಯಲ್ಲಿ ಅನುಸರಿಸಬೇಕಾದಂತ ಮಾರ್ಗಸೂಚಿ ಕ್ರಮಗಳು, ತರಗತಿ ವೇಳಾಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ.
ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರು(ಪ್ರೌಢ ಶಿಕ್ಷಣ) ಇವರು ಸುತ್ತೋಲೆ ಹೊರಡಿಸಿದ್ದು, ರಾಜ್ಯದಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭ ಮತ್ತು ವಿದ್ಯಾಗಮ ಕಾರ್ಯಕ್ರಗಳ ವಿಸ್ತರಣೆ ಕುರಿತು ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಆರೋಗ್ಯ ಇಲಾಖೆಯ ಕೋವಿಡ್-19 ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಹಾಗೂ ವಿವಿಧ ಇಲಾಥೆಯ ಅಧಿಕಾರಿಗಳ ಸಭೆಯಲ್ಲಿ ಬೆಂಗಳೂರು ನಗರದ ಬಿಬಿಎಂಪಿ ವ್ಯಾಪ್ತಿ ಮತ್ತು ಕೇರಳ ರಾಜ್ಯದ ಗಡಿಭಾಗಕ್ಕೆ ಹೊಂದಿಕೊಂಡ ಪ್ರದೇಶಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಕಡೆ 6ನೇ ತರಗತಿಯಿಂದ 8ನೇ ತರಗತಿಯವರೆಗೆಪ್ರತಿ ದಿನ ಪೂರ್ಣಾವಧಿ ಶಾಲೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ.
ಇನ್ನೂ ಬೆಂಗಳೂರು ನಗರದ ಬಿಬಿಎಂಪಿ ವ್ಯಾಪ್ತಿ ಮತ್ತು ಕೇರಳ ರಾಜ್ಯದ ಗಡಿಭಾಗಕ್ಕೆ ಹೊಂದಿಕೊಂಡ ಪ್ರದೇಶಗಳಲ್ಲಿ 8ನೇ ತರಗತಿ ಪೂರ್ಣಾವಧಿ ಶಾಲೆ ಪ್ರಾರಂಭ 6 ಮತ್ತು 7ನೇ ತರಗತಿಗಳು ವಿದ್ಯಾಗಮ ಕಾರ್ಯಕ್ರಮ ಮುಂದುವರಿಸುವಂತೆ ತೀರ್ಮಾನಿಸಲಾಗಿದೆ.
ಬೆಂಗಳೂರು : ದುಬಾರಿ ಪಾರ್ಕಿಂಗ್ ಶುಲ್ಕ ವಿಧಿಸಿ ನಗರದಲ್ಲಿ ವಾಹನ ಸಂಚಾರ ಪ್ರಮಾಣವನ್ನು ಕಡಿಮೆ ಮಾಡಿ ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸುವ ಪ್ರಸ್ತಾವನೆಯ ಬಗ್ಗೆ ಸರಕಾರ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಡಿಸಿಎಂ ಡಾ.ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದರು.
ಬೆಂಗಳೂರಿನ ಸರಕಾರಿ ಕಲಾ ಕಾಲೇಜಿನಲ್ಲಿ ಗುರುವಾರ ನೂತನ ಜಿಮ್ ಹೌಸ್ ಹಾಗೂ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜತೆ ಮಾತನಾಡಿದ ಡಿಸಿಎಂ ಡಾ.ಸಿಎನ್ ಅಶ್ವತ್ಥ ನಾರಾಯಣ ತಜ್ಞರ ಸಮಿತಿಯಿಂದ ಈ ಬಗ್ಗೆ ಸಲಹೆಯಷ್ಟೇ ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಸರಕಾರ ತಾನೆ ನಿರ್ಧಾರ ಕೈಗೊಳ್ಳಬೇಕಲ್ಲವೆ ಎಂದ ಅವರು, ಈ ಬಗ್ಗೆ ಇನ್ನೂ ಯಾವ ರೀತಿಯ ಚರ್ಚೆ ಅಥವಾ ಪರಿಶೀಲನೆ ನಡೆದಿಲ್ಲ. ಮುಂದಿನ ದಿಗಳಲ್ಲಿ ಸಮಾಜಕ್ಕೆ ಒಳ್ಳೆಯದಾಗುವ, ಸಮಗ್ರವಾಗಿ ಎಲ್ಲ ಅಂಶಗಳನ್ನು ಪರಿಗಣಿಸಿ ನಿರ್ಧಾರ ಕೈಗೊಳ್ಳವುದು ಆಗುತ್ತದೆ ಎಂದರು. ಈ ಮೂಲಕ ವಾಹನ ಮಾಲೀಕರಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ಬೆಂಗಳೂರು : ನಮ್ಮದೆ ರೈತರ ನೆಲ ಕಸಿದುಕೊಂಡು, ನಮ್ಮದೇ ತೆರಿಗೆಯಿಂದ ನಿರ್ಮಾಣ ಮಾಡಿದ ರಸ್ತೆಗಳಿಗೆ ಈಗಾಗಲೇ ರಸ್ತೆ ತೆರಿಗೆ ಎಂದು ಕಟ್ಟುತ್ತಲೇ ಇದ್ದೇವೆ ಆದರೂ ಟೋಲ್ ಫೀ ಏಕೆ? ಈ ಹಗಲು ದರೋಡೆಯನ್ನು ಸರ್ಕಾರ ಡಿಜಿಟಲಿಕರಣ ಮಾಡಿದ್ದು, ಫಾಸ್ಟ್ಯಾಗ್ ಮೂಲಕ ಯೋಜಿತ ದರೋಡೆಗೆ ಇಳಿದಿದೆ. “ಇಂಡಿಯಾ ಶೈನಿಂಗ್ ರಸ್ತೆಗಳಿಗೆ, ಮೇಕ್ ಇನ್ ಇಂಡಿಯಾ ಫಾಸ್ಟ್ಯಾಗ್” ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ಘಟಕದ ಉಪಾಧ್ಯಕ್ಷ ಸುರೇಶ್ ರಾಥೋಡ್ ಲೇವಡಿ ಮಾಡಿದರು.
ಗುರುವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಸಾರಿಗೆ ಇಲಾಖೆ ರಸ್ತೆ ಶುಲ್ಕ ವಸೂಲಿ ಮಾಡುತ್ತಿದೆ. ಆದರೂ ಟೋಲ್ ಶುಲ್ಕವನ್ನು ಯಾಕೆ ಕಟ್ಟಬೇಕು ಎಂದು ಪ್ರಶ್ನಿಸಿದರು.
ರಸ್ತೆ ನಿರ್ಮಾಣ ಕಂಪೆನಿಗಳ ಅಡಿಯಾಳಾಗಿರುವ ಕೇಂದ್ರ ಸರ್ಕಾರ 18 ವರ್ಷ ಇದ್ದ ಟೋಲ್ ಸಂಗ್ರಹ ಗುರಿಯನ್ನು 30 ವರ್ಷಕ್ಕೆ ಏರಿಸಿದೆ. ಇದೊಂದು ಉದಾಹರಣೆ ಸಾಕು ಸರ್ಕಾರದ ಹಗಲು ದರೋಡೆಗೆ ಎಂದರು.
ದೇಶದಲ್ಲಿ ದಿನವೊಂದಕ್ಕೆ 105 ಕೋಟಿಯಷ್ಟು ಹೆಚ್ಚು ಟೋಲ್ ವಸೂಲಿಯಾಗುತ್ತಿದೆ. ಇಷ್ಟು ವರ್ಷಗಳ ಕಾಲ ವಸೂಲಿ ಮಾಡಿದ ಹಣ ಎಲ್ಲಿ ಹೋಯಿತು. ರಸ್ತೆ ನಿರ್ಮಾಣ ಕಂಪೆನಿಗಳು ಟೋಲ್ ರಸ್ತೆ ಬಳಸಲು ಯಾರು ಇಷ್ಟ ಪಡುವುದಿಲ್ಲವೋ ಅವರಿಗಾಗಿ ಪರ್ಯಾಯ ಸರ್ವೀಸ್ ರಸ್ತೆಗಳನ್ನು ನಿರ್ಮಿಸಿಕೊಡುವ ಜವಾಬ್ದಾರಿ ರಸ್ತೆ ನಿರ್ಮಾಣ ಕಂಪೆನಿಗಳ ಮೇಲಿದೆ. ಆದರೂ ಬಹುತೇಕ ಕಡೆ ಈ ನಿಯಮ ಪಾಲಿಸಿಲ್ಲ. ಉದಾಹರಣೆಗೆ- ನೆಲಮಂಗಲ- ತುಮಕೂರು ಹೆದ್ದಾರಿ ಅತ್ಯಂತ ಕಳಪೆಯಿಂದ ಕೂಡಿದ್ದು, ಹೆದ್ದಾರಿ ಎನ್ನುವ ಪದಕ್ಕೆ ಅವಮಾನ ಮಾಡಿದಂತಿದೆ. ಆದರೂ ಟೋಲ್ ಶುಲ್ಕವನ್ನು ಅಮಾನುಷವಾಗಿ ವಸೂಲಿ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಬೆರಳೆಣಿಕೆಯಷ್ಟು ರಸ್ತೆಗಳು ಮಾತ್ರ ಟೋಲ್ ಮುಕ್ತವಾಗಿವೆ ಎಲ್ಲಾ ಕಡೆಯೂ ಜನಸಾಮಾನ್ಯರ ಹಣ ದೋಚಲಾಗುತ್ತಿದೆ. ಅಲ್ಲದೆ ರಾಜ್ಯ ಹೆದ್ದಾರಿಗಳಲ್ಲೂ ಟೋಲ್ ಸಂಗ್ರಹಕ್ಕೆ ಯಡಿಯೂರಪ್ಪ ಅವರು ಮೊದಲ ಬಾರಿ ಅಧಿಕಾರ ಹಿಡಿದಾಗ ಮುನ್ನುಡಿ ಬರೆದಿದ್ದರು. ರಾಷ್ಟ್ರೀಯ ಹೆದ್ದಾರಿ ಸುಲಿಗೆಗೆ ಬೇಸತ್ತಿರುವ ಜನ, ಎಲ್ಲಾ ರಾಜ್ಯ ಹೆದ್ದಾರಿಗಳಲ್ಲಿ ಸಂಚರಿಸಲು ಹಣ ಕಟ್ಟಬೇಕಾದ ದಿನ ದೂರವಿಲ್ಲ, ಒಟ್ಟಾರೆ ಜನರ ಸುಲಿಗೆಯೇ ಇವರ ಮಂತ್ರವಾಗಿದೆ ಎಂದು ಕಿಡಿಕಾರಿದರು.
ರಾಜಕೀಯ ಚಟುವಟಿಕೆಗಳ ಉಸ್ತುವಾರಿ ಫಣಿರಾಜ್ ಎಸ್.ವಿ ಮಾತನಾಡಿ, ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದಿದ್ದರೆ ಎಲ್ಲಾ ಟೋಲ್ ಪ್ಲಾಜಾಗಳ ಬಂದ್ ಚಳವಳಿ ಪ್ರಾರಂಭಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ದತ್ತಾತ್ರೇಯ ವಾರ್ಡ್ ಮಹಿಳಾ ಘಟಕದ ಅಧ್ಯಕ್ಷೆ ಉಷಾ ಮೋಹನ್, ಅಗರ ವಾರ್ಡ್ ಅಧ್ಯಕ್ಷೆ ಪಲ್ಲವಿ ಚಿದಂಬರ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಇಫ್ತಿಕಾರ್ ಪ್ರತಿಷ್ಟಿತ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜಿನಲ್ಲಿ ಪಾಲುದಾರರಾಗಿದ್ದಾರೆ ಎಂಬ ಮಾಹಿತಿ ಮೇರೆಗೆ ಈ ದಾಳಿ ನಡೆದಿದೆ ಎನ್ನಲಾಗಿದೆ. ಐಟಿ ಅಧಿಕಾರಿಗಳಿಂದ ಇಫ್ತಿಕಾರ್ ಮನೆಯಲ್ಲಿನ ಮುಖ್ಯ ದಾಖಲೆಗಳ ಪರಿಶೀಲನೆ ಕಾರ್ಯ ನಡೆಯುತ್ತಿದೆ.
ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವಂತ ವೈಭವ್ ಜೈನ್ ವಿರುದ್ಧ ಇದೀಗ ಮತ್ತೊಂದು ಪ್ರಕರಣ ದಾಖಲಾಗಿದೆ. ವೈಭವ್ ಜೈನ್ ಪತ್ನಿ, ಹಲ್ಲೆ ನಡೆಸಿ, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ವೈಭವ್ ಜೈನ್ ವಿರುದ್ಧ ದೂರು ದಾಖಲಿಸಿದ್ದಾರೆ.
2020ರ ಆಗಸ್ಟ್ ನಲ್ಲಿ ಬೀದಿಗೆ ಬಿದ್ದಿದ್ದಂತ ವೈಭವ್ ಜೈನ್ ಹಾಗೂ ಅವರ ಪತ್ನಿಯ ದಂಪತಿಗಳ ಜಗಳ, ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಅಲ್ಲದೇ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದರಿಂದಾಗಿ ವೈಯಾಲಿಕಾವಲ್ ಪೊಲೀಸರಿಂದ ವೈಭವ್ ಜೈನ್ ಬಂಧನ ಕೂಡ ಆಗಿತ್ತು.
ಈ ಬಳಿಕ, ಇದೀಗ ಮತ್ತೆ ಪತಿ-ಪತ್ನಿ ಜಗಳ ತಾರಕ್ಕಕ್ಕೇರಿದೆ. ಫೆಬ್ರವರಿ 9ರಂದು ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ವೈಭವ್ ಜೈನ್, ಜಾಮೀನಿನ ಮೇಲೆ ಬಿಡುಗಡೆ ಆಗಿ ಹೊರ ಬಂದಿದ್ದರು. ಇಂತಹ ಅವರು ಫೆಬ್ರವರಿ 12ರಂದು ಮತ್ತೆ ಪತ್ನಿಯ ಜೊತೆಗೆ ಜಗಳ ಆಡಿದ್ದಾರೆ ಎನ್ನಲಾಗಿದೆ. ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವಂತ ಅವರು, ಹಲ್ಲೆ ನಡೆಸಿ, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ಪತ್ನಿ ಆರೋಪಿಸಿದ್ದಾರೆ.
ಅಲ್ಲದೇ ಅನೈತಿಕ ಸಂಬಂಧದಿಂದಾಗಿ ಪತಿ ವೈಭವ್ ಜೈನ್ ಪದೇ ಪದೇ ಕಿರುಕುಳ ನೀಡುತ್ತಿದ್ದಾರೆ, ಹಲ್ಲೆ ನಡೆಸಿ, ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಎಂಬುದಾಗಿ ವೈಯಾಲಿಕಾವಲ್ ಠಾಣೆಗೆ ದೂರು ನೀಡಿದ್ದಾಳೆ. ಇದರಿಂದಾಗಿ ವೈಭವ್ ಜೈನ್ ಅವರನ್ನು ಬಂಧಿಸಲಾಗಿದೆ. ಆನಂತ್ರ ಠಾಣಾ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.
ಮೈಸೂರು : ಶ್ರೀರಾಮಮಂದಿರ ನಿಧಿ ಸಂಗ್ರಹಣೆ ವಿಚಾರದಲ್ಲಿ ದೇಶ, ಸಮಾಜವನ್ನು ಒಡೆಯುವಂತ ಕೆಲಸ ಮಾಡಬೇಡಿ ಎಂಬುದಾಗಿ ಮಾಜಿ ಸಚಿವ ಎಸ್ ಎ ರಾಮದಾಸ್, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.
ಈ ಕುರಿತಂತೆ ಟ್ವಿಟ್ ಮಾಡಿರುವಂತ ಅವರು, ರಾಮ ಮಂದಿರ ನಿಧಿ ಸಂಗ್ರಹಣಾ ಅಭಿಯಾನದಲ್ಲಿ ಹಿಂದೂಗಳು ಮಾತ್ರವಲ್ಲದೇ, ಮುಸಲ್ಮಾನ, ಕ್ರೈಸ್ತರೂ ಸಹ ದೇಣಿಗೆಯನ್ನು ರಾಮನ ಚರಣಕ್ಕೆ ಅರ್ಪಿಸಿದ್ದಾರೆ ,ಇದನ್ನೊಂದು ಬಾರಿ ತಿಳಿಯುವ ಪ್ರಯತ್ನ ಮಾಡಿ. ಯಾರ ಮನಸ್ಸಲ್ಲೂ ಇಲ್ಲದ ವಿಷ ಬೀಜ ಬಿತ್ತುವ ಕೆಲಸ ಮಾಡಬೇಡಿ ಎಂದಿದ್ದಾರೆ.
ಕುಮಾರಸ್ವಾಮಿ ಅವರೇ ನೀವು ಅಂತಃಕರಣದಿಂದ ಮಾತನಾಡಿ, ನೀವು, ನಿಮ್ಮ ಸಹೋದರ ಹಾಗೂ ನಿಮ್ಮ ಪಿತಾಶ್ರೀ ಅವರು ತಿಂಗಳಲ್ಲಿ ಹೆಚ್ಚಿನ ದಿನ ಪೂಜೆ, ಹೋಮಗಳಲ್ಲೇ ತೊಡಗುತ್ತೀರಿ ಎಂಬುದು ಜನತೆಗೆ ಗೊತ್ತಿರುವ ವಿಷಯ ಎಂದು ಹೇಳಿದ್ದಾರೆ.
ಮಹಾತ್ಮಾ ಗಾಂಧೀಜಿ, ನೆಹರೂ, ಅಂಬೇಡ್ಕರ್ ಸಹ RSS ನ ಕಾರ್ಯದ ಬಗ್ಗೆ ಶ್ಲಾಘಿಸಿದ್ದಾರೆ. RSS ಬಗ್ಗೆ ಜನತೆಗೆ ಧೈರ್ಯದ ಭಾವನೆ ಇದೆಯೇ ಹೊರತು ಹೆದರಿಕೆಯ ಭಾವನೆ ಇಲ್ಲ. ಇವನ್ನೆಲ್ಲಾ ತಿಳಿದು ಇನ್ನಾದರೂ ದೇಶವನ್ನು, ಸಮಾಜವನ್ನು ಒಡೆಯುವ ಕೆಲಸ ಮಾಡಬೇಡಿ ಎಂದು ಕಿಡಿಕಾರಿದ್ದಾರೆ.
ಬೆಂಗಳೂರು : ಬಡತನ ರೇಖೆಗಿಂತ ಕೆಳಗಿರುವ ಪಡಿತರ ಚೀಟಿದಾರರ ಕುರಿತಾದ ಹೇಳಿಕೆಯ ಒಂದು ದಿನದ ನಂತರ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕಟ್ಟಿ ಮಂಗಳವಾರ ಯು-ಟರ್ನ್ ಹೊಡೆದಿದ್ದಾರೆ. ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಹೊಂದಿರುವವರಿಗೆ ಪ್ರಯೋಜನಗಳನ್ನು ಪಡೆಯುವಲ್ಲಿ ಯಾವುದೇ ನಿರ್ದಿಷ್ಟ ನಿಯತಾಂಕಗಳಿಲ್ಲ ಎಂದು ಹೇಳಿದ್ದಾರೆ. ಬಿ ಎಸ್ ಯಡಿಯೂರಪ್ಪ ನೇತೃತ್ವದ ಕರ್ನಾಟಕದ ಬಿಜೆಪಿ ಸರ್ಕಾರ ಬಡವರ ಪರವಾಗಿದೆ ಮತ್ತು ಹೆಚ್ಚಿನ ಬಿಪಿಎಲ್ ಕಾರ್ಡ್ಗಳನ್ನು ವಿತರಿಸಲು ಬದ್ಧವಾಗಿದೆ ಎಂದು ಸಚಿವರು ಒತ್ತಿ ಹೇಳಿದರು.
ಮುಂದೆಯೂ ರಾಗಿ, ಜೋಳ ಮತ್ತು ಅಕ್ಕಿಯಂತಹ ಉಚಿತ ಆಹಾರ ಧಾನ್ಯಗಳನ್ನು ನೀಡಲಿದೆ ಎಂದರು. ಕಾಂಗ್ರೆಸ್ ಮತ್ತು ಜೆಡಿಯು (ಎಸ್) ನಿಂದ ತೀವ್ರ ಆಕ್ರೋಶಕ್ಕೆ ಗುರಿಯಾದ ಕಟ್ಟಿ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಬಿಪಿಎಲ್ ಮತ್ತು ಎಪಿಎಲ್ (ಬಡತನದ ರೇಖೆಯ ಮೇಲೆ) ಗೆ ಯಾವುದೇ ನಿರ್ದಿಷ್ಟ ನಿಯತಾಂಕಗಳಿಲ್ಲ ಮತ್ತು ಈ ನಿಟ್ಟಿನಲ್ಲಿ ಸರ್ಕಾರ ಯಾವುದೇ ಹೇಳಿಕೆ ನೀಡದ ಕಾರಣ ಯಾರೂ ಚಿಂತೆ ಮಾಡುವ ಅಗತ್ಯವಿಲ್ಲ
ತಮ್ಮ ಹಿಂದಿನ ಹೇಳಿಕೆಯಿಂದ ಹಿಂದೆ ಸರಿದ ಸಚಿವರು, “ನಾನು ದೆಹಲಿಯ ಮಾಹಿತಿಯನ್ನು ಮಾತ್ರ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದೇನೆ. ಆ ನಿಯತಾಂಕಗಳು (ಮೋಟಾರ್ಸೈಕಲ್, ಟಿವಿ, ಫ್ರಿಜ್ ಮತ್ತು ಭೂಮಿ) ನನ್ನದಲ್ಲ, ಅಥವಾ ಮುಖ್ಯಮಂತ್ರಿ ಅಂತಹ ಯಾವುದೇ ಆದೇಶಗಳನ್ನು ನೀಡಿಲ್ಲ ಎಂದಿದ್ದಾರೆ.
ಬೆಂಗಳೂರು : ನಗರದಲ್ಲಿನ ಮತ್ತೆ ಕೊರೋನಾ ಹಾವಳಿ ಶುರುವಾಗಿದೆ. ಒಂದೇ ಅಪಾರ್ಟ್ ಮೆಂಟ್ ನ 103 ಜನರಿಗೆ ಕೊರೋನಾ ಶಾಕ್ ನೀಡಿದೆ. ಹೀಗಾಗಿ ಬೆಂಗಳೂರಿನಲ್ಲಿ ಕೊರೋನಾ ಬಗ್ಗೆ ಈಗ ಮತ್ತೆ ಜಾಗ್ರತೆ ವಹಿಸೋ ತುರ್ತು ಅಗತ್ಯವಿದೆ.
ಸಿಲಿಕಾನ್ ಸಿಟಿಯ ಬಿಳೇಕಹಳ್ಳಿಯಲ್ಲಿನ ಎಸ್ ಎನ್ ಎನ್ ಅಪಾರ್ಟ್ ಮೆಂಟ್ ನಲ್ಲಿನ ನಿವಾಸಿಗಳು ಫೆಬ್ರವರಿ 6ರಂದು ಪಾರ್ಟಿ ಮಾಡಿದ್ದರು. ಈ ಪಾರ್ಟಿಯಲ್ಲಿ ಭಾಗವಹಿಸಿದ್ದಂತ ಅನೇಕರಿಗೆ ಕೊರೋನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು.
ಇದರಿಂದಾಗಿ ಕೊರೋನಾ ಪರೀಕ್ಷೆಗೆ ನಿನ್ನೆ ಒಳಪಡಿಸಲಾಗಿತ್ತು. ಇಂತಹ ಪರೀಕ್ಷೆಯಲ್ಲಿ ನಿನ್ನೆ 36 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು. ಇಂದು ಮತ್ತೆ 70 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಈ ಕಾರಣದಿಂದಾಗಿ ಅಪಾರ್ಟ್ ಮೆಂಟ್ ಸುತ್ತಾ ಮುತ್ತಾ ಸ್ಯಾನಿಟೈಸರ್ ಮಾಡಲಾಗಿದ್ದು, ಅಪಾರ್ಟ್ ಮೆಂಟ್ ನಿವಾಸಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಈ ಮೂಲಕ ಕೊರೋನಾ ಮತ್ತಷ್ಟು ಜನರಿಗೆ ಹರಡದಂತೆ ಎಚ್ಚರಿಕೆ ವಹಿಸಲಾಗಿದೆ.
ಬೆಂಗಳೂರು:ಹಲವು ವರ್ಷಗಳ ಕಾಯುವಿಕೆಯ ನಂತರ, ಎಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಘಟಕಗಳಿಂದ ಬೋರ್ವೆಲ್ ನೀರನ್ನು ಬಳಸಲು ಆಕ್ಷೇಪಣೆ ಪ್ರಮಾಣಪತ್ರವನ್ನು (ಎನ್ಒಸಿ) ಕಡ್ಡಾಯಗೊಳಿಸುವ ಕೇಂದ್ರದ ಮಾರ್ಗಸೂಚಿಯನ್ನು ತಿಳಿಸುವ ಮೂಲಕ ಅಂತರ್ಜಲ ಬಳಕೆಯ ಮೇಲ್ವಿಚಾರಣೆ ಮಾಡುವ ನಿಯಮವನ್ನು ರಾಜ್ಯ ಸರ್ಕಾರ ತಂದಿದೆ.
ಕರ್ನಾಟಕ ಅಂತರ್ಜಲ ಪ್ರಾಧಿಕಾರದ (ಕೆಜಿಡಬ್ಲ್ಯುಎ) ಅಧಿಸೂಚನೆಯ ಪ್ರಕಾರ, ಬೋರ್ವೆಲ್ ನೀರನ್ನು ಬಳಸುವ ಎಲ್ಲಾ ಕೈಗಾರಿಕೆಗಳು ಮತ್ತು ವಾಣಿಜ್ಯ ಸಂಸ್ಥೆಗಳು ಏಪ್ರಿಲ್ 30 ರೊಳಗೆ ಆನ್ಲೈನ್ ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳಬೇಕು.
ಕೇಂದ್ರ ಅಂತರ್ಜಲ ಪ್ರಾಧಿಕಾರ (ಸಿಜಿಡಬ್ಲ್ಯುಎ) ಈ ಮಾರ್ಗಸೂಚಿಗಳನ್ನು ಹೊರಡಿಸಿದೆ ಎಂದು ಕೆಜಿಡಬ್ಲ್ಯೂಎ ನಿರ್ದೇಶಕ ರವೀಂದ್ರಪ್ಪ ತಿಳಿಸಿದ್ದಾರೆ. “ಅಂತರ್ಜಲವನ್ನು ವರ್ಷಗಳಿಂದ ಮುಕ್ತವಾಗಿ ಪರಿಗಣಿಸಲಾಗಿದೆ, ಇದು ಅತಿಯಾದ ಶೋಷಣೆಗೆ ಕಾರಣವಾಗಿದೆ. ಕೆಲವು ಜಿಲ್ಲೆಗಳು ಅನಿಯಂತ್ರಿತ ನೀರನ್ನು ಸೆಳೆಯುವುದರಿಂದ ನಿರ್ಣಾಯಕ ಮಟ್ಟವನ್ನು ತಲುಪಿದೆ. ಈಗ, ವಾಣಿಜ್ಯ ಅಥವಾ ಕೈಗಾರಿಕಾ ಉದ್ದೇಶಕ್ಕಾಗಿ ಅದನ್ನು ಬಳಸಿಕೊಳ್ಳುವವರ ಮೇಲೆ ನಾವು ಶುಲ್ಕ ವಿಧಿಸಲು ಪ್ರಾರಂಭಿಸುತ್ತೇವೆ. ನೋಂದಾಯಿಸಲು ವಿಫಲರಾದವರು ಅವರು ಕ್ರಮ ಎದುರಿಸಬೇಕಾಗುತ್ತದೆ, “ಅವರು ಹೇಳಿದರು.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಅನುಮೋದನೆಯ ನಂತರ ಮಾರ್ಗಸೂಚಿಗಳನ್ನು ನೀಡಲಾಗಿದೆ ಮತ್ತು ದಿನಕ್ಕೆ 20,000 ಲೀಟರ್ಗಿಂತ ಹೆಚ್ಚು ನೀರು ಅಗತ್ಯವಿರುವ ಎಲ್ಲಾ ವಸತಿ ಅಪಾರ್ಟ್ಮೆಂಟ್ಗಳು ಮತ್ತು ಗುಂಪು ವಸತಿ ಸಂಘಗಳಿಗೆ ಎನ್ಒಸಿ ಕಡ್ಡಾಯಗೊಳಿಸಲಾಗಿದೆ.
ಅಂತಹ ಸಂದರ್ಭಗಳಲ್ಲಿ, ಸ್ಥಳೀಯ ಸರ್ಕಾರಿ ಸಂಸ್ಥೆಗಳು ನೀರನ್ನು “ಪೂರೈಸಲು” ಸಾಧ್ಯವಾಗದಿದ್ದರೆ ಮಾತ್ರ ಎನ್ಒಸಿ ನೀಡಲಾಗುತ್ತದೆ. ಆಗಲೂ, ಅಂತಹ ಸಮಾಜಗಳು ಶೌಚಾಲಯ, ತೋಟಗಾರಿಕೆ ಮತ್ತು ಇತರ ಕುಡಿಯಲು ಯೋಗ್ಯವಲ್ಲದ ಬಳಕೆಗಾಗಿ ಸಂಸ್ಕರಿಸಿದ ಒಳಚರಂಡಿ ನೀರನ್ನು ಬಳಸುತ್ತಿವೆ ಎಂಬುದನ್ನು ತೋರಿಸಬೇಕು.
ಮಾರ್ಗಸೂಚಿಯ ಪ್ರಕಾರ, ಯಾವುದೇ ಹೊಸ ಉದ್ಯಮವು ಅಂತರ್ಜಲವನ್ನು ಬಳಸಲು ಅನುಮತಿ ಪಡೆಯುವುದಿಲ್ಲ. ವಾಣಿಜ್ಯ ಸಂಸ್ಥೆಗಳು ಅಂತರ್ಜಲ ಬಳಕೆಯ ವಿವರಗಳನ್ನು ನೀಡುವ ವಾರ್ಷಿಕ ಲೆಕ್ಕಪರಿಶೋಧನಾ ವರದಿಯನ್ನು ಸಲ್ಲಿಸಬೇಕಾಗುತ್ತದೆ. ಸ್ವತಂತ್ರ ಏಜೆನ್ಸಿಗಳು ಅವುಗಳ ಅನುಸರಣೆಯನ್ನು ಪರಿಶೀಲಿಸುತ್ತವೆ.
ವಿನಾಯಿತಿಗಳು
ಕೃಷಿ ಬೋರ್ವೆಲ್ಗಳು, ವೈಯಕ್ತಿಕ ದೇಶೀಯ ಗ್ರಾಹಕರು, ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಗಳು, ಸಶಸ್ತ್ರ ಪಡೆಗಳ ಬೋರ್ವೆಲ್ಗಳು ಮತ್ತು ದಿನಕ್ಕೆ 10,000 ಲೀಟರ್ಗಿಂತ ಕಡಿಮೆ ಸೆಳೆಯುವ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳನ್ನು ನೋಂದಣಿಯಿಂದ ವಿನಾಯಿತಿ ನೀಡಲಾಗಿದೆ.
15 ವರ್ಷಗಳಿಗೂ ಹೆಚ್ಚು ಕಾಲ ಭೂಗತ ನೀರಿನ ಕ್ಷೇತ್ರದಲ್ಲಿ ರಾಜ್ಯ ಸರ್ಕಾರದೊಂದಿಗೆ ಕೆಲಸ ಮಾಡಿದ ನಿವೃತ್ತ ಎಂಜಿನಿಯರ್, ಎಂಎಸ್ಎಂಇಗಳಿಗೆ ನೀಡಲಾದ ವಿನಾಯಿತಿ ಸರ್ಕಾರದ ಕಡೆಯಿಂದ ದೊಡ್ಡ ತಪ್ಪು ಎಂದು ಹೇಳಿದರು.
ಬೆಂಗಳೂರು:ಕೇರಳದಿಂದ ಬೆಂಗಳೂರಿಗೆ ಬರುವವರಿಗೆ 72 ಗಂಟೆಗಳಿಗಿಂತ ಮೊದಲಿನ ನೆಗೆಟಿವ್ ಆರ್ಟಿ ಪಿಸಿಆರ್ ಪರೀಕ್ಷಾ ವರದಿ ಕಡ್ಡಾಯವಾಗಲಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.
ಒಂದು ವೇಳೆ ಪ್ರಯಾಣಿಕರಿಗೆ ಪರೀಕ್ಷಾ ವರದಿಯಿಲ್ಲದಿದ್ದರೆ, ವ್ಯಕ್ತಿಯು ಆಗಮನದ ಮೇಲೆ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ ಮತ್ತು ವರದಿ ಸ್ವೀಕರಿಸುವವರೆಗೆ ಹೋಂ ಕ್ವಾರಂಟೈನ್ ನಲ್ಲಿ ಇರಬೇಕಾಗುತ್ತದೆ.
ನೆರೆಯ ರಾಜ್ಯ ಮತ್ತು ಕಾಲೇಜುಗಳಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೇರಳದಿಂದ ಹಿಂದಿರುಗಿದವರ ಆಗಮನದ ಬಗ್ಗೆ ಕೋವಿಡ್ -19 ನೆಗೆಟಿವ್ ವರದಿಯನ್ನು ಹೊಂದಿದೆಯೆ ಎಂದು ಖಚಿತಪಡಿಸಿಕೊಳ್ಳಲು ಕಂಪನಿಗಳು ಮತ್ತು ನಿವಾಸಿ ಕಲ್ಯಾಣ ಸಂಘಗಳಿಗೆ ಸೂಚಿಸಲಾಗಿದೆ ಎಂದು ಆಯುಕ್ತರ ಕಚೇರಿ ತಿಳಿಸಿದೆ.
ಕಳೆದ ಎರಡು ದಿನಗಳಲ್ಲಿ ಕಾವಲ್ ಬೈರಸಂದ್ರ ಬಳಿಯ ಮಂಜುಶ್ರೀ ಕಾಲೇಜ್ ಆಫ್ ನರ್ಸಿಂಗ್ನಿಂದ 210 ಜನರನ್ನು ಪರೀಕ್ಷಿಸಲಾಗಿದ್ದು, ಅದರಲ್ಲಿ 40 ಮಂದಿ ಪಾಸಿಟಿವ್ ಬಂದಿದೆ. ಬೊಮ್ಮನಹಳ್ಳಿ ಬಳಿಯ ಅಪಾರ್ಟ್ಮೆಂಟ್ನಲ್ಲಿ 500 ಪರೀಕ್ಷೆಗೆ ಒಳಪಡಿಸಿದ್ದು 28 ಮಂದಿಗೆ ಪಾಸಿಟಿವ್ ಬಂದಿದೆ. ನರ್ಸಿಂಗ್ ಕಾಲೇಜಿನಲ್ಲಿ, ಹೆಚ್ಚಿನವರು ಕೇರಳದ ವಿದ್ಯಾರ್ಥಿಗಳಾಗಿದ್ದು ,ಇವೆರಡೂ ಸೂಪರ್ ಸ್ಪ್ರೆಡರ್ಗಳ ನಿದರ್ಶನಗಳಾಗಿವೆ ಎಂದು ಪ್ರಸಾದ್ ಸೋಮವಾರ ಹೇಳಿದ್ದಾರೆ.
ಒಟ್ಟು 141 ಆರೋಗ್ಯ ಕೇಂದ್ರಗಳು ಕೋವಿಡ್ -19 ಪರೀಕ್ಷಿಸಲು ಮತ್ತು ನೋಂದಾಯಿತ ಫಲಾನುಭವಿಗಳಿಗೆ ಲಸಿಕೆ ನೀಡಲು ಸಜ್ಜುಗೊಂಡಿವೆ. ನಗರದಲ್ಲಿ ಕೋವಿಡ್ ಮುನ್ನೆಚ್ಚರಿಕೆಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ಮಾರ್ಷಲ್ಗಳನ್ನು ಸಹ ನೇಮಿಸಲಾಗಿದೆ.
ಸುರತ್ಕಲ್ :ಸುರತ್ಕಲ್ನ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಮತ್ತು ಮುಲ್ಕಿ ನಾಗರಿಕ ಅಭಿವೃದ್ಧಿ ಸಮಿತಿ ಸದಸ್ಯರು ಸೂರತ್ಕಲ್ನಲ್ಲಿ ಟೋಲ್ ಪ್ಲಾಜಾ ವಿರುದ್ಧ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಲು ನಿರ್ಧರಿಸಿದ್ದಾರೆ.
ಟೋಲ್ ಪ್ಲಾಜಾದಲ್ಲಿ ಜಮಾಯಿಸಿದ್ದ ನಾಯಕರು, ಟೋಲ್ ಸಂಗ್ರಹದಲ್ಲಿ ತೊಡಗಿರುವ ಗುತ್ತಿಗೆದಾರರ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಸ್ಥಳೀಯ ವಾಹನಗಳು ಮತ್ತು ಪಾಸ್ ಹೊಂದಿರುವ ವಾಹನಗಳು ಪ್ಲಾಜಾವನ್ನು ದಾಟಿದ ಲೇನ್ ಫಾಸ್ಟ್ಯಾಗ್ ಮುಕ್ತ ಲೇನ್ ಆಗಿ ಮುಂದುವರೆದಿದೆ ಎಂದು ಟೋಲ್ ಪ್ಲಾಜಾ ಅಧಿಕಾರಿಗಳು ಮುಖಂಡರಿಗೆ ಮಾಹಿತಿ ನೀಡಿದರು. ಆದಾಗ್ಯೂ, ವಾಹನಗಳು ಇತರ ಪಥಗಳಿಗೆ ಪ್ರವೇಶಿಸಿದರೆ, ಫಾಸ್ಟ್ಯಾಗ್ ನಿಯಮಗಳ ಪ್ರಕಾರ ಅವರಿಂದ ಶುಲ್ಕವನ್ನು ಸಂಗ್ರಹಿಸಲಾಗುತ್ತದೆ.
ಸ್ಥಳೀಯ ವಾಹನಗಳಿಗೆ ವಿನಾಯಿತಿ ನೀಡಿದ್ದರಿಂದ, ಕಡ್ಡಾಯ ಫಾಸ್ಟ್ಯಾಗ್ ವಿರುದ್ಧ ಪ್ರತಿಭಟನೆ ನಡೆಸದಿರಲು ನಾಯಕರು ನಿರ್ಧರಿಸಿದರು. ಆದರೆ ಭವಿಷ್ಯದಲ್ಲಿ ಸ್ಥಳೀಯ ವಾಹನಗಳಿಂದ ಟೋಲ್ ಸಂಗ್ರಹಿಸಲು ಸರ್ಕಾರ ನಿರ್ಧರಿಸಿದರೆ, ಟೋಲ್ ಸಂಗ್ರಹದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಸೂರತ್ಕಲ್ನಲ್ಲಿ ತಾತ್ಕಾಲಿಕ ಟೋಲ್ ಗೇಟ್ ವಿರುದ್ಧ ಪ್ರತಿಭಟನೆ ತೀವ್ರಗೊಳಿಸಲು ಪ್ರತಿನಿಧಿಗಳು ನಿರ್ಧರಿಸಿದ್ದಾರೆ. ಪ್ರತಿಭಟನೆಯ ಭಾಗವಾಗಿ, ಶೀಘ್ರದಲ್ಲೇ ಸಾಮೂಹಿಕ ಧರಣಿ ನಡೆಸಲು ನಾಯಕರು ನಿರ್ಧರಿಸಿದ್ದಾರೆ.
ಬೆಂಗಳೂರು : ಸತತ ಎಂಟನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿದ್ದರಿಂದ ಇಂಧನ ಬೆಲೆ ಮಂಗಳವಾರ ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿತು.
ಬೆಂಗಳೂರು, ಪೆಟ್ರೋಲ್ ಪ್ರತಿ ಲೀಟರ್ಗೆ 92.82 ರೂ., ಡೀಸೆಲ್ ಲೀಟರ್ಗೆ 84.49 ರೂ. ಆಗಿದೆ.
ಬೆಲೆಗಳ ಪಟ್ಟುಹಿಡಿದ ಹೆಚ್ಚಳವನ್ನು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಟೀಕಿಸಿದ್ದು, ಸಾಮಾನ್ಯ ಜನರ ಮೇಲಿನ ಹೊರೆ ಸರಾಗವಾಗಿಸಲು ತೆರಿಗೆಯನ್ನು ತಕ್ಷಣ ಕಡಿತಗೊಳಿಸಬೇಕೆಂದು ಒತ್ತಾಯಿಸಿದೆ.
ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಕಳೆದ ವಾರ ಸಂಸತ್ತಿನಲ್ಲಿ ತಮ್ಮ ದಾಖಲೆಯ ಗರಿಷ್ಠ ದರವನ್ನು ಕಡಿಮೆ ಮಾಡಲು ಅಬಕಾರಿ ಸುಂಕವನ್ನು ಕಡಿಮೆ ಮಾಡಲು ಸರ್ಕಾರ ಪರಿಗಣಿಸುತ್ತಿಲ್ಲ ಎಂದು ತಿಳಿಸಿದ್ದರು.
ಕೇಂದ್ರ ಮತ್ತು ರಾಜ್ಯ ತೆರಿಗೆಗಳು ಪೆಟ್ರೋಲ್ನ ಚಿಲ್ಲರೆ ಮಾರಾಟದ ಬೆಲೆಯ ಶೇಕಡಾ 61 ಕ್ಕಿಂತಲೂ ಹೆಚ್ಚು ಮತ್ತು ಡೀಸೆಲ್ನ ಶೇಕಡಾ 56 ರಷ್ಟನ್ನು ಹೊಂದಿವೆ.
ಬೆಂಗಳೂರು :ಕರ್ನಾಟಕ ಸರ್ಕಾರವು ಸ್ಯಾಂಡಲ್ ವುಡ್ ನಟ ದರ್ಶನ್ ಅವರನ್ನು ಸರ್ಕಾರದ ಕೃಷಿ ಇಲಾಖೆಯ ರಾಯಭಾರಿಯಾಗಿ ನೇಮಿಸಿದೆ.
ಚಿತ್ರರಂಗದಲ್ಲಿ ‘ಚಾಲೆಂಜಿಂಗ್ ಸ್ಟಾರ್’ ಎಂದು ಕರೆಯಲ್ಪಡುವ ದರ್ಶನ್, ಯಾವುದೇ ಸಂಭಾವನೆ ಪಡೆಯದೆ ಈ ಜವಾಬ್ದಾರಿ ವಹಿಸಿಕೊಳ್ಳಲು ಒಪ್ಪಿಕೊಂಡಿದ್ದಾರೆ ಎಂದು ಕೃಷಿ ಇಲಾಖೆ ಪ್ರಕಟಣೆ ಹೊರಡಿಸಿದೆ.
ನಟ ದರ್ಶನ್ ಕೃಷಿ ಇಲಾಖೆಯ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಉತ್ತೇಜಿಸುತ್ತಾರೆ ಮತ್ತು ರೈತರಲ್ಲಿ ಭರವಸೆಯನ್ನು ಹುಟ್ಟುಹಾಕುತ್ತಾರೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
“ದರ್ಶನ ಸ್ವತಃ ಕೃಷಿಕ. ಈ ಜವಾಬ್ದಾರಿ ವಹಿಸಿಕೊಳ್ಳಲು ಸ್ವತಃ ದರ್ಶನ್ ಆಸಕ್ತಿ ತೋರಿಸಿದರು ”ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆಲೆಬ್ರಿಟಿಗಳನ್ನು ರಾಜ್ಯ ಸರ್ಕಾರವು ರಾಯಭಾರಿಯಾಗಿ ಮಾಡಿರುವುದು ಇದೇ ಮೊದಲಲ್ಲ. 2014 ರಲ್ಲಿ ನಟರಾದ ಪುನೀತ್ ರಾಜ್ಕುಮಾರ್ ಮತ್ತು ರಾಧಿಕಾ ಪಂಡಿತ್ ಅವರು ಶಿಕ್ಷಣ ಹಕ್ಕಿನ (ಆರ್ಟಿಇ) ರಾಯಭಾರಿಗಳಾಗಿದ್ದರು. ಇತ್ತೀಚೆಗೆ ಪುನೀತ್ ಅವರನ್ನು ಹಿಂದುಳಿದ ಚಾಮರಾಜನಗರ ಜಿಲ್ಲೆಯ ‘ಅಭಿವೃದ್ಧಿ ರಾಯಭಾರಿ’ ಆಗಿ ನೇಮಕ ಮಾಡಲಾಗಿತ್ತು.
ಬೆಂಗಳೂರು:ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಸೋಮವಾರ ‘ಜಾತಿ ಆಧಾರಿತ ಮೀಸಲಾತಿ ಕೊನೆಗೊಳ್ಳಬೇಕು, ಆರ್ಥಿಕವಾಗಿ ಹಿಂದುಳಿದಿರುವವರಿಗೆ ಮೀಸಲಾತಿ ನೀಡಬೇಕಾಗಿದೆ. ಎಂದು ತಮ್ಮ ಮೀಸಲಾತಿ ಪರಿಷ್ಕರಣೆ ಬಯಸುತ್ತಿರುವ ವೀರಶೈವ-ಲಿಂಗಾಯತರು ಮತ್ತು ಕುರುಬರು ನಡೆಸುತ್ತಿರುವ ಚಳುವಳಿಗಳಿಗೆ ಅವರು ಪ್ರತಿಕ್ರಿಯಿಸುತ್ತಿದ್ದರು.
“ಆರ್ಥಿಕ ಹಿಂದುಳಿದವರು ಮಾತ್ರ ಮೀಸಲಾತಿ ಪಡೆಯಬೇಕು ಮತ್ತು ನಾವು ಆ ದಿಕ್ಕಿನಲ್ಲಿ ಸಾಗಬೇಕು” ಎಂದು ಸದಾನಂದ ಗೌಡ ಸುದ್ದಿಗಾರರಿಗೆ ತಿಳಿಸಿದರು. “ಕೇಂದ್ರವು 10% ಆರ್ಥಿಕವಾಗಿ ದುರ್ಬಲ ವಿಭಾಗ (ಇಡಬ್ಲ್ಯೂಎಸ್) ಕೋಟಾವನ್ನು ಪರಿಚಯಿಸಿದೆ. ನಾವು ಇದನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಳ್ಳುತ್ತಿದ್ದೇವೆ. ”
“ವೀರಶೈವ-ಲಿಂಗಾಯತರು ರಾಷ್ಟ್ರೀಯ ಒಬಿಸಿ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಒಟ್ಟುಗೂಡುತ್ತಿದ್ದಾರೆ. ಅದು ಅವರಿಗೆ ಕೇಂದ್ರ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ 27% ಮೀಸಲಾತಿಯಲ್ಲಿ ಪಾಲು ನೀಡುತ್ತದೆ. ಅಲ್ಲದೆ, ಪಂಚಮಾಸಲಿ ಉಪ-ಪಂಥವನ್ನು ರಾಜ್ಯ ಕೋಟಾದ ವರ್ಗ 2 ಎ ಅಡಿಯಲ್ಲಿ ಸೇರಿಸಲು ಕೇಳುತ್ತಿದೆ. ಅದರ ಜೊತೆಗೆ, ಕುರುಬರು ರಾಷ್ಟ್ರಮಟ್ಟದಲ್ಲಿ ಎಸ್ಟಿ ಸ್ಥಾನಮಾನ ಪಡೆಯಲು ಹೋರಾಟ ನಡೆಸುತ್ತಿದ್ದಾರೆ ” ಎಂದರು.
ನಾನು ಈ ಹಿಂದೆಯೇ ಇದನ್ನು ಹೇಳಿದ್ದೇನೆ: “ಮೀಸಲಾತಿಗಾಗಿ ನಡೆಯುತ್ತಿರುವ ಆಂದೋಲನವು ಸಮಾಜ ಮತ್ತು ಆಡಳಿತಕ್ಕೆ ಮಾತ್ರ ಹಾನಿಯನ್ನುಂಟು ಮಾಡುತ್ತದೆ, ”ಎಂದು ಗೌಡ ಹೇಳಿದರು.
“ನಿಜ, ಸಂವಿಧಾನವು ಆಗಿನ ಪರಿಸ್ಥಿತಿಯ ಆಧಾರದ ಮೇಲೆ ಮೀಸಲಾತಿಯನ್ನು ತಂದಿತು. ಆದರೆ ಸಮಯ ಬದಲಾಗಿದೆ ಮತ್ತು ಪ್ರಪಂಚವು ಚಿಕ್ಕದಾಗಿದೆ. ಜನರು ಬೆಳೆಯಲು ತಮ್ಮದೇ ಆದ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಜಾತಿ ಆಧಾರಿತ ಕೋಟಾದ ಸಮಸ್ಯೆ ಏನೆಂದರೆ ಆರ್ಥಿಕ ಹಿಂದುಳಿದ ದೃಷ್ಟಿಯಿಂದ ನಿಜವಾಗಿಯೂ ಅರ್ಹರಾಗಿರುವವರು ಹಿಂದೆ ಉಳಿದಿದ್ದಾರೆ. ಆದ್ದರಿಂದ, ಅರ್ಹತೆ (ಮೀಸಲಾತಿಗಾಗಿ) ಕೇವಲ ಜಾತಿಯನ್ನು ಆಧರಿಸಿರಬಾರದು, ಆದರೆ ಆರ್ಥಿಕವಾಗಿ ಹಿಂದುಳಿದವರು ಮಾತ್ರ ಮೀಸಲಾತಿ ಪಡೆಯಬೇಕು ”ಎಂದು ಅವರು ವಿವರಿಸಿದರು.
ಶಿವಮೊಗ್ಗ :ವಿಜಯಪುರದಲ್ಲಿ ಸೋಮವಾರ ವರ್ಚುವಲ್ ಕಾರ್ಯಕ್ರಮವೊಂದರಲ್ಲಿ ವಿಮಾನ ನಿಲ್ದಾಣ ಯೋಜನೆ ಕಾರ್ಯಗಳನ್ನು ಪ್ರಾರಂಭಿಸಿದ ನಂತರ ಮಾತನಾಡಿದ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ವಿಜಯಪುರದಲ್ಲಿ ವಿಮಾನ ನಿಲ್ದಾಣ ನಿರ್ಮಾಣವು ಯುವಜನರಿಗೆ ಉದ್ಯೋಗ ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು. ಇದಲ್ಲದೆ, ಇದು ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಮತ್ತು ಜಿಲ್ಲೆಯಲ್ಲಿ ಬೆಳೆಯುವ ತೋಟಗಾರಿಕಾ ಬೆಳೆಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆ ಸ್ಥಾಪನೆಗೆ ಸಹಕಾರಿಯಾಗುತ್ತದೆ. ಈ ರೀತಿಯಾಗಿ, ವಿಮಾನ ನಿಲ್ದಾಣದ ಉಪಸ್ಥಿತಿಯು ಜಿಲ್ಲೆಯ ಒಟ್ಟಾರೆ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ.
ಜಿಲ್ಲೆಯ ಪ್ರವಾಸೋದ್ಯಮ ಸಾಮರ್ಥ್ಯ ಮತ್ತು ಆರ್ಥಿಕ ಚಟುವಟಿಕೆಗಳನ್ನು ಗಮನದಲ್ಲಿಟ್ಟುಕೊಂಡು 220 ಕೋಟಿ ರೂ.ಗಳ ವೆಚ್ಚದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ವ್ಯವಸ್ಥೆಯಲ್ಲಿ ಮದಭವಿ ಮತ್ತು ಭರನಪುರ ಗ್ರಾಮಗಳಲ್ಲಿ 727 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸಲು ಸರ್ಕಾರ ನಿರ್ಧರಿಸಿದೆ ಎಂದು ಅವರು ಹೇಳಿದರು. ತೋಟಗಾರಿಕಾ ಬೆಳೆಗಳಾದ ದ್ರಾಕ್ಷಿ, ನಿಂಬೆ ಮತ್ತು ದಾಳಿಂಬೆ ಹಣ್ಣುಗಳನ್ನು ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಒಣ ದ್ರಾಕ್ಷಿ ಮತ್ತು ನಿಂಬೆಯನ್ನು ವಿದೇಶಕ್ಕೆ ರಫ್ತು ಮಾಡಲಾಗುತ್ತಿದೆ. ವಿಮಾನ ನಿಲ್ದಾಣದ ಉಪಸ್ಥಿತಿಯು ಜಿಲ್ಲೆಯ ತೋಟಗಾರಿಕಾ ಬೆಳೆಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ಬಲಪಡಿಸುತ್ತದೆ.
ವಿಮಾನ ನಿಲ್ದಾಣ ಪ್ರಾಧಿಕಾರದ ಉದಾನ್ ಯೋಜನೆಯಡಿ ವಿಜಯಪುರ ವಿಮಾನ ನಿಲ್ದಾಣದ ಅಭಿವೃದ್ಧಿ ಮತ್ತು ಕಾರ್ಯಾಚರಣೆಯನ್ನು ಸೇರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು. ಎಟಿಆರ್ 72, ಪ್ರಾದೇಶಿಕ ವಿಮಾನಗಳ ಕಾರ್ಯಾಚರಣೆಗಾಗಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಏರ್ಬಸ್ ಎ 320 ಸಹ ಹಾರಲು ಸಾಧ್ಯವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.
ಕಲಬುರ್ಗಿ ಮತ್ತು ಬೀದರ್ ನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಆರಂಭಿಸಲಾಗಿದೆ ಎಂದರು. ಶಿವಮೊಗ್ಗ ವಿಮಾನ ನಿಲ್ದಾಣದ ಕೆಲಸವನ್ನೂ ಚುರುಕುಗೊಳಿಸಲಾಗಿದೆ. ವಿಜಯಪುರ ವಿಮಾನ ನಿಲ್ದಾಣ ಯೋಜನೆ ಕಾರ್ಯಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್, ಸಂಸದ ಬಿ ವೈ ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ, ಎಂಎಲ್ಸಿ ರುದ್ರೆ ಗೌಡ, ಜಿಲ್ಲಾಧಿಕಾರಿ ಕೆ ಬಿ ಶಿವಕುಮಾರ್ ಮತ್ತು ಇತರರು ಉಪಸ್ಥಿತರಿದ್ದರು.
ಬೆಂಗಳೂರು:ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣವು ದೇಶದ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಹೊಸ ಆಯಾಮವನ್ನು ನೀಡುತ್ತದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಸೋಮವಾರ ಹೇಳಿದರು.
“ಒಂದು ರೀತಿಯಲ್ಲಿ, ಇದು ರಾಷ್ಟ್ರಕ್ಕೆ ಸಂಬಂಧಿಸಿದ ಕೆಲಸವಾಗಿದೆ. ಇದು ಕೇವಲ ರಾಮ್ ದೇವಾಲಯದ ನಿರ್ಮಾಣವಲ್ಲ, ಆದರೆ ಇದು ದೇಶದ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಹೊಸ ಆಯಾಮವನ್ನು ನೀಡಲಿದೆ. ದೇವಾಲಯಗಳಿಗೆ ಹಣವನ್ನು ಸರ್ಕಾರಗಳನ್ನು ಅವಲಂಬಿಸುವ ಬದಲು ವ್ಯಕ್ತಿಗಳಿಂದ ಸಂಗ್ರಹಿಸಲಾಗುತ್ತಿದೆ ” ಎಂದು ಕೇಂದ್ರ ಸಚಿವರು ಹೇಳಿದರು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ನೌಕರರ ಕಲ್ಯಾಣ ಸಂಘ ಆಯೋಜಿಸಿದ್ದ ರಾಮ ಮಂದಿರಕ್ಕೆ ಹಣ ಸಂಗ್ರಹಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗೌಡ ಅವರು ಇಲ್ಲಿ ಪತ್ರಕರ್ತರೊಂದಿಗೆ ಸಂವಹನ ನಡೆಸುತ್ತಿದ್ದರು.
ಬೆಂಗಳೂರು: ಲಸಿಕೆ ತೆಗೆದುಕೊಳ್ಳಲು ನಿರಾಕರಿಸಿದ ನಂತರ ಸೋಂಕಿಗೆ ಒಳಗಾದವರಿಗೆ ಉಚಿತ ಕೋವಿಡ್ -19 ಚಿಕಿತ್ಸೆಯನ್ನು ನಿರಾಕರಿಸಲು ಅನುಮತಿ ಕೋರಿ ಬ್ರೂಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದೆ.
“ಇದು ಜನರ ಆಯ್ಕೆಯಾಗಿದೆ. ಆರೋಗ್ಯ ಮತ್ತು ಮುಂಚೂಣಿ ಕೆಲಸಗಾರರಿಗೆ ಸರ್ಕಾರವು ಲಸಿಕೆ ಮುಕ್ತವಾಗಿಸುವಾಗ, ಅವರು ಮುಂದೆ ಬರಬೇಕು ಎಂಬುದು ನನ್ನ ಬಲವಾದ ಅಭಿಪ್ರಾಯ. ಕೋವಿಡ್ -19 ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರವು ಭರಿಸುತ್ತದೆ ಎಂದು ನಾವು ಯೋಚಿಸುತ್ತಿದ್ದೇವೆ. ಜನರು ಲಸಿಕೆ ತೆಗೆದುಕೊಳ್ಳದಿದ್ದರೆ ಮತ್ತು ಅವರು ಸೋಂಕಿಗೆ ಒಳಗಾಗಿದ್ದರೆ, ಅವರ ವೆಚ್ಚವನ್ನು ನಾವು ಭರಿಸಬಾರದು ಎಂದು ನಾನು ಭಾವಿಸುತ್ತೇನೆ “ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸುದ್ದಿಗಾರರಿಗೆ ತಿಳಿಸಿದರು.
ಸೋಮವಾರ, ಅವರು ಸರ್ಕಾರಕ್ಕೆ ಪ್ರಸ್ತಾಪವನ್ನು ಕಳುಹಿಸಲು ಯೋಜಿಸುತ್ತಿದ್ದಾರೆಂದು ಅವರು ಹೇಳಿದ್ದಾರೆ. ಆರೋಗ್ಯದ ಮತ್ತು ಮೊದಲ ಸಾಲಿನ ಕಾರ್ಮಿಕರಲ್ಲಿ ಲಸಿಕೆಗೆ ಪಡೆಯಲು ಕಡಿಮೆ ಹಾಜರಾತಿಯ ಬಳಿಕ ಈ ಹೇಳಿಕೆ ಹೊರ ಬಂದಿದೆ.
ಉಚಿತ ಲಸಿಕೆಗಾಗಿ 40 ದಿನಗಳವರೆಗೆ ಆಲ್ಕೋಹಾಲ್ ಅನ್ನು ಬಿಡಬೇಕು ಎನ್ನುವುದು ಸುಳ್ಳು. ಅವರು ಏನು ಬೇಕಾದರೂ ತಿನ್ನಲು ಮತ್ತು ಕುಡಿಯಲು ಮುಂದುವರಿಯಬಹುದು ಎಂದು ಹಲವರು ತಿಳಿದಿರುವುದಿಲ್ಲ ಎಂದರು.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಅವರ ಪುತ್ರ ಬಿ ವೈ ವಿಜಯೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷರು ತಮ್ಮ ರಾಜಕೀಯ ಲಾಭಕ್ಕಾಗಿ ಪ್ರಬಲ ವೀರಶೈವ-ಲಿಂಗಾಯತ ಸಮುದಾಯವನ್ನು ವಿಭಜಿಸುವ ವ್ಯವಸ್ಥಿತ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಬಂಡಾಯ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭಾನುವಾರ ಆರೋಪಿಸಿದ್ದಾರೆ.
ಯಡಿಯೂರಪ್ಪ ತನ್ನ ಕುರ್ಚಿಗೆ (ಸ್ಥಾನಕ್ಕೆ) ಕಂಟಕ ಎಂದು ಮೇಲಿನಿಂದ ಸೂಚನೆ ಬಂದಾಗಲೆಲ್ಲಾ ಅವರು ವೀರಶೈವ-ಲಿಂಗಾಯತ ಸಮುದಾಯಗಳನ್ನು ತಮ್ಮ ಲಾಭಕ್ಕಾಗಿ ಬಳಸುತ್ತಾರೆ. ಅವನ ಮಗ (ವಿಜಯೇಂದ್ರ) ಕೂಡ ಇದೇ ರೀತಿಯ ಮಾರ್ಗ ಹುಡುಕುತ್ತಾನೆ. ಅವರಿಗೆ ಕೆಟ್ಟ ಉದ್ದೇಶವಿದೆ, ವೀರಶೈವ-ಲಿಂಗಾಯತ ಸಮುದಾಯಕ್ಕೆ ಒಬಿಸಿ ಸ್ಥಾನಮಾನವನ್ನು ನೀಡದಿರುವುದು ಅನ್ಯಾಯ “ಎಂದು ಯತ್ನಾಳ್ ತುಮಕೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ವಿಜಯೇಂದ್ರ ಮತ್ತು ಸಚಿವ ಮುರುಗೇಶ್ ನಿರಾಣಿ ಸಮುದಾಯವನ್ನು ವ್ಯವಸ್ಥಿತವಾಗಿ ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಅವರು ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದು ಅವರು ಆರೋಪಿಸಿದರು. ವೀರಶೈವ-ಲಿಂಗಾಯತ ಸಮುದಾಯಕ್ಕೆ ಒಬಿಸಿ (2 ಎ ವರ್ಗ) ಸ್ಥಾನಮಾನಕ್ಕಾಗಿ ಕೂಡಲ ಸಂಗಮ ಮಠದ ಬಸವ ಜಯ ಮೃತ್ಯುಂಜಯ ಸ್ವಾಮಿ ಅವರು ಯತ್ನಾಳ್ ಜೊತೆ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ.
ಬೇಡಿಕೆಗಾಗಿ ಒತ್ತಡ ಹೇರಲು ಕೂಡಲ ಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ ಕಳೆದ ವಾರ ಪ್ರಾರಂಭವಾಯಿತು .ವೀರಶೈವ ಮತ್ತು ಲಿಂಗಾಯತ ಸಮುದಾಯಗಳ ವಿವಿಧ ಸ್ವಾಮೀಜಿಗಳು ಮತ್ತು ನಾಯಕರು ಇದನ್ನು ಬೆಂಬಲಿಸಿದ್ದಾರೆ.
ಉಡುಪಿ: ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎಂಐಟಿ) ಹಳೆಯ ವಿದ್ಯಾರ್ಥಿ ರಶ್ಮಿ ಸಮಂತ್ ಗುರುವಾರ ಆಕ್ಸ್ಫರ್ಡ್ ಸ್ಟೂಡೆಂಟ್ ಯೂನಿಯನ್ ಪ್ರೆಸಿಡೆನ್ಸಿಯ ಪ್ರತಿಷ್ಠಿತ ಸ್ಥಾನವನ್ನು ಗೆಲ್ಲುವ ಮೂಲಕ ಒಂದು ಬಗೆಯ ಇತಿಹಾಸವನ್ನು ಸೃಷ್ಟಿಸಿದರು.
ಆಕ್ಸ್ಫರ್ಡ್ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಮೊದಲ ಭಾರತೀಯ ಮಹಿಳೆ ಇವರು. ಪ್ರಾಸಂಗಿಕವಾಗಿ, ಐತಿಹಾಸಿಕ ಗೆಲುವಿನಲ್ಲಿ, ಅವರು ಈ ಹುದ್ದೆಗೆ ಇತರ ಮೂರು ಅಭ್ಯರ್ಥಿಗಳ ಒಟ್ಟು ಮತಗಳಿಗಿಂತ ಹೆಚ್ಚಿನದನ್ನು ಪಡೆದರು.
ರಶ್ಮಿ ಮಣಿಪಾಲ್ ಮೂಲದವಳು ಮತ್ತು ಎಂ.ಎಸ್ಸಿ ವಿದ್ಯಾರ್ಥಿನಿ. ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಲಿನಾಕ್ರೆ ಕಾಲೇಜಿನಲ್ಲಿ ಎನರ್ಜಿ ಸಿಸ್ಟಮ್ಸ್. ಸಾಂಕ್ರಾಮಿಕ ರೋಗಕ್ಕೆ ಅಂತ್ಯವನ್ನು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸುವವರೆಗೆ ರೆಸಿಡೆನ್ಸಿ ಅವಶ್ಯಕತೆಗಳನ್ನು ಪೂರೈಕೆ ಮಾಡುವ ಉದ್ದೇಶವನ್ನು ಅವಳು ಹೊಂದಿದ್ದಾರೆ. ರಶ್ಮಿ ಮಾನಸಿಕ ಆರೋಗ್ಯ ಕಾರ್ಯತಂತ್ರಕ್ಕೆ ಧನಸಹಾಯವನ್ನು ಹೆಚ್ಚಿಸಲು ಲಾಬಿ ಮಾಡಲು ಯೋಜಿಸಿದ್ದಾರೆ.
ಈ ಹುದ್ದೆಗೆ 3,708 ಮತಗಳಲ್ಲಿ 1,966 ಮತಗಳನ್ನು ರಶ್ಮಿ ಪಡೆದರು, ಇತರ ಎಲ್ಲ ಅಭ್ಯರ್ಥಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಭರ್ಜರಿ ಜಯಗಳಿಸಿದ್ದಾರೆ. ಈ ಚುನಾವಣೆಯಲ್ಲಿ ಅತಿ ಹೆಚ್ಚು ಮತದಾನವಾಗಿದೆ. 4,881 ವಿದ್ಯಾರ್ಥಿಗಳು ಒಟ್ಟು ಹುದ್ದೆಗಳಿಗೆ 36,405 ಮತಗಳನ್ನು ಚಲಾಯಿಸಿದ್ದಾರೆ.