Category: CORONAVIRUS | #1 Latest News Updates Portal – 24×7 | Kannada News Now

Kannada news, Kannadanewsnow, News in Kannada, Kannada, ಕನ್ನಡ ವಾರ್ತೆಗಳು, ಕನ್ನಡ ಸುದ್ದಿಗಳು, kannada online news portal, Kannada news online, Movie News in Kannada, Sports News in Kannada, Business . politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

suvarna news live, public tv kannada news live, news18 kannada live, public news live, public tv news, tv5 kannada news live, yupptv kannada public tv live, btv kannada live, ಕನ್ನಡ ವಾರ್ತೆಗಳು, kannada online news, Kannada news online portal, Movie News in Kannada, Sports News in Kannada, Business news, politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

kannada news now, kannada news 24x7, online Kannada Newspaper, Online Kannada news portal, kannada live news updates, latest sandalwood cinema News, controversial news, gossips coverage in karnataka, gossips news in Kannada, all Kannada News updates, current Affairs in Karnataka, political news in kannada, news from india in Kannada language, Insurance, Gas/Electricity, Loans, Mortgage, Attorney, Lawyer , Donate, , Conference Call, Degree, Credit, credit card, car loans, home appliances, flipkart home appliances, flipkart , amazon home appliances, online shoping, cricket, onlinegame, medicare, weight loss, hairloss, helthtips, weight loss, online classes, Snapdeal., eBay, Myntra. Shopclues. breaking news, kannada latest news, kannada news, kannada news live, kannada online news, kannadanewsnow.com, kannadanewsnowdotcom, kanndanew newsnow dot com, karnataka latest news, karnataka news, latest news. indianews. Narendra Damodardas Modi, india breaking news, coronavirus, covid 19 india, yeddyurappa, siddaramaiah, Politicians in India, Current affairs, Elections, Political News, Current Affairs politics, Rahul Gandhi, Indian National Congress, Amit Shah, Bharatiya Janata Party, Priyanka Gandhi, Mamata Banerjee All India Trinamool Congress, Arvind Kejriwal, Aam Aadmi Party, Asaduddin Owaisi, All India Majlis-e-Ittehadul Muslimeen, Follow, H D Deve Gowda, Janata Dal (Secular), Harsh Vardhan, Bharatiya Janata Party, KCR, Telangana Rashtra Samithi, Kamal Hassan, Makkal Neethi, MaiamLal, Krishna, Advani, Bharatiya Janata Party, Mamata Banerjee All India Trinamool Congress, Manmohan Singh, Congress, mallikarjun kharge, Indian National Congress, Nirmala Sitharaman, Bharatiya Janata Party, Nitin Gadkari, Bharatiya Janata Party, Raj Thackeray, Maharashtra Navnirman Sena, Uma Bharti, Shivsena, V K Singh, General VK Singh, Sourav Ganguly, MS Dhoni , Virat Kohli, yogi, AdithyanathCORONAVIRUS

CORONAVIRUS KARNATAKA State

ಬೆಂಗಳೂರು : ಇತ್ತೀಚೆಗೆ ಕೊರೋನಾ ಸೋಂಕಿತರಾಗಿದ್ದಂತ 104 ವರ್ಷದ ಸ್ವಾತಂತ್ರ್ಯ ಹೋರಾಟಗಾರ ಹೆಚ್ ಎಸ್ ದೊರೆಸ್ವಾಮಿಯವರು, ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಹೀಗಾಗಿ ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್ ಆಗಿದ್ದಾರೆ.

ಈ ಕುರಿತಂತೆ ಸಾಮಾಜಿಕ ಹೋರಾಟಗಾರ ದಿನೇಶ್ ಕುಮಾರ್ ಎಂಬುವರು ಫೇಸ್ ಬುಕ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, 104 ವರ್ಷಗಳ ಜೀವ, ನಮ್ಮೆಲ್ಲರ ಆದರ್ಶ, ಸ್ಫೂರ್ತಿ ಎಚ್.ಎಸ್. ದೊರೆಸ್ವಾಮಿಯವರು ಕೋವಿಡ್ ನಿಂದ ಚೇತರಿಸಿಕೊಂಡು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.‌ ಈ ಜೀವ ಇನ್ನೂ ನೂರು ವರುಷ ಬದುಕಿರಬೇಕು ಎಂಬುದಾಗಿ ತಿಳಿಸಿದ್ದಾರೆ.


CORONAVIRUS KARNATAKA State

ಬೆಂಗಳೂರು : 2021-22ನೇ ಸಾಲಿನಲ್ಲಿ ಕೆಲ್ಯಾಡ್ಸ್ ಯೋಜನೆಯ ಅನುದಾನದಲ್ಲಿ ಶೇ.25ರಷ್ಟು ಅನುದಾನವನ್ನು ಕೋವಿಡ್-19 ಸಂಬಂಧಿತ ವೆಚ್ಚಕ್ಕೆ ಬಳಸಿಕೊಳ್ಳುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.

ಈ ಕುರಿತಂತೆ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ನಿರ್ದೇಶಕರಾದಂತ ಡಿ ಚಂದ್ರಶೇಖರಯ್ಯ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಉಪ ವಿಭಾಗಾಧಿಕಾರಿಗಳಿಗೆ ಪತ್ರ ಬರೆದಿದ್ದು, ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಪ್ರತಿ ಕ್ಷೇತ್ರಕ್ಕೆ ತಲಾ 2 ಕೋಟಿ ಅನುದಾನವನ್ನು ಒದಗಿಸಿದ್ದು, ಸದರಿ ಅನುದಾನಕ್ಕೆ ಕ್ರಿಯಾಯೋಜನೆಯನ್ನು ರೂಪಿಸುವಾಗ ಕನಿಷ್ಟ ಶೇ.25ರಷ್ಟು ಅನುದಾನವನ್ನು ಕೋವಿಡ್-19 ಸಂಬಂಧಿತ ಹಾಗೂ ಆಸ್ಪತ್ರೆಗಳ ಸುಧಾರಣೆಗೆ ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.


Bangalore CORONAVIRUS KARNATAKA State

ಬೆಂಗಳೂರು : ರಾಜ್ಯಾಧ್ಯಂತ ಕೊರೋನಾ 2ನೇ ಅಲೆಯಲ್ಲಿ ವೈರಾಣು ಭೀಕರವಾಗಿ ಹರಡುತ್ತಿದೆ. ಸೋಂಕಿತರಾದಂತ ಅನೇಕರು ಹೋಂ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂತಹವರಿಗೆ ವೈದ್ಯಕೀಯ ಸೌಲಭ್ಯದ ಬಗ್ಗೆ ಮಾಹಿತಿ ಲಭ್ಯವಾಗಬೇಕಿದೆ. ಅದರಲ್ಲೂ ಆಕ್ಸಿಮೀಟರ್ ಬಳಕೆ ಮಾಡೋದರ ಬಗ್ಗೆ ಮಾತ್ರ ಮಾಹಿತಿ ಬಹುಮುಖ್ಯವಾಗಿದೆ. ಈ ಬಗ್ಗೆ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕರಾದಂತ ತಜ್ಞ ವೈದ್ಯ ಡಾ.ಸಿಎನ್ ಮಂಜನಾಥ್ ಹೇಗೆ ಬಳಸಬಹುದು ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ. ಆ ಬಗ್ಗೆ ಮುಂದೆ ಓದಿ.

ಕೊರೋನಾ 2ನೇ ಅಲೇ ಮೊದಲನೇ ಅಲೆಗಿಂತ ವ್ಯಾಪಕವಾಗಿ ಹರಡುತ್ತಿದೆ. ಈ ಸಂದರ್ಭದಲ್ಲಿ ಸೋಂಕಿತರಾದಂತವರು ಬಹುಮುಖ್ಯವಾಗಿ ಬಳಸಬೇಕಾಗಿರೋದು.. ಬಳಸುತ್ತಿರೋದು.. ಆಕ್ಸಿಮೀಟರ್. ಮಾರುಕಟ್ಟೆಯಲ್ಲಿ ಸಿಗುವಂತ ತರಾವರಿ ಆಕ್ಸಿಮೀಟರ್ ಗಳನ್ನು ನೀವು ಖರೀದಿಸಿದರೂ, ಅದನ್ನು ಹೇಗೆ ಬೆರಳಿಗೆ ಧರಿಸಬೇಕು ಎನ್ನುವ ಪ್ರಾಥಮಿಕ ಮಾಹಿತಿ ತಿಳಿದಿಲ್ಲದೇ ಇದ್ದರೇ.. ಅದು ವ್ಯರ್ಥವೇ ಸರಿ.

ಹಾಗಾದ್ರೇ. ಆಕ್ಸಿಮೀಟರ್ ಕೈ ಬೆರಳಿಗೆ ಹಾಕಿಕೊಳ್ಳೋದು ಹೇಗೆ.? ಯಾವಾಗ ಹಾಕಿಕೊಳ್ಳಬಾರದು.?

ಈ ಬಗ್ಗೆ ಡಾ.ಸಿಎನ್ ಮಂಜುನಾಥ್ ಮಾಹಿತಿ ಹಂಚಿಕೊಂಡಿದ್ದು, ಕೊರೋನಾ ಸೋಂಕಿತರಾದಂತವರು ಉಸಿರಾಟದ ಸಮಸ್ಯೆ ಇದ್ರೆ ಮಾತ್ರ ಸಿಟಿ ಸ್ಕ್ಯಾನ್ ಮಾಡಿಸಿಕೊಳ್ಳಿ. ಕೊರೋನಾ ಸೋಂಕಿತರಾದವರು ಆದಷ್ಟು ಸ್ಟಿರಾಯ್ಡ್ ಮಾತ್ರೆ ಬಳಸಬೇಡಿ ಎಂಬುದಾಗಿ ಸಲಹೆ ನೀಡಿದ್ದಾರೆ.

ಇನ್ನೂ ಆಕ್ಸಿಮೀಟರ್ ಕೈ ಬೆರಳಿಗೆ ಹಾಕುವಂತ ಸಂದರ್ಭದಲ್ಲಿ ಕೈ ಬೆರಳು ಒದ್ದೆಯಾಗಿರಬಾರದು. ಬ್ಯಾಟರಿ ಲೋ ಆಗಿದ್ದಂತ ಸಂದರ್ಭದಲ್ಲಿ ಬಳಸಬೇಡಿ. ಕೈ ನಡುಗುವಾಗ ಧರಿಸಬೇಡಿ. ಆಗ ಸಪೋರ್ಟ್ ತಗೊಂಡು ಬಳಸಿ. ಒಂದು ವೇಳೆ ಇಂತಹ ಸಂದರ್ಭದಲ್ಲಿಯೂ ನೀವು ಬಳಸಿದ್ದೇ ಆದ್ರೇ. ಆಕ್ಸಿಮೀಟರ್ ನಲ್ಲಿ ನಿಮ್ಮ ಪಲ್ಸ್ ಲೆವೆಲ್ ಕಡಿಮೆ ತೋರಿಸಬಹುದು ಎಂಬುಧಾಗಿ ತಿಳಿಸಿದ್ದಾರೆ.

ಸೋ ಕೊರೋನಾ ಸೋಂಕಿತರಾಗಿ ಆಕ್ಸಿಮೀಟರ್ ಬಳಸ್ತಾ ಇದ್ದರೇ.. ನೀವು ಈ ಯಾವುದೇ ತಪ್ಪುಗಳನ್ನು ಮಾಡದೇ, ಸೂಕ್ತವಾಗಿ ಆಕ್ಸಿಮೀಟರ್ ಕೈ ಬೆರಳಿಗೆ ಧರಿಸೋ ಮೂಲಕ, ನಿಮ್ಮ ಉಸಿರಾಟದ ಸ್ಯಾಚುರೇಷನ್ ಲೆವೆಲ್ ಚೆಕ್ ಮಾಡಿಕೊಳ್ಳಿ.


Bangalore CORONAVIRUS KARNATAKA State

ಬೆಂಗಳೂರು : ಲಾಕ್ ಡೌನ್ ಸಂದರ್ಭದಲ್ಲಿ ಪೊಲೀಸರು ಅನಗತ್ಯವಾಗಿ ಸಂಚರಿಸುವವರಿಗೆ ಲಾಠಿ ರುಚಿ ತೋರಿಸೋ ಮೂಲಕ, ಬ್ರೇಕ್ ಹಾಕಿದ್ದೂ ನೋಡಿದ್ದೀರಿ. ಆದ್ರೇ ಲಾಕ್ ಡೌನ್ ಸಂದರ್ಭದಲ್ಲಿ ಬಸ್ ನಿಲ್ದಾಣ, ಜೋಪಡಿಗಳಲ್ಲಿ ಆಶ್ರಯಿಸಿರುವಂತ ಅನೇಕ ಬಡ ಜನರು ಕೆಲಸವೂ ಇಲ್ಲದೇ ಊಟವೂ ಇಲ್ಲದೇ ಹಸಿವಿನಿಂದ ನರಳುತ್ತಿದ್ದವರಿಗೆ ಪೊಲೀಸ್ ಜೀವಗಳು ಮಿಡಿದಿವೆ. ಇಂತಹವರಿಗೆ ಊಟ ಹಂಚುವ ಮೂಲಕ, ಮಾನವೀಯತೆಯನ್ನು ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಮೆರೆದಿದ್ದಾರೆ.

ಕಾನೂನು ಪಾಲಕರಿಗೂ ಹೃದಯವಿದೆ. ಮಿಡಿವ ಮನವಿದೆ. ಅವರಿಗೂ ಜನ ಸೇವೆ ಮಾಡೋ ಮನಸ್ಸಿದೆ ಎಂಬುದನ್ನು ಬೆಂಗಳೂರಿನ ಜ್ಞಾನಭಾರತಿ ಠಾಣೆಯ ಪೊಲೀಸ್ ಪಿಐ ಲಕ್ಷ್ಮಣ್ ನಾಯಕ್ ಹಾಗೂ ಸಿಬ್ಬಂದಿಗಳು ತೋರಿಸಿಕೊಟ್ಟಿದ್ದಾರೆ.

ತಮ್ಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಬಡವರಿಗೆ, ಕೂಲಿ ಕಾರ್ಮಿಕರಿಗೆ, ಜೋಪಡಿಗಳಲ್ಲಿ ವಾಸವಿದ್ದಂತ ನೂರಕ್ಕೂ ಹೆಚ್ಚು ಕುಟುಂಬಗಳಿಗೆ.. ದಾನಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಊಟ, ನೀರು ನೀಡಿ, ಮಾನವೀಯತೆ ಮೆರೆದಿದ್ದಾರೆ.

ಈ ಕುರಿತಂತೆ ಟ್ವಿಟ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ಬೆಂಗಳೂರು ವೆಸ್ಟ್ ಡಿಸಿಪಿ ಡಾ.ಸಂಜೀವ್ ಎಂ ಪಾಟೀಲ್ ಅವರು, ಜ್ಞಾನಭಾರತಿ ಠಾಣೆ ಪಿಐ ಲಕ್ಷ್ಮಣ ನಾಯಕ್ ಮತ್ತು ತಂಡದಿಂದ ಮಲ್ಲತ್ತಹಳ್ಳಿಯ ಕಾರ್ಮಿಕ ಕುಟುಂಬದವರಿಗೆ ಊಟದ ವ್ಯವಸ್ಥೆ ಮಾಡಲಾಯಿತು ಎಂದು ತಮ್ಮ ಸಿಬ್ಬಂದಿಗಳ ಕಾರ್ಯಕ್ಕೆ ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.

ವರದಿ : ವಸಂತ ಬಿ ಈಶ್ವರಗೆರೆ


Bangalore CORONAVIRUS KARNATAKA State

ಬೆಂಗಳೂರು : ಕೋವಿಡ್ ಸೋಂಕಿತರಿಗೆ ಎದುರಾಗುತ್ತಿರುವ ಹಾಸಿಗೆಗಳ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಈಗಾಗಲೇ 1200 step-down ಆಸ್ಪತ್ರೆಗಳನ್ನು ನಿರ್ಮಿಸಲಾಗಿದೆ. ಮುಂದಿನ ಎರಡು ದಿನಗಳಲ್ಲಿ ಇನ್ನು 2000 step-down ಆಸ್ಪತ್ರೆಗಳನ್ನು ನಿರ್ಮಿಸುವುದಾಗಿ ಕೋವಿಡ್ ಬೆಡ್ ಉಸ್ತುವಾರಿ ಹಾಗೂ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ್ ಬೊಮ್ಮಾಯಿ ತಿಳಿಸಿದರು.

ಬೆಂಗಳೂರಿನಲ್ಲಿ ಇಂದು ಖಾಸಗಿ ಆಸ್ಪತ್ರೆಗಳ ಸಂಘ, ಹೋಟೆಲ್ ಉದ್ಯಮಿಗಳ ಸಂಘ ಹಾಗೂ ಬಿಬಿಎಂಪಿ ಅಧಿಕಾರಿಗಳ ಜತೆ ವರ್ಚುವಲ್ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳ ಪಕ್ಕದಲ್ಲಿಯೇ ದೊಡ್ಡದೊಡ್ಡ ಹೋಟೆಲುಗಳಿವೆ. ಈ ಹೊಟೆಲ್ ಗಳಲ್ಲಿ ರೂಂ ಪಡೆದು ಅಲ್ಲಿ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ೧೩ ಆಸ್ಪತ್ರೆಗಳ ಜೊತೆ ಹೋಟೆಲ್ ಗಳನ್ನು ಜೋಡಣೆ ಮಾಡಲಾಗಿದೆ. ಇನ್ನಷ್ಟು ಹೊಟೇಲ್ ಮತ್ತು ಆಸ್ಪತ್ರೆಗಳ ಜೋಡನೆ ಕೆಲಸ ನಡೆಯುತ್ತಿದೆ. ಒಂದು ಸಾರಿ ಹೋಟೆಲ್ಗಳನ್ನು ಪಡೆದ ನಂತರ ಅಲ್ಲಿ ಆಕ್ಸಿಜನ್ ಕಾನ್ಸೆಂಟ್ರೇಟರ್, ರೋಗಿಗೆ ಊಟ ಮತ್ತು ಇತರೆ ಕೋವಿಡ್ ಸಂಬಂಧಿತ ಚಿಕಿತ್ಸೆ ಸೌಲಭ್ಯವನ್ನು ಕಲ್ಪಿಸಲಾಗುವುದು. ಹೋಟೆಲ್ ಸಂಘದವರ ಬೇಡಿಕೆ ಮೇರೆಗೆ SAS ಪೋರ್ಟಲ್ ಜತೆ stepdown ಆಸ್ಪತ್ರೆಗಳನ್ನು ಜೋಡಣೆ ಮಾಡಲಾಗುವುದು. ಹೊಟೇಲ್ ಸಿಬ್ಬಂದಿಗೆ ಆದ್ಯತೆ ಮೇರೆಗೆ ಲಸಿಕೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಅವರು ತಿಳಿಸಿದರು.

ಬೆಂಗಳೂರಿನಲ್ಲಿ ಬೆಡ್ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಆಸ್ಪತ್ರೆಗಳ ಆವರಣದಲ್ಲಿ ಹೆಚ್ಚುವರಿಯಾಗಿ ತಲಾ10 ರಿಂದ 15 ಆಕ್ಸಿಜನ್ ಬೆಡ್ ಗಳನ್ನು ನಿರ್ಮಾಣ ಮಾಡಲು ಒಪ್ಪಿಗೆ ನೀಡಲಾಗಿದೆ. ಇದಕ್ಕೆ ಸರಕಾರದಿಂದ ಸಹಕಾರ ನೀಡಲಾಗುವುದು ಎಂದು ಅವರು ತಿಳಿಸಿದರು.

ಬೆಡ್ ನೀಡದ ಆಸ್ಪತ್ರೆಗಳ ಮೇಲೆ ಕ್ರಮ

ಖಾಸಗಿ ಆಸ್ಪತ್ರೆಗಳಲ್ಲಿ ನ ಬೆಡ್ ಉಸ್ತುವಾರಿಗೆ ನಿಯೋಜಿಸಲಾಗಿರುವ ಹಿರಿಯ ಅಧಿಕಾರಿಗಳ ಜೊತೆ ಮಂಗಳವಾರ ಸಭೆ ನಡೆಸಲಾಯಿತು. ಸರ್ಕಾರಕ್ಕೆ ಬೆಡ್ ಗಳನ್ನು ನೀಡದೆ ಸುಳ್ಳು ಮಾಹಿತಿ ನೀಡುತ್ತಿದ್ದ ಮೂರು ಖಾಸಗಿ ಆಸ್ಪತ್ರೆಗಳ ಮೇಲೆ ಈಗಾಗಲೇ ಕ್ರಮ ಜರುಗಿಸಲಾಗಿದೆ ಎಂದು ಅವರು ವಿವರಿಸಿದರು.

ಮೂವತ್ತಕ್ಕಿಂತಲೂ ಕಡಿಮೆ ಬೆಡ್ ಇರುವ ಆಸ್ಪತ್ರೆ ಗಳಿಂದಲೂ ಸರ್ಕಾರಿ ಕೋಟಾ ಪಡೆಯಲು ನಿರ್ಧರಿಸಲಾಗಿದೆ. ಅವುಗಳಲ್ಲಿ ICU ಮತ್ತು ಆಕ್ಸಿಜನ್ ಬೆಡ್ ಗಳು ಸೇರಿವೆ. ಈ ಆಸ್ಪತ್ರೆಗಳ ಜೊತೆ ಸಮಾಲೋಚನೆ ನಡೆಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಆಕ್ಸಿಜನ್ ಪೂರೈಕೆ

ಒರಿಸ್ಸಾ, ಟಾಟಾನಗರ ಮತ್ತು ಇತರೆ ಕಡೆಗಳಿಂದ ರಾಜ್ಯಕ್ಕೆ ಆಕ್ಸಿಜನ್ ಬರಬೇಕಾಗಿದೆ. ಒಂದು ಬಾರಿ ರಾಜ್ಯಕ್ಕೆ ಆಕ್ಸಿಜನ್ ಟ್ಯಾಂಕರ್ ಗಳು ಬಂದ ನಂತರ ಅವುಗಳ ರೀಫಿಲ್ ತೊಂದರೆಯಾಗುವುದಿಲ್ಲ. ನಿರಂತರವಾಗಿ ಆಕ್ಸಿಜನ್ ಪೂರೈಕೆ ಆಗುತ್ತದೆ. ರಾಜ್ಯದಲ್ಲಿ ಕೋವಿಡ್ ಸೋಂಕಿತರ ಪರೀಕ್ಷೆ ಕಡಿಮೆಯಾಗುತ್ತಿಲ್ಲ. ನಿಯಮಗಳ ಪ್ರಕಾರ ಯಾರಿಗೆಲ್ಲ ತಪಾಸಣೆ ಮಾಡಬೇಕೋ ಅವರೆಲ್ಲರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು‌ ಅವರು ಹೇಳಿದರು.

ಆತಂಕಬೇಡ

ವ್ಯಾಕ್ಸಿನ್ ಎಲ್ಲರಿಗೂ ಸಿಗುತ್ತದೆ. ಸ್ವಲ್ಪ ತಾಳ್ಮೆ ಇರಲಿ. ವ್ಯಾಕ್ಸಿನ್ ತಯಾರಿಕೆಯಲ್ಲಿ ವಿಳಂಬವಾಗುತ್ತಿದೆ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು. ಆರಂಭದಲ್ಲಿ ಜನ ವ್ಯಾಕ್ಸಿನ್ ತೆಗೆದುಕೊಳ್ಳಲಿಲ್ಲ. ಈಗ ಬೇಡಿಕೆ ಹೆಚ್ಚಿದೆ. ಈಗಿರುವ ಲಸಿಕೆಯನ್ನು ಮೊದಲ ಡೋಸ್ ಪಡೆದವರಿಗೆ ಆದ್ಯತೆ ಮೇರೆಗೆ ನೀಡುವಂತೆ ಸೂಚಿಸಲಾಗಿದೆ ಎಂದು ಹೇಳಿದರು.


CORONAVIRUS Dakshina Kannada KARNATAKA State

ಮಂಗಳೂರು : ಕೊರೋನಾ ಸೋಂಕಿನ ಭೀತಿಯಿಂದಾಗಿ ರಾಜ್ಯದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ತಗುಲದಂತೆ ರಾಜ್ಯ ಸರ್ಕಾರ ಈ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದೆ. ಆದ್ರೇ.. ಮಂಗಳೂರಿನ ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ, ವಿದ್ಯಾರ್ಥಿಗಳನ್ನು ಲಾಕ್ ಡೌನ್ ಜಾರಿಗೊಳಿಸಿದ್ದರೂ ಊರಿಗೆ ಕಳಿಸದೇ, ಕಾಲೇಜಿನಲ್ಲೇ ಕೂಡಿ ಹಾಕಿ, ಪಾಠ ಮಾಡ್ತಾ ಇರೋ ಸಂಗತಿಯನ್ನು ವಿದ್ಯಾರ್ಥಿಯೊಬ್ಬ ಆಡಿಯೋದಲ್ಲಿ ಬಿಚ್ಚಿಟ್ಟಿದ್ದಾನೆ. ನಮ್ಮನ್ನು ಇಲ್ಲಿಂದ ಬಿಡಿಸಿ ಪ್ಲೀ.. ಎಂಬುದಾಗಿ ಮನವಿ ಮಾಡಿಕೊಂಡು ಗೋಗರೆದಿದ್ದಾರೆ.

ಕೊರೋನಾ ಸೋಂಕಿನ 2ನೇ ಅಲೆಯ ಭೀತಿ ಭೀಕರವಾಗಿದೆ. ಸೋಂಕಿನ ನಿಯಂತ್ರಣಕ್ಕಾಗಿ ಕರ್ಪ್ಯೂ, ಕೊರೋನಾ ಕರ್ಪ್ಯೂ ರಾಜ್ಯದಲ್ಲಿ ಜಾರಿಗೊಳಿಸಿದರೂ, ಸೋಂಕು ನಿಯಂತ್ರಣಕ್ಕೆ ಬಂದಿರಲಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಮೇ.10ರಿಂದ ಮೇ.24ರವರೆಗೆ ಲಾಕ್ ಡೌನ್ ಘೋಷಿಸಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರ ಓಡಾಟಕ್ಕೆ ಬ್ರೇಕ್ ಹಾಕಿದ್ದರೇ.. ಶಾಲಾ-ಕಾಲೇಜುಗಳಿಗೆ ರಜೆ ಕೂಡ ಘೋಷಣೆ ಮಾಡಿದೆ.

ಆದ್ರೇ.. ಲಾಕ್ ಡೌನ್ ನಡುವೆಯೂ, ಮಂಗಳೂರಿನ ಮೂಡಬಿದಿರಿಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳನ್ನು ಕೂಡಿ ಹಾಕಿ, ಊರಿಗೆ ಕಳಿಸದೇ, ಕಾಲೇಜುಗಳ ಹಾಸ್ಟೆಲ್ ನಲ್ಲಿಯೇ ಊರಿಗೆ ಹೋಗದೇ ಉಳಿಸಿಕೊಂಡಿರುವಂತ ವಿಷಯವನ್ನು ವಿದ್ಯಾರ್ಥಿಯೊಬ್ಬ ಆಡಿಯೋದಲ್ಲಿ ಬಿಚ್ಚಿಟ್ಟಿದ್ದಾರೆ. ಈ ಆಡಿಯೋ ವೈರಲ್ ಕೂಡ ಆಗಿದ್ದು, ಸೋಷಿಯಲ್ ಮೀಡಿಯದಲ್ಲಿ ಸದ್ದು ಮಾಡುತ್ತಿದೆ.

ಮೂಡಬಿದಿರಿಯ ಆಳ್ವಾಸ್ ಕಾಲೇಜು ವಿದ್ಯಾರ್ಥಿ ಹರಿ ಬಿಟ್ಟಿರುವ ಆಡಿಯೋದಲ್ಲಿ ಏನಿದೆ.?

ಎಲ್ಲರಿಗೂ ನಮಸ್ಕಾರ.. ನಾನು ಹೆಸರು ಹೇಳೋದಕ್ಕೆ ಇಷ್ಟ ಪಡೋದಿಲ್ಲ.. ಆದ್ರೇ.. ನಾನು ಮಂಗಳೂರಿನ ಆಳ್ವಾಸ್ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿ. ನಮ್ಮನ್ನು ಲಾಕ್ ಡೌನ್ ಆದ್ರೂ ಕಾಲೇಜಿನಲ್ಲೇ ಇರಿಸಿಕೊಂಡಿದ್ದಾರೆ. ನಮ್ಮ ತಂದೆ-ತಾಯಿ ಪೋನ್ ಮಾಡಿ ಕೇಳಿದ್ರೂ ನಮ್ಮನ್ನು ಮನೆಗೆ ಕಳಿಸ್ತಾ ಇಲ್ಲ. ಕೇಳಿದ್ರೇ.. ಟಿಸಿ ತಗೊಂಡು ಹೋಗಿಬಿಡಿ, ಮತ್ತೆ ಪರ್ಮೆನೆಂಟ್ ಆಗಿ ಕಾಲೇಜಿಗೆ ಕಳಿಸಬೇಡಿ ಅಂತ ಹೇಳಿಬಿಟ್ಟು, ಬ್ಲಾಕ್ ಮೇಲ್ ಮಾಡಿ ನಮ್ಮನ್ನು ಇಲ್ಲಿ ಇರಿಸಿಕೊಂಡಿದ್ದಾರೆ.

ಇಲ್ಲಿ ಕೊರೋನಾ ಕೇಸಸ್ ತುಂಬಾನೇ ಇದೆ. ಹೀಗಿದ್ದೂ ಕಾಲೇಜಿನಲ್ಲಿ ಯಾವುದೇ ಹೆಲ್ತ್ ಸೇಫ್ಟಿ ತೆಗೆದುಕೊಳ್ಳುತ್ತಿಲ್ಲ. ಇಲ್ಲಿಗೆ ಹೊರಗಡೆಯಿಂದ ಬರುವಂತ ಸ್ಟಾಫ್ ಮಾಸ್ಕ್ ಕೂಡ ಹಾಕೋದಿಲ್ಲ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಿಲ್ಲ. ನಮಗೆ ತುಂಬಾ ಕಷ್ಟ ಆಗ್ತಾ ಇದೆ ಇಲ್ಲಿ ಇರೋದಕ್ಕೆ. ಇಲ್ಲಿ ದಿನಕ್ಕೆ ಹತ್ತರಿಂದ 15 ಜನರು ಹುಷಾರ್ ತಪ್ಪುತ್ತಿದ್ದಾರೆ. ಆದ್ರೂ.. ಏನೂ ಕೇರ್ ತಗೊಳ್ಳುತ್ತಿಲ್ಲ. ತುಂಬಾ ಕಷ್ಟ ಆಗ್ತಾ ಇದೆ ಇಲ್ಲಿ ಇರೋದಕ್ಕೆ.

ನಾವು ಚೈಲ್ಡ್ ಲೈನ್ ನಂಬರ್ ಗೆ ಕೂಡ ಕರೆ ಮಾಡಿದ್ದೆವು. ಅವರು ಬಂದ್ರು. ಅವರು ಬಂದಾಗ ನಮ್ಮನ್ನು ಹಾಸ್ಟೆಲ್ ನಿಂದ ಕಾಲೇಜಿಗೆ, ಕಾಲೇಜಿಗೆ ಬಂದ್ರೆ.. ಮತ್ತೊಂದು ಕಾಲೇಜಿಗೆ.. ಹೀಗೆ ಒಂದಾದ ನಂತ್ರ ಒಂದು ಕಡೆ ಶಿಫ್ಟ್ ಮಾಡಿ, ಇಲ್ಲಿ ಯಾರನ್ನು ಕೂಡಿ ಹಾಕಿಲ್ಲ ಅನ್ನೋ ತರ ತೋರಿಸಿದರು. ಇದರಿಂದ ತುಂಬಾ ತೊಂದರೆ ಆಗ್ತಾ ಇದೆ. ನಾನು ಯಾರಿಗೆ ಸಹಾಯ ಕೇಳಬೇಕು ಎಂಬುದೇ ಗೊತ್ತಾಗುತ್ತಿಲ್ಲ.

ಕಾಲೇಜಿಗೆ ತೊಂದರೆ ಆಗಬಾರದು ಎನ್ನುವ ಕಾರಣದಿಂದಾಗಿ ಲಾಕ್ ಡೌನ್ ಇದ್ದರೂ ಕಾಲೇಜಿನಲ್ಲಿ ನಮ್ಮನ್ನು ಇರಿಸಿಕೊಂಡಿರುವಂತ ಆಳ್ವಾಸ್ ಕಾಲೇಜು. ನಮ್ಮಿಂದ ಲೆಟರ್ ಬರೆಸಿಕೊಂಡು ಸಹಿ ಮಾಡಿಸಿಕೊಂಡಿದೆ. ಆ ಲೆಟರ್ ನಲ್ಲಿ, If Anything Happens to me I am responsible, not the college. I am staying by my will. I am responsible for my health issues ಅಂತ ಲೆಟರ್ ಕೂಡ ಬರೆಸಿಕೊಂಡಿದ್ದಾರೆ. ನಮ್ಮ ಬಗ್ಗೆ, ನಮ್ಮ ಆರೋಗ್ಯದ ಬಗ್ಗೆ ಕಾಳಜಿ ಇಲ್ಲ.

ಬರೀ ಕಾಮರ್ಸ್ ವಿದ್ಯಾರ್ಥಿಗಳನ್ನು ಮನೆಗೆ ಕಳಿಸಿ, ಸೈನ್ಸ್ ವಿದ್ಯಾರ್ಥಿಗಳನ್ನು ಇಲ್ಲಿಯೇ ಉಳಿಸಿಕೊಂಡಿದ್ದಾರೆ. ಬರೀ ಕಾಮರ್ಸ್ ವಿದ್ಯಾರ್ಥಿಗಳಿಗೆ ಮಾತ್ರನಾ ಕೊರೋನಾ ಬರೋದು.? ಸೈನ್ಸ್ ವಿದ್ಯಾರ್ಥಿಗಳಿಗೆ ಬರೋದಿಲ್ಲವಾ.? ಪ್ಲೀಸ್ ಈ ಆಡಿಯೋ ಕೇಳಿದಂತ ಯಾರಾದರೂ ನಮಗೆ ಸಹಾಯ ಮಾಡಿ… ಎಂಬುದಾಗಿ ಆಳ್ವಾಸ್ ಕಾಲೇಜು ವಿದ್ಯಾರ್ಥಿ ಆಡಿಯೋದಲ್ಲಿ ಮನವಿ ಮಾಡಿಕೊಂಡಿದ್ದಾನೆ.

ಇನ್ನೂ ಈ ಬಗ್ಗೆ ನಮ್ಮ ಕನ್ನಡ ನ್ಯೂಸ್ ನೌ ಕೂಡ ಬಲ್ಲ ಮೂಲಗಳಿಂದ ಮಾಹಿತಿ ವಿಚಾರಿಸಿದ್ದು, ಈಗಾಗಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿಯೇ ಅನೇಕ ವಿವಿಧ ತಂಡಗಳು ಹೀಗೆ ವಿದ್ಯಾರ್ಥಿಗಳನ್ನು ಆಳ್ವಾಸ್ ಕಾಲೇಜಿನಲ್ಲಿ ಕೂಡಿ ಹಾಕಿಲ್ಲ. ಈ ರೀತಿಯ ಯಾವುದೇ ವಿದ್ಯಾರ್ಥಿಗಳನ್ನು ಅಕ್ರಮವಾಗಿ ಬಂಧನದಲ್ಲಿ ಇಟ್ಟುಕೊಂಡಿಲ್ಲ ಎಂಬುದಾಗಿ ಪರಿಶೀಲನೆ ನಡೆಸಿವೆ ಎಂದು ತಿಳಿದು ಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವಂತ ವಿದ್ಯಾರ್ಥಿಯ ಆಡಿಯೋ, ಸತ್ಯಕ್ಕೆ ದೂರವಾದುದು ಎಂಬುದಾಗಿಯೂ ಮಾಹಿತಿ ತಿಳಿದು ಬಂದಿದೆ. ಈ ಬಗ್ಗೆ ಜಿಲ್ಲಾಡಳಿತ, ಸಂಬಂಧಿಸಿದಂತ ಅಧಿಕಾರಿಗಳು ವೈರಲ್ ಆಗಿರುವಂತ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಆಡಿಯೋ ಬಗ್ಗೆ ಏನ್ ಮತ್ತಷ್ಟು ಕ್ರಮ ಕೈಗೊಳ್ಳಲಿದ್ದಾರೆ ಎನ್ನುವ ಬಗ್ಗೆ ಕಾದು ನೋಡಬೇಕಿದೆ.


Bangalore CORONAVIRUS KARNATAKA State

ಬೆಂಗಳೂರು : ನಗರದ ಎಚ್.ಎಸ್.ಆರ್ ಬಡಾವಣೆಯ ಅಗರದ ಸರ್ಕಾರಿ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಸಿದ್ಧಪಡಿಸಲಾಗಿರುವ ಎಂಬತ್ತು ಹಾಸಿಗೆಗಳ ಕೋವಿಡ್ ಆರೈಕೆ ಕೇಂದ್ರ ಪ್ರಥಮ ಚಿಕಿತ್ಸೆಯ ಆರೈಕೆ ಬಯಸುವ ಈ ಭಾಗದ ಕೋವಿಡ್ ಸೋಂಕಿತರಿಗೆ ಅತ್ಯುಪಯುಕ್ತವಾಗಲಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. 

ಕೇವಲ ಒಂದು ವಾರದ ಅವಧಿಯಲ್ಲಿ ಅತ್ಯಂತ ಸುಸಜ್ಜಿತವಾಗಿ ಸಿದ್ಧಪಡಿಸಲಾಗಿರುವ ನೂತನ ಟ್ರಯಾಜ್ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಈ ಆರೈಕೆ ಕೇಂದ್ರದಲ್ಲಿ ಒಟ್ಟು ಎಂಬತ್ತು‌‌ ಸೋಂಕಿತರಿಗೆ ಒಮ್ಮೆಗೇ ಚಿಕಿತ್ಸೆ ನೀಡುವ ಸೌಕರ್ಯವಿದೆ. ಆಮ್ಲಜನಕ ಸಾಂದ್ರಕದ (Oxygen concentrator) ವ್ಯವಸ್ಥೆ ಇರುವ ಕಾರಣ, ಮನೆಯಲ್ಲಿ ಸ್ವಯಂ ನಿರ್ವಹಿಸಿಕೊಳ್ಳಲು ಅಥವಾ ಆಸ್ಪತ್ರೆಗೆ ನೇರ ದಾಖಲಾಗಲು ಸಾಧ್ಯವಾಗದ ಸೋಂಕಿತರಿಗೆ ಪ್ರಥಮ ಚಿಕಿತ್ಸೆಯ ಮಾದರಿಯಲ್ಲಿ ಈ ಕೇಂದ್ರ ಅತ್ಯುತ್ತಮ  ಆರೈಕೆಯನ್ನು ಒದಗಿಸುತ್ತದೆ. ಸೋಂಕಿತರ ವೈದ್ಯಕೀಯ ಶುಶ್ರೂಶೆಗೆ ನುರಿತ ವೈದ್ಯಕೀಯ ಸಿಬ್ಬಂದಿ‌ ಸದಾ‌ಕಾಲ ಲಭ್ಯವಿರಲಿದ್ದು, ದಾಖಲಾಗುವವರಿಗೆ ಉಚಿತ ಆಹಾರ, ಔಷಧೋಪಚಾರಗಳನ್ನು ನೀಡಲಾಗುತ್ತದೆ. ಸೋಂಕು ನಿಯಂತ್ರಣಕ್ಕೆ ಬಾರದ ವ್ಯಕ್ತಿಗಳನ್ನು ಇಲ್ಲಿಂದಲೇ ಆಸ್ಪತ್ರೆಗೆ ನೇರ ದಾಖಲಿಸುವ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ನಾಗರಿಕರು ಈ ಸೇವೆಯನ್ನು ಸದ್ಬಳಕೆ‌ ಮಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಮಾಧ್ಯಮಗಳು ಇಂದಿನ ಸಂಕಷ್ಟದ ಸಂದರ್ಭದಲ್ಲಿ ನಿರ್ವಹಿಸುತ್ತಿರುವ ಜವಾಬ್ದಾರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಸಚಿವ ಸುರೇಶ್ ಕುಮಾರ್, ಕಳೆದ ನಲವತ್ತು‌ ವರ್ಷಗಳಿಂದಲೂ ನಿರಂತರವಾಗಿ ತಾವು ಸಾರ್ವಜನಿಕ‌ ಸೇವೆಯಲ್ಲಿದ್ದು, ಮಾಧ್ಯಮಗಳ‌‌ ಕರ್ತವ್ಯ ಪ್ರಜ್ಞೆಯನ್ನು ಗಮನಿಸುತ್ತಲೇ ಬಂದಿದ್ದೇನೆ. ರೂಪಾಂತರಗೊಳ್ಳುತ್ತಿರುವ ಸವಾಲುಗಳ ನಡುವೆ ಈ ಕ್ಷೇತ್ರದ ಹೊಣೆಗಾರಿಕೆ ಹಿರಿದಾಗುತ್ತಲೇ ಇದೆ. ಅಂತೆಯೇ ಮಾಧ್ಯಮ ಕ್ಷೇತ್ರವೂ ಈ ಸವಾಲುಗಳನ್ನು ದಿಟ್ಟವಾಗಿ ಸ್ವೀಕರಿಸಿ ಜನಸಾಮಾನ್ಯರಿಗೆ ನೈಜ ಸುದ್ದಿಯನ್ನು ತಲುಪಿಸುವಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಕೆಲಸ‌ ಮಾಡುತ್ತಿದೆ. ಜನಸಾಮಾನ್ಯರ, ಸರ್ಕಾರದ ನಡುವೆ ಕೊಂಡಿಯಂತೆ ತನ್ನ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸುತ್ತಿದೆ. ಮಾಧ್ಯಮ ಕ್ಷೇತ್ರ ಸಕ್ರಿಯವಾಗಿ ಕಾರ್ಯ ನಿರ್ವಹಿಸದೇ ಇದ್ದಲ್ಲಿ ನಮ್ಮ ನಾಗರಿಕರು ಇಷ್ಟು ಸಬಲರಾಗಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಗಮನಿಸಿಯೇ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತ ಮಿತ್ರರನ್ನು ಕೋವಿಡ್ ಫ್ರಂಟ್‌ಲೇನ್ ವಾರಿಯರ್ ಗಳಾಗಿ ಸರ್ಕಾರ ಗುರುತಿಸಿದೆ ಎಂದರು. ತಾವೂ ಸಹ ಎಂದಿಗೂ ಮಾಧ್ಯಮಗಳ ಸೇವೆಗೆ ಋಣಿಯಾಗಿದ್ದೇನೆ ಎಂದು ಹೇಳಿದರು.

ಇಂದಿನ ಕಾರ್ಯಕ್ರಮದಲ್ಲಿ ಸಚಿವರೊಂದಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಲೋಕಸಭಾ‌ ಸದಸ್ಯ‌ರಾದ ತೇಜಸ್ವಿ ಸೂರ್ಯ,‌ಬೊಮ್ಮನಹಳ್ಳಿ ಶಾಸಕ‌ ಸತೀಶ್ ರೆಡ್ಡಿ, ಹಾಗೂ ಅಧಿಕಾರಿಗಳು‌ ಉಪಸ್ಥಿತರಿದ್ದರು.


CORONAVIRUS India

ನವದೆಹಲಿ : ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಹೊಸದಾಗಿ 3,48,421 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಹೊಸದಾಗಿ 3,48,421 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,33,40,938 ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಕೊರೊನಾ ವೈರಸ್ 4,205 ಮಂದಿ ಸೋಂಕಿತರು ಮೃತಪಟ್ಟಿದ್ದು, ಈ ಮೂಲಕ ಕೊರೊನಾ ಸೋಂಕಿಗೆ ಸಾವನ್ನಪ್ಪಿದವರ ಸಂಖ್ಯೆ 2,54,197 ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,55,338 ಕೊರೊನಾ ಸೊಂಕಿತರು  ಡಿಸ್ಚಾರ್ಜ್ ಆಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಪೈಕಿ 1,93,82,642 ಕೊರೊನಾ ಸೊಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ದೇಶದಲ್ಲಿ 37,04,099 ಸಕ್ರಿಯ ಪ್ರಕರಣಗಳಿವೆ.

ಒಟ್ಟು ಪ್ರಕರಣಗಳು: 2,33,40,938
ಒಟ್ಟು ಡಿಸ್ಚಾರ್ಜ್ ಗಳು: 1,93,82,642
ಸಾವಿನ ಸಂಖ್ಯೆ: 2,54,197
ಸಕ್ರಿಯ ಪ್ರಕರಣಗಳು: 37,04,099

ಒಟ್ಟು ಲಸಿಕೆ: 17,52,35,991


CORONAVIRUS KARNATAKA State

ಬೆಳಗಾವಿ : ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿಯವರ ಸಹೋದರನ ಪುತ್ರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಸಾರ್ವಜನಿಕ ಮತ್ತು ಸಾಮಾಜಿಕ ಕೆಲಸಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದ ಯುವ ಮುಖಂಡ ವಿನೋದ್ ಸವದಿ ಅವರು ಇಂದು ಬೆಳಗಿನ ಜಾವ ಬೆಳಗಾವಿಯಲ್ಲಿ ಕೋವಿಡ್ ನಿಂದಾಗಿ ಮೃತಪಟ್ಟಿದ್ದಾರೆ. 

ವಿನೋದ ಅವರು ಉಪಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರ ಸಹೋದರರಾದ ಪರಪ್ಪ ಸವದಿ ಅವರ ಪುತ್ರರಾಗಿದ್ದಾರೆ. ಪರಪ್ಪ ಸವದಿ ಅವರು ಕೃಷ್ಣ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿದ್ದಾರೆ.

ಕಳೆದ ಬಾರಿ ಲಾಕ್ ಡೌನ್ ಸಂದರ್ಭದಲ್ಲಿ ವಿನೋದ್ ಅವರು ಬಡವರಿಗೆ ಮತ್ತು ನಿರ್ಗತಿಕರಿಗೆ ಆಹಾರ ಪದಾರ್ಥಗಳನ್ನು ಉಚಿತವಾಗಿ ಹಂಚಿಕೆ ಮಾಡುವುದರಲ್ಲಿ ಮತ್ತು ಇತರ ಸಾಮಾಜಿಕ ಕೆಲಸಗಳಲ್ಲಿಯೂ ಅವಿರತವಾಗಿ ಕೆಲಸ ಮಾಡಿದ್ದರು.

ಭವಿಷ್ಯದಲ್ಲಿ ಉತ್ತಮ ನಾಯಕನಾಗುವ ಲಕ್ಷಣಗಳು ಅವರಲ್ಲಿ ಮೈಗೂಡಿದ್ದವು. ಆದರೆ ಕೇವಲ 36 ವರ್ಷಗಳಲ್ಲಿಯೇ ಅವರ ಬದುಕು ಅಂತ್ಯಗೊಂಡಿದ್ದು ನಿಜಕ್ಕೂ ಬೇಸರದ ಸಂಗತಿ ಎಂದು ವಿನೋದ ಅವರ ಆತ್ಮೀಯ ಸ್ನೇಹಿತರ ಬಳಗವು ಕಂಬನಿ ಮಿಡಿದಿದೆ.


CORONAVIRUS India

ನವದೆಹಲಿ: 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಲು ನಡೆಯುತ್ತಿರುವ ಹೋರಾಟದ ಮಧ್ಯೆ, ಎರಡು ಮತ್ತು 18 ವರ್ಷದೊಳಗಿನ ಮಕ್ಕಳ ಮೇಲೆ ಹಂತ II ಮತ್ತು ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕಾಗಿ ತನ್ನ ಕೋವಿಡ್ -19 ಲಸಿಕೆ ‘ಕೊವಾಕ್ಸಿನ್’ ಪ್ರಯೋಗವನ್ನು ನಡೆಸಲು ಭಾರತ್ ಬಯೋಟೆಕ್ ತಜ್ಞರ ಸಮಿತಿ ಮಂಗಳವಾರ ಶಿಫಾರಸು ಮಾಡಿದೆ.

ಕೇಂದ್ರ ಔಷಧ ಪ್ರಮಾಣಿತ ನಿಯಂತ್ರಣ ಸಂಸ್ಥೆಯ (ಸಿಡಿಎಸ್ ಸಿಒ) ಕೋವಿಡ್-19 ರ ವಿಷಯ ತಜ್ಞರ ಸಮಿತಿ (ಎಸ್ ಇಸಿ) ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ನ ಅರ್ಜಿಯ ಮೇಲೆ 2 ರಿಂದ 18 ವರ್ಷ ವಯಸ್ಸಿನ ಮಕ್ಕಳಲ್ಲಿ ಸುರಕ್ಷತೆ, ಪ್ರತಿಕ್ರಿಯೆ ಮತ್ತು ಕೊವಾಕ್ಸಿನ್ ಜಾಬ್ ಗಳ ಸುರಕ್ಷತೆ, ಪ್ರತಿಕ್ರಿಯೆ ಮತ್ತು ರೋಗನಿರೋಧಕತೆಯನ್ನು ಮೌಲ್ಯಮಾಪನ ಮಾಡಲು ಎರಡನೇ/3 ನೇ ಹಂತದ ವೈದ್ಯಕೀಯ ಪ್ರಯೋಗಗಳನ್ನು ನಡೆಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ ಬಗ್ಗೆ ಚರ್ಚೆ ನಡಸಿದ ಬಳಿಕ ಈ ಅನುಮತಿಯನ್ನು ನೀಡಲಾಗಿದೆ. ಏಮ್ಸ್, ದೆಹಲಿ, ಏಮ್ಸ್, ಪಾಟ್ನಾ ಮತ್ತು ನಾಗ್ಪುರದ ಮೆಡಿಟ್ರಿನಾ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ 525 ಈ ಪ್ರಯೋಗ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಮಿತಿಯು ಅಧ್ಯಯನದ ಮೂರನೇ ಹಂತಕ್ಕೆ ಮುಂದುವರಿಯುವ ಮೊದಲು ಡಿಎಸ್ ಎಂಬಿ ಶಿಫಾರಸುಗಳೊಂದಿಗೆ ಎರಡನೇ ಹಂತದ ವೈದ್ಯಕೀಯ ಪ್ರಯೋಗದ ಮಧ್ಯಂತರ ಸುರಕ್ಷತಾ ದತ್ತಾಂಶವನ್ನು ಸಿಡಿಎಸ್ ಸಿಒಗೆ ಸಲ್ಲಿಸಬೇಕು ಎಂಬ ಷರತ್ತಿಗೆ ಒಳಪಟ್ಟು 2 ರಿಂದ 18 ವರ್ಷ ವಯಸ್ಸಿನ 2 ರಿಂದ 18 ವರ್ಷ ವಯಸ್ಸಿನ ಸಂಪೂರ್ಣ ವಿರಿಯಾನ್ ನಿಷ್ಕ್ರಿಯ ಕೊರೊನಾ ವೈರಸ್ ಲಸಿಕೆಯ ಉದ್ದೇಶಿತ ಹಂತ 2/3 ವೈದ್ಯಕೀಯ ಪ್ರಯೋಗವನ್ನು ನಡೆಸಲು ಶಿಫಾರಸು ಮಾಡಿದೆ” ಎಂದು ಅಧಿಕಾರಿಯೊಬ್ಬರು ಪಿ.ಟಿ.ಐ.ಗೆ ತಿಳಿಸಿದರು.


CORONAVIRUS India

ಹೈದರಾಬಾದ್ : ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ 10 ದಿನಗಳ ಕಾಲ ತೆಲಂಗಾಣದಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.

ಸಿಎಂ ಕೆ.ಚಂದ್ರಶೇಖರ್ ರಾವ್ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಲಾಕ್ ಡೌನ್ ಮಾಡುವ ಕುರಿತಂತೆ ಘೋಷಣೆ ಮಾಡಲಾಗಿದ್ದು, ಇಂದಿನಿಂದ ಮೇ. 22 ರವರೆಗೆ ತೆಲಂಗಾಣದಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ದೇಶಾದ್ಯಂತ ಕೊರೊನಾ 2 ನೇ ಅಲೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿದ್ದು, ಇದೀಗ ತೆಲಂಗಾಣದಲ್ಲಿ ಲಾಕ್ ಡೌನ್ ಜಾರಿಯಾಗಿದೆ.


Bangalore CORONAVIRUS KARNATAKA State

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಕೊರೋನಾ 2ನೇ ಅಲೆ ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಇದೇ ಸಂದರ್ಭದಲ್ಲಿ ಕೊರೋನಾ ಸೋಂಕಿತರಿಗೆ ಸೂಕ್ತ ಕಾಲದಲ್ಲಿ ಬೆಡ್ ಸಿಗೋದು ಕಷ್ಟವಾಗಿದೆ. ಹೀಗಾಗಿ ಕೊರೋನಾ ಸೋಂಕಿತರಾಗಿ, ನೀವು ಎ ವರ್ಗ, ಬಿ ವರ್ಗದವರಾಗಿದ್ದರೇ, ದಿಢೀರ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗೋ ಅವಶ್ಯಕತೆ ಇಲ್ಲ. ಇಂತಹ ಕೋವಿಡ್-19 ರೋಗಿಗಳು ಮನೆಯಲ್ಲಿಯೇ ಆರೈಕೆ ಮಾಡಿಕೊಳ್ಳಬಹುದು ಎಂಬುದಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು, ಲಕ್ಷಣ ರಹಿತ ಅಥವಾ ಸೌಮ್ಯ ಲಕ್ಷಣಗಳ ಕೋವಿಡ್-19 ರೋಗಿಗಳು ಮನೆಯಲ್ಲಿಯೇ ಆರೈಕೆ ಮಾಡಿಕೊಳ್ಳಬಹುದು. ವೈದ್ಯರು, ಆರೋಗ್ಯ ಕಾರ್ಯಕರ್ತರು ದೂರವಾಣಿ ಮುಖಾಂತರ (ಎ) ಅಥವಾ (ಬಿ) ವರ್ಗಗಳಾಗಿ ವಿಂಗಡಿಸಿರುವ ರೋಗಿಗಳು ಮನೆಯಲ್ಲಿ ಆರೈಕೆ ಪಡೆಯಲು ಅರ್ಹರು ಎಂಬುದಾಗಿ ಹೇಳಿದೆ.

ಅಂದಹಾಗೇ ಎ ವರ್ಗ ಅಂದ್ರೆ ಯಾವುದೇ ಲಕ್ಷಣಗಳು ಇಲ್ಲದಿರುವಂತ ಕೊರೋನಾ ಸೋಂಕಿತರು. ಬಿ ವರ್ಗ ಅಂದ್ರೆ ಸೌಮ್ಯ(Mild) ಲಕ್ಷಣಗಳಾದ ಜ್ವರ, ಒಣಕೆಮ್ಮು, ಬೇಧಿ, ಮೈ-ಕೈ ನೋವು, ಸುಸ್ತು, ವಾಸನೆ ಮತ್ತು ರುಚಿ ಕಳೆದುಕೊಂಡಿರುವಂತ ಲಕ್ಷಣ ಹೊಂದಿರುವಂತ ಕೊರೋನಾ ಸೋಂಕಿತರು. ಹೀಗೆ ಸೋಂಕಿತರಾದವರು ಮನೆಯಲ್ಲಿ ಹೇಗೆ ಆರೈಕೆ ಕ್ರಮಗಳನ್ನು ಅನುಸರಿಸಬೇಕು ಅಂತ ಈ ಕೆಳಗಿದೆ..

ಆರೈಕೆ ಕ್ರಮಗಳು

 • ಮನೆಯಲ್ಲಿ ಪ್ರತ್ಯೇಕವಾಗಿರಿ
 • ರೋಗದ ಲಕ್ಷಣ ಮತ್ತು ದೇಹದ ಉಷ್ಣತೆಯನ್ನು ಪರಿಶೀಲಿಸಿ
 • ಸರಿಯಾದ ಪ್ರಮಾಣದಲ್ಲಿ ನೀರನ್ನು ಸೇವಿಸಿ
 • ಪಲ್ಸ್ ಆಕ್ಸಿಮೀಟರ್ ಬಳಸಿ, ದೇಹದಲ್ಲಿನ ಆಮ್ಲಜನಕದ ಪ್ರಮಾಣ ಪರಿಶೀಲಿಸಿ
 • 6 ನಿಮಿಷ, 3 ನಿಮಿಷ ಪ್ರತಿ ದಿನ ನಡೆದಾಡುವ ಪರೀಕ್ಷೆ(60+ ವಯಸ್ಸಿನವರಿಗೆ)

ಈ ಎಲ್ಲಾ ನಿಯಮ, ಆರೋಗ್ಯ ಕಾಳಜಿ ವಹಿಸಿಯೂ, ನಿಮಗೆ ತೀವ್ರ ಉಸಿರಾಟದ ತೊಂದರೆ, ಎದೆಯಲ್ಲಿ ನಿರಂತರ ನೋವು, ಒತ್ತಡ, ದಿನದ ಯಾವುದೇ ಸಮಯದಲ್ಲಿ ಆಮ್ಲಜನಕ ಪ್ರಮಾಣ 94%ಕ್ಕಿಂತ ಕಡಿಮೆ ಇರುವುದು, 6 ನಿಮಿಷ, 3 ನಿಮಿಷ ನಡೆದಾಡುವಾಗ ಪರೀಕ್ಷೆಯಲ್ಲಿ (60+ ವಯಸ್ಸಿನವರಿಗೆ) 4%ಕ್ಕಿಂತ ಹೆಚ್ಚು ಆಮ್ಲಜನಕ ಪ್ರಮಾಣ ಕಡಿಮೆಯಾದಾಗ, ತಕ್ಷಣ ಆಸ್ಪತ್ರೆಗೆ ದಾಖಲಾಗೋದು ಮರೆಯಬೇಡಿ.

ಇನ್ನೂ ಮನೆಯ ಆರೈಕೆ ಬಯಸುವಂತ ಕೊರೋನಾ ಸೋಂಕಿತರಿಗೆ, ಅವರ ಮನೆಯಲ್ಲಿ ಯಾವೆಲ್ಲಾ ಸೌಲಭ್ಯ ಇರಬೇಕು ಎಂಬುದಾಗಿಯೂ ಆರೋಗ್ಯ ಇಲಾಖೆ ಈ ಕೆಳಕಂಡಂತೆ ಮಾಹಿತಿ ನೀಡಿದೆ.

ಮನೆಯ ಆರೈಕೆಯಲ್ಲಿರಬೇಕಾದ ವ್ಯವಸ್ಥೆಗಳು

 • ಉತ್ತಮ ಗಾಳಿ, ಬೆಳಕು ಹೊಂದಿರುವ ಪ್ರತ್ಯೇಕ ಕೊಠಡಿ ಮತ್ತು ಶೌಚಾಲಯ
 • ರೋಗಿಯ ಆರೈಕೆಗಾಗಿ ದಿನದ 24 ಗಂಟೆಯೂ ಒಬ್ಬ ವ್ಯಕ್ತಿ ಮೀಸಲಿರಬೇಕು
 • ಮನೆಯಲ್ಲಿ ಪಲ್ಸ್ ಆಕ್ಸಿಮೀಟರ್ ಮತ್ತು ಥರ್ಮಾಮೀಟರ್ ಹೊಂದಿರಬೇಕು
 • ಆರೈಕೆದಾರರು ಪೂರ್ಣ ಕಾಲಾವಧಿಯಲ್ಲಿ ಆಸ್ಪತ್ರೆ, ವೈದ್ಯರ ಸಂಪರ್ಕದಲ್ಲಿರಬೇಕು
 • ಮಾರ್ಗಸೂಚಿಯಲ್ಲಿರುವ ಎಲ್ಲಾ ನಿಯಮಗಳನ್ನು ಪಾಲಿಸುವುದಾಗಿ ಸಹಿ ಮಾಡಿದ ಒಪ್ಪಿಗೆ ಪತ್ರ ನೀಡಬೇಕು.


Bangalore CORONAVIRUS KARNATAKA State

ಬೆಂಗಳೂರು : ಕೋವಿಡ್ ಪಿಡುಗು ಅಧಿಕವಾಗಿ ಸಾರ್ವಜನಿಕರು ಆಕ್ಸಿಜನ್ ಗಾಗಿ ಪರಿತಪಿಸುವುದನ್ನು ತಪ್ಪಿಸಲು ಖಾಸಗಿ ಸ್ವಯಂ ಸೇವಾ ಸಂಸ್ಥೆಯ ಸಹಭಾಗಿತ್ವದಲ್ಲಿ ಬಿ.ಎಂ.ಟಿ.ಸಿ. ಸಂಸ್ಥೆಯು ಪ್ರಾಯೋಗಿಕವಾಗಿ ಮೊಬೈಲ್ ಆಕ್ಸಿಜನ್ ಘಟಕವನ್ನು ಪ್ರಾರಂಭಿಸಲು ಮುಂದಾಗಿದೆ ಎಂದು ಉಪಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರಾದ ಲಕ್ಷ್ಮಣ ಸವದಿಯವರು ತಿಳಿಸಿದ್ದಾರೆ.

ಪ್ರಸ್ತುತ ಬಹುತೇಕ ಎಲ್ಲಾ ಆಸ್ಪತ್ರೆಗಳಲ್ಲೂ ಕೋವಿಡ್ ರೋಗಿಗಳ ದಟ್ಟಣೆ ಹೆಚ್ಚಾಗಿದೆ. ಇದರಿಂದಾಗಿ ಹೊಸ ರೋಗಿಗಳು ಆಸ್ಪತ್ರೆಗೆ ಬಂದಾಗ ಅವರಿಗೆ ಆಸ್ಪತ್ರೆಯಲ್ಲಿ ಆಕ್ಸಿಜನ್ ನೀಡುವುದು ವಿಳಂಬವಾಗಿ ತೀವ್ರ ತೊಂದರೆಯಾಗುತ್ತಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಬಸ್ಸಿನಲ್ಲಿಯೇ ತುರ್ತು ಆಕ್ಸಿಜನ್ ಸೌಲಭ್ಯ ಒದಗಿಸಲು ಈ ನೂತನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಸವದಿಯವರು ವಿವರಿಸಿದ್ದಾರೆ.

ಆಕ್ಸಿಜನ್ ಪೂರೈಸುವ ಈ ವಿಶೇಷ ಬಸ್ಸನ್ನು ಸರ್ಕಾರಿ ಆಸ್ಪತ್ರೆಯ (ಕೆ.ಸಿ. ಜನರಲ್ ಆಸ್ಪತ್ರೆ ಅಥವಾ ವಿಕ್ಟೋರಿಯಾ ಆಸ್ಪತ್ರೆ) ಆವರಣದಲ್ಲಿ ನಿಲ್ಲಿಸಲಾಗುವುದು ಹೊರಗಿನಿಂದ ಕೋವಿಡ್ ಪೀಡಿತರು ಬಂದಾಗ ತಕ್ಷಣಕ್ಕೆ ಆಸ್ಪತ್ರೆಯ ಒಳಗೆ ಆಕ್ಸಿಜನ್ ಸಿಗದಿದ್ದರೆ ಆತಂಕ ಪಡದೇ ಈ ಆಕ್ಸಿಜನ್ ಮೊಬೈಲ್ ಬಸ್ಸಿನಲ್ಲಿಯೇ ತುರ್ತಾಗಿ ವಿಶ್ರಮಿಸಿ ಅಗತ್ಯ ಆಕ್ಸಿಜನ್ ಪಡೆದುಕೊಳ್ಳಲು ಸಾಧ್ಯವಾಗುವಂತೆ ವೈದ್ಯಕೀಯ ಉಪಕರಣಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಸದ್ಯಕ್ಕೆ ಪ್ರಾಯೋಗಿಕವಾಗಿ ಒಂದು ಬಿ.ಎಂ.ಟಿ.ಸಿ. ಬಸ್ ನ್ನು ಇದಕ್ಕಾಗಿ ಒದಗಿಸಲಾಗಿದೆ.

ಫೌಂಡೇಶನ್ ಇಂಡಿಯಾ ಎಂಬ ಸ್ವಯಂಸೇವಾ ಸಂಸ್ಥೆಯವರು ಈ ಬಸ್ಸಿನಲ್ಲಿ ಆಕ್ಸಿಜನ್ ಸರಬರಾಜು ಮಾಡಿ ಸೇವೆ ನೀಡಲು ಎಲ್ಲಾ ಅಗತ್ಯ ಉಪಕರಣಗಳನ್ನು ಅಳವಡಿಸುತ್ತಿದ್ದಾರೆ. ಏಕಕಾಲಕ್ಕೆ ಒಟ್ಟು ಆರು ಮಂದಿ ರೋಗಿಗಳಿಗೆ ಈ ಬಸ್ಸಿನಲ್ಲಿ ಆಕ್ಸಿಜನ್ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಕೋವಿಡ್ ನಂತಹ ಅಪಾಯಕಾರಿ ರೋಗದಿಂದ ತತ್ತರಿಸುತ್ತಾ ಆಕ್ಸಿಜನ್ ಗಾಗಿ ಪ್ರಯಾಸ ಪಡುವವರಿಗೆ ಇದು ಸಂಜೀವಿನಿ ಆಗಬಲ್ಲದು ಎಂದು ಸವದಿಯವರು ಸ್ಪಷ್ಟಪಡಿಸಿದ್ದಾರೆ.

ಚಾಲಕರು ಮತ್ತು ಸಿಬ್ಬಂದಿಗಳಿಗೆ ಸೋಂಕು ಹರಡದಂತೆ ವಿಶೇಷ ವಿನ್ಯಾಸದೊಂದಿಗೆ ‘ಆಕ್ಸಿಜನ್ ಆನ್ ವ್ಹೀಲ್ಸ್’ ಬಸ್ಸನ್ನು ಸಜ್ಜುಗೊಳಿಸಲಾಗಿದೆಯಲ್ಲದೇ, ಸ್ಯಾನಿಟೈಸರ್, ಮಾಸ್ಕ್ ಗಳನ್ನು ಇದರಲ್ಲಿ ಒದಗಿಸಲಾಗುವುದು. ಪ್ರತಿ ರೋಗಿಗಳೂ ಸಾಮಾನ್ಯವಾಗಿ 2ರಿಂದ 4 ಗಂಟೆಯ ಅವಧಿಯಲ್ಲಿ ಈ ಸೌಲಭ್ಯ ದಿಂದ ತಮಗೆ ಬೇಕಾದ ಅಗತ್ಯ ಪ್ರಮಾಣದ ಆಕ್ಸಿಜನ್ ಪಡೆದುಕೊಳ್ಳಬಹುದಾಗಿದೆ.

ಬೆಂಗಳೂರಿನಲ್ಲಿ ನಾಳೆಯಿಂದ ( ಗುರುವಾರ) ಪ್ರಾರಂಭಿಸಲಾಗುವ ಈ ವಿಶೇಷ ‘ಆಕ್ಸಿಜನ್ ಬಸ್ ಸೌಲಭ್ಯ’ ಯಶಸ್ವಿಯಾದರೆ ಮುಂದೆ ಇನ್ನಷ್ಟು ‘ಆಕ್ಸಿಜನ್ ಬಸ್ ಸೌಲಭ್ಯ’ ನೀಡಲು ಸಾರಿಗೆ ನಿಗಮಗಳಿಂದ ಪ್ರಯತ್ನಿಸಲಾಗುವುದು ಎಂದು ಶ್ರೀ ಸವದಿಯವರು ತಿಳಿಸಿದ್ದಾರೆ.

ಈ ರೀತಿಯ ಮೊಬೈಲ್ ಆಕ್ಸಿಜನ್ ಬಸ್ ಪ್ರಯೋಗವು ಇಡೀ ದೇಶದಲ್ಲಿಯೇ ಒಂದು ವಿನೂತನ ಯತ್ನವಾಗಿದೆ. ಇದನ್ನು ಸಾಕಾರಗೊಳಿಸುವಲ್ಲಿ ಶ್ರಮಿಸಿದ ಫೌಂಡೇಶನ್ ಇಂಡಿಯಾ ಸಂಸ್ಥೆಯ ಸಂಜಯ್ ಗುಪ್ತ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.


CORONAVIRUS KARNATAKA State

ಬೆಂಗಳೂರು : ‘ರಾಜ್ಯದಲ್ಲಿ ಕೋಮುವಾದದ ವಿಷಬೀಜಕ್ಕೆ ಇರುವ ಮತ್ತೊಂದು ಹೆಸರು ತೇಜಸ್ವಿ ಸೂರ್ಯ. ಮಾಧ್ಯಮಗಳ ಮುಂದೆ ಮುಸಲ್ಮಾನರ ಹೆಸರುಗಳನ್ನು ಓದಿದ್ದು ಈತನೊ ಅಥವಾ ಅಧಿಕಾರಿಗಳೋ? ಮಾಡುವುದೆಲ್ಲ ಮಾಡಿ ಅಧಿಕಾರಿಗಳನ್ನು ಸಿಕ್ಕಿಸಲು ನೋಡುತ್ತಿದ್ದಾನೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆರೋಪಿಸಿದ್ದಾರೆ.

ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳಿಗೆ ಮಂಗಳವಾರ ಪ್ರತಿಕ್ರಿಯಿಸಿದ ಅವರು, ‘ಆ ಸಂಸದರನ್ನು ಏನೆಂದು ಕರೆಯಬೇಕೋ ಗೊತ್ತಾಗುತ್ತಿಲ್ಲ. ಪತ್ರಿಕಾ ಗೋಷ್ಠಿಯಲ್ಲಿ 17 ಜನರ ಹೆಸರು ಓದಿದ್ದು ಈ ಮಹಾನುಭಾವನೇ ಅಲ್ಲವೇ? ನೀವು ಮಾಧ್ಯಮದವರು ಅದನ್ನು ತಿರುಚಿ ತೋರಿಸಿದ್ದೀರಾ? ಈ ಹಿಂದೆ ಮುಸಲ್ಮಾನರನ್ನು ಪಂಕ್ಚರ್ ಹಾಕುವವರು ಎಂದಿದ್ದರು, ಬೆಂಗಳೂರು ಭಯೋತ್ಪಾದಕರ ರಾಜಧಾನಿಯಾಗುತ್ತಿದೆ ಎಂದಿದ್ದರು. ಈಗ ಈ 17 ಜನರನ್ನು ಗುರಿಯಾಗಿಸಿ ಮಾತನಾಡಿದ್ದಾರೆ. ಈಗ ಅಧಿಕಾರಿಗಳು ಕೊಟ್ಟ ಹೆಸರು ಓದಿದೆ ಅಂತಿದ್ದಾರೆ. ಅಧಿಕಾರಿಗಳೇಕೆ ಕೇವಲ 17 ಜನರ ಹೆಸರು ಕೊಡುತ್ತಾರೆ? ಅವರು ಕೊಟ್ಟರೆ ಎಲ್ಲರ ಹೆಸರು ಕೊಡುತ್ತಿದ್ದರು. ತಮ್ಮ ತಪ್ಪನ್ನು ಅಧಿಕಾರಿಗಳ ಮೇಲೆ ಹೊರಿಸುತ್ತಿದ್ದಾರೆ ಎಂದರು.

ಮುಖ್ಯಮಂತ್ರಿಗಳು ಮೂರನೇ ಅಲೆ ಬಗ್ಗೆ ಎಚ್ಚರಿಕೆ ಕೊಟ್ಟಿದ್ದಾರೆ. ಅದಕ್ಕೆ ಅವರು ಸಿದ್ಧತೆ ಮಾಡಿಕೊಳ್ಳಲಿ. ಅದಕ್ಕೆ ಮೊದಲು ಈಗ ಬಂದಿರೋ 2ನೇ ಅಲೆ ನಿಯಂತ್ರಿಸಲು ಕಾರ್ಯಕ್ರಮ ರೂಪಿಸಲಿ. ಲಸಿಕೆ ಕೊಡುತ್ತೇವೆ, ನೋಂದಣಿ ಮಾಡಿಸಿ ಅಂತಾ ಹೇಳಿದರು. ನಾನು ನನ್ನ ಮಕ್ಕಳಿಗೆ ನೋಂದಣಿ ಮಾಡಿಸಲು ಆನ್ಲೈನ್ ನಲ್ಲಿ ಪ್ರಯತ್ನಿಸಿದೆ. ಆದರೆ ಸಾಧ್ಯವಾಗಲಿಲ್ಲ. ನೀವು ಬೇಕಾದರೆ ಪ್ರಯತ್ನಿಸಿ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರಕ್ಕೆ ಯಾವುದೇ ಸ್ಪಷ್ಟತೆ ಇಲ್ಲ ಎಂದರು.

ಸಿಇಟಿಯಲ್ಲಿ ಯಾವ ಕಾಲೇಜಿನಲ್ಲಿ ಯಾವ್ಯಾವ ಸೀಟು ಎಷ್ಟೆಷ್ಟು ಇದೆ ಎಂದು ತೋರಿಸುವ ರೀತಿ ಯಾವ ಆಸ್ಪತ್ರೆಯಲ್ಲಿ ಹಾಸಿಗೆ, ಆಕ್ಸಿಜನ್ ಇದೆ, ಲಸಿಕೆ ಎಲ್ಲಿ ನೀಡಲಾಗುತ್ತದೆ ಅಂತಾ ಸಂಪೂರ್ಣ ಮಾಹಿತಿಯನ್ನು ಜನರಿಗೆ ಕೊಡಲಿ ಎಂದು ಆಗ್ರಹಿಸಿದರು.

ಶಿವಮೊಗ್ಗದಲ್ಲಿ ಒಬ್ಬ ಮಂತ್ರಿಗಳು, ಜನರಿಗೆ ಪರಿಹಾರ ಕೊಡಲು ನಮ್ಮ ಬಳಿ ನೋಟು ಮುದ್ರಿಸುವ ಯಂತ್ರ ಇಲ್ಲ ಅಂತಾ ಹೇಳಿದ್ದಾರೆ. ಆದರೆ ಅವರು ಹಿಂದೆ ನೋಟು ಎಣಿಸುವ ಯಂತ್ರ ಇಟ್ಟುಕೊಂಡಿರಲಿಲ್ಲವೇ? ನಿಮಗೆ ಪರಿಹಾರ ಕೊಡಕ್ಕೆ ಆಗದಿದ್ದರೆ ಸರ್ಕಾರದ ಬಳಿ ದುಡ್ಡಿಲ್ಲ, ಆಗಲ್ಲ ಅಂತಾ ಹೇಳಿ. ಜನ ನೋವಿಗೆ ಸಿಲುಕಿದ್ದಾರೆ, ಅದಕ್ಕಾಗಿ ಈ ರೀತಿ ಪರಿಹಾರ ಕೇಳುತ್ತಿದ್ದಾರೆ. ನೀವು ಲಾಕ್ ಡೌನ್ ಮಾಡಿರುವುದಕ್ಕೆ ಅವರು ಪರಿಹಾರ ಕೇಳುತ್ತಿದ್ದಾರೆ. ನೆರೆ ರಾಜ್ಯಗಳಲ್ಲಿ ಪರಿಹಾರ ಕೊಡುತ್ತಿದ್ದಾರೆ. ನಿಮ್ಮನ್ನು ಪರಿಹಾರ ಕೇಳದೆ ಇನ್ಯಾರನ್ನು ಕೇಳಬೇಕು? ಎಂದು ಪ್ರಶ್ನಿಸಿದರು.

ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವವರಿಗೆ ಸರಕಾರ ತಕ್ಷಣ ಆರ್ಥಿಕ ನೆರವು ಪ್ಯಾಕೇಜ್ ಘೋಷಿಸಿ ತಿಂಗಳಿಗೆ 10 ಸಾವಿರ ರುಪಾಯಿ ನೀಡಬೇಕು ಎಂದು ಆಗ್ರಹಿಸಿದರು.

ತರಕಾರಿ ಬೆಳೆದ ರೈತನಿಂದ ಬೆಳೆ ಖರೀದಿಯಾಗುತ್ತಿಲ್ಲ. ಕೃಷಿ, ತೋಟಗಾರಿಕೆ ಸಚಿವರೇ, ಯಾವ ರೈತನ ಬಳಿ ಹೋಗಿ ಬೆಳೆ ಖರೀದಿ ಮಾಡಿದ್ದೀರಿ? ಅವರ ಜತೆ ಏಬಾದರೂ ಮಾತನಾಡಿದ್ದೀರಾ? ಮೊದಲು ಹೋಗಿ, ಎಪಿಎಂಸಿಗಳಿಗೆ ಭೇಟಿ ಕೊಟ್ಟು, ರೈತರ ಸಂಕಷ್ಟ ಆಲಿಸಿ. ಕೇವಲ ಪತ್ರಿಕೆಯಲ್ಲಿ ಜಾಹೀರಾತು ಕೊಟ್ಟರೆ ಜನರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದರು.


Bangalore CORONAVIRUS KARNATAKA State

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಕೊರೋನಾ 2ನೇ ಅಲೆ ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಇದೇ ಸಂದರ್ಭದಲ್ಲಿ ಕೊರೋನಾ ಸೋಂಕಿತರಿಗೆ ಸೂಕ್ತ ಕಾಲದಲ್ಲಿ ಬೆಡ್ ಸಿಗೋದು ಕಷ್ಟವಾಗಿದೆ. ಹೀಗಾಗಿ ಕೊರೋನಾ ಸೋಂಕಿತರಾಗಿ, ನೀವು ಎ ವರ್ಗ, ಬಿ ವರ್ಗದವರಾಗಿದ್ದರೇ, ದಿಢೀರ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗೋ ಅವಶ್ಯಕತೆ ಇಲ್ಲ. ಇಂತಹ ಕೋವಿಡ್-19 ರೋಗಿಗಳು ಮನೆಯಲ್ಲಿಯೇ ಆರೈಕೆ ಮಾಡಿಕೊಳ್ಳಬಹುದು ಎಂಬುದಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು, ಲಕ್ಷಣ ರಹಿತ ಅಥವಾ ಸೌಮ್ಯ ಲಕ್ಷಣಗಳ ಕೋವಿಡ್-19 ರೋಗಿಗಳು ಮನೆಯಲ್ಲಿಯೇ ಆರೈಕೆ ಮಾಡಿಕೊಳ್ಳಬಹುದು. ವೈದ್ಯರು, ಆರೋಗ್ಯ ಕಾರ್ಯಕರ್ತರು ದೂರವಾಣಿ ಮುಖಾಂತರ (ಎ) ಅಥವಾ (ಬಿ) ವರ್ಗಗಳಾಗಿ ವಿಂಗಡಿಸಿರುವ ರೋಗಿಗಳು ಮನೆಯಲ್ಲಿ ಆರೈಕೆ ಪಡೆಯಲು ಅರ್ಹರು ಎಂಬುದಾಗಿ ಹೇಳಿದೆ.

ಅಂದಹಾಗೇ ಎ ವರ್ಗ ಅಂದ್ರೆ ಯಾವುದೇ ಲಕ್ಷಣಗಳು ಇಲ್ಲದಿರುವಂತ ಕೊರೋನಾ ಸೋಂಕಿತರು. ಬಿ ವರ್ಗ ಅಂದ್ರೆ ಸೌಮ್ಯ(Mild) ಲಕ್ಷಣಗಳಾದ ಜ್ವರ, ಒಣಕೆಮ್ಮು, ಬೇಧಿ, ಮೈ-ಕೈ ನೋವು, ಸುಸ್ತು, ವಾಸನೆ ಮತ್ತು ರುಚಿ ಕಳೆದುಕೊಂಡಿರುವಂತ ಲಕ್ಷಣ ಹೊಂದಿರುವಂತ ಕೊರೋನಾ ಸೋಂಕಿತರು. ಹೀಗೆ ಸೋಂಕಿತರಾದವರು ಮನೆಯಲ್ಲಿ ಹೇಗೆ ಆರೈಕೆ ಕ್ರಮಗಳನ್ನು ಅನುಸರಿಸಬೇಕು ಅಂತ ಈ ಕೆಳಗಿದೆ..

ಆರೈಕೆ ಕ್ರಮಗಳು

 • ಮನೆಯಲ್ಲಿ ಪ್ರತ್ಯೇಕವಾಗಿರಿ
 • ರೋಗದ ಲಕ್ಷಣ ಮತ್ತು ದೇಹದ ಉಷ್ಣತೆಯನ್ನು ಪರಿಶೀಲಿಸಿ
 • ಸರಿಯಾದ ಪ್ರಮಾಣದಲ್ಲಿ ನೀರನ್ನು ಸೇವಿಸಿ
 • ಪಲ್ಸ್ ಆಕ್ಸಿಮೀಟರ್ ಬಳಸಿ, ದೇಹದಲ್ಲಿನ ಆಮ್ಲಜನಕದ ಪ್ರಮಾಣ ಪರಿಶೀಲಿಸಿ
 • 6 ನಿಮಿಷ, 3 ನಿಮಿಷ ಪ್ರತಿ ದಿನ ನಡೆದಾಡುವ ಪರೀಕ್ಷೆ(60+ ವಯಸ್ಸಿನವರಿಗೆ)

ಈ ಎಲ್ಲಾ ನಿಯಮ, ಆರೋಗ್ಯ ಕಾಳಜಿ ವಹಿಸಿಯೂ, ನಿಮಗೆ ತೀವ್ರ ಉಸಿರಾಟದ ತೊಂದರೆ, ಎದೆಯಲ್ಲಿ ನಿರಂತರ ನೋವು, ಒತ್ತಡ, ದಿನದ ಯಾವುದೇ ಸಮಯದಲ್ಲಿ ಆಮ್ಲಜನಕ ಪ್ರಮಾಣ 94%ಕ್ಕಿಂತ ಕಡಿಮೆ ಇರುವುದು, 6 ನಿಮಿಷ, 3 ನಿಮಿಷ ನಡೆದಾಡುವಾಗ ಪರೀಕ್ಷೆಯಲ್ಲಿ (60+ ವಯಸ್ಸಿನವರಿಗೆ) 4%ಕ್ಕಿಂತ ಹೆಚ್ಚು ಆಮ್ಲಜನಕ ಪ್ರಮಾಣ ಕಡಿಮೆಯಾದಾಗ, ತಕ್ಷಣ ಆಸ್ಪತ್ರೆಗೆ ದಾಖಲಾಗೋದು ಮರೆಯಬೇಡಿ.

ಇನ್ನೂ ಮನೆಯ ಆರೈಕೆ ಬಯಸುವಂತ ಕೊರೋನಾ ಸೋಂಕಿತರಿಗೆ, ಅವರ ಮನೆಯಲ್ಲಿ ಯಾವೆಲ್ಲಾ ಸೌಲಭ್ಯ ಇರಬೇಕು ಎಂಬುದಾಗಿಯೂ ಆರೋಗ್ಯ ಇಲಾಖೆ ಈ ಕೆಳಕಂಡಂತೆ ಮಾಹಿತಿ ನೀಡಿದೆ.

ಮನೆಯ ಆರೈಕೆಯಲ್ಲಿರಬೇಕಾದ ವ್ಯವಸ್ಥೆಗಳು

 • ಉತ್ತಮ ಗಾಳಿ, ಬೆಳಕು ಹೊಂದಿರುವ ಪ್ರತ್ಯೇಕ ಕೊಠಡಿ ಮತ್ತು ಶೌಚಾಲಯ
 • ರೋಗಿಯ ಆರೈಕೆಗಾಗಿ ದಿನದ 24 ಗಂಟೆಯೂ ಒಬ್ಬ ವ್ಯಕ್ತಿ ಮೀಸಲಿರಬೇಕು
 • ಮನೆಯಲ್ಲಿ ಪಲ್ಸ್ ಆಕ್ಸಿಮೀಟರ್ ಮತ್ತು ಥರ್ಮಾಮೀಟರ್ ಹೊಂದಿರಬೇಕು
 • ಆರೈಕೆದಾರರು ಪೂರ್ಣ ಕಾಲಾವಧಿಯಲ್ಲಿ ಆಸ್ಪತ್ರೆ, ವೈದ್ಯರ ಸಂಪರ್ಕದಲ್ಲಿರಬೇಕು
 • ಮಾರ್ಗಸೂಚಿಯಲ್ಲಿರುವ ಎಲ್ಲಾ ನಿಯಮಗಳನ್ನು ಪಾಲಿಸುವುದಾಗಿ ಸಹಿ ಮಾಡಿದ ಒಪ್ಪಿಗೆ ಪತ್ರ ನೀಡಬೇಕು.


CORONAVIRUS KARNATAKA State

ಚಿಕ್ಕಬಳ್ಳಾಪುರ : ಶ್ರೀನಿಡುಮಾಮಿಡಿ ಪೀಠದ ಶ್ರೀಗಳಾದಂತ ವೀರಭದ್ರ ಚೆನ್ನಮಲ್ಲ ಸ್ವಾಮೀಜಿಗಳಿಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಕೊರೋನಾ ಸೋಂಕಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಕುರಿತಂತೆ ಮಠದ ಭಕ್ತರಿಗೆ ಸುದೀರ್ಘ ಪತ್ರವನ್ನು ಬರೆದಿರುವಂತ ಅವರು, ಇತ್ತೀಚೆಗೆ ಶೋಷಿತ ಸಮುದಾಯಕ್ಕೆ ಸೇರಿದ್ದಂತ ಆತ್ಮೀಯ ಹಿರಿಯರೊಬ್ಬರು ಅನಾರೋಗ್ಯಕ್ಕೆ ಒಳಗಾಗಿದ್ದು, ಹೋಟೆಲ್ ನಲ್ಲಿ ಉಳಿದಿರುವ ವಿಷಯ ತಿಳಿದು ಮಠದಲ್ಲಿ ಇದ್ದು ಸುಧಾರಿಸಿಕೊಳ್ಳಲು ವ್ಯವಸ್ಥೆ ಮಾಡಿಕೊಟ್ಟಿದ್ದೆ. ಮೂರನೇ ದಿನ ಅವರು ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದರು. ನಾಲ್ಕನೇ ದಿನ ಅವರು ಕೋವಿಡ್ ಸೋಂಕಿಗೆ ಒಳಗಾಗಿರುವುದು ತಿಳಿಯಿತು. ಮಠದವರಿಗೆ ತೊಂದರೆ ಆಗಬಾರದೆಂದು ಅಂದೇ ಸಂಜೆ, ಅವರು ಮನೆಗೆ ಹಿಂದಿರುಗಿದರು.

ನಾನು ಮುನ್ನೆಚ್ಚರಿಕೆ ವಹಿಸಿದ್ದೆನಾದರೂ ಹೇಗೋ ಏನೋ ನನಗೂ ಸೋಂಕು ತಗುಲಿದೆ. ಅವರಿಗೂ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೇ ಮೂರು ದಿನಗಳ ಹಿಂದಷ್ಟೇ ಕೊನೆಯುಸಿರೆಳೆದಿದ್ದಾರೆ. ಕೊರೋನಾ ಪ್ರತಿದಿನವೂ ಸಾವಿರಾರೂ ಜನರ ಪ್ರಾಣವನ್ನು ಹೀರುತ್ತಿರುವುದನ್ನು ನೋಡಿದರೇ, ಇಡೀ ಭೂಮಿಯೇ ಮಸಣವಾಗಿ ಮಾರ್ಪಾಡಾಗುತ್ತಿದೆಯೇನೋ ಎಂಬ ಭಯ ಆವರಿಸುತ್ತಿದೆ ಎಂಬುದಾಗಿ ತಿಳಿಸಿದ್ದಾರೆ. ಈ ಮೂಲಕ ತಮಗೂ ಕೊರೋನಾ ಪಾಸಿಟಿವ್ ಎಂಬುದಾಗಿ ತಿಳಿಸಿದ್ದಾರೆ.

ಇನ್ನೂ ಭಕ್ತರಿಗೆ ಬರೆದಿರುವಂತ ಪತ್ರದಲ್ಲಿ ತಮಗೆ ಕೊರೋನಾ ಸೋಂಕು ತಗುಲಿರೋದು ತಿಳಿಸಿರುವಂತ ಅವರು, ಸೋಂಕಿನಿಂದ ಮುಂದೇನಾದರೂ ಆದ್ರೇ. ಮಠದ ಉತ್ತರಾಧಿಕಾರಿ ಆಯ್ಕೆಗೆ ಭಕ್ತರು, ಸಾರ್ವಜನಿಕರ ಅಭಿಪ್ರಾಯಕ್ಕೆ ಮನವಿ ಮಾಡಿದ್ದಾರೆ. 3 ಪೀಠಗಳಲ್ಲಿ ಒಂದಕ್ಕೆ ಮಹಿಳಾ ಪೀಠಾಧಿಕಾರಿ ನೇಮಕಕ್ಕೆ ಒಲವು ವ್ಯಕ್ತ ಪಡಿಸಿದ್ದಾರೆ.


CORONAVIRUS KARNATAKA Shimoga State

ಶಿವಮೊಗ್ಗ : ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಗುರುವಾರದಿಂದ ಭಾನುವಾರದ ತನಕ ನಾಲ್ಕು ದಿನ ಲಾಕ್‍ಡೌನ್ ಇನ್ನಷ್ಟು ಬಿಗಿಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ನಗರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಾಕ್‍ಡೌನ್ ಇನ್ನಷ್ಟು ಬಿಗಿಗೊಳಿಸಲು ನಿರ್ಧರಿಸಲಾಗಿದೆ. ಈ ಅವಧಿಯಲ್ಲಿ ಎಲ್ಲಾ ಕೈಗಾರಿಕಾ ಚಟುವಟಿಕೆಗಳು, ಗಾಂಧಿ ಬಜಾರ್, ಸಗಟು ದಿನಸಿ ವ್ಯಾಪಾರ, ಎಪಿಎಂಸಿ ಸಂಪೂರ್ಣವಾಗಿ ಸ್ಥಬ್ತವಾಗಲಿದೆ. ಜಿಲ್ಲಾ ಕೈಗಾರಿಕಾ ಸಂಘ, ದಿನಸಿ ಸಗಟು ವ್ಯಾಪಾರಿಗಳ ಸಂಘ, ಗಾಂಧಿ ಬಜಾರ್ ವ್ಯಾಪಾರಿಗಳ ಸಂಘ ಮತ್ತು ಎಪಿಎಂಸಿ ಒಪ್ಪಿಗೆ ನೀಡಿದ್ದು ಸಹಕಾರ ನೀಡಲಿದ್ದಾರೆ ಎಂದರು.

ಈ ಅವಧಿಯಲ್ಲಿ ಇನ್ನುಳಿದಂತೆ ಸರ್ಕಾರದ ಮಾರ್ಗಸೂಚಿ ಪ್ರಕಾರ ಅಗತ್ಯ ವಸ್ತುಗಳ ಮಾರಾಟಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ. ನೆರೆಹೊರೆಯ ಅಗತ್ಯ ವಸ್ತುಗಳ ಅಂಗಡಿಗಳು, ಬ್ಯಾಂಕ್, ಸರ್ಕಾರಿ ಕಚೇರಿ, ಹೊಟೇಲ್ ಪಾರ್ಸೆಲ್ ಸೌಲಭ್ಯ, ಮೆಡಿಕಲ್ ಇತ್ಯಾದಿ ಸೌಲಭ್ಯಗಳಿಗೆ ತೊಂದರೆಯಿರುವುದಿಲ್ಲ. ಸಾರ್ವಜನಿಕರು ಮನೆಯಲ್ಲಿಯೇ ಇದ್ದು, ಕೊರೋನಾ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

ಜಿಲ್ಲೆಯಲ್ಲಿ ವೈದ್ಯಕೀಯ ಸೇವೆಯನ್ನು ಇನ್ನಷ್ಟು ಉತ್ತಮಪಡಿಸಲು ನಿರಂತರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸೊರಬ ಮತ್ತು ಆನವಟ್ಟಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಸೌಲಭ್ಯ ಕಲ್ಪಿಸಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳು ಸಹ ಜಿಲ್ಲಾಡಳಿತದೊಂದಿಗೆ ಸಹಕರಿಸುತ್ತಿವೆ. ಶಿವಮೊಗ್ಗ ನಗರದಲ್ಲಿ ಹೊಟೇಲ್‍ನಲ್ಲಿ ಐಸೋಲೇಶನ್ ಸೌಲಭ್ಯ ಬಯಸುವ ಕೋವಿಡ್ ಪಾಸಿಟಿವ್ ವ್ಯಕ್ತಿಗಳಿಗಾಗಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ನ್ಯಾಯಬೆಲೆ ಅಂಗಡಿಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಮತ್ತು ಪ್ರತಿಯೊಬ್ಬರು ಥಂಬ್ ಇಂಪ್ರೆಷನ್ ನೀಡುವ ಮೊದಲು ಸ್ಯಾನಿಟೈಸ್ ಮಾಡಲು ಕಡ್ಡಾಯವಾಗಿ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.


Bangalore CORONAVIRUS KARNATAKA State

ಬೆಂಗಳೂರು : ಕೊರೋನಾ ಸೋಂಕಿನ ಸುನಾಮಿಯ ಸಂದರ್ಭದಲ್ಲಿ ಅನೇಕ ಸಂದರ್ಭದಲ್ಲಿ ವೈದ್ಯಕೀಯ ತುರ್ತು ಸೇವೆಗೆ ಸಿಗದಂತೆ ಆಗಿದೆ. ಸಣ್ಣಪುಟ್ಟ ಸಮಸ್ಯೆಗಳಿಗೆ ಆಸ್ಪತ್ರೆಗೆ ತೆರಳಿದ್ರೆ.. ಕೊರೋನಾ ಪರೀಕ್ಷೆಯ ನಂತ್ರ ಚಿಕಿತ್ಸೆ ಎನ್ನೋ ಮಾತು ಕೇಳಿ ಬಂದಿದೆ. ಇದರ ನಡುವೆಯೇ ಬೆಂಗಳೂರಿನ ಜನರು ಒಂದು ಕಾಲ್ ಮಾಡಿದ್ರೇ ಸಾಕು.. ಮನೆಗೆ ಬಂದು ಉಚಿತವಾಗಿ ಚಿಕಿತ್ಸೆ ಕೊಡ್ತಾರೆ ಈ ಮೊಬೈಲ್ ಡಾಕ್ಟರ್.!


ಹೌದು.. ರಾಜ್ಯ ರಾಜಧಾನಿಯಲ್ಲಿ ಕೊರೋನಾ ಸೋಂಕಿನ ಆರ್ಭಟದ ನಡುವೆಯೂ ಈ ಜನಸೇವೆ ಮಾಡುತ್ತಿರುವ ವೈದ್ಯರೇ ಡಾ. ಸುನಿಲ್ ಕುಮಾರ್ ಹೆಬ್ಬಿ ಎಂಬ ಡಾಕ್ಟರ್. ಇದು ಕೊರೋನಾ ಕಾಲದ ಇವರ ಸೇವೆಯಲ್ಲ. ಬದಲಾಗಿ, ಕಳೆದ 15 ವರ್ಷಗಳಿಂದ ಉಚಿತ ವೈದ್ಯಕೀಯ ಸೇವೆಯನ್ನು ನೀಡುತ್ತಾ ಬಂದಿದ್ದಾರೆ. ಈ ಮೂಲಕ ಮೊಬೈಲ್ ಡಾಕ್ಟರ್ ಎಂಬುದಾಗಿಯೂ ಗುರ್ತಿಸಿಕೊಂಡಿದ್ದಾರೆ.

ನೀವು ಡಾ.ಸುನಿಲ್ ಕುಮಾರ್ ಹೆಬ್ಬಿ ಅವರಿಂದು ಉಚಿತ ವೈದ್ಯಕೀಯ ಸೇವೆಗಾಗಿ +916363832491 ಸಂಖ್ಯೆಗೆ ಕರೆ,  ಇಲ್ಲವೇ ವಾಟ್ಸ್ ಆಪ್ ಮಾಡುವ ಮೂಲಕವೂ ಸಂಪರ್ಕಿಸಿ, ವೈದ್ಯಕೀಯ ಸೇವೆಯನ್ನು ಪಡೆಯಬಹುದಾಗಿದೆ. ಈ ಸೇವೆ ಮಾತ್ರ ಕಡ್ಡಾಯವಾಗಿ ಕಡು ಬಡವರಿಗಾಗಿ, ರೈತರಿಗಾಗಿ, ಪೊಲೀಸರಿಗಾಗಿ, ಸೈನಿಕರಿಗಾಗಿ, ಚಾಲಕರಿಗಾಗಿ ಆಗಿದೆ. ಇಂತಹ ಎಲ್ಲರಿಗೂ ಉಚಿತವಾಗಿ ಮನೆ ಬಾಗಿಲಿಗೆ ತೆರಳಿ, ಉಚಿತವಾಗಿ ಡಾ.ಸುನಿಲ್ ಕುಮಾರ್ ಹೆಬ್ಬಿ, ವೈದ್ಯಕೀಯ ಸೇವೆ ನೀಡಿ, ಚಿಕಿತ್ಸೆ ನೀಡಿ, ಮಾತ್ರ ಕೊಡುತ್ತಾರೆ.

ಅಂದಹಾಗೇ, ಇವರು ಬಳಸೋ ಕಾರ್, ಒಂದು ಮಿನಿ ಕ್ಲಿನಿಕ್ ಇದ್ದಂತೆ. ತಮ್ಮ ಕಾರಿನಲ್ಲಿ ಸದಾ ಥರ್ಮಾಮೀಟರ್, ಗ್ಲೊಕೋಮೀಟರ್, ಇಸಿಜಿ ಮೆಷಿನ್ ಸೇರಿದಂತೆ ವೈದ್ಯಕೀಯ ಸಲಕರಣೆಗಳನ್ನೇ ಇಟ್ಟು ಕೊಂಡಿದ್ದಾರೆ. ಇದರೊಂದಿಗೆ ಪೋಲ್ಡಿಂಗ್ ಟೇಬಲ್ ಹಾಗೂ ಒಂದು ಚೇರ್ ಇಟ್ಟುಕೊಂಡು, ಕರೆ ಮಾಡುವಂತ ಬಡವರ ಮನೆ ಬಾಗಿಲಿಗೆ ತೆರಳುವ ಇವರು, ಆರೋಗ್ಯ ತಪಾಸಣೆ ಮಾಡಿ, ಮಾತ್ರೆ ನೀಡುತ್ತಾರೆ. ಈ ಮೂಲಕ ಮೊಬೈಲ್ ಕ್ಲಿನಿಕ್ ಡಾಕ್ಟರ್ ಎಂಬುದಾಗಿ ಪ್ರಸಿದ್ದಿಯಾಗಿ, ಉಚಿತ ವೈದ್ಯಕೀಯ ಸೇವೆ ನಡೆಸುತ್ತಿದ್ದಾರೆ. ಇಂತಹ ವೈದ್ಯರಿಗೊಂಡು ನಮ್ಮ ಸಲಾಂ.

ವರದಿ : ವಸಂತ ಬಿ ಈಶ್ವರಗೆರೆ


CORONAVIRUS KARNATAKA Shimoga State

ಶಿವಮೊಗ್ಗ : ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಈಗಾಗಲೇ ಚಾಮರಾಜನಗರ ಜಿಲ್ಲೆಯಲ್ಲಿ ನಾಲ್ಕು ದಿನ ಸಂಪೂರ್ಣ ಲಾಕ್ ಡೌನ್ ಅನ್ನು ಸಚಿವ ಸುರೇಶ್ ಕುಮಾರ್ ನೇತೃವದಲ್ಲಿ ನಡೆದ ಟಾಸ್ಕ್ ಫೋರ್ಸ್ ಸಭೆಯಲ್ಲಿ ನಿನ್ನೆ ಕೈಗೊಳ್ಳಲಾಗಿತ್ತು. ಈ ಬಳಿಕ ಶಿವಮೊಗ್ಗ ಜಿಲ್ಲಾಡಳಿತ ಕೂಡ, ನಗರದಲ್ಲಿ ಹೆಚ್ಚುತ್ತಿರುವಂತ ಕೊರೋನಾ ನಿಯಂತ್ರಣಕ್ಕೆ, ಇದೀಗ ನಾಲ್ಕು ದಿನ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಲಾಕ್ ಡೌನ್ ನಿರ್ಧಾರ ಕೈಗೊಂಡಿದೆ.

ಈ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆಎಸ್ ಈಶ್ವರಪ್ಪ ಮಾಹಿತಿ ನೀಡಿದ್ದು, ಶಿವಮೊಗ್ಗ ನಗರದಲ್ಲಿ ದಿನೇ ದಿನೇ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಾಲ್ಕು ದಿನ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸುವಂತ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.

ಇನ್ನೂ ಮುಂದುವರೆದು ಮಾತನಾಡಿದಂತ ಅವರು, ಗುರುವಾರದಿಂದ ಭಾನುವಾರದವರೆಗೆ ನಾಲ್ಕು ದಿನಗಳ ಕಾಲ ಸಂಪೂರ್ಣವಾಗಿ ಲಾಕ್ ಡೌನ್ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಾರಿಯಲ್ಲಿ ಇರಲಿದೆ. ಉಳಿದ ಮೂರು ದಿನ ಮಾತ್ರವೇ ಅಗತ್ಯ ವಸ್ತು ಖರೀದಿಗೆ ಲಾಕ್ ಡೌನ್ ನಿಯಮದಲ್ಲಿ ಸಡಿಲಿಕೆ ಇರಲಿದೆ. ಸಂಪೂರ್ಣ ಲಾಕ್ ಡೌನ್ ಸಂದರ್ಭದಲ್ಲಿ ಯಾವುದೇ ಅಂಗಡಿ ಮುಂಗಡಟ್ಟು ತೆರೆದಿರೋದಿಲ್ಲ. ಮೆಡಿಕಲ್ ಶಾಪ್ ಮಾತ್ರವೇ ತೆರೆದಿರಲಿದೆ ಎಂದರು.

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಾರಿಗೊಳಿಸಿರುವಂತ ನಾಲ್ಕು ದಿನ ಸಂಪೂರ್ಣ ಲಾಕ್ ಡೌನ್ ಸಂದರ್ಭದಲ್ಲಿ ಕೈಗಾರಿಕೆಗಳು, ಹೋಲ್ ಸೆಲ್ ದಿನಸಿ ಅಂಗಡಿಗಳು, ಗಾಂಧಿ ಬಜಾರ್, ಎಂಪಿಎಂಸಿ ಮಾರುಕಟ್ಟೆಗಳು ಸಂಪೂರ್ಣ ಬಂದ್ ಆಗಿರಲಿವೆ.


CORONAVIRUS KARNATAKA State

ಬೆಂಗಳೂರು : ಕೊರೋನಾ ಸೋಂಕಿನ ನಿಯಂತ್ರಣ ಸಂಬಂಧ ರಾಜ್ಯದಲ್ಲಿ ಮೇ.10 ರಿಂದ 24ರವರೆಗೆ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಕೂಲಿ ಕಾರ್ಮಿಕರು, ವಲಸಿಗರು ಮತ್ತು ಇತರೇ ದುರ್ಬಲ ವರ್ಗದವರಿಗೆ ಅನಾನುಕೂಲವಾಗದಂತೆ ರಾಜ್ಯದ ನಗರ ಸ್ಥಳೀಯ ಸಂಸ್ಧೆಗಳಲ್ಲಿ ಚಾಲ್ತಿಯಲ್ಲಿರುವ ಇಂದಿರಾ ಕ್ಯಾಂಟೀನ್ ಗಳಲ್ಲಿ ಉಚಿತವಾಗಿ ಬೆಳಗಿನ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ಒದಗಿಸುವಂತೆ ಪೌರಾಡಳಿತ ನಿರ್ದೇಶನಾಲಯ ಆದೇಶಿಸಿದೆ.

ಈ ಕುರಿತಂತೆ ರಾಜ್ಯ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಪತ್ರ ಬರೆದಿದ್ದು, ಸರ್ಕಾರವು ಕೋವಿಡ್-19 ವೈರಾಣುವಿನ ಹರಡುವಿಕೆಯನ್ನು ತಡೆಗಟ್ಟಲು ಹಾಗೂ ಪ್ರಸರಣ ಸರಪಳಿಯನ್ನು ತುಂಡರಿಸಲು ರಾಜ್ಯದಲ್ಲಿ ದಿನಾಂಕ 10-05-2021 ರಿಂದ 24-05-2021ರವರೆಗೆ ಕೋವಿಡ್ 19 ನಿಯಂತ್ರಣಾ ಕ್ರಮಗಳನ್ನು ಜಾರಿಗೊಳಿಸಿ ಆದೇಶಿಸಿರುತ್ತದೆ.

ಈ ಸಂದರ್ಭದಲ್ಲಿ ಕೂಲಿ ಕಾರ್ಮಿಕರು, ವಲಸಿಗರು ಮತ್ತು ಇತರೇ ದುರ್ಬಲ ವರ್ಗದವರಿಗೆ ಅನಾನುಕೂಲವಾಗದಂತೆ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಚಾಲ್ತಿಯಲ್ಲಿರುವ ಇಂದಿರಾ ಕ್ಯಾಂಟೀನ್ ಗಳಲ್ಲಿ ಉಚಿತವಾಗಿ ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟಗಳನ್ನು ಒದಗಿಸುವಂತೆ ನಿರ್ದೇಶಿಸಲಾಗಿರುತ್ತದೆ.

ಆದ್ದರಿಂದ ದಿನಾಂಕ 10-05-2021 ರಿಂದ 24-05-2021ರವರೆಗೆ ನಗರ ಸ್ಥಳೀಯ ಸಂಸ್ಥೆಗಳಲ್ಲಿರುವ(ಬಿಬಿಎಂಪಿ ಹೊರತುಪಡಿಸಿ) ಇಂದಿರಾ ಕ್ಯಾಟೀನ್ ಗಳಲ್ಲಿ ಪ್ರಚಲಿತ ಮಾರ್ಗಸೂಚಿಗಳನ್ವಯ ಉಚಿತವಾಗಿ ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟಗಳನ್ನು ಒದಗಿಸಲು ಅಗತ್ಯ ಕ್ರಮವಹಿಸಲು ನಿರ್ದೇಶಿಸಿದೆ. ಈ ನಿಟ್ಟಿನಲ್ಲಿ ಆಹಾರ ಸೇವಿಸುವ ಜನರ ಸಂಖ್ಯೆ(Footfall) ವಿವರಗಳನ್ನು ಕಡ್ಡಾಯವಾಗಿ ನಿರ್ವಹಿಸುವುದು ಹಾಗೂ ಯೋಜನಾ ನಿರ್ದೇಶಕರು ಮತ್ತು ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಪರಿವೀಕ್ಷಣೆ ಮಾಡತಕ್ಕದ್ದು ಎಂದಿದೆ.

ವರದಿ : ವಸಂತ ಬಿ ಈಶ್ವರಗೆರೆ


CORONAVIRUS KARNATAKA State

ಬೆಂಗಳೂರು : ಕೊರೋನಾ ಸೋಂಕಿನ ನಿಯಂತ್ರಣ ಸಂಬಂಧ ರಾಜ್ಯದಲ್ಲಿ ಮೇ.10 ರಿಂದ 24ರವರೆಗೆ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಕೂಲಿ ಕಾರ್ಮಿಕರು, ವಲಸಿಗರು ಮತ್ತು ಇತರೇ ದುರ್ಬಲ ವರ್ಗದವರಿಗೆ ಅನಾನುಕೂಲವಾಗದಂತೆ ರಾಜ್ಯದ ನಗರ ಸ್ಥಳೀಯ ಸಂಸ್ಧೆಗಳಲ್ಲಿ ಚಾಲ್ತಿಯಲ್ಲಿರುವ ಇಂದಿರಾ ಕ್ಯಾಂಟೀನ್ ಗಳಲ್ಲಿ ಉಚಿತವಾಗಿ ಬೆಳಗಿನ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ಒದಗಿಸುವಂತೆ ಪೌರಾಡಳಿತ ನಿರ್ದೇಶನಾಲಯ ಆದೇಶಿಸಿದೆ.

ಈ ಕುರಿತಂತೆ ರಾಜ್ಯ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಪತ್ರ ಬರೆದಿದ್ದು, ಸರ್ಕಾರವು ಕೋವಿಡ್-19 ವೈರಾಣುವಿನ ಹರಡುವಿಕೆಯನ್ನು ತಡೆಗಟ್ಟಲು ಹಾಗೂ ಪ್ರಸರಣ ಸರಪಳಿಯನ್ನು ತುಂಡರಿಸಲು ರಾಜ್ಯದಲ್ಲಿ ದಿನಾಂಕ 10-05-2021 ರಿಂದ 24-05-2021ರವರೆಗೆ ಕೋವಿಡ್ 19 ನಿಯಂತ್ರಣಾ ಕ್ರಮಗಳನ್ನು ಜಾರಿಗೊಳಿಸಿ ಆದೇಶಿಸಿರುತ್ತದೆ.

ಈ ಸಂದರ್ಭದಲ್ಲಿ ಕೂಲಿ ಕಾರ್ಮಿಕರು, ವಲಸಿಗರು ಮತ್ತು ಇತರೇ ದುರ್ಬಲ ವರ್ಗದವರಿಗೆ ಅನಾನುಕೂಲವಾಗದಂತೆ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಚಾಲ್ತಿಯಲ್ಲಿರುವ ಇಂದಿರಾ ಕ್ಯಾಂಟೀನ್ ಗಳಲ್ಲಿ ಉಚಿತವಾಗಿ ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟಗಳನ್ನು ಒದಗಿಸುವಂತೆ ನಿರ್ದೇಶಿಸಲಾಗಿರುತ್ತದೆ.

ಆದ್ದರಿಂದ ದಿನಾಂಕ 10-05-2021 ರಿಂದ 24-05-2021ರವರೆಗೆ ನಗರ ಸ್ಥಳೀಯ ಸಂಸ್ಥೆಗಳಲ್ಲಿರುವ(ಬಿಬಿಎಂಪಿ ಹೊರತುಪಡಿಸಿ) ಇಂದಿರಾ ಕ್ಯಾಟೀನ್ ಗಳಲ್ಲಿ ಪ್ರಚಲಿತ ಮಾರ್ಗಸೂಚಿಗಳನ್ವಯ ಉಚಿತವಾಗಿ ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟಗಳನ್ನು ಒದಗಿಸಲು ಅಗತ್ಯ ಕ್ರಮವಹಿಸಲು ನಿರ್ದೇಶಿಸಿದೆ. ಈ ನಿಟ್ಟಿನಲ್ಲಿ ಆಹಾರ ಸೇವಿಸುವ ಜನರ ಸಂಖ್ಯೆ(Footfall) ವಿವರಗಳನ್ನು ಕಡ್ಡಾಯವಾಗಿ ನಿರ್ವಹಿಸುವುದು ಹಾಗೂ ಯೋಜನಾ ನಿರ್ದೇಶಕರು ಮತ್ತು ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಪರಿವೀಕ್ಷಣೆ ಮಾಡತಕ್ಕದ್ದು ಎಂದಿದೆ.

ವರದಿ : ವಸಂತ ಬಿ ಈಶ್ವರಗೆರೆ


Bangalore CORONAVIRUS KARNATAKA State

ಬೆಂಗಳೂರು : ಮೇ.1ರಿಂದ 18 ವರ್ಷದಿಂದ 44 ವರ್ಷದವರೆಗೆ ಕೊರೋನಾ ಲಸಿಕೆ ನೀಡಲಾಗುತ್ತದೆ ಎಂಬುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು. ಆದ್ರೇ., ಲಸಿಕೆ ಅಭಾವದಿಂದಾಗಿ ಇದುವರೆಗೆ ಶುರು ಆಗಿಲ್ಲ. ಇದರ ಮಧ್ಯೆ ರಾಜ್ಯದ ಸಚಿವರು ಮಾತ್ರ ಸ್ವಜನ ಪಕ್ಷಪಾತ, ತಮ್ಮ ಕ್ಷೇತ್ರಕ್ಕೆ ಹೆಚ್ಚು ಲಸಿಕೆ ಪಡೆದಿರೋದು, ವರದಿಯಿಂದ ಭಹಿರಂಗವಾಗಿದೆ. ಅದರಲ್ಲೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರೇ ಚಿಕ್ಕಬಳ್ಳಾಪುರ ಜಿಲ್ಲೆಗೆ ಇತರೆ ಜಿಲ್ಲೆಗಳಿಗಿಂತ ಹೆಚ್ಚು ಲಸಿಕೆ ಪಡೆದಿರೋದಾಗಿ ತಿಳಿದು ಬಂದಿದೆ. ಹೀಗಾಗಿ ಸುಧಾಕರ್ ಆರೋಗ್ಯ ಸಚಿವರಾಗುವುದಕ್ಕೆ ನಾಲಾಯಕ್ಕು, ಅವರನ್ನು ವಜಾಗೊಳಿಸಿ ಎಂಬುದಾಗಿ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.

ಈ ಕುರಿತಂತೆ ಟ್ವಿಟ್ ಮಾಡಿರುವಂತ ಅವರು, ಸುಧಾಕರ್ ಲಸಿಕೆ ವಿತರಣೆಯಲ್ಲೂ ರಾಜಕೀಯ ಇದು ಅತ್ಯಂತ ಕೀಳಮಟ್ಟದ ನಡೆ. ಒಂದು ಕಡೆ ಲಸಿಕೆ ಸರಬರಾಜಿನಲ್ಲಿ ನಿತ್ಯ ಸುಳ್ಳು ಹೇಳಿಕೆ ಇನ್ನೊಂದು ಕಡೆ ಅವರ ಕ್ಷೇತ್ರಕ್ಕೆ ಹೆಚ್ಚು ಕೊಡುಸುವ ಮುಖಾಂತರ ಅಪರಾಧ ಎಸಗಿದ್ದಾರೆ ಅರೋಗ್ಯ ಸಚಿವರಾಗುವುದಕ್ಕೆ ನಾಲಾಯಕ್ಕು. ಅವರನ್ನು ವಜಾಗಳಿಸಬೇಕು ಎಂಬುದಾಗಿ ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿಗಳೆ,’ಅಕ್ಕನ ಮಗಳು ಬಡವಾಗಬಾರದು, ಅಕ್ಕಿಯೂ ಖಾಲಿಯಾಗಬಾರದು’ ಎಂದರೆ ಹೇಗೆ? ಮೊದಲು ಬಡ ಜನರಿಗೆ ಸಹಾಯಧನ ಹಾಗೂ ಆಹಾರದ ಕಿಟ್ ಕೊಡುವ ವ್ಯವಸ್ಥೆ ಮಾಡಿ. ನಂತರ ನಿಮ್ಮ ಕಠಿಣ ಲಾಕ್‌ಡೌನ್ ಜಾರಿ ಮಾಡಿ. ಬಡವ ಒಪ್ಪೊತ್ತಿನ ಊಟವನ್ನು ದುಡಿದು ತಿನ್ನಬೇಕು. ದುಡಿಯುವವನ ಕೈ ಕಟ್ಟಿ ಹಾಕಿದರೆ, ಅವನೇನು ಮನೆಯಲ್ಲಿ ಮಣ್ಣು ತಿನ್ನಬೇಕೆ? ಎಂದು ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.

ಇನ್ನೂ ಮತ್ತೊಂದು ಟ್ವಿಟ್ ನಲ್ಲಿ ಕೊರೊನಾ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರದ ನಿಷ್ಕ್ರಿಯತೆ ಕಣ್ಣಿಗೆ ರಾಚುತ್ತಿದೆ. ದೇಶದಲ್ಲೇ ಅತಿ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ಕಳಂಕ ರಾಜ್ಯದ ಹೆಗಲೇರಿದೆ. ಈ ಸರ್ಕಾರ ತಜ್ಞರ ಎಚ್ಚರಿಕೆಯನ್ನು ನಿರ್ಲಕ್ಷ್ಯ ಮಾಡಿದ ಪರಿಣಾಮವಿದು. ರಾಜ್ಯ ಸರ್ಕಾರ ಸತ್ತು ಹೋಗಿದೆ. ಇನ್ನುಳಿದಿರುವುದು ಈ ಸರ್ಕಾರದ ಶವ ಸಂಸ್ಕಾರವೊಂದೆ ಎಂದಿದ್ದಾರೆ.

ಜನ ಕೊರೊನಾ ಬಂದಾದರೂ ಸಾಯಲಿ., ಹೊಟ್ಟೆಗೆ ಅನ್ನವಿಲ್ಲದೆ ಸಾಯಲಿ. ಆದರೆ ಜನರನ್ನು ದೋಚುವುದೇ ಕೇಂದ್ರ ಸರ್ಕಾರದ ದುಷ್ಟ ಉದ್ದೇಶವಾಗಿದೆ. ದೇಶ ಕೊರೊನಾ ಅಟ್ಟಹಾಸದಲ್ಲಿದೆ. ಈ ಸಂಕಷ್ಟ ಕಾಲದಲ್ಲಿ ತೈಲ ಬೆಲೆ ಏರಿಸಿದ ಕೇಂದ್ರ ಸರ್ಕಾರಕ್ಕೆ ಜನರ ಕಷ್ಟ ಅರ್ಥವಾಗುತ್ತಿಲ್ಲವೆ? ಸಂತೆಯಲ್ಲಿ ಸುಂಕದವನ ಮುಂದೆ ಗೋಳು ಹೇಳಿಕೊಂಡಂತಾಗಿದೆ ದೇಶದ ಜನರ ಸ್ಥಿತಿ ಎಂಬುದಾಗಿ ಕಿಡಿಕಾರಿದ್ದಾರೆ.


Bangalore CORONAVIRUS KARNATAKA State

ಬೆಂಗಳೂರು : ಕೃಷಿ ಸಚಿವ ಬಿ.ಸಿ.ಪಾಟೀಲರಿಂದು ಬೆಂಗಳೂರು ಜಿಕೆವಿಕೆಗೆ ಭೇಟಿ ನೀಡಿ,ಅಲ್ಲಿನ ವಿದ್ಯಾರ್ಥಿನಿ ನಿಲಯದಲ್ಲಿನ ಕೋವಿಡ್ ಆರೈಕೆ ಕೇಂದ್ರವನ್ನು ಪರಿಶೀಲನೆ ನಡೆಸಿದರು.

ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಪಸರಿಸುತ್ತಿದ್ದು,ಇದನ್ನು ನಿಯಂತ್ರಿಸಲು ಸರ್ಕಾರ ತನ್ನೆಲ್ಲ ಪ್ರಯತ್ನಗಳನ್ನು ನಡೆಸುತ್ತಿದೆ. ಬಿಬಿಎಂಪಿಯ ಕೋರಿಕೆ ಮೇರೆಗೆ ಯಲಹಂಕ ವಲಯದಿಂದ ಕೋವಿಡ್ -19 ಆರೈಕೆ ಕೇಂದ್ರವನ್ನು ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ನಿಲಯದ ಕಟ್ಟಡದಲ್ಲಿ ಸ್ಥಾಪಿಸಲಾಗಿದ್ದು, ಕಟ್ಟಡವನ್ನು ಕೃಷಿ ಸಚಿವರ ಸೂಚನೆ ಮೇರೆಗೆ ಪಾಲಿಕೆಯ ಯಲಹಂಕ ವಲಯಕ್ಕೆ ಹಸ್ತಾಂತರಿಸಲಾಗಿದೆ. 380 ಹಾಸಿಗೆ ಸಾಮರ್ಥ್ಯವುಳ್ಳ ಕೋವಿಡ್ ಆರೈಕೆ ಕೇಂದ್ರ ಇದಾಗಿದ್ದು, ಇನ್ನು 30 ಹಾಸಿಗೆ ಸಾಮರ್ಥ್ಯವುಳ್ಳ “ಇಂಟರ್‌ನ್ಯಾಷನಲ್ ಸ್ಟಾಫ್ ಕ್ವಾರ್ಟ್ರ್ಸಸ್‌” ಅನ್ನು ವೈದ್ಯಕೀಯ ಸಿಬ್ಬಂದಿಗಳಿಗಾಗಿ ಮೀಸಲಿಡಲಾಗಿದೆ.

ಕಳೆದ ಬಾರಿಯೂ ಸಹ ಬೆಂಗಳೂರು ಜಿಕೆವಿಕೆಯಲ್ಲಿ ಕೋವಿಡ್ ಆರೈಕೆಗಾಗಿ ವಿದ್ಯಾರ್ಥಿನಿ ನಿಲಯವನ್ನು ನೀಡಲಾಗಿತ್ತು. ಕೋವಿಡ್ ಕೇರ್ ಸೆಂಟರ್‌ಗೆ ಭೇಟಿ ನೀಡಿದ ಬಿ.ಸಿ.ಪಾಟೀಲ್, ಅಲ್ಲಿನ ಸೌಲಭ್ಯಗಳು ಹಾಗೂ ರೋಗಿಗಳಿಗೆ ನೀಡಲಾಗುತ್ತಿರುವ ಚಿಕಿತ್ಸೆ‌ ಪರಿಶೀಲಿಸಿದರು.

ಕೋವಿಡ್ ಅನ್ನು ನಿಯಂತ್ರಿಸಲು ಸಾಮಾಜಿಕ ಕಳಕಳಿಯ ಜೊತೆಗೆ ವೈಯಕ್ತಿಕ ಸ್ವಚ್ಛತೆ ಸಾಮಾಜಿಕ ಅಂತರ ಹಾಗೂ ಜಾಗೃತಿ ಮುಖ್ಯವಾಗಿದ್ದು, ಕೋವಿಡ್ ಬಂದಾಕ್ಷಣ ಆತಂಕಕ್ಕೆ ಒಳಗಾಗದೇ ಮನೋಸ್ಥೈರ್ಯ ತಂದುಕೊಳ್ಳಬೇಕು. ಇತ್ತೀಚಿಗೆ ಆತಂಕದಿಂದಲೇ ಹೆಚ್ಚಿನ ಅನಾಹುತಗಳು ಸಂಭವಿಸುತ್ತಿವೆ. ಹೀಗಾಗಿ ಯಾರೂ ಆತಂಕಪಡಬಾರದು. ತಮ್ಮತಮ್ಮ ವ್ಯಾಪ್ತಿಯಲ್ಲಿನ ವಾರ್ ರೂಮ್ ಕಾಲ್ ಸೆಂಟರ್ ಅನ್ನು ಸಂಪರ್ಕಿಸಿ ಮಾಹಿತಿ ಪಡೆದು ಸರ್ಕಾರದ ಸೂಚನೆಯನುಸಾರ ಪಾಲಿಸಿ‌‌ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಪರಿಶೀಲನೆ ವೇಳೆ ಬೆಂಗಳೂರು ಜಿಕೆವಿಕೆ ಉಪಕುಲಪತಿ ರಾಜೇಂದ್ರಪ್ರಸಾದ್, ಬಿಬಿಎಂಪಿ ಜಂಟಿ ಆಯುಕ್ತ ಡಾ.ಅಶೋಕ್, ಜಿಕೆವಿಕೆ ಆಡಳಿತ ಮಂಡಳಿ ಸದಸ್ಯರಾದ ದಯಾನಂದ್,  ಸುರೇಶ್, ರಾಮಾಂಜನೇಯಗೌಡ, ಶ್ರೀರಾಮ್ ಸೇರಿದಂತೆ ಮತ್ತಿತ್ತರು ಇದ್ದರು.


CORONAVIRUS India

ನವದೆಹಲಿ : ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಹೊಸದಾಗಿ 3,29,942 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ,  ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಹೊಸದಾಗಿ 3,29,942 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 2,26,62,575 ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಕೊರೊನಾ ಸೋಂಕಿಗೆ 3,876 ಮಂದಿ ಸಾವನ್ನಪ್ಪಿದ್ದು, ಕೊರೊನಾ ಸೋಂಕಿಗೆ ಮೃತಪಟ್ಟವರ ಸಂಖ್ಯೆ 2,49,992 ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 3,56,082 ಮಂದಿ ಕೊರೊನಾ ಸೊಂಕಿನಿಂದ ಗುಣಮುಖರಾಗಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಪೈಕಿ 1,90,27,304 ಸೋಂಕಿತರು ಗುಣಮುಖರಾಗಿ ಅಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ದೇಶದಲ್ಲಿ 37,15,221 ಸಕ್ರಿಯ ಪ್ರಕರಣಗಳಿವೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಒಟ್ಟು ಪ್ರಕರಣಗಳು: 2,26,62,575

ಒಟ್ಟು ಡಿಸ್ಚಾರ್ಜ್ ಗಳು: 1,90,27,304

ಸಾವಿನ ಸಂಖ್ಯೆ: 2,49,992

ಸಕ್ರಿಯ ಪ್ರಕರಣಗಳು: 37,15,221

ಒಟ್ಟು ಲಸಿಕೆ: 17,27,10,066


CORONAVIRUS KARNATAKA State

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಲಸಿಕೆ ಪಡೆಯುವ ನಿರೀಕ್ಷೆಯಲ್ಲಿದ್ದ 18 ವರ್ಷ ಮೇಲ್ಪಟ್ಟವರಿಗೆ ಬಿಗ್ ಶಾಕ್ ಎದುರಾಗಿದ್ದು,  ರಾಜ್ಯದಲ್ಲಿ ಮೇ. 10 ರಿಂದ 24 ರವರೆಗೆ ಕಠಿಣ ಲಾಕ್ ಡೌನ್ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಿಗೆ ಲಸಿಕೆ ಪಡೆಯಲು ಬರಲು ಸಮಸ್ಯೆ ಅಗುತ್ತದೆ ಹೀಗಾಗಿ 14 ದಿನ ಮುಂದೂಡುವ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್ ಅವರು,  ಬೆಂಗಳುರು ಸೇರಿದಂತೆ ರಾಜ್ಯದಲ್ಲಿ ಲಸಿಕೆ ಕೊರತೆ ಇಲ್ಲ. ರಾಜ್ಯಕ್ಕೆ 5 ಲಕ್ಷ ಡೋಸ್ ಬಂದಿದೆ. ಯುವಕರಿಗೆ ನೀಡಲು ಯಾವುದೇ ಸಮಸ್ಯೆ ಇಲ್ಲ,ಇಂದಿನಿಂದ ಹಲವು ನಿರ್ಬಂಧಗಳಿವೆ ಹೀಗಾಗಿ ಸಮಸ್ಯೆ ಎದುರಾಗಿದ್ದು, ಆಸ್ಪತ್ರೆಗಳಿಗೆ ಲಸಿಕೆ ಪಡೆಯಲು ಬರಲು ಸಮಸ್ಯೆ ಆಗುತ್ತೆ. ಹೀಗಾಗಿ 14 ದಿನ ಮುಂದೂಡುವ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಜೊತೆ ಚರ್ಚೆ ನಡೆಸಲಾಗಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮೇ. 10 ರ ಇಂದಿನಿಂದ ಮೇ. 24 ರವರೆಗೆ ಬೆಂಗಳೂರು ಸೇರಿ ರಾಜ್ಯಾದ್ಯಂತ ಕಠಿಣ ಲಾಕ್ ಡೌನ್ ಜಾರಿಗೊಳಿಸಲಾಗಿದೆ.


Bangalore CORONAVIRUS KARNATAKA State

ಬೆಂಗಳೂರು : ಲಾಕ್‌ಡೌನ್ ಮಾರ್ಗಸೂಚಿಯಲ್ಲಿ ಕೆಲವು ಬದಲಾವಣೆ ಮಾಡಲಾಗಿದ್ದು, ದಿನಸಿ, ತರಕಾರಿ ಸೇರಿದಂತೆ ಅಗತ್ಯವಸ್ತು ಖರೀದಿಸಲು ವಾಹನ ಬಳಸಬಹುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿ ಸೋಮವಾರ ಸಂಜೆ ಈ ಕುರಿತು ಟ್ವೀಟ್ ಮಾಡಿದೆ.

ಈ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿ ಟ್ವೀಟ್ ಮಾಡಿದ್ದು, , ತರಕಾರಿ, ದಿನಸಿ ತರಲು  ವಾಹನ ಬಳಕೆ ಮಾಡಲು ಅನುಮತಿ ನೀಡಲಾಗಿದೆ,ನಿಮ್ಮ ಊರಿನ ಸಮೀಪ ಸುತ್ತಮುತ್ತಲೂ ತರಕಾರಿ, ದಿನಸಿ ತರಲು ವಾಹನ ಬಳಸಬಹುದು ಎಂದು ಟ್ವೀಟ್‌ನಲ್ಲಿ ಸ್ಪಷ್ಟಪಡಿಸಲಾಗಿದೆ.  ಅಗತ್ಯವಸ್ತು ಖರೀದಿಸಲು ವಾಹನ ಬಳಸಬಹುದು, ಅನಗತ್ಯ ತಿರುಗಾಟಕ್ಕೆ ಅಲ್ಲ ಎಂದು ಡಿಜಿಪಿ ಟ್ವೀಟ್ ಮಾಡಿದೆ.

ರಾಜ್ಯ ಸರ್ಕಾರ 14 ದಿನ ಲಾಕ್ ಡೌನ್  ವಿಧಿಸಿ ಹೊರಡಿಸಿದ ಮಾರ್ಗಸೂಚಿಯಲ್ಲಿ  ತರಕಾರಿ, ದಿನಸಿ ತರಲು ನಡೆದುಕೊಂಡೇ ಹೋಗಬೇಕು ಎಂದು ಷರತ್ತು ಹಾಕಿತ್ತು. ಈ ಹಿನ್ನೆಲೆ ಸೋಮವಾರ ಹಲವು ವಾಹನಗಳನ್ನು ವಶಕ್ಕೆ ಪಡೆಯಲಾಗಿತ್ತು. ಇದಕ್ಕೆ ಸಾರ್ವಜನಿಕ ವಲಯದಿಂದ ಭಾರೀ ಆಕ್ರೋಶವೂ ವ್ಯಕ್ತವಾಗಿತ್ತು. ಈ  ಹಿನ್ನೆಲೆ ಪೊಲೀಸ್ ಮಹಾನಿರ್ದೇಶಕರು ಈ ಕುರಿತು ಟ್ವೀಟ್ ಮಾಡಿದ್ದಾರೆ.

 


Bangalore CORONAVIRUS KARNATAKA State

ಬೆಂಗಳೂರು : ಬೆಂಗಳೂರು ನಗರದ 15 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 2400 ಆಕ್ಸಿಜನ್ ಸೌಲಭ್ಯವುಳ್ಳ ಬೆಡ್’ಗಳನ್ನು ಸಿದ್ಧಪಡಿಸಲಾಗಿದ್ದು, ಉಳಿದ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಇನ್ನೂ 700 ಬೆಡ್’ಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪೂರ್ವ ವಲಯ ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕೋವಿಡ್ ಉಸ್ತುವಾರಿ ಹೊತ್ತಿರುವ ವಸತಿ ಸಚಿವರಾದ ವಿ.ಸೋಮಣ್ಣ ಹೇಳಿದರು. ಇದರಿಂದಾಗಿ ಆಯಾ ಕ್ಷೇತ್ರಗಳಲ್ಲಿ ಬರುವ ಸಮಸ್ಯೆಗಳನ್ನು ಆಯಾ ಕ್ಷೇತ್ರಗಳಲ್ಲೇ ಬಗೆಹರಿಸಲು ಸಾಧ್ಯವಾಗುತ್ತದೆ ಎಂದೂ ಸಚಿವರು ತಿಳಿಸಿದರು.

ಅವರು ಇಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿ ಸಭಾಂಗಣದಲ್ಲಿ ಪೂರ್ವ ವಲಯ ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ನಂತರ ಈ ವಿಷಯವನ್ನು ಪ್ರಕಟಿಸಿದರು.

ರೋಗಿಯಲ್ಲಿ ರೋಗದ ತೀವ್ರತೆಯನ್ನು ಆಧರಿಸಿ ಆಸ್ಪತ್ರೆಗಳಲ್ಲಿ ಆದ್ಯತೆಯ ಮೇರೆಗೆ ಬೆಡ್ ನೀಡುವ ಪದ್ಧತಿಯನ್ನು ಈಗ ಅಳವಡಿಸಿಕೊಳ್ಳಲಾಗಿದೆ, ಇದರಿಂದ ತುರ್ತು ಪರಿಸ್ಥಿತಿಯಲ್ಲಿನ ರೋಗಿಗಳಿಗೆ ಬೆಡ್ ಸಿಗುವುದು ಖಾತ್ರಿಯಾಗಿದ್ದು, ರೋಗಿಗಳ ಪ್ರಾಣ ಉಳಿಸುವಲ್ಲಿ ಆದ್ಯ ಗಮನ ನೀಡಲಾಗಿದೆ ಎಂದೂ ಸಚಿವ ಶ್ರೀ ವಿ.ಸೋಮಣ್ಣ ಹೇಳಿದರು.

ನಗರದ ವಿವಿದೆಡೆ ಆರಂಭಿಸಲಾಗಿರುವ ಪ್ರತಿ ಕೋವಿಡ್ ಕೇರ್ ಸೆಂಟರ್’ಗಳಲ್ಲಿ 30ರಿಂದ 50ರವರೆಗೂ ಆಕ್ಸಿಜನ್ ಸೌಲಭ್ಯವನ್ನು ಹೊಂದಿದ ಬೆಡ್’ಗಳ ಸೌಲಭ್ಯ ನೀಡಲಾಗಿದೆ, 5ರಿಂದ 8 ವೆಂಟಿಲೇಟರ್’ಗಳನ್ನು ಒದಗಿಸಲಾಗಿದೆ ಎಂದು ಹೇಳಿದ ಸಚಿವರು ಸಾರ್ವಜನಿಕರು ಭಯಭೀತರಾಗದೆ ಪರಿಸ್ಥಿತಿಯನ್ನು ಎದುರಿಸಬೇಕೆಂದು ಸಲಹೆ ಮಾಡಿದರು. ಕೋವಿಡ್ ಸೋಂಕನ್ನು ಎದುರಿಸುವ ಸಲುವಾಗಿಯೇ ಸರ್ಕಾರ ಬಿಗಿ ಲಾಕ್’ಡೌನ್ ಜಾರಿಗೊಳಿಸಿದೆ, ಜನತೆ ಸಹಕರಿಸುವ ಮೂಲಕ ಈ ಕೋವಿಡ್ ಮಹಾಮಾರಿಯನ್ನು ದೂರಮಾಡಬೇಕೆಂದು ಸಚಿವರು ಮನವಿ ಮಾಡಿದರು.

ಸಭೆಯಲ್ಲಿ ರೆಮ್‌ಡಿಸಿವರ್ ಹಾಗೂ ಇತರೆ ಕೋವಿಡ್ ಸಂಬಂಧಿ ಪ್ರಮುಖ ಔಷಧಿಗಳ ನಿರ್ವಹಣೆ, ಆಕ್ಸಿಜನ್ ಸರಬರಾಜು ಮೇಲ್ವಿಚಾರಣೆ, ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ಬೆಡ್‌ ವ್ಯವಸ್ಥೆ ಹಾಗೂ ಬೆಡ್‌ ಸಮಸ್ಯೆಗಳ ನಿವಾರಣೆ ಹಾಗೂ ವಾರ್ ರೂಮ್, ಕಾಲ್ ಸೆಂಟರ್‌ಗಳ ನಿರ್ವಹಣೆ ಸಂಬಂಧದಲ್ಲಿ ಉಪಯುಕ್ತ ಚರ್ಚೆ ನಡೆಯಿತು.

ಸಭೆಯಲ್ಲಿ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಪಾಲ್ಗೊಂಡು ಬೆಂಗಳೂರು ಪೂರ್ವ ವಲಯದಲ್ಲಿನ ಕೋವಿಡ್ ಪರಿಹಾರೋಪಾಯಗಳ ಬಗ್ಗೆ ಸಲಹೆ ಸೂಚನೆ ನೀಡಿದರು. ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಲೋಕಸಭಾ ಸದಸ್ಯರಾದ ಪಿ.ಸಿ.ಮೋಹನ್, ಶಾಸಕರಾದ ರಿಜ್ವಾನ್ ಅರ್ಷದ್, ಭೈರತಿ ಸುರೇಶ್, ಎನ್.ಎ.ಹ್ಯಾರೀಸ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಡಳಿತಾಧಿಕಾರಿ ಶ್ರೀ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ಗೌರವ್ ಗುಪ್ತ ಹಾಗೂ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.


Bangalore CORONAVIRUS KARNATAKA State

ಬೆಂಗಳೂರು : ರಾಜ್ಯದಲ್ಲಿ ಹಿಂದಿನ ಎಲ್ಲಾ ದಾಖಲೆ ಉಡೀಸ್ ಮಾಡುವಂತೆ ಮತ್ತೆ ಕಿಲ್ಲರ್ ಕೊರೋನಾ ಆರ್ಭಟಿಸಿದೆ. ಇಂದು ಹೊಸದಾಗಿ 39,305 ಜನರಿಗೆ ಕೊರೋನಾ ಸೋಂಕು ತಗುಲಿದ್ದರೇ, ಸೋಂಕಿತರಾದಂತ 596 ಜನರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಹೊಸದಾಗಿ 39,305 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 19,73,683ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇಂದು 32,188 ಜನರು ಸೇರಿದಂತೆ ಇದುವರೆಗೆ 13,83,285 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ 5,71,006 ಸಕ್ರೀಯ ಸೋಂಕಿತರು ಇರುವುದಾಗಿ ತಿಳಿಸಿದೆ.

ಇನ್ನೂ ಇಂದು ರಾಜ್ಯದಲ್ಲಿ ಕಿಲ್ಲರ್ ಕೊರೋನಾ ಆರ್ಭಟಿಸಿದೆ. ಇಂದು ಬೆಂಗಳೂರಿನಲ್ಲಿ 374 ಜನರು ಸೇರಿದಂತೆ ರಾಜ್ಯಾಧ್ಯಂತ 596 ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದರಿಂದಾಗಿ ಕೊರೋನಾದಿಂದ ಸಾವನ್ನಪ್ಪಿದವರ ಸಂಖ್ಯೆ 19,372ಕ್ಕೆ ಏರಿಕೆಯಾಗಿದೆ.

ಇಂದಿನ ಜಿಲ್ಲಾವಾರು ಕೊರೋನಾ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ

 1. ಬಾಗಲಕೋಟೆ – ಸೋಂಕಿತರು 968, ಸಾವು 18
 2. ಬಳ್ಳಾರಿ – ಸೋಂಕಿತರು 973, ಸಾವು 26
 3. ಬೆಳಗಾವಿ – ಸೋಂಕಿತರು 736, ಸಾವು 02
 4. ಬೆಂಗಳೂರು ಗ್ರಾಮಾಂತರ – ಸೋಂಕಿತರು 704, ಸಾವು 07
 5. ಬೆಂಗಳೂರು ನಗರ – ಸೋಂಕಿತರು 16,747, ಸಾವು 374
 6. ಬೀದರ್ – ಸೋಂಕಿತರು 305, ಸಾವು 04
 7. ಚಾಮರಾಜನಗರ – ಸೋಂಕಿತರು 623, ಸಾವು, 07
 8. ಚಿಕ್ಕಬಳ್ಳಾಪುರ – ಸೋಂಕಿತರು – 599, ಸಾವು 05
 9. ಚಿಕ್ಕಮಗಳೂರು – ಸೋಂಕಿತರು 362, ಸಾವು 05
 10. ಚಿತ್ರದುರ್ಗ – ಸೋಂಕಿತರು 172, ಸಾವು 02
 11. ದಕ್ಷಿಣ ಕನ್ನಡ – ಸೋಂಕಿತರು 1175, ಸಾವು 05
 12. ದಾವಣಗೆರೆ – ಸೋಂಕಿತರು 197, ಸಾವು 03
 13. ಧಾರವಾಡ – ಸೋಂಕಿತರು 1006, ಸಾವು 08
 14. ಗದಗ – ಸೋಂಕಿತರು 332, ಸಾವು 02
 15. ಹಾಸನ – ಸೋಂಕಿತರು 1800, ಸಾವು 22
 16. ಹಾವೇರಿ – ಸೋಂಕಿತರು 214, ಸಾವು 12
 17. ಕಲಬುರ್ಗಿ – ಸೋಂಕಿತರು – 988, ಸಾವು 03
 18. ಕೊಡಗು – ಸೋಂಕಿತರು 534, ಸಾವು 09
 19. ಕೋಲಾರ – ಸೋಂಕಿತರು 755, ಸಾವು 08
 20. ಕೊಪ್ಪಳ – ಸೋಂಕಿತರು – 412, ಸಾವು 00
 21. ಮಂಡ್ಯ – ಸೋಂಕಿತರು 1133, ಸಾವು 12
 22. ಮೈಸೂರು – ಸೋಂಕಿತರು 1537, ಸಾವು 07
 23. ರಾಯಚೂರು – ಸೋಂಕಿತರು 587, ಸಾವು 03
 24. ರಾಮನಗರ – ಸೋಂಕಿತರು 337, ಸಾವು 07
 25. ಶಿವಮೊಗ್ಗ – ಸೋಂಕಿತರು 820, ಸಾವು 11
 26. ತುಮಕೂರು – ಸೋಂಕಿತರು 2168, ಸಾವು 15
 27. ಉಡುಪಿ – ಸೋಂಕಿತರು 855, ಸಾವು 02
 28. ಉತ್ತರ ಕನ್ನಡ – ಸೋಂಕಿತರು 885, ಸಾವು 11
 29. ವಿಜಯಪುರ – ಸೋಂಕಿತರು 659, ಸಾವು 06
 30. ಯಾದಗಿರಿ – ಸೋಂಕಿತರು 727, ಸಾವು 03

ವರದಿ : ವಸಂತ ಬಿ ಈಶ್ವರಗೆರೆ


CORONAVIRUS KARNATAKA State Uncategorized

ಚಾಮರಾಜನಗರ : ಜಿಲ್ಲೆಯಲ್ಲಿ ವಾರದ ಮೊದಲ ಮೂರು ದಿನ ವಾಣಿಜ್ಯ ಚಟುವಟಿಕೆ ಅವಕಾಶ ನೀಡಲಾಗುತ್ತದೆ. ವಾರದ ಉಳಿದ ದಿನಗಳು ಸಂಪೂರ್ಣ ಬಂದ್ ಮಾಡೋದಕ್ಕಿ ಇಂದು ನಡೆದಂತ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಸುರೇಶ್ ಕುಮಾರ್ ನೇತೃತ್ವದ ಜಿಲ್ಲಾ ಟಾಸ್ಕ್ ಫೋರ್ಸ್ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ನಾಲ್ಕು ದಿನ ಸಂಪೂರ್ಣ ಬಂದ್ ಆಗಲಿದ್ದು, ಜನರಿಗೆ ಅಗತ್ಯ ವಸ್ತು ಖರೀದಿಗೆ ಎರಡು ದಿನ ಮಾತ್ರವೇ ಅವಕಾಶ ಸಿಗಲಿದೆ. 

ಚಾಮರಾಜನಗರದ ಜಿಲ್ಲಾಕೇಂದ್ರದಲ್ಲಿರುವ ಸಾರ್ವಜನಿಕ‌ ಆಸ್ಪತ್ರೆ ಕೋವಿಡ್ ಚಿಕಿತ್ಸೆ ನೀಡುವ ಜಿಲ್ಲೆಯ ಏಕೈಕ ಪ್ರಧಾನ ಕೇಂದ್ರವಾಗಿದ್ದು, ಒಂದು ವೇಳೆ ಪರಿಸ್ಥಿತಿ ಕೈಮೀರಿದಲ್ಲಿ ಜಿಲ್ಲೆಗೆ ಅವಶ್ಯಕವಿರುವ ಹೆಚ್ಚುವರಿ ಸೌಲಭ್ಯಗಳನ್ನು ಒದಗಿಸುವಲ್ಲಿ ಅಧಿಕಾರಿಗಳಿಗೆ ತುರ್ತು‌ನಿರ್ದೇಶನ ನೀಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಈ ಕುರಿತಂತೆ ಮಾನ್ಯ ಮಖ್ಯಮಂತ್ರಿಗಳಿಗೆ ಬರೆದ ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಸಚಿವರು, ಜಿಲ್ಲೆಯಲ್ಲಿ ಒಂದು ಜಿಲ್ಲಾಸ್ಪತ್ರೆ, ಮೂರು ತಾಲ್ಲೂಕು ಮಟ್ಟದ ಆಸ್ಪತ್ರೆ ಹಾಗೂ ಕೇವಲ ಮೂರು ಸಣ್ಣ ಖಾಸಗಿ ಆಸ್ಪತ್ರೆಗಳಿದ್ದು, ಕೋವಿಡ್ ಪ್ರಕರಣಗಳು ದಿನದಿನೇ ತೀವ್ರವಾಗಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಯುಕ್ತ ಹಾಸಿಗೆಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲು ಮನವಿ ಮಾಡಿದ್ದೇನೆ. ಸೀಮಿತ ಆಮ್ಲಜನಕದ ಪೂರೈಕೆಯ ಹಿನ್ನೆಲೆಯಲ್ಲಿ ಈ ರೀತಿಯ ಕ್ರಮಕ್ಕೆ ಸರ್ಕಾರದ‌ ಅನುಮತಿ ಕಡ್ಡಾಯವಾಗಿದ್ದು, ಶೀಘ್ರದಲ್ಲೇ ಚಾಮರಾಜನಗರ ಜಿಲ್ಲಾಸ್ಪತ್ರೆ ಹೆಚ್ಚುವರಿ ಆಮ್ಲಜನಕ ಸಹಿತ ಹಾಸಿಗೆಗಳು, ಉನ್ನತ ಸೌಕರ್ಯಗಳನ್ನು ಹೊಂದಲಿದೆ ಎಂದು ಹೇಳಿದರು.

ಹೆಚ್ಚುವರಿ ಆಮ್ಲಜನಕಕ್ಕೆ ಬೇಡಿಕೆ

ಚಾಮರಾಜನಗರದ ಗ್ರಾಮೀಣ ಜನ ಜಿಲ್ಲಾಸ್ಪತ್ರೆಯನ್ನೇ ಅವಲಂಬಿಸಿರುವುದರಿಂದ ಹಾಗೂ ಜಿಲ್ಲೆಯಲ್ಲಿ ಆಮ್ಲಜನಕ ಪೂರೈಕೆ ಕೇಂದ್ರಗಳ ಅಲಭ್ಯತೆಯ ಕಾರಣ, ಕೋವಿಡ್ ಸೋಂಕಿತರ  ಶುಶ್ರೂಷೆಗೆ ತೀವ್ರ ತೊಂದರೆಯಾಗಿದೆ. ಮೈಸೂರಿನಿಂದ ಸಕಾಲಕ್ಕೆ ಆಕ್ಸಿಜನ್ ಪೂರೈಕೆಯಾಗದೇ ಇರುವುದೂ ಸಮಸ್ಯೆಯ ಸಂಕೀರ್ಣತೆಯನ್ನು‌ ಹೆಚ್ಚಿಸಿದೆ. ಹಾಗಾಗಿ ಆಕ್ಸಿಜನ್ ಶೇಖರಣೆಗೆ ಹೆಚ್ಚುವರಿ ಸಿಲಿಂಡರ್ ಗಳನ್ನು ಒದಗಿಸುವುದು ಹಾಗೂ ಜಿಲ್ಲೆಗೆ ನಿಗದಿ ಪಡಿಸಿರುವ ಆಕ್ಸಿಜನ್ ಪ್ರಮಾಣವನ್ನು 4.5 ಕಿ.ಲೀ ನಿಂದ 7.15 ಕಿ.ಲೀಗೆ ನಿಗದಿ ಪಡಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದೇನೆ ಎಂದರು.

ಸಚಿವರು ಚಾಮರಾಜನಗರದಲ್ಲಿ: ಇಂದು ಪ್ರಾರಂಭವಾಗಬೇಕಿದ್ದ ಚಾಮರಾಜನಗರ ಪ್ರವಾಸವನ್ನು ಕಳೆದ‌ ರಾತ್ರಿಯೇ ಪ್ರಾರಂಭಿಸಿದ ಸಚಿವರು ಇಂದು ಬೆಳಿಗ್ಗೆಯೇ ಹನೂರು ತಾಲ್ಲೂಕಿನಲ್ಲಿ ಕೋವಿಡ್ ಸಭೆಗಳನ್ನು ನಡೆಸಿ ಹಲವು ಕೋವಿಡ್ ಸೋಂಕಿತ ಗ್ರಾಮಸ್ಥರನ್ನು ಭೇಟಿ ಮಾಡಿ ಧೈರ್ಯ ತುಂಬಿದರು. ಸಂಜೆ ಜಿಲ್ಲಾಡಳಿತದ ಕಚೇರಿಯಲ್ಲಿ ಜಿಲ್ಲಾ‌ ಟಾಸ್ಕ್ ಫೋರ್ಸ್ ಸಭೆಯನ್ನು ನಡೆಸಿದರು.

ಹೆಚ್ಚುತ್ತಿರುವ ಸೋಂಕಿ‌ನ ಹಿನ್ನೆಲೆಯಲ್ಲಿ ರೂಪಿಸಬಹುದಾದ ಕ್ರಿಯಾಯೋಜನೆಗಳು, ಲಭ್ಯವಿರುವ ಆಮ್ಲಜನಕ, ಔಷಧಿಗಳ‌ ಸಮರ್ಪಕ ಬಳಕೆ, ಇನ್ನೂ ಮುಂತಾದ ವಿಷಯಗಳ‌ ಬಗ್ಗೆ ಚರ್ಚೆಯಾಗಿದೆ. ಲಾಕ್ ಡೌನ್ ಯಶಸ್ಸಿಗೆ ತಾಲ್ಲೂಕುಗಳು ತೆಗೆದುಕೊಂಡಿರುವ ಕ್ರಮಗಳು, ಜಿಲ್ಲಾಡಳಿತದ ಅನುಪಾಲನೆಗಳನ್ನು ಅವಲೋಕಿಸಲಾಗಿದೆ. ಟಾಸ್ಕ್ ಫೋರ್ಸ್ ಗಳು ಸರಿಯಾಗಿ ಕೆಲಸ ಮಾಡಬೇಕು.‌ ಪ್ರತಿ ಎರಡು ದಿನಗಳಿಗೆ ಒಮ್ಮೆ ಸಭೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಿ ಅನುಪಾಲನೆಗೆ ಮುಂದಾಗಬೇಕು. ಎಲ್ಲ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪರಿಪಾಲಿಸಬೇಕೆಂದು ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ವಾರದ ನಾಲ್ಕು ದಿನ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್

ಕೋವಿಡ್ ಲಾಕ್ ಡೌನ್ ಅನ್ನು ಇನ್ನಷ್ಟು ಯಶಸ್ವಿಗೊಳಿಸುವ ಸಲುವಾಗಿ ಜಿಲ್ಲೆಯಲ್ಲಿ ಸೋಮ, ಮಂಗಳ ಹಾಗೂ ಬುಧವಾರಗಳಂದು ಬೆಳಗ್ಗೆ 6-10ರವರೆಗೆ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿ ಗುರು, ಶುಕ್ರ, ಶನಿ ಹಾಗೂ ಭಾನುವಾರದ ನಾಲ್ಕು ದಿನಗಳು ಸಂಪೂರ್ಣ ಬಂದ್ ಮಾದರಿಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ಸಹ ಇಂದಿನ ಟಾಸ್ಕ್ ಫೋರ್ಸ್ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಸಚಿವರು ವಿವರಿಸಿದರು.

ಕೋವಿಡ್ ಆರೈಕೆ‌ ಕೇಂದ್ರಗಳನ್ನು ಬಳಸಿಕೊಳ್ಳಿ

ಗ್ರಾಮಾಂತರ ಪ್ರದೇಶಗಳಲ್ಲಿಯೂ ಕೋವಿಡ್ ಸೋಂಕು ವೇಗವಾಗಿ ಹರಡುತ್ತಿದ್ದು, ಲಕ್ಷಣ ರಹಿತ ಸೋಂಕಿತರಿಗಾಗಿಯೇ ಜಿಲ್ಲಾದ್ಯಂತ ಸ್ಥಾಪಿತವಾಗಿರುವ ಕೋವಿಡ್ ಆರೈಕೆ‌ ಕೇಂದ್ರಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ನಾಗರಿಕರಲ್ಲಿ ಮನವಿ ಮಾಡಿದ ಸಚಿವರು ಅಗತ್ಯವಿದ್ದಲ್ಲಿ ಇನ್ನಷ್ಟು ಕಡೆ ಈ ಕೇಂದ್ರಗಳನ್ನು ಸ್ಥಾಪನೆ ಮಾಡುವುದಿದ್ದು, ನಾಗರಿಕರು ಮನೆಯ ಆರೈಕೆಯ ಸಂಕೀರ್ಣತೆಗಳನ್ನು ಅರಿತು ಈ ಕೇಂದ್ರಗಳಲ್ಲಿ ದಾಖಲಾಗಬೇಕು. ಆ ಮೂಲಕ ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸಬೇಕೆಂದು ಕೋರಿದರು.

ಪರಿಣಿತರ ತಂಡದ ವರದಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ ದುರಂತದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದ ಪರಿಣಿತರ ತಂಡ ತನ್ನ ವರದಿಯನ್ನು‌ ಈಗಾಗಲೇ ಆರೋಗ್ಯ ಇಲಾಖೆಗೆ ಸಲ್ಲಿಸಿದೆ. ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಪ್ರತಿನಿಧಿಗಳು ಈ ವರದಿಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಜಿಲ್ಲೆಯ ವೈದ್ಯಕೀಯ ವ್ಯವಸ್ಥೆಯು ಮುಂದಿನ ದಿನಗಳಲ್ಲಿ ಅನುಸರಿಸಬೇಕಾದ  ಕ್ರಮಗಳನ್ನು ಮನವರಿಕೆ ಮಾಡಿಕೊಡಲಿದೆ. ಕೆಲ ದಿನಗಳಲ್ಲಿ ಈ ಕುರಿತಂತೆ ಜಿಲ್ಲಾಡಳಿತವು ವಿಡಿಯೋ‌ಸಂವಾದದ ಮೂಲಕ ಸರ್ಕಾರದ ಸಲಹೆಯನ್ನು ಪಡೆದು ಅನುಪಾಲಿಸಲಿದೆ ಎಂದರು.

ಅಂತಾರಾಜ್ಯ ಓಡಾಟಕ್ಕೆ ಕಡಿವಾಣ

ಚಾಮರಾಜನಗರ ಸಂಪರ್ಕಿಸುವ ಕೇರಳ ಗಡಿ ಪ್ರದೇಶದಿಂದ ವಾಹನ ಓಡಾಟಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ವಿವಿಧ ಇಲಾಖಾಧಿಕಾರಿಗಳ ಜಂಟಿ ಕಾರ್ಯಪಡೆ ಇಪ್ಪತ್ನಾಲ್ಕು ಗಂಟೆಗಳು ಕಾರ್ಯ ನಿರ್ವಹಿಸುತ್ತಿದೆ. ಅವಶ್ಯ ಸೇವೆಗಳನ್ನು ಹೊರತುಪಡಿಸಿ ವಾಹನ, ವ್ಯಕ್ತಿಗಳ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ ಎಂದು ಹೇಳಿದರು.

ಕಳೆದ ರಾತ್ರಿ ತಪ್ಪಿದ ಆಕ್ಸಿಜನ್ ಅವಘಢ

ಸಚಿವ ಸುರೇಶ್ ಕುಮಾರ್ ಅವರು ಕಳೆದ ರಾತ್ರಿ ಮೈಸೂರಿನ‌ ಪದಕಿ ಹಾಗೂ ಸದರನ್ ಗ್ಯಾಸ್ ರೀಫಿಲಿಂಗ್ ಘಟಕಗಳಲ್ಲಿ ಖುದ್ದಾಗಿ ಕುಳಿತು ನಿಗದಿತ ಪ್ರಮಾಣದ ಆಮ್ಲ ಜನಕ ಪೂರೈಕೆಗೆ ಕ್ರಮ ವಹಿಸಿದ ಕಾರಣ, ಇಂದು ಚಾಮರಾಜನಗರದಲ್ಲಿ ಸಂಭವಿಸಬಹುದಾಗಿದ್ದ  ಅವಘಡ ತಪ್ಪಿದಂತಾಗಿದೆ. ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನೂರಾರು ರೋಗಿಗಳಿಗೆ ಅವಶ್ಯಕವಿದ್ದ ಆಮ್ಲಜನಕ‌ವು ಇಂದು (10.05.2021) ಬೆಳಗಿನ ಜಾವ ಐದು ಗಂಟೆಗೆ ಬರಿದಾಗುತ್ತದೆ ಎಂಬುದನ್ನು ಕಳೆದ ರಾತ್ರಿಯೇ ಅರಿತ ಸುರೇಶ್ ಕುಮಾರ್ ಬೆಂಗಳೂರಿನಿಂದ ನಿನ್ನೆಯೇ ಮೈಸೂರಿಗೆ ದೌಡಾಯಿಸಿದರು. ಡಾಬಸ್ ಪೇಟೆಯಿಂದ ಹೊರಟಿದ್ದ ಆರು ಸಾವಿರ‌ ಕಿಲೋಲೀಟರ್ ಟ್ಯಾಂಕರ್, ಪದಕಿ ಗ್ಯಾಸ್ ರೀಫಿಲಿಂಗ್ ಘಟಕದಿಂದ ಪೂರೈಕೆಯಾಗಬೇಕಿದ್ದ ನೂರು ಸಿಲಿಂಡರ್ ಗಳ ಆಮ್ಲಜನಕ ಸಕಾಲಕ್ಕೆ ಚಾಮರಾಜನಗರ ತಲುಪುವಲ್ಲಿ ತಾವೇ ನಿಂತು‌ ಮೇಲುಸ್ತುವಾರಿ ಮಾಡಿದರು. ರಾತ್ರಿ ಹನ್ನೊಂದೂವರೆಯವರೆಗೆ ಮೈಸೂರಿನಲ್ಲಿ ಕುಳಿತು ಆಮ್ಲಜನಕ ಪೂರೈಕೆಯ‌ ವ್ಯತ್ಯಯವನ್ನು‌ ಸರಿಪಡಿಸಿದ ನಂತರವೇ ವಿಶ್ರಾಂತಿಗೆ ತೆರಳಿದರು.

ಲಾಕ್ ಡೌನ್ ಗೆ ಸಹಕಾರ. ಜನರಲ್ಲಿ ಮನವಿ

ಕೋವಿಡ್ ನಿಯಂತ್ರಣಕ್ಕೆ‌ ಬಾರದ ಹಿನ್ನೆಲೆಯಲ್ಲಿ‌ ಆರ್ಥಿಕತೆಗೆ ತೀವ್ರ ತೊಂದರೆಯಾದರೂ ಅನಿವಾರ್ಯ ಕ್ರಮವಾಗಿ ರಾಜ್ಯ ಸರ್ಕಾರವು ಲಾಕ್ ಡೌನ್ ಜಾರಿಗೊಳಿಸಿದೆ. ಗ್ರಾಮಾಂತರ ಪ್ರದೇಶಗಳಲ್ಲಿಯೂ ಸೋಂಕು ವ್ಯಾಪಿಸುತ್ತಿದ್ದು, ಸಮಾಜವು ಈ ಯುದ್ಧವನ್ನು ಗೆಲ್ಲಬೇಕಾದರೆ ಜವಾಬ್ದಾರಿಯುತವಾದ ಸಾಮಾಜಿಕ ಜೀವನ‌ ಅತ್ಯವಶ್ಯಕವಾಗಿದೆ. ಸಂಘಟಿತರಾಗಿ ಕೋವಿಡ್ ಗೆಲ್ಲಲು ಎಲ್ಲರೂ ಸಹಕರಿಸಬೇಕಿದೆ. ನಾಗರಿಕರು ತಮ್ಮ ಜವಾಬ್ದಾರಿ ಅರಿತು ಸರ್ಕಾರದ ನಿರ್ಧಾರಕ್ಕೆ ಬೆಂಬಲ‌ ಸೂಚಿಸಬೇಕಿದೆ ಎಂದು ಹೇಳಿದರು.

ಈ ಸಭೆಯಲ್ಲಿ ಜಿಲ್ಲೆಯ ಶಾಸಕರಾದ ಪುಟ್ಟರಂಗಶೆಟ್ಟಿ, ನರೇಂದ್ರ, ಎನ್.ಮಹೇಶ್, ನಿರಂಜನ ಕುಮಾರ್, ಜಿಲ್ಲಾಧಿಕಾರಿ.ಡಾ.ರವಿ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.


Bangalore CORONAVIRUS KARNATAKA State

ಬೆಂಗಳೂರು : ರಾಜ್ಯದಲ್ಲಿ ಹಿಂದಿನ ಎಲ್ಲಾ ದಾಖಲೆ ಉಡೀಸ್ ಮಾಡುವಂತೆ ಮತ್ತೆ ಕಿಲ್ಲರ್ ಕೊರೋನಾ ಆರ್ಭಟಿಸಿದೆ. ಇಂದು ಹೊಸದಾಗಿ 39,305 ಜನರಿಗೆ ಕೊರೋನಾ ಸೋಂಕು ತಗುಲಿದ್ದರೇ, ಸೋಂಕಿತರಾದಂತ 596 ಜನರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಹೊಸದಾಗಿ 39,305 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 19,73,683ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇಂದು 32,188 ಜನರು ಸೇರಿದಂತೆ ಇದುವರೆಗೆ 13,83,285 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ 5,71,006 ಸಕ್ರೀಯ ಸೋಂಕಿತರು ಇರುವುದಾಗಿ ತಿಳಿಸಿದೆ.

ಇನ್ನೂ ಇಂದು ರಾಜ್ಯದಲ್ಲಿ ಕಿಲ್ಲರ್ ಕೊರೋನಾ ಆರ್ಭಟಿಸಿದೆ. ಇಂದು ಬೆಂಗಳೂರಿನಲ್ಲಿ 374 ಜನರು ಸೇರಿದಂತೆ ರಾಜ್ಯಾಧ್ಯಂತ 596 ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದರಿಂದಾಗಿ ಕೊರೋನಾದಿಂದ ಸಾವನ್ನಪ್ಪಿದವರ ಸಂಖ್ಯೆ 19,372ಕ್ಕೆ ಏರಿಕೆಯಾಗಿದೆ.

ಮತ್ತೊಂದೆಡೆ ಇಂದು ಕೆ. ಆರ್. ಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಸರ್ಕಾರಿ (ಕೇಂದ್ರ) ಸ್ವಾಮ್ಯದ ಐಟಿಐ ಆಸ್ಪತ್ರೆಯನ್ನು ರಾಜ್ಯ ಸರ್ಕಾರದ ಸಹಕಾರದೊಂದಿಗೆ ಪುನಶ್ಚೇತನಗೊಳಿಸಿ ತಾತ್ಕಾಲಿಕವಾಗಿ ಕೋವಿಡ್ ಕೇಂದ್ರವಾಗಿ ಪರಿವರ್ತಿಸಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಹೇಳಿದ್ದಾರೆ.

ಪತ್ರಿಕಾ ಹೇಳಿಕೆಯೊಂದರಲ್ಲಿ ಈ ವಿಷಯ ತಿಳಿಸಿದ ಸಚಿವರು ತಾವು ಈಗಾಗಲೇ ಸಂಬಂಧಪಟ್ಟ ಸಚಿವರಿಗೆ (ರವಿಶಂಕರ್ ಪ್ರಸಾದ್) ಈ ಬಗ್ಗೆ ಪತ್ರ ಬರೆದಿದ್ದು ಅಗತ್ಯ ಸಹಕಾರ ದೊರೆಯುವ ವಿಶ್ವಾಸವಿದೆ ಎಂದರು.

ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇರುವ ಆಸ್ಪತ್ರೆಗಳು ಸಾಲುತ್ತಿಲ್ಲ. ಹೆಚ್ಚೆಚ್ಚು ತಾತ್ಕಾಲಿಕ ಕೋವಿಡ್ ಕೇಂದ್ರಗಳನ್ನು ಕಲ್ಪಿಸುವುದು ಅನಿವಾರ್ಯವಾಗಿದೆ. ಕೆ ಆರ್ ಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಐಟಿಐ ಆಸ್ಪತ್ರೆಯು ವಿಸ್ತಾರವಾದ ಸ್ಥಳಾವಕಾಶ ಹೊಂದಿದೆ. ನಗರಾಭಿವೃದ್ಧಿ ಸಚಿವ ಬಿ ಎ ಬಸವರಾಜ ಅವರೊಂದಿಗೆ ಈ ಬಗ್ಗೆ ಚರ್ಚಿಸಲಾಗಿದೆ. ಸ್ಥಳೀಯ ಶಾಸಕರೂ ಆಗಿರುವ ಅವರು ಈ ಬಗ್ಗೆ ಸಂಪೂರ್ಣ ಸಹಕಾರದ ಭರವಸೆ ನೀಡಿದ್ದಾರೆ.

ಆಕ್ಸಿಜಿನೇಟೆಡ್ ಹಾಸಿಗೆಗಳು, ತೀವ್ರ ನಿಗಾ ಘಟಕ ಸೇರಿದಂತೆ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅಗತ್ಯವಾದ ಎಲ್ಲ ಶುಶ್ರೂಸಾ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.


Bangalore CORONAVIRUS KARNATAKA State

ಬೆಂಗಳೂರು : ಕೆ. ಆರ್. ಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಸರ್ಕಾರಿ (ಕೇಂದ್ರ) ಸ್ವಾಮ್ಯದ ಐಟಿಐ ಆಸ್ಪತ್ರೆಯನ್ನು ರಾಜ್ಯ ಸರ್ಕಾರದ ಸಹಕಾರದೊಂದಿಗೆ ಪುನಶ್ಚೇತನಗೊಳಿಸಿ ತಾತ್ಕಾಲಿಕವಾಗಿ ಕೋವಿಡ್ ಕೇಂದ್ರವಾಗಿ ಪರಿವರ್ತಿಸಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಹೇಳಿದ್ದಾರೆ.

ಪತ್ರಿಕಾ ಹೇಳಿಕೆಯೊಂದರಲ್ಲಿ ಈ ವಿಷಯ ತಿಳಿಸಿದ ಸಚಿವರು ತಾವು ಈಗಾಗಲೇ ಸಂಬಂಧಪಟ್ಟ ಸಚಿವರಿಗೆ (ರವಿಶಂಕರ್ ಪ್ರಸಾದ್) ಈ ಬಗ್ಗೆ ಪತ್ರ ಬರೆದಿದ್ದು ಅಗತ್ಯ ಸಹಕಾರ ದೊರೆಯುವ ವಿಶ್ವಾಸವಿದೆ ಎಂದರು.

ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇರುವ ಆಸ್ಪತ್ರೆಗಳು ಸಾಲುತ್ತಿಲ್ಲ. ಹೆಚ್ಚೆಚ್ಚು ತಾತ್ಕಾಲಿಕ ಕೋವಿಡ್ ಕೇಂದ್ರಗಳನ್ನು ಕಲ್ಪಿಸುವುದು ಅನಿವಾರ್ಯವಾಗಿದೆ. ಕೆ ಆರ್ ಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಐಟಿಐ ಆಸ್ಪತ್ರೆಯು ವಿಸ್ತಾರವಾದ ಸ್ಥಳಾವಕಾಶ ಹೊಂದಿದೆ. ನಗರಾಭಿವೃದ್ಧಿ ಸಚಿವ ಬಿ ಎ ಬಸವರಾಜ ಅವರೊಂದಿಗೆ ಈ ಬಗ್ಗೆ ಚರ್ಚಿಸಲಾಗಿದೆ. ಸ್ಥಳೀಯ ಶಾಸಕರೂ ಆಗಿರುವ ಅವರು ಈ ಬಗ್ಗೆ ಸಂಪೂರ್ಣ ಸಹಕಾರದ ಭರವಸೆ ನೀಡಿದ್ದಾರೆ.

ಆಕ್ಸಿಜಿನೇಟೆಡ್ ಹಾಸಿಗೆಗಳು, ತೀವ್ರ ನಿಗಾ ಘಟಕ ಸೇರಿದಂತೆ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅಗತ್ಯವಾದ ಎಲ್ಲ ಶುಶ್ರೂಸಾ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.

ಸ್ಯಾನಿಟೈಸೇಶನ್: ಈ ಮಧ್ಯೆ ಸಚಿವರು ಇಂದು ಹೆಬ್ಬಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ವಾರ್ಡುಗಳಲ್ಲಿ ರೋಗನಿರೋಧಕ ದ್ರಾವಣ ಸಿಂಪರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಜೆಪಿ ಹೆಬ್ಬಾಳ ಮಂಡಲವು ಸದಾಸ್ಮಿತ ಪ್ರತಿಷ್ಠಾನ (ಡಿವಿಎಸ್ ಪೋಷಿತ) ಮತ್ತು ವೈಏಎನ್ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ಈ ಕಾರ್ಯಕ್ರಮ ಕೈಗೊಂಡಿದೆ.

ಅದೇ ರೀತಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ 20 ಸಾವಿರ ಕೋವಿಡ್ ಔಷಧ ಕಿಟ್’ಗಳನ್ನು ವಿತರಿಸುವ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಯಿತು. ಇದರಲ್ಲಿ ಕೋವಿಡ್ ಚಿಕಿತ್ಸೆಗೆ ಬಳಸುವ ಸಾಮಾನ್ಯ ಮಾತ್ರೆಗಳು, ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ವಿಟಾಮಿನ್ ಮಾತ್ರಗಳು, ನಾಲ್ಕು ಎನ್-95 ಮಾಸ್ಕುಗಳು, ಸ್ಯಾನಿಟೈಸರ್’ಗಳು ಇರಲಿದ್ದು ಗೃಹಶುಶ್ರೂಸೆಯಲ್ಲಿ ಇರುವ ಕೋವಿಡ್ ಸೋಂಕಿತರು ಇದನ್ನು ಬಳಸಬಹುದಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸದಾನಂದ ಗೌಡ – ಮೊದಲ ಹಂತದಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ 10 ಸಾವಿರ ಬಡವರಿಗೆ ಈ ಕೋವಿಡ್ ಕಿಟ್’ಗಳನ್ನು ವಿತರಿಸಲಾಗುವುದು. ಎರಡನೇ ಹಂತದಲ್ಲಿಯೂ 10 ಸಾವಿರ ಕಿಟ್’ಗಳನ್ನುವಿತರಿಸಲಾಗುವುದು. ನಿಜಕ್ಕೂ ನೆರವಿನ ಅವಶ್ಯಕತೆ ಇರುವವರು ಇದರ ಲಾಭ ಪಡೆಯಬೇಕು ಎಂದರು. ವಿಧಾನ ಪರಿಷತ್ ಸದಸ್ಯ ಡಾ ವೈ ಎನ್ ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷ ಬಿ ನರಾಯಣ, ಮಂಡಲಾಧ್ಯಕ್ಷ ರಿಷಿಕುಮಾರ್ ಪಟೇಲ್, ಬಿಜೆಪಿ ವಾರ್ಡ್ ಅಧ್ಯಕ್ಷರುಗಳು, ಮಾಜಿ ಬಿಬಿಎಂಪಿ ಸದಸ್ಯರು, ಪಕ್ಷದ ಪ್ರಮುಖರು, ಯುವಮೊರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು.


Bangalore CORONAVIRUS KARNATAKA State

ಬೆಂಗಳೂರು : ಬಿಬಿಎಂಪಿ ಬೆಡ್ ಹಂಚಿಕೆ ಪದ್ಧತಿಯಲ್ಲಿ ಹಲವು ಸುಧಾರಣೆಗಳಿಗೆ ಕೋರಿ ಬೆಂಗಳೂರು ದಕ್ಷಿಣ ಸಂಸದರಾದ ಶ್ರೀ ತೇಜಸ್ವೀ ಸೂರ್ಯ ರವರು ಸಲ್ಲಿಸಿದ್ದ ಮನವಿಗೆ ಸ್ಪಂದಿಸಿ ಕ್ಷಿಪ್ರಗತಿಯಲ್ಲಿ 4 ಮಹತ್ತರ ಸುಧಾರಣೆಗಳು ಈಗಾಗಲೇ ಕಾರ್ಯರೂಪಕ್ಕೆ ಬಂದಿದ್ದು, ಈ ಕುರಿತು ತಾಂತ್ರಿಕ ತಂಡಕ್ಕೆ 100 ಘಂಟೆಗಳ ಗುರಿ ನಿಗದಿ ಮಾಡಲಾಗಿತ್ತು ಎನ್ನುವುದನ್ನು ಸಂಸದ ತೇಜಸ್ವೀ ಸೂರ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೋವಿಡ್ ಸೇವೆಗೆ ನಿಯೋಜನೆಗೊಂಡಿರುವ ಅಧಿಕಾರಿಗಳು ಹಾಗೂ ತಂತ್ರಜ್ಞರನ್ನು ಒಳಗೊಂಡ ತಂಡಗಳ ಜೊತೆಗೆ ಹಲವು ಸುತ್ತಿನ ಮ್ಯಾರಥಾನ್ ಸಭೆಗಳ ನಂತರ 4 ಸುಧಾರಣೆಗಳನ್ನು ಕಾರ್ಯರೂಪಕ್ಕೆ ತರಲಾಗಿದೆ ಎಂದು ಸಂಸದರು ತಿಳಿಸಿದರು. a) ಬೆಡ್ ಹಂಚಿಕೆ ಕುರಿತಂತೆ ರೋಗಿಗಳಿಗೆ ನೇರ ಎಸ್.ಎಂ.ಎಸ್ ರವಾನೆ .b) ಬೆಡ್ ಬುಕಿಂಗ್ ಪದ್ಧತಿಯಲ್ಲಿ ಈ ಮುಂಚೆ ಜಾರಿಯಲ್ಲಿದ್ದ ಮ್ಯಾನುವಲ್ ಅನ್ ಬ್ಲಾಕ್ ವಿಧಾನ ನಿಷ್ಕಿಯ.c) ಬೆಡ್ ಬುಕಿಂಗ್ ನಂತರ 10 ಘಂಟೆಗಳ ವರೆಗೆ ನೀಡಲಾಗಿದ್ದ ಅವಧಿಯನ್ನು 4 ಘಂಟೆಗೆ ಕಡಿತಗೊಳಿಸುವಿಕೆ. d) ಬೆಡ್ ಹಂಚಿಕೆ ಪ್ರಕ್ರಿಯೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರಿಗೂ 2 ಹಂತದ ಲಾಗಿನ್ ದೃಢೀಕರಣ.ಈ ಸುಧಾರಣೆಗಳನ್ನು ತತ್‌ ಕ್ಷಣಕ್ಕೆ ಕಾರ್ಯರೂಪಕ್ಕೆ ಈಗಾಗಲೇ ಜಾರಿಗೆ ತರಲಾಗಿದ್ದು, ಬೆಡ್ ಹಂಚಿಕೆಗೆ ಡಿಜಿಟಲ್ ಸರದಿ ಪದ್ಧತಿ, ರಿಸರ್ವೇಷನ್ ನಲ್ಲಿ ಆಗುತ್ತಿರುವ ಸಮಯಮಿತಿ ಕಡಿತಗೊಳಿಸುವಿಕೆ ಹಾಗೂ ಆಧಾರ್ ಸಂಯೋಜಿತ ಬಯೋಮೆಟ್ರಿಕ್ ಅಥವಾ ಓಟಿಪಿ ಮೂಲಕ ನೋಂದಣಿ /ಡಿಸ್ಚಾರ್ಜ್‌ ಸೇರಿದಂತೆ ಹಲವು ಸುಧಾರಣೆಗಳು ಮುಂದಿನ ಕೆಲವು ಘಂಟೆಗಳಲ್ಲಿ ಕಾರ್ಯರೂಪಕ್ಕೆ ಬರಲಿವೆ ಎಂದು ಸಂಸದರು ಇದೇ ಸಂದರ್ಭದಲ್ಲಿ ವಿವರಿಸಿದರು.

“ಬೆಡ್ ಹಂಚಿಕೆ ಸಾಫ್ಟ್ ವೇರ್ ನಲ್ಲಿನ ಹಲವು ನ್ಯೂನತೆಗಳನ್ನು ಸರಿಪಡಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಕ್ಷಿಪ್ರ ಕ್ರಮ ತೆಗೆದುಕೊಳ್ಳಲು ಆದೇಶ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರ ಕಾರ್ಯವೈಖರಿಯನ್ನು ನಾನು ಈ ಸಂದರ್ಭದಲ್ಲಿ ಶ್ಲಾಘಿಸುತ್ತೇನೆ. ಈ ಕುರಿತು ನಂದನ್ ನಿಲೇಕಣಿಯವರನ್ನು ಸಂಪರ್ಕಿಸಿ, ಬಿಬಿಎಂಪಿ ಬೆಡ್ ಹಂಚಿಕೆ ಸಾಫ್ಟ್ ವೇರ್ ನಲ್ಲಿನ ಹಲವು ನ್ಯೂನತೆಗಳನ್ನು ಸರಿಪಡಿಸಲು ತಾಂತ್ರಿಕ ಸಹಾಯ ಕೋರಿ ಮನವಿ ಸಲ್ಲಿಸಿದ ತಕ್ಷಣ, ತ್ವರಿತವಾಗಿ ಸ್ಪಂದಿಸಿ ಪರಿಣಿತರ ತಂಡವನ್ನು ಇದಕ್ಕೋಸ್ಕರವೇ ನಿಯೋಜನೆಗೊಳಿಸಿ ಸಹಕಾರ ನೀಡಿರುವುದಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಪರಿಣಿತರ ತಂಡವು ISpirt ನ ಥಿಂಕ್ ಟ್ಯಾಂಕ್ ಸಹಯೋಗದೊಂದಿಗೆ ಕೆಲವು ಸಭೆಗಳು, ಸಲಹೆ/ಸೂಚನೆಗಳ ನಂತರ ಕೇವಲ 100 ಘಂಟೆಗಳ ಅವಧಿಯಲ್ಲಿ ಬೆಡ್ ಹಂಚಿಕೆ ವಿಧಾನದಲ್ಲಿದ್ದ ಹಲವು ಲೋಪದೋಷಗಳನ್ನು ಸರಿಪಡಿಸಿ, ಇದನ್ನು ಕಾರ್ಯರೂಪಕ್ಕೆ ತಂದಿದ್ದು, ಕ್ಷಿಪ್ರ ಕಾರ್ಯನಿರ್ವಣೆಗೆ ಇಡೀ ತಂಡಕ್ಕೆ ನನ್ನ ಧನ್ಯವಾದಗಳು. ಈ ಹಿಂದೆ ರೋಗಿಗಳ ಗಮನಕ್ಕೆ ತರದೇ ಆಗುತ್ತಿದ್ದ ಬೆಡ್ ಹಂಚಿಕೆಯನ್ನು ತಡೆಗಟ್ಟಲು ಬೆಡ್ ಹಂಚಿಕೆ ಕುರಿತಾದ ಎಸ್.ಎಂ.ಎಸ್ ಅನ್ನು ನೇರ ರೋಗಿಗಳ ದೂರವಾಣಿ ಸಂಖ್ಯೆಗೆ ಕಳುಹಿಸುವ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಗಮನಾರ್ಹ ಬೆಳವಣಿಗೆ” ಎಂದು ಸಂಸದರು ಇದೇ ಸಂದರ್ಭದಲ್ಲಿ ವಿವರಿಸಿದರು.

ಇನ್ನೊಂದು ಮಹತ್ವದ ಸಂಗತಿಯೆಂದರೆ, ವಾರ್ ರೂಮ್ ಗಳಲ್ಲಿ ಬೆಡ್ ಹಂಚಿಕೆ ಸಮಯದಲ್ಲಿ ಆಗುತ್ತಿದ್ದ ಅಪಸವ್ಯಗಳನ್ನು ತಡೆಗಟ್ಟಲು, ಈ ಪ್ರಕ್ರಿಯೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರಿಗೂ 2 ಹಂತದ ಲಾಗಿನ್ ಧೃಢೀಕರಣ ಕಡ್ಡಾಯಗೊಳಿಸಲು ಸೂಚಿಸಲಾಗಿದ್ದು, ಇದರಿಂದ ಪ್ರತೀ ಬೆಡ್ ಬುಕಿಂಗ್ ಗೂ ಕೂಡ ಹೊಣೆಗಾರಿಕೆ ದೊರೆತಂತಾಗುವುದರಿಂದ ಬೆಡ್ ಹಂಚಿಕೆಯಲ್ಲಿ ಅನವಶ್ಯಕ ಹಸ್ತಕ್ಷೇಪಕ್ಕೆ ಕಡಿವಾಣ ಬೀಳಲಿದೆ” ಎಂದು ತಿಳಿಸಿದರು.

“ಬಿಬಿಎಂಪಿ ಸೇರಿದಂತೆ ವಲಯವಾರು ಸಹಾಯವಾಣಿಗಳಿಗೆ ಕರೆ ಮಾಡುವ ರೋಗಿಗಳ ವಿವರಗಳನ್ನು ಲೆಡ್ಜರ್ (ಲಿಖಿತ ಟಿಪ್ಪಣಿ) ಸೇರಿದಂತೆ ಇತರ ವಿಧಗಳಲ್ಲಿ ನೋಟ್ ಮಾಡಿಕೊಳ್ಳುವ ವಿಧಾನವಿತ್ತು. ಈ ವಿಧವು ಪಾರದರ್ಶಕತೆಗೆ ಒಳಗೊಂಡಿರದೆ, ಹಲವು ಹಸ್ತಕ್ಷೇಪಗಳಿಗೆ ಕಾರಣವಾಗಿತ್ತು.ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಿ.ಎಚ್.ಬಿ.ಎಂ.ಎಸ್ ವೆಬ್ ಸೈಟ್ ನಲ್ಲಿ ಡಿಜಿಟಲ್ ಸರದಿ ಪದ್ಧತಿಯನ್ನು ಜಾರಿಗೆ ತರಲಾಗಿದ್ದು, ರೋಗಿಗಳ ತುರ್ತು ಅಗತ್ಯತೆ ಮೇರೆಗೆ ಬೆಡ್ ಹಂಚಿಕೆ ಮಾಡಲು ಆದ್ಯತೆ ಒದಗಿಸಲಾಗಿದ್ದು, ಇದರಿಂದ ಪಾರದರ್ಶಕತೆಗೆ ದಾರಿ ಮಾಡಿಕೊಟ್ಟಂತಾಗಿದೆ. ಡ್ಯಾಶ್ ಬೋರ್ಡ್ ಮೂಲಕ ಬೆಡ್ ಹಂಚಿಕೆಗೆ ಸಂಬಂಧಿಸಿದ ಹಲವು ವಿವರಗಳನ್ನು ಸಾರ್ವಜನಿಕರ ಅವಗಾಹನೆಗೆ ತಿಳಿಸುವ ವ್ಯವಸ್ಥೆಗೆ ಸೂಚಿಸಲಾಗಿದ್ದು, ಇದರ ವಿವರಗಳನ್ನು ನೇರವಾಗಿ ರೋಗಿಗಳ ಮೊಬೈಲ್ ಸಂಖ್ಯೆಗೆ ತಿಳಿಸುವ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ” ಎಂದು ವಿವರಿಸಿದರು.

ಆಸ್ಪತ್ರೆಗಳಲ್ಲಿ ರಿಜಿಸ್ಟ್ರೇಷನ್ ಹಾಗೂ ಡಿಸ್ಚಾರ್ಜ್ ಗೆ ಸಂಬಂಧಿಸಿದ ಮಾಹಿತಿಯನ್ನು ಆಧಾರ್ ಸಂಯೋಜಿತ ಬಯೋಮೆಟ್ರಿಕ್ ಅಥವಾ ಓಟಿಪಿ ಆಧಾರಿತ ನೋಂದಣಿಗೆ ಸೂಚಿಸಲಾಗಿದ್ದು, ಇದರಿಂದ ನಕಲಿ ಪ್ರವೇಶಗಳಿಗೆ ಆಸ್ಪದವಿಲ್ಲ. ಪ್ರಸ್ತುತ ಕೋವಿಡ್ ನಿರ್ವಹಣೆಗೆ 3 ಸಾಫ್ಟ್ ವೇರ್ ( INDEX, C.H.B.M.S &SAST) ಗಳಿದ್ದು, ಇವುಗಳಲ್ಲಿನ ಯಾವುದಾದರೂ ಒಂದು ಸಾಫ್ಟ್ ವೇರ್ ಕಾರ್ಯನಿರ್ವಹಿಸದಿದ್ದರೆ ಉಳಿದವುಗಳ ನಿರ್ವಹಣೆ ಸಮರ್ಪಕವಾಗಿರದು. ಇವೆಲ್ಲವುಗಳನ್ನು ಸಂಯೋಜನೆಗೊಳಿಸಿ ಏಕೀಕೃತ ಸಾಫ್ಟ್ ವೇರ್ ಅಭಿವೃದ್ಧಿಗೆ ಸೂಚಿಸಲಾಗಿದ್ದು, ಶೀಘ್ರದಲ್ಲಿಯೇ ಇವುಗಳನ್ನು ಸಹ ಕಾರ್ಯಾಚರಣೆಗೆ ತರಲಾಗುವುದು” ಎಂದು ತಿಳಿಸಿದರು.


Bangalore CORONAVIRUS KARNATAKA State

ಬೆಂಗಳೂರು : ನಗರದಲ್ಲಿ ಕೊರೋನಾ ಸೋಂಕಿನ ಮಾರ್ಗಸೂಚಿ ಕ್ರಮಗಳನ್ನು ಉಲ್ಲಂಘಿಸಿದಂತ ವಾಹನ ಸವಾರರ ಮೇಲೆ ಅನೇಕ ಕಡೆಯಲ್ಲಿ ಪೊಲೀಸರು ಲಾಠಿ ಬೀಸಿದ್ದರು. ಹೀಗಾಗಿ ಅನೇಕ ಸಾರ್ವಜನಿಕರು ಇದಕ್ಕೆ ಆಕ್ಷೇಪ ಕೂಡ ವ್ಯಕ್ತ ಪಡಿಸಿದ್ದರು. ಇದರಿಂದಾಗಿ ಲಾಕ್ ಡೌನ್ ಮಾರ್ಗಸೂಚಿ ಉಲ್ಲಂಘಿಸಿದ್ರೆ ಕಾನೂನು ಕ್ರಮ ಕೈಗೊಳ್ಳಿ. ಇದರ ಬದಲಾಗಿ ಯಾವುದೇ ಬಲಪ್ರಯೋಗ ಮಾಡದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.

ಈ ಕುರಿತಂತೆ ಟ್ವಿಟ್ ಮಾಡಿರುವಂತ ಅವರು, ಒಂದು ವೇಳೆ ಸಾರ್ವಜನಿಕರು ಲಾಕ್ ಡೌನ್ ಮಾರ್ಗಸೂಚಿ ಉಲ್ಲಂಘಿಸಿದ್ದು ಕಂಡುಬಂದಲ್ಲಿ ಮಾತ್ರ ಕಾನೂನಿನ ಅಡಿಯಲ್ಲಿ ಬೆಂಗಳೂರು ನಗರ ಪೊಲೀಸ್ ಸಿಬ್ಬಂದಿ ಕ್ರಮ ಕೈಗೊಳ್ಳಬೇಕು ಹೊರತು ಬೇರೆ ಯಾವುದೇ ರೀತಿಯ ಬಲಪ್ರಯೋಗ ಮಾಡಬಾರದು ಎಂಬ ಸೂಚನೆ ನೀಡಲಾಗಿದೆ. ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ. ಕೊರೊನ ಹರಡುವುದನ್ನು ತಡೆಯಲು ದಯವಿಟ್ಟು ಸಹಕರಿಸಿ ಎಂದು ಮನವಿ ಮಾಡಿದ್ದಾರೆ.


Bangalore CORONAVIRUS KARNATAKA State

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ರವಿ ಡಿ ಚೆನ್ನಣ್ಣನವರಿಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಹೋಂ ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಕುರಿತಂತೆ ಟ್ವಿಟ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ರವಿ ಡಿ ಚೆನ್ನಣ್ಣನವರ್, ನನಗೂ ಕೊರೋನಾ ಪಾಸಿಟಿವ್ ಎಂಬುದಾಗಿ ವರದಿಯಿಂದ ತಿಳಿದು ಬಂದಿದೆ. ವೈದ್ಯರ ಸಲಹೆಯ ಮೇರೆಗೆ ಮನೆಯಲ್ಲಿಯೇ ಹೋಂ ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಸ್ಟೇ ಹೋಂ, ಸ್ಟೇ ಸೇಫ್ ಎಂಬುದಾಗಿ ತಿಳಿಸಿದ್ದಾರೆ.

ಹೀಗೆ ಟ್ವಿಟ್ ನಲ್ಲಿ ಕೊರೋನಾ ಪಾಸಿಟಿವ್ ಎಂಬುದಾಗಿ ಮಾಹಿತಿ ಹಂಚಿಕೊಂಡಿರುವಂತ ಬೆಂಗಳೂರು ಗ್ರಾಮಾಂತರ ಎಸ್ ಪಿ ರವಿ ಡಿ ಚೆನ್ನಣ್ಣನವರ್ ಗೆ ಮಾಜಿ ಸಚಿವ ಎಂ ಬಿ ಪಾಟೀಲ್ ಸೇರಿದಂತೆ ಅನೇಕರು ಬೇಗ ಗುಣಮುಖರಾಗಿ ಕೊರೋನಾ ಗೆದ್ದು ಬನ್ನಿ ಎಂಬುದಾಗಿ ಹಾರೈಸಿದ್ದಾರೆ.


CORONAVIRUS KARNATAKA State

ಹಾಸನ : ಜಿಲ್ಲೆಯಲ್ಲಿ ಇಂದು ಹೊಸದಾಗಿ 1,597 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 55,841ಕ್ಕೆ ಏರಿಕೆಯಾಗಿದೆ. ಅಲ್ಲದೇ ಇಂದು ಸೋಂಕಿತರಾದಂತ 22 ಜನರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಈ ಕುರಿತಂತೆ ಜಿಲ್ಲಾಡಳಿತ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ 1,597 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 55,841ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇಂದು 657 ಜನರು ಸೇರಿದಂತೆ ಇದುವರೆಗೆ 38,750 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ 16,388 ಸಕ್ರೀಯ ಸೋಂಕಿತರು ಇರುವುದಾಗಿ ತಿಳಿಸಿದೆ.

ಇನ್ನೂ ಜಿಲ್ಲೆಯಲ್ಲಿ 24 ಗಂಟೆಯಲ್ಲಿ 22 ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕಿಲ್ಲರ್ ಕೊರೋನಾಗೆ ಬಲಿಯಾದವರ ಸಂಖ್ಯೆ 703ಕ್ಕೆ ಏರಿಕೆಯಾಗಿದೆ. ಇನ್ನೂ ಸೋಂಕಿತರಾದಂತ 123 ಜನರು ಐಸಿಯುನಲ್ಲಿ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದೆ.

ತಾಲೂಕುವಾರು ಸೋಂಕಿತರ ಸಂಖ್ಯೆ

 • ಆಲೂರು – 58
 • ಅರಕಲಗೂಡು – 55
 • ಅರಸೀಕೆರೆ – 436
 • ಬೇಲೂರು – 118
 • ಚೆನ್ನರಾಯಪಟ್ಟಣ – 248
 • ಹಾಸನ – 387
 • ಹೊಳೆನರಸೀಪುರ – 161
 • ಸಕಲೇಶಪುರ – 120
 • ಇತರೆ ಜಿಲ್ಲೆ 14


CORONAVIRUS KARNATAKA State

ಬೆಂಗಳೂರು : ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಕ್ಕಿಂತಲೂ ಜನತೆ ಹೆಚ್ಚು ಜವಾಬ್ದಾರಿಯುತವಾಗಿದ್ದಾರೆ, ಸರ್ಕಾರಕ್ಕಿಂತಲೂ ಮುಂಜಾಗ್ರತೆಯ ಜಾಗೃತಿ ಜನತೆಗಿದೆ. ಜನರು ಬದುಕಿನ ಅನಿವಾರ್ಯತೆಗೆ ಹೊರತು ಆಟವಾಡಲು ರಸ್ತೆಗೆ ಬರುತ್ತಿಲ್ಲ. ಸರ್ಕಾರ ಪೊಲೀಸ್ ದೌರ್ಜನ್ಯ ನಿಲ್ಲಿಸಿ, ರೇಷನ್ ಕಿಟ್‌ಗಳನ್ನು ಮನೆ ಬಾಗಿಲಿಗೆ ಒದಗಿಸಲಿ. ಅಗತ್ಯ ನೆರವು ಘೋಷಿಸಲಿ ಎಂಬುದಾಗಿ ಕಾಂಗ್ರೆಸ್ ಆಗ್ರಹಿಸಿದೆ.

ಈ ಕುರಿತಂತೆ ಟ್ವಿಟ್ ಮಾಡಿರುವ ಕಾಂಗ್ರೆಸ್, ಬೋನಿನೊಳಗೆ ಕೂಡಿಟ್ಟ ಪ್ರಾಣಿಗಳಿಗೇ ಆಹಾರ ಒದಗಿಸಲಾಗುತ್ತದೆ. ಆದರೆ ಈ ಸರ್ಕಾರ “ಜನತೆ ಬೋನಿನೊಳಗೆ ಇರಬೇಕು ಆದರೆ ಆಹಾರ ಮಾತ್ರ ನೀಡಲಾರೆವು” ಎನ್ನುತ್ತಿದೆ. ಯಾವುದೇ ನೆರವನ್ನೂ ನೀಡದ ಸರ್ಕಾರ ಜನತೆಯನ್ನು ಕೂಡಿಹಾಕಿ ಪೊಲೀಸರ ಕೈಗೆ ಲಾಠಿ ಕೊಟ್ಟರೆ ಜನರನ್ನು ಕಪಾಡಿದಂತಾಗದು ಎಂದಿದೆ.

ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಕ್ಕಿಂತಲೂ ಜನತೆ ಹೆಚ್ಚು ಜವಾಬ್ದಾರಿಯುತವಾಗಿದ್ದಾರೆ, ಸರ್ಕಾರಕ್ಕಿಂತಲೂ ಮುಂಜಾಗ್ರತೆಯ ಜಾಗೃತಿ ಜನತೆಗಿದೆ. ಜನರು ಬದುಕಿನ ಅನಿವಾರ್ಯತೆಗೆ ಹೊರತು ಆಟವಾಡಲು ರಸ್ತೆಗೆ ಬರುತ್ತಿಲ್ಲ. ಸರ್ಕಾರ ಪೊಲೀಸ್ ದೌರ್ಜನ್ಯ ನಿಲ್ಲಿಸಿ, ರೇಷನ್ ಕಿಟ್‌ಗಳನ್ನು ಮನೆ ಬಾಗಿಲಿಗೆ ಒದಗಿಸಲಿ. ಅಗತ್ಯ ನೆರವು ಘೋಷಿಸಲಿ ಎಂದು ಆಗ್ರಹಿಸಿದೆ.


CORONAVIRUS KARNATAKA State

ಬೆಂಗಳೂರು : ಕೊರೋನಾ 2ನೇ ಅಲೆಯ ಅಬ್ಬರ, ರಾಜ್ಯದಲ್ಲಿ ಅಬ್ಬರಿಸುತ್ತಿದೆ. ಸೋಂಕಿನ ಪ್ರಕರಣಗಳ ಚೈನ್ ಲಿಂಗ್ ಬ್ರೇಕ್ ಮಾಡೋದಕ್ಕಾಗಿ, ಇಂದಿನಿಂದ ರಾಜ್ಯ ಸರ್ಕಾರ ಮೇ.24ರವರೆಗೆ ಲಾಕ್ ಡೌನ್ ಜಾರಿಗೊಳಿಸಿದೆ. ಇದೇ ಸಂದರ್ಭದಲ್ಲಿ ಕೊರೋನಾ ಸೋಂಕಿನ ಲಕ್ಷಣಗಳಿರೋರಿಗೆ, ಕೊರೋನಾ ಸೋಂಕಿತರಾದ ಅನೇಕರಿಗೆ ಸೂಕ್ತ ಸಂದರ್ಭದಲ್ಲಿ ವೈದ್ಯರ ಸಲಹೆಯ ಮಾರ್ಗದರ್ಶನ ಅವಶ್ಯಕತೆ ಇದೆ. ಇದಕ್ಕಾಗಿ ಬಿಎಂಸಿಯ 1992 ಬ್ಯಾಚ್ ನ ವೈದ್ಯರ ತಂಡ ಉಚಿತವಾಗಿ ಸೋಂಕಿನ ಲಕ್ಷಣಗಳಿರೋರಿಗೆ, ಸೋಂಕಿತರಾದವರಿಗೆ ಸಲಹೆ ನೀಡೋದಕ್ಕೆ ಸಹಾಯವಾಣಿ ಸಂಖ್ಯೆ ಆರಂಭಿಸಿದೆ.

ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವಂತ ಸಂದರ್ಭದಲ್ಲಿ, ಸ್ವಯಂ ಸೇವಕರಾಗಿ ಅನೇಕರು ಕೊರೋನಾ ನಿಯಂತ್ರಣ ಜಾಗೃತಿಯ ಕೆಲಸವನ್ನು ಮಾಡುತ್ತಿದ್ದಾರೆ. ಸೋಂಕಿತರಿಗೆ ಬೆಡ್ ವ್ಯವಸ್ಥೆ ಮಾಡುವಂತ ಕೆಲಸದಲ್ಲಿ, ಸೋಂಕಿತರನ್ನು ಆಸ್ಪತ್ರೆಗೆ ತಲುಪಿಸಲು ಉಚಿತ ಆಂಬುಲೆನ್ಸ್ ವ್ಯವಸ್ಥೆ ಮತ್ತೊಬ್ಬರು ಮಾಡಿದ್ದರೇ, ಅಂತ್ಯಸಂಸ್ಕಾರಕ್ಕೆ ನೆರವಾಗುವಂತ ಕೆಲಸವನ್ನು ಅನೇಕರು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಾಡುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಕೊರೋನಾ ಸೋಂಕಿತರಿಗೆ ಬೆಡ್ ವ್ಯವಸ್ಥೆ ಇಲ್ಲದೇ ರಾಜ್ಯದಲ್ಲಿ ಕೊರತೆ ಎದುರಾಗಿದೆ. ಸೋಂಕಿತರಿಗೆ ಬೆಡ್ ವ್ಯವಸ್ಥೆ ಮಾಡಬೇಕು ಎನ್ನುವ ನಿಲುವಿನೊಂದಿಗೆ ಉದಯವಾದಂತ ಬಿಎಂಸಿ 92 ಬ್ಯಾಚ್ ವೈದ್ಯರ ತಂಡವು, ಅಂತಿವಾಗಿ ಬೆಡ್ ಹುಡುಕಿ, ಆಸ್ಪತ್ರೆಗೆ ತೆರಳೋ ಸ್ಥಿತಿಗೆ ಸೋಂಕಿತರ ಆರೋಗ್ಯ ಸಾಗದೇ, ಮನೆಯಲ್ಲಿಯೇ ಹೋಂ ಐಸೋಲೇಷನ್ ಆಗಿ, ಅವರಿಗೆ ಯಾವೆಲ್ಲಾ ವ್ಯವಸ್ಥೆ ಮಾಡಬೇಕು ಎನ್ನುವಂತ ಪ್ಲಾನ್ ನೊಂದಿಗೆ 080-47166115 ಸಹಾಯವಾಣಿ ಸಂಖ್ಯೆಯನ್ನು ಆರಂಭಿಸಿದೆ.

ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದ್ರೇ.. ಕೊರೋನಾ ಸೋಂಕಿತ ಲಕ್ಷಣಗಳಿರೋರಿಗೆ, ಸೋಂಕಿತರಾದವರಿಗೆ ವೈದ್ಯರ ಸಲಹೆಯ ಜೊತೆಗೆ, ಆನಂತ್ರ ಆ ಸೋಂಕಿತ ವ್ಯಕ್ತಿಯ ಆರೋಗ್ಯ ಸ್ಥಿತಿ ಹೇಗಿದೆ ಎಂಬುದಾಗಿ ನಿರಂತರ ಫಾಲೋ ಅಪ್ ಕೂಡ ಈ ವೈದ್ಯರ ತಂಡದಿಂದ ಮಾಡಲಾಗುತ್ತಿದೆ. ಇಂತಹ ಸ್ವಯಂ ಕೊರೋನಾ ನಿಯಂತ್ರಣ ತಂಡದಲ್ಲಿ 230ಕ್ಕೂ ಹೆಚ್ಚು ವಾಲೆಂಟಿರಿಯರ್ಸ್ ಗಳು ಕೆಲಸ ಮಾಡುತ್ತಿದ್ದಾರೆ.

ಈ ಬಗ್ಗೆ ಜನಾಂದೋಲನದ ಡಾ.ವಾಸು ನಮ್ಮ ಕನ್ನಡ ನ್ಯೂಸ್ ನೌ ಜೊತೆಗೆ ಮಾತನಾಡಿ ಮಾಹಿತಿ ಹಂಚಿಕೊಂಡಿದ್ದು, ನಾನು ಬೆಂಗಳೂರು ಮೆಡಿಕಲ್ ಕಾಲೇಜಿನ 1992ರ ವಿದ್ಯಾರ್ಥಿ. ನಮ್ಮ ಬ್ಯಾಚ್ ನ ವೈದ್ಯರು ಮಾಡಿದ್ದಂತ ವಾಟ್ಸ್ ಆಪ್ ಗ್ರೂಪ್ ನಲ್ಲಿ ಕೊರೋನಾ ಸೋಂಕಿನ ರಾಜ್ಯದ ಈ ಪರಿಸ್ಥಿತಿಯಲ್ಲಿ ನೆರವಾಗುವಂತ ಚರ್ಚೆ ನಡೆಸಲಾಯಿತು. ಇದಕ್ಕೆ ಎಲ್ಲರೂ ಸಪೋರ್ಟ್ ಮಾಡಿದರು ಅಂದರು.

ಹೀಗೆ ನಮ್ಮ ಬ್ಯಾಚ್ ನ ತಂಡದೊಂದಿಗೆ ಅಮೇರಿಕಾದಲ್ಲಿರುವಂತ ವೈದ್ಯರು ಕೂಡ ವೆಂಟಿಲೇಟರ್, ವೆಂಟಿಲೇಟರ್ ಸೆಟ್ ಗಳನ್ನು ಕಳುಹಿಸಿಕೊಡುವಂತ ಕೆಲಸ ಮಾಡಿದ್ರು. ನಾವು ಸ್ಥಾಪಿಸಿರುವಂತ ವೈದ್ಯಕೀಯ ನೆರವಿನ ಸಹಾಯವಾಣಿ ಸಂಖ್ಯೆಗೆ ಬರೋ ಕರೆಗಳಲ್ಲಿ ಯಾರು ಸೋಂಕಿತರಿಗೆ ಹೋಂ ಐಸೋಲೇಷನ್ ನಲ್ಲಿ ಇದ್ದು, ವೆಂಟಿಲೇಟರ್ ಅಗತ್ಯ ಇದ್ಯೋ ಅವರಿಗೆ ಇಂತಹ ಸಲಕರಣೆ ಬಳಸಿಕೊಳ್ಳೋ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ನಾವು ಕರೆ ನೀಡಿದಂತ ಕೊರೋನಾ ಸೋಂಕಿತರಿಗೆ ನೆರವಾಗುವಂತ ಕರೆಗೆ 230ಕ್ಕೂ ಹೆಚ್ಚು ಸ್ವಯಂ ಸೇವಕರು ಕೈಜೋಡಿಸಿದ್ದಾರೆ. ಯುಕೆಯಲ್ಲಿರುವಂತ ಡಾಕ್ಟರ್ ಕೂಡ ಸಹಾಯವಾಣಿಯಲ್ಲಿ ಕೆಲಸ ಮಾಡುವಂತ ಇಂಗಿತ ವ್ಯಕ್ತ ಪಡಿಸಿದ್ದಾರೆ. ನಾವು ಕೂಡ ಸೋಂಕಿತರಿಗೆ ನೆರವಾಗೂವ ಸಲುವಾಗಿ ಹೆಚ್ ಬಿಎಸ್ ಆಸ್ಪತ್ರೆ ಹಾಗೂ ಮರ್ಸಿ ಮಿಷನ್ ಸಹಯೋಗದೊಂದಿಗೆ ಈಗ ಸ್ವಯಂ ಸೇವಕ ವೈದ್ಯಕೀಯ ಉಚಿತ ಮಾಹಿತಿಯ ಕೆಲಸ ಮಾಡುತ್ತಿದ್ದೇವೆ ಎಂದರು.

ಸದ್ಯಕ್ಕೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸೀಮಿತವಾಗಿರುವಂತ ಈ ಸೇವೆಯನ್ನು ರಾಜ್ಯಾಧ್ಯಂತ ವಿಸ್ತರಿಸೋ ಯೋಚನೆ ಇದೆ. ಕರ್ನಾಟಕ ಜನ ಶಕ್ತಿ ಜೊತೆ ಜನಸಹಾಯದ ಮೂಲಕ ಈ ಕಾರ್ಯಕ್ಕೆ ಮುಂದಾಗುತ್ತಿದ್ದೇವೆ. ನಾಡಿದ್ದು ಬೆಳಿಗ್ಗೆ ಕೊನೆಯ ಹಂತದ ಚರ್ಚೆ ನಡೆಯಲಿದ್ದು, ರಾಜ್ಯದ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಸ್ವಯಂ ಸೇವಕರಾಗಿ ನಾವು ಕಾರ್ಯ ನಿರ್ವಹಿಸಲಿದ್ದೇವೆ ಎಂದು ತಿಳಿಸಿದರು.

ಈ ಹಿನ್ನಲೆಯಲ್ಲಿ ನಿಮಗೆ ಕೊರೋನಾ ಲಕ್ಷಣಗಳು ಕಾಣಿಸಿಕೊಂಡಿದ್ದರೇ, ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದ್ದರೇ, ಆಕ್ಸಿಜನ್ ಬೆಡ್ ಸಿಗ್ತಾ ಇಲ್ಲ ಅಂದ್ರೆ.. 080-47166115 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದ್ರೇ.. ವೈದ್ಯರು ಮಾಹಿತಿಯ ಜೊತೆಗೆ ನಿಮಗೆ ಸಲಹೆ ನೀಡಿ, ಉಚಿತ ಕೌನ್ಸೆಲಿಂಗ್ ನೀಡಲಿದ್ದಾರೆ.

ವರದಿ : ವಸಂತ ಬಿ ಈಶ್ವರಗೆರೆ


CORONAVIRUS India Sports

ಚಿಕ್ಕಮಗಳೂರು : ಕೊರೋನಾ ಸೋಂಕು ತಗುಲಿದ್ದಂತ ನಿವೃತ್ತ ತಹಶೀಲ್ದಾರ್ ಒಬ್ಬರು, ಮನನೊಂದು ಆತ್ಮಹತ್ಯೆಗೆ ಶರಣಾಗಿರುವಂತ ಘಟನೆ ಚಿಕ್ಕಮಗಳೂರಿನ ತರೀಕರೆ ತಾಲೂಕಿನ ಬೇಲೇನಹಳ್ಳಿಯಲ್ಲಿ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಬೇಲೇನಹಳ್ಳಿ ತಾಂಡ್ಯದಲ್ಲಿ ಸೋಮಾ ನಾಯಕ್(72) ಎಂಬುವರು ಉಪ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸಿ, ನಿವೃತ್ತಿಯ ನಂತ್ರ, ತೋಟ ಮಾಡಿಕೊಂಡು ಇದ್ದರು.

ಹೀಗೆ ತಮ್ಮ ತೋಟದಲ್ಲಿ ಜೀವನ ನಿವೃತ್ತಿಯ ನಂತ್ರ ಜೀವನ ನಡೆಸುತ್ತಿದ್ದಂತ ಅವರಿಗೆ, ಇತ್ತೀಚೆಗೆ ಕೊರೋನಾ ಸೋಂಕು ತಗುಲಿತ್ತು. ಇದರಿಂದಾಗಿ ಮನನೊಂದ ಅವರು, ತಮ್ಮ ತೋಟದಲ್ಲಿ ಕಾರಿನಲ್ಲಿ ಕುಳಿತು, ತಾವೇ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಆಗಮಿಸಿದಂತ ಪೊಲೀಸರು ಪರಿಶೀಲನೆ ನಡೆಸಿದಾಗ ಡೆತ್ ನೋಟ್ ಕೂಡ ದೊರೆತಿದೆ.

ಡೆತ್ ನೋಟ್ ನಲ್ಲಿ ಏನ್ ಬರೆದಿದ್ದರು ಗೊತ್ತಾ.?

ನನ್ನಿಂದಲೇ ನನ್ನ ಮಕ್ಕಳಿಗೆ, ನನ್ನ ಮೊಮ್ಮಕ್ಕಳಿಗೆಲ್ಲಾ ಕೊರೋನಾ ಮಹಾಮಾರಿ ಹರಡುವಂತಾಯಿತು. ನನಗಂತೂ ವಯಸ್ಸಾಯಿತು. ಆದರೆ ನನ್ನ ಮಕ್ಕಳು, ಮೊಮ್ಮಕ್ಕಳು, ನನ್ನ ಕಣ್ಣೆದುರು ಏನಾದರೂ ಆದರೆ ಆ ನೋವು ನನಗೆ ಸಹಿಸಿಕೊಳ್ಳಲು ಆಗದೇ ಈ ತೀರ್ಮಾನ ಕೈಗೊಂಡಿದ್ದೇನೆ.

ಈ ನನ್ನ ಆತ್ಮಹತ್ಯೆಗೆ ನಾನೇ ಕಾರಣ. ದಯವಿಟ್ಟು ನನ್ನ ಮಕ್ಕಳಲ್ಲಿ, ನನ್ನ ಹೆಂಡತಿಯಲ್ಲಿ ಅದರಲ್ಲಿಯೂ ನನ್ನ ಮಗಳು ಅಶ್ವಿನಿ ಅಳಿಯ ವೆಂಕಟೇಶ್ ಇವರಲ್ಲಿ ನಾನು ಕ್ಷಮೆಯಾಚಿಸುತ್ತೇನೆ.

ನನಗೆ ಕೊರೋನಾ ಪಾಸಿಟಿವ್ ಇದ್ದ ಕಾರಣ ಅಗ್ನಿಸ್ಪರ್ಯ ಮಾಡಲು ಅನುಕೂಲವಾಗುವಂತ ಜಾಗ ಆರಿಸಿಕೊಂಡಿದ್ದೇನೆ. ಇದು ಪ್ರಪಂಚಕ್ಕೆ ಹರಡಿದ ಕೆಟ್ಟ ಕಾಯಿಲೆ. ನನ್ನ ಬಗ್ಗೆ ಯಾರೂ ಯೋಚಿಸಬೇಡಿ. ನಿಮ್ಮ ಜೀವಕ್ಕೆ ದಾರಿ ಮಾಡಿದ್ದೇನೆ. ನನಗೆ ಈ ಜೀವನ ಸಾಕು. ಡಿಸಿಸಿ ಬ್ಯಾಂಕಿನ ನನ್ನ ಖಾತೆಯಲ್ಲಿ 1.28 ಲಕ್ಷ ರೂ ಇದ್ದು, ಈ ಹಣವನ್ನು ಜಮೆ ಮಾಡಬೇಕು. ನಾನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಟ್ಟಿದ್ದೇನೆ. ನ

ನ್ನ ಚೈನು, ಉಂಗುರ ಬೀರೂವಿನಲ್ಲಿ ಇದೆ ತೆಗೆದುಕೊಳ್ಳಿ. ನನ್ನ ಬಗ್ಗೆ ಯಾರೂ ಯೋಚಿಸಬೇಡಿ. ನನಗೆ ಜೀವನ ಸಾಕು. ನನ್ನಿಂದ ಕುಟುಂಬಸ್ಥರಿಗೆ ಯಾರಿಗೂ ಏನೂ ಆಗುವುದು ಬೇಡ. ನೀವೆಲ್ಲರೂ ಚೆನ್ನಾಗಿ ಇರಿ ಎಂಬುದಾಗಿ ಡೆತ್ ನೋಟ್ ನಲ್ಲಿ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.


CORONAVIRUS KARNATAKA State

ಗದಗ : ಚಾಮರಾಜನಗರ ಜಿಲ್ಲೆಯಲ್ಲಿ ಆಕ್ಸಿಜನ್ ಸಿಗದೇ ಕೊರೋನಾ ಸೋಂಕಿತರು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ, ರಾಜ್ಯದಲ್ಲಿ ಮತ್ತೊಂದು ಇದೇ ಮಾದರಿಯ ದುರಂತ ಗದಗ ಜಿಲ್ಲೆಯ ಮುಂಡರಗಿ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ. ಆಕ್ಸಿಜನ್ ಸಿಗದೇ ನಿನ್ನೆಯಿಂದ ಮೂವರು ಕೊರೋನಾ ಸೋಂಕಿತರು ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.

ಗದಗ ಜಿಲ್ಲೆಯ ಮುಂಡರಗಿ ತಾಲೂಕು ಆಸ್ಪತ್ರೆಯಲ್ಲಿ 58 ವೆಂಟಿಲೇಟರ್ ಬೆಡ್ ಇದ್ದಾವೆ. ಇಂತಹ ಬೆಡ್ ಗಳು ಭರ್ತಿಯಾಗಿ, ನಿನ್ನೆ ವೆಂಟಿಲೇಟರ್ ಬೆಡ್ ಸಿಗದೇ ಮಹಿಳೆಯೊಬ್ಬರು ಸಾವನ್ನಪ್ಪಿದ್ದರೇ, ಇಂದು ಮತ್ತೆ ಇಬ್ಬರು ವೆಂಟಿಲೇಟರ್ ಬೆಡ್ ಸಿಗದೇ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.

ವೆಂಟಿಲೇಟರ್ ಬೆಡ್ ಗಾಗಿ ಸುತ್ತಾಡಿದ್ದಂತ ರೋಗಿಗಳಿಗೆ ಮುಂಡರಗಿ ತಾಲೂಕು ಆಸ್ಪತ್ರೆಯಲ್ಲಿ ಸಿಗದೇ ಆಕ್ಸಿಜನ್ ಹಾಹಾಕಾರ ಕೂಡ ಎದ್ದಿದೆ. ಈ ಮೂಲಕ ಗದಗ ಜಿಲ್ಲೆಯ ಮುಂಡರಗಿ ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಹಾಹಾಕಾರ ಎದ್ದು, ರೋಗಿಗಳ ಸಾವಿನ ಸಂಖ್ಯೆ ಏರುಗತಿಯತ್ತ ಸಾಗುತ್ತಿದೆ.


CORONAVIRUS KARNATAKA State

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಹೆಚ್ಚಳದಿಂದಾಗಿ ಸರ್ಕಾರ ಲಾಕ್ ಡೌನ್ ಜಾರಿಗೆ ತರಲಾಗಿದೆ. ಈ ಸಂದರ್ಭದಲ್ಲಿ ಸರ್ಕಾರದ ಜೊತೆಗೆ ಕೈಜೋಡಿಸಬೇಕಿದ್ದಂತ ಸಿದ್ದರಾಮಯ್ಯ ಅವರು, ಜನತೆಯನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂಬುದಾಗಿ ಕರ್ನಾಟಕ ಬಿಜೆಪಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದೆ.

ಈ ಕುರಿತಂತೆ ಟ್ವಿಟ್ ಮಾಡಿರುವಂತ ಬಿಜೆಪಿ, ವಲಸೆ ನಾಯಕ ಸಿದ್ದರಾಮಯ್ಯ ಅವರೇ, ಜನರು ದಂಗೆ ಏಳಲು ಅವರೇನು ನಿಮ್ಮಷ್ಟು ಕೀಳು‌ ಮನಸ್ಥಿತಿಯನ್ನು ಹೊಂದಿಲ್ಲ.‌ ಜನರಿಗೆ ದೇಶದ, ನಾಡಿನ‌ ಸಂಕಷ್ಟದ ಬಗ್ಗೆ ಅರಿವಿದೆ.‌ ಸರ್ಕಾರದೊಂದಿಗೆ ಸಹಕರಿಸುತ್ತಾರೆ. ನಿಮಗೆ ಸದಾ ಬಂಡೇಳುವುದರ ಬಗ್ಗೆಯೆ ಚಿಂತೆ. 1983 ರಿಂದ 2006 ರ ವರೆಗೆ ನೀವು ಬಂಡೆದ್ದ ಇತಿಹಾಸ ದೊಡ್ಡದಿದೆ ಎಂದಿದೆ.

ವಿಪಕ್ಷ ನಾಯಕನಂತಹ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಸಿದ್ದರಾಮಯ್ಯ ಅವರು ದೇಶದ ಸಂಕಷ್ಟ, ನಾಡಿನ ಸಂಕಷ್ಟದ ಸಮಯದಲ್ಲಿ ಸರ್ಕಾರದ ಜೊತೆ ನಿಲ್ಲಬೇಕಿತ್ತು. ದುರ್ದೈವವೆಂದರೆ, ಸಂಕಷ್ಟದ ಸಮಯದಲ್ಲಿ ಸರ್ಕಾರದ ವಿರುದ್ಧ ಜನರನ್ನು ಎತ್ತಿಕಟ್ಟುವ ನೀಚ ಕೆಲಸಕ್ಕೆ #ಬುರುಡೆರಾಮಯ್ಯ ಇಳಿದಿದ್ದಾರೆ. ಜನತೆ ನಿಮ್ಮನೆಂದೂ ಕ್ಷಮಿಸಲಾರರು ಎಂದಿದೆ.


CORONAVIRUS KARNATAKA State

ಕೆಎನ್ಎನ್ ಡಿಜಿಟಲ್ ಡೆಸ್ಕ್ : ರಾಜ್ಯದಲ್ಲಿ ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ಇಂದಿನಿಂದ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಕೊರೋನಾ ಕರ್ಪ್ಯೂ ನಿಂದ ನಿಯಂತ್ರಣವಾಗದಂತ ಕೊರೋನಾ ಸೋಂಕಿನ ನಿಯಂತ್ರಣವನ್ನು ಲಾಕ್ ಡೌನ್ ಮೂಲಕ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ ನಿಯಮವನ್ನು ರಾಜ್ಯ ಸರ್ಕಾರ ಏರಿಕೆ ಮಾಡಿದೆ. ಇಂದಿನಿಂದ ಜಾರಿಯಾಗಿರುವಂತ ಲಾಕ್ ಡೌನ್ ಸಂದರ್ಭದಲ್ಲಿ ನೀವು ಮನೆಯಿಂದ ಅನಗತ್ಯವಾಗಿ ಹೊರಗೆ ಬಂದ್ರೆ ಪೊಲೀಸರ ಲಾಠಿ ರುಚಿ ನೋಡಬೇಕಾಗುತ್ತದೆ. ಜೊತೆಗೆ ನೀವು ಅರೆಸ್ಟ್.. ನಿಮ್ಮ ವಾಹನವೂ ಸೀಜ್ ಆಗಲಿದೆ.

ಹೌದು.. ಇಂದಿನಿಂದ ಜಾರಿಗೊಂಡಿರುವಂತ ಲಾಕ್ ಡೌನ್ ಸಂದರ್ಭದಲ್ಲಿ ಅನಗತ್ಯವಾಗಿ ಮನೆಯಿಂದ ಹೊರ ಬರೋರಿಗೆ ಪೊಲೀಸರ ಲಾಠಿ ರುಚಿಯ ಗಿಫ್ಟ್ ಸಿಗೋದು ಗ್ಯಾರಂಟಿ. ರಾಜ್ಯದೆಲ್ಲೆಡೆ ಪೊಲೀಸರು ಸಂಪೂರ್ಣ ಲಾಕ್ ಡೌನ್ ನಿಯಮ ಜಾರಿಗೆ ಕಟ್ಟಾಳು ರೀತಿಯಲ್ಲಿ ಕ್ರಮ ವಹಿಸಿದ್ದು, ರಸ್ತೆಗಳಲ್ಲಿ ಬ್ಯಾರಿಗೇಡ್ ಹಾಕಿಕೊಂಡು ಅನಗತ್ಯವಾಗಿ ಓಡಾಡೋರಿಗೆ ಕೆಲವು ಸಂದರ್ಭದಲ್ಲಿ ಬುದ್ದಿ ವಾದ ಹೇಳಿ ಕಳಿಸಿದ್ರೆ.. ಮತ್ತೆ ಕೆಲವೆಡೆ ಲಾಠಿ ರುಚಿಯನ್ನು ತೋರಿಸ್ತಾ ಇದ್ದಾರೆ.

ಇನ್ನೂ ಲಾಕ್ ಡೌನ್ ನಿಯಮ ಮೀರಿ ರಸ್ತೆಗಿಳಿದಂತ ವಾಹನಗಳನ್ನು ಅನೇಕ ಕಡೆಯಲ್ಲಿ ಪೊಲೀಸರು ಸೀಜ್ ಕೂಡ ಮಾಡಿದ್ದಾರೆ. ಪೊಲೀಸರ ಜೊತೆಗೆ ವಾಗ್ವಾದ ನಡೆಸಿ, ಜಗಳಕ್ಕೆ ಇಳಿಯುವವರ ವಿರುದ್ಧ ಎಪಿಡಮಿಕ್ ಕಾಯ್ದೆ ಅನುಸಾರವಾಗಿ ಬಂಧಿಸಿ, ಕಾನೂನು ಕ್ರಮ ಕೂಡ ಜರುಗಿಸಿದ್ದಾರೆ. ಈ ಎಲ್ಲಾ ಕಾರಣದಿಂದಾಗಿ ನೀವು ಇಂದಿನಿಂದ ಮೇ.24ರವರೆಗೆ ಮನೆಯಿಂದ ಅನಗತ್ಯವಾಗಿ ಹೊರಗೆ ಬರೋದನ್ನು ನಿಲ್ಲಿಸಿ. ರಾಜ್ಯದಲ್ಲಿ ಕೊರೋನಾ ಸೋಂಕಿನ ನಿಯಂತ್ರಣಕ್ಕೆ ಕೈಜೋಡಿಸಿ ಎಂಬುದು ನಮ್ಮ ಕನ್ನಡ ನ್ಯೂಸ್ ನೌ ಮನವಿ ಕೂಡ ಆಗಿದೆ.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಟ್ವಿಟ್ ಕೂಡ ಮಾಡಿದ್ದು, ಕೋವಿಡ್ ಸೋಂಕಿನ ಸರಪಳಿಯನ್ನು ಮುರಿಯಲು ಇಂದಿನಿಂದ ಮತ್ತಷ್ಟು ಕಠಿಣ ಕ್ರಮಗಳನ್ನು ವಿಧಿಸಲಾಗಿದೆ. ಎಲ್ಲಾ ಸಂಸದರು ಮತ್ತು ಶಾಸಕರು ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಉಳಿದು, ಉದ್ದೇಶ ಈಡೇರುವ ನಿಟ್ಟಿನಲ್ಲಿ ಕಟ್ಟುನಿಟ್ಟಾಗಿ ನಿಯಮಗಳು ಜಾರಿಯಾಗುವುದನ್ನು ಖಚಿತಪಡಿಸಬೇಕು ಎಂದು ಮನವಿ ಮಾಡಿದ್ದಾರೆ.


CORONAVIRUS Dakshina Kannada KARNATAKA State

ಮಂಗಳೂರು : ರಾಜ್ಯದಲ್ಲಿ ಇಂದಿನಿಂದ ಜಾರಿಗೆ ಬಂದಿರುವಂತ ಲಾಕ್ ಡೌನ್ ಮಾರ್ಗಸೂಚಿಯಲ್ಲಿ ಅನೇಕ ಗೊಂದಲಗಳು ಜನರಲ್ಲಿ ಉಂಟಾಗಿವೆ. ಇಂತಹ ಕೆಲ ಗೊಂದಲಕ್ಕೆ ಮಂಗಳೂರು ಪೊಲೀಸ್ ಕಮೀಷನರ್ ಮಾಹಿತಿ ನೀಡಿದ್ದು.. ಆ ಮಾಹಿತಿ ಏನ್ ಅಂತ ಮುಂದೆ ಓದಿ..

ಸಾರ್ವಜನಿಕರಿಗೆ ಲಾಕ್ ಡೌನ್ ಸಂದರ್ಭದಲ್ಲಿ ಅಗತ್ಯ ವಸ್ತು ಖರೀದಿಸಿದೋಕ್ಕಾಗಿ ಖರೀದಿಸಿದಂತ ಅಗತ್ಯ ವಸ್ತುಗಳನ್ನು ಕೊಂಡೊಯ್ಯೋದಕ್ಕಾಗಿ ವಾಹನಗಳಲ್ಲಿ ಬರೋದು ನಿಷೇಧ ಎಂಬುದಾಗಿ ಮಾರ್ಗಸೂಚಿಯಲ್ಲಿ ತಿಳಿಸಲಾಗಿತ್ತು. ಈ ಕುರಿತಂತೆ ಸಾರ್ವಜನಿಕರ ಗೊಂದಲಕ್ಕೆ ತೆರೆ ಏಳೆದಿರುವಂತ ಮಂಗಳೂರು ನಗರ ಪೊಲೀಸ್ ಕಮೀಷನರ್ ಬೆಳಿಗ್ಗೆ 6 ರಿಂದ 9 ಗಂಟೆಯವರೆಗೆ ಅಗತ್ಯವಿದ್ದರೆ ವಾಹನ ಬಳಸಬಹುದಾಗಿದೆ ಎಂಬುದಾಗಿ ತಿಳಿಸಿದ್ದಾರೆ.

ಇನ್ನೂ ಮನೆಯಿಂದ ಅಂಗಡಿ ಹತ್ತಿರವಿದ್ದೂ ವಾಹನ ತಗೊಂಡು ಬಂದು ಅಗತ್ಯ ವಸ್ತು ಖರೀದಿಸಬೇಡಿ. ದೂರ ಇದ್ದಾಗ ಮಾತ್ರ ವಾಹನಗಳಲ್ಲಿ ಬಂದು ಅಗತ್ಯವಸ್ತು ಖರೀದಿಸಿ, ಮನೆಗೆ ಕೊಂಡೊಯ್ಯಲು ವಿನಂತಿಸಿದ್ದಾರೆ.

ನಗರದಲ್ಲಿನ ಖಾಸಗಿ ಕಂಪನಿ ಅಥವಾ ಕಾರ್ಖಾನೆಗಳ ಉದ್ಯೋಗಿಗಳು ಗುರುತಿನ ಚೀಟಿ ತೋರಿಸಿ, ವಾಹನದಲ್ಲಿ ಹೋಗಬಹುದಾಗಿದೆ ಎಂಬುದಾಗಿ ತಿಳಿಸಿದ್ದಾರೆ. ಈ ಮೂಲಕ ಸಾರ್ವಜನಿಕರ ಕೆಲ ಗೊಂದಲಕ್ಕೆ ತೆರೆ ಎಳೆದಿದ್ದಾರೆ.


CORONAVIRUS India KARNATAKA State

ನವದೆಹಲಿ : ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಲ್ಲಿ ಈಗಾಗಲೇ ಲಾಕ್ ಡೌನ್ ಘೋಷಿಸಲಾಗಿದ್ದು, ಇಂದಿನಿಂದ ತಮಿಳುನಾಡು, ಪುದುಚೇರಿ, ಕರ್ನಾಟಕ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಮೇ. 24 ರವರೆಗೆ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.

ಕೊರೊನಾ ವೈರಸ್ 2 ನೇ ಅಲೆ ಹಿನ್ನೆಲೆಯಲ್ಲಿ ದೆಹಲಿ ಸೆರಿದಂತೆ ಹಲವು ರಾಜ್ಯಗಳಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದ್ದು, ಇದೀಗ ಕರ್ನಾಟಕ, ತಮಿಳುನಾಡು, ಪುದುಚೇರಿ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ.

ಕರ್ನಾಟಕದಲ್ಲಿ ಇಂದಿನಿಂದ ಬಿಗಿ ಲಾಕ್ ಡೌನ್ ಜಾರಿಗೆ ಬಂದಿದ್ದು, ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಕಿರಾಣಿ ಅಂಗಡಿ, ಮದ್ಯದ ಅಂಗಡಿ, ಮಾಂಸ, ತರಕಾರಿ ಅಂಗಡಿ ತೆರೆಯಲಿದ್ದು, ಬಳಿಕ ವ್ಯಾಪಾರಕ್ಕೆ ಅವಕಾಶ ಇಲ್ಲ. ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಗಾಗಿ ಅಂಗಡಿಗೆ ನಡೆದುಕೊಂಡೇ ಹೋಗಬೇಕು ಎಂದು ತಿಳಿಸಲಾಗಿದೆ.

ಇನ್ನು ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,66,161 ಮಂದಿಗೆ ಹೊಸದಾಗಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಾಖಲಾಗಿವೆ . ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 2,26,62,575 ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಲ್ಲಿ 3,754 ಕೊರೊನಾ ಸೋಂಕಿತರು ಮೃತಪಟ್ಟಿದ್ದು, ಈ ಮೂಲಕ ದೇಶದಲ್ಲಿ ಕೊರೊನಾ ವೈರಸ್ ಸೋಂಕಿಗೆ ಮೃತಪಟ್ಟವರ ಸಂಖ್ಯೆ 2,46,116 ಕ್ಕೆ ಏರಿಕೆಯಾಗಿದೆ.


CORONAVIRUS KARNATAKA State

ಬೆಂಗಳೂರು : ಲಾಕ್ ಡೌನ್ ಅಲ್ಲದ ಕಠಿಣ ಲಾಕ್ ಡೌನ್, ಜನ ಹೊರಗೆ ಬಂದರೆ ದನಕ್ಕೆ ಬಡಿದಂತೆ ಬಡಿಯುವ ಲಾಕ್ ಡೌನ್ ಇಂದಿನಿಂದ ಜಾರಿಗೆ ಬರಲಿದೆ. ಜನಸಂಚಾರ ತಡೆಯುವುದೇ ಲಾಕ್ ಡೌನ್ ಎಂದು ಭಾವಿಸಿರುವ ಸರ್ಕಾರ ಸಂಕಷ್ಟದಲ್ಲಿ ನಾಗರಿಕರನ್ನು ಮರೆತಿರುವುದು ದುರಂತ. ನಾವು ಸೂಚಿಸಿದ ಲಾಕ್ ಡೌನ್ ಇದಾಗಿರಲಿಲ್ಲ. ನಾವು ಹೇಳಿದ್ದು ಜನಹಿತದ ಲಾಕ್ ಡೌನ್ ಆಗಿತ್ತು ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಈ ಕುರಿತಂತೆ ಟ್ವಿಟ್ ಮಾಡಿರುವ ಅವರು, ಲಾಕ್ ಡೌನ್ ಮಾಡಿ ಜನರ ಜೀವ ಉಳಿಸಿ ಎಂದು ನಾನು ಮೊದಲೇ ಹೇಳಿದ್ದೆ. ಹಾಗೆ ಹೇಳುವಾಗ ಲಾಕ್ ಡೌನ್ ನಿಂದ ಜನ ಜೀವನಕ್ಕೆ ಆಗುವ ತೊಂದರೆಗಳಿಗೆ ಪರಿಹಾರ ಕ್ರಮಗಳಿರಬೇಕು, ಜನರ ಅಗತ್ಯವನ್ನು ಸರ್ಕಾರ ಭರಿಸಬೇಕೆಂದು ಹೇಳಿದ್ದೆ. ಆದರೆ, ಲಾಕ್ ಡೌನ್ ಸಂದರ್ಭದಲ್ಲಿ ನೀಡಬೇಕಾದ ಪರಿಹಾರ ಕ್ರಮಗಳಿಂದ ವಿಮುಖವಾಗಿರುವ ಸರ್ಕಾರ ಬೇಜವಾಬ್ದಾರಿತನ ತೋರಿದೆ ಎಂದಿದ್ದಾರೆ.

ಜನರಿಗೆ ಎಲ್ಲಿ ಪರಿಹಾರ ನೀಡಬೇಕಾಗುತ್ತದೆಯೋ, ಜೀವನ ನಿರ್ವಹಣೆಗೆ ನೆರವು ನೀಡಬೇಕಾಗಿ ಬರುತ್ತದೆಯೋ ಎಂಬ ದುರಾಲೋಚನೆ ಮಾಡಿರುವ ಸರ್ಕಾರ ಲಾಕ್ ಡೌನ್ ಎಂಬ ಪದವನ್ನು ಧೈರ್ಯದಿಂದ ಹೇಳುತ್ತಲೇ ಇಲ್ಲ. ಕಠಿಣ ನಿಯಮ ಎಂದು ಹೇಳಿ ಲಾಕ್ ಡೌನ್ ನಿಂದ ದೂರ ನಿಂತಿದೆ. ಕೇಂದ್ರವೂ ಇದೇ ಕುತಂತ್ರದ ನಡೆಯನ್ನು ಅನುಸರಿಸಿ ಜವಾಬ್ದಾರಿಯಿಂದ ನುಣುಚಿಕೊಂಡಿದೆ ಎಂದು ಕಿಡಿ ಕಾರಿದ್ದಾರೆ.

ಲಾಕ್ ಡೌನ್ ಎಂದರೆ ಜನ ಹೊರ ಹೋಗಲಾಗದ ಪರಿಸ್ಥಿತಿ. ಬದುಕಿನ ಅಗತ್ಯವನ್ನು ದುಡಿದುಕೊಳ್ಳಲಾಗದ ದುಸ್ಥಿತಿ. ಸರ್ಕಾರವೇ ಇದರ ಹೊಣೆಗಾರ, ಅದಕ್ಕೆ ಸರ್ಕಾರವೇ ಪರಿಹಾರ ನೀಡಬೇಕು ಎಂಬುದೂ ನನ್ನ ನಿಲುವು, ಸಲಹೆ. ಸರ್ಕಾರ ಸಂಪೂರ್ಣ ಲಾಕ್ ಡೌನ್ ಘೋಷಿಸಬೇಕಿತ್ತು ಮತ್ತು ಪರಿಹಾರ ನೀಡಬೇಕಿತ್ತು. ಆದರೆ ಈವರೆಗೆ ಪರಿಹಾರ ಪ್ಯಾಕೇಜ್ ನ ಮಾತೇ ಇಲ್ಲ ಎಂಬುದಾಗಿ ಹೇಳಿದ್ದಾರೆ.

ಮಹಾರಾಷ್ಟ್ರ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಕೇಂದ್ರ ಸರ್ಕಾರಕ್ಕೆ ಕಾಯದೇ ಲಾಕ್ ಡೌನ್ ಮಾಡಿವೆ. ಜನರಿಗೆ ಆಹಾರ ಸೇರಿದಂತೆ ಪರಿಹಾರ ಘೋಷಿಸಿವೆ. ಆಂಧ್ರದಲ್ಲಿ ಸೋಂಕಿತರಿಗೆ ಉಚಿತ ಚಿಕಿತ್ಸೆ ಸಿಗುತ್ತಿದೆ. ಇದು ಸರ್ಕಾರಗಳ ಜವಾಬ್ದಾರಿಯುತ ನಡೆ. ಆದರೆ, ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೇಂದ್ರದ ದುರ್ನಡೆಯನ್ನು ರಾಜ್ಯ ಅನುಸರಿಸಬಾರದು ಎಂದು ಕಿಡಿಕಾರಿದ್ದಾರೆ.

ಮನೆಗಳಿಂದ ಹೊರ ಬರುವ ಜನರ ಮೇಲೆ ದರ್ಪ ಪ್ರದರ್ಶಿಸುವುದನ್ನು ಬಿಟ್ಟು, ಜನ ಹೊರಗೆ ಬಾರದಂತೆ ಅವರ ಅಗತ್ಯಗಳನ್ನು ಪೂರೈಸುವ, ಪರಿಹಾರ ಒದಗಿಸುವ ಕ್ರಮಗಳತ್ತ ಸರ್ಕಾರ ಗಮನಹರಿಸಬೇಕು. ಈ ವಿಚಾರದಲ್ಲಿ ನೆರೆ ರಾಜ್ಯಗಳು ಅನುಸರಿಸುತ್ತಿರುವ ಕ್ರಮಗಳನ್ನು ರಾಜ್ಯ ಅವಲೋಕಿಸಬೇಕು. ಜನರ ಆರೋಗ್ಯ ಎಷ್ಟು ಮುಖ್ಯವೋ ಜನರ ಬದುಕೂ ಅಷ್ಟೇ ಮುಖ್ಯವಾಗಬೇಕು ಎಂದಿದ್ದಾರೆ.


CORONAVIRUS KARNATAKA State

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಲಸಿಕೆ ಪಡೆಯುವ ನಿರೀಕ್ಷೆಯಲ್ಲಿದ್ದ 18 ವರ್ಷ ಮೇಲ್ಪಟ್ಟವರಿಗೆ ಬಿಗ್ ಶಾಕ್ ಎದುರಾಗಿದ್ದು, ಇಂದಿನಿಂದ ರಾಜ್ಯದಲ್ಲಿ ಕಠಿಣ ಲಾಕ್ ಡೌನ್ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಿಗೆ ಲಸಿಕೆ ಪಡೆಯಲು ಬರಲು ಸಮಸ್ಯೆ ಅಗುತ್ತದೆ ಹೀಗಾಗಿ 14 ದಿನ ಮುಂದೂಡುವ ಬಗ್ಗೆ ಚರ್ಚೆ ಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್ ಅವರು,  ಬೆಂಗಳುರು ಸೇರಿದಂತೆ ರಾಜ್ಯದಲ್ಲಿ ಲಸಿಕೆ ಕೊರತೆ ಇಲ್ಲ. ರಾಜ್ಯಕ್ಕೆ 5 ಲಕ್ಷ ಡೋಸ್ ಬಂದಿದೆ. ಯುವಕರಿಗೆ ನೀಡಲು ಯಾವುದೇ ಸಮಸ್ಯೆ ಇಲ್ಲ,ಇಂದಿನಿಂದ ಹಲವು ನಿರ್ಬಂಧಗಳಿವೆ ಹೀಗಾಗಿ ಸಮಸ್ಯೆ ಎದುರಾಗಿದ್ದು, ಆಸ್ಪತ್ರೆಗಳಿಗೆ ಲಸಿಕೆ ಪಡೆಯಲು ಬರಲು ಸಮಸ್ಯೆ ಆಗುತ್ತೆ. ಹೀಗಾಗಿ 14 ದಿನ ಮುಂದೂಡುವ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಜೊತೆ ಚರ್ಚೆ ನಡೆಸಲಾಗಿದೆ ಎಂದು ಹೇಳಿದ್ದಾರೆ.

ಇನ್ನೂ ಸುಧಾಕರ್‌ ಅವರ ಈ ಮಾತಿಗೆ ವ್ಯಾಪಕ ಟೀಕೆಗೆ ಈಡಾಗುತ್ತಿದ್ದು, ಲಸಿಕೆ ನೀಡದ ಹೊರತು ಕರೊನವನ್ನು ಮಟ್ಟ ಹಾಕಲು ಹೇಗೆ ಸಾಧ್ಯ ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಇದಲ್ಲದೇ ಕರೊನ ಲಸಿಕೆ ತೆಗೆದುಕೊಳ್ಳಲು ಲಸಿಕ ಕೇಂದ್ರಗಳಿಗೆ ಹೋಗುವವರಿಗೆ ಅವಶ್ಯವಕಾಗಿ ವಾಹನ ಬೇಕಾಗಿದ್ದು, ಈ ನಿಟ್ಟಿನಲ್ಲಿ ಆಂತಹವರಿಗೆ ನಿಗದಿತ ಸಮಯ/ಸಮಯದಲ್ಲಿ ಪಾಸ್‌ ಇಲ್ಲವೇ ನೊಂದಾಯಿತ ಮೊಬೈಲ್‌ ನಂಬರ್‌ ಗೆ ಬರುವ ಓಟಿಪಿಯನ್ನು ಅಧಾರವಾಗಿ ಇಟ್ಟುಕೊಂಡು ಪೊಲೀಸರಿಗೆ ಸಂಚಾರ ಮಾಡಲು ಅವಕಾಶ ನೀಡಬೇಕು ಅಂತ ಜನತೆ ಸುಧಾಕರ್‌ ಅವರಿಗೆ ಬುದ್ದಿ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಸುಧಾಕರ್‌ ಅವರು ಪ್ರತಿ ದಿನ ನೀಡುತ್ತಿರುವ ಹೇಳಿಕೆಗಳು ಜನತೆಯಲ್ಲಿ ಗೊಂದಲಕ್ಕೆ ಕಾರಣವಾಗುತ್ತಿದೆ. ಇನ್ನದ್ರು ಸುಧಾಕರ್‌ ಅವರು ತೂಕದ ಹೇಳಿಕೆಗಳನ್ನು ನೀಡುತ್ತಾರ? ಎನ್ನುವುದನ್ನ ಕಾದು ನೋಡಬೇಕಾಗಿದೆ.

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮೇ. 10 ರ ಇಂದಿನಿಂದ ಮೇ. 24 ರವರೆಗೆ ಬೆಂಗಳೂರು ಸೇರಿ ರಾಜ್ಯಾದ್ಯಂತ ಕಠಿಣ ಲಾಕ್ ಡೌನ್ ಜಾರಿಗೊಳಿಸಲಾಗಿದೆ.


CORONAVIRUS KARNATAKA State

ಚಾಮರಾಜನಗರ : ಚಾಮರಾಜ ನಗರ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಸಾವಿನ ಸಂಖ್ಯೆಯೂ ಏರಿಕೆಯಾಗುತ್ತಿದೆ.

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮತ್ತೆ 12 ಜನರು ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ.ಇನ್ನು ಚಾಮರಾಜನಗರದಲ್ಲಿ 50 ಕ್ಕೂ ಹೆಚ್ಚು ಪೊಲೀಸರಿಗೆ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿವೆ.

ಇನ್ನು ರಾಜ್ಯದಲ್ಲಿ ಕಳೆದ ನಿನ್ನೆ ಒಂದೇ ದಿನ 47,930 ಹೊಸ ಪ್ರಕರಣಗಳು ವರದಿಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 5,64,485 ಪ್ರಕರಣಗಳಿವೆ. ಇನ್ನು ರಾಜ್ಯದಲ್ಲಿ ನಿನ್ನೆ ಒಂದೇ ದಿನ 490 ಜನರು ಕೊರೊನಾ ಮಹಾಮಾರಿಗೆ ಬಲಿಯಾಗಿದ್ದು, ಈ ಮೂಲಕ ಒಟ್ಟು ಕೊರೊನಾ ಸೋಂಕಿಗೆ ಸಾವನ್ನಪ್ಪಿದವರ ಸಂಖ್ಯೆ 17,776 ಕ್ಕೆ ಏರಿಕೆಯಾಗಿದೆ.


CORONAVIRUS India

ನವದೆಹಲಿ ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿದ್ದು ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,66,161 ಮಂದಿಗೆ ಹೊಸದಾಗಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಾಖಲಾಗಿವೆ .

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,66,161 ಮಂದಿಗೆ ಹೊಸದಾಗಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಾಖಲಾಗಿವೆ . ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 2,26,62,575 ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಲ್ಲಿ 3,754 ಕೊರೊನಾ ಸೋಂಕಿತರು ಮೃತಪಟ್ಟಿದ್ದು, ಈ ಮೂಲಕ ದೇಶದಲ್ಲಿ ಕೊರೊನಾ ವೈರಸ್ ಸೋಂಕಿಗೆ ಮೃತಪಟ್ಟವರ ಸಂಖ್ಯೆ 2,46,116 ಕ್ಕೆ ಏರಿಕೆಯಾಗಿದೆ.

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 3,53,818 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಈಮೂಲಕ ಒಟ್ಟು ಸೋಂಕಿತರ ಪೈಕಿ ಈವರೆಗೆ 1,86,71,222 ಜನರು ರೋಗದಿಂದ ಚೇತರಿಸಿಕೊಂಡಿದ್ದಾರೆ . ಸದ್ಯ ದೇಶದಲ್ಲಿ 37,45,116 ಸಕ್ರಿಯ ಪ್ರಕರಣಗಳಿವೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಒಟ್ಟು ಪ್ರಕರಣಗಳು: 2,26,62,575

ಒಟ್ಟು ಡಿಸ್ಚಾರ್ಜ್ ಗಳು: 1,86,71,222

ಸಾವಿನ ಸಂಖ್ಯೆ: 2,46,116

ಸಕ್ರಿಯ ಪ್ರಕರಣಗಳು: 37,45,237

ಒಟ್ಟು ಲಸಿಕೆ: 17,01,76,603


Bangalore CORONAVIRUS KARNATAKA State

ಬೆಂಗಳೂರು : ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ರಾಜ್ಯಾಧ್ಯಂತ ಇಂದಿನಿಂದ ಮೇ.24ರವರೆಗೆ ಸಂಪೂರ್ಣ ಲಾಕ್ ಡೌನ್ ಅನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಿಸಿದ್ದಾರೆ. ಪರಿಷ್ಕೃತ ಮಾರ್ಗಸೂಚಿಯಂತೆ ಮೇ.10ರ ಬೆಳಿಗ್ಗೆ 6 ಗಂಟೆಯಿಂದ ಮೇ.24ರ ಬೆಳಿಗ್ಗೆ 6 ಗಂಟೆಯವರೆಗೆ ಯಾವುದಕ್ಕೆ ಅವಕಾಶ ನೀಡಲಾಗಿದೆ.? ಯಾವುದಕ್ಕೆ ಅವಕಾಶ ನೀಡಲಾಗಿಲ್ಲ ಎನ್ನುವ ಬಗ್ಗೆ ಮುಂದೆ ಓದಿ.

ರಾಜ್ಯದಲ್ಲಿ ಕೊರೋನಾ 2ನೇ ಅಲೆಯ ನಿಯಂತ್ರಣಕ್ಕಾಗಿ ಮೊದಲು ನೈಟ್ ಕರ್ಪ್ಯೂ, ಆನಂತ್ರದ ವಾರಾಂತ್ಯ ಸಂಪೂರ್ಣ ಕರ್ಪ್ಯೂ ಬಳಿಕ, ಕೊರೋನಾ ಕರ್ಪ್ಯೂ ಜಾರಿಗೊಳಿಸಲಾಗಿತ್ತು. ಆದ್ರೇ.. ಕೊರೋನಾ ಮಾತ್ರ ಕಂಟ್ರೋಲ್ ಆಗಲೇ ಇಲ್ಲ. ದಿನವೊಂದಕ್ಕೆ ಅರ್ಧ ಲಕ್ಷ ಸಮೀಪದಷ್ಟು ಜನರಿಗೆ ಹೊಸದಾಗಿ ಕೊರೋನಾ ಪಾಸಿಟಿವ್ ಎಂಬುದಾಗಿ ವರದಿಯಿಂದ ದೃಢಪಡುತ್ತಿತ್ತು. ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು ಬೆಳಿಗ್ಗೆ 6 ರಿಂದ ಮೇ.24ರ ಬೆಳಿಗ್ಗೆ 6 ಗಂಟೆಯವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಿಸಿದ್ದಾರೆ.

ರಾಜ್ಯಾದ್ಯಂತ ಜಾರಿಯಾಗಿರುವಂತ ಸಂಪೂರ್ಣ ಲಾಕ್ ಡೌನ್ ಕುರಿತಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರು ಪರಿಷ್ಕೃತ ಮಾರ್ಗಸೂಚಿ ಕೂಡ ಹೊರಡಿಸಿದ್ದು, ಅದರಂತೆ ಲಾಕ್ ಡೌನ್ ಸಂದರ್ಭದಲ್ಲಿ ಯಾವುದಕ್ಕೆ ಅವಕಾಶ.? ಯಾವುದಕ್ಕೆ ಅವಕಾಶವಿಲ್ಲ ಎನ್ನುವ ಬಗ್ಗೆ ಮಾಹಿತಿ ಈ ಕೆಳಗಿದೆ.

ಲಾಕ್ ಡೌನ್ ಸಂದರ್ಭದಲ್ಲಿ ಯಾವುದಕ್ಕೆ ಅವಕಾಶ.?

 • ನಿಗದಿಯಾಗಿರುವ ವಿಮಾನ ಮತ್ತು ರೈಲುಗಳ ಓಡಾಟಕ್ಕೆ ಅವಕಾಶ
 • ಟ್ಯಾಕ್ಸಿ, ಆಟೋ ರಿಕ್ಷಾಗಳು ತುರ್ತು ಸಂದರ್ಭಗಳಲ್ಲಿ ಹಾಗೂ ಮಾರ್ಗಸೂಚಿಯಲ್ಲಿ ಅನುಮತಿಸಿದ ರೀತಿಯಲ್ಲಿ ಅವಕಾಶ
 • ಹೋಟೆಲ್, ರೆಸ್ಟೋರೆಂಟ್ ಮತ್ತು ಆಹಾರ ಮಳಿಗೆಗಳು ಪಾರ್ಸಲ್ ಹಾಗೂ ಹೋಂ ಡೆಲಿವರಿ ಸೇವೆಗೆ ಅವಕಾಶ
 • ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಗತ್ಯ ಸೇವೆ ನೀಡುವ ಕಚೇರಿಗಳನ್ನು ತೆರೆಯಲು ಅನುಮತಿ
 • ಎಲ್ಲಾ ಆರೋಗ್ಯ ಸೇವಾ ಸೌಲಭ್ಯಗಳು ಮತ್ತು ಸಂಬಂಧಿತ ಸೇವೆಗೆ ಅವಕಾಶ
 • ಎಲ್ಲಾ ಕೃಷಿ ಮತ್ತು ಪೂರಕ ಚಟುವಟಿಕೆಗಳು, ಮೀನುಗಾರಿಕೆ, ಕೋಳಿ ಸಾಕಾಣಿಕೆ, ಮಾಂಸ ಮತ್ತು ಹೈನುಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗೆ ಅವಕಾಶ
 • ಎಲ್ಲಾ ಸರಕು ಸಾಗಾಣಿಕೆ ವಾಹನಗಳ ಮುಕ್ತ ಸಂಚಾರಕ್ಕೆ ಅನುಮತಿ
 • ಆಹಾರ ಸಾಮಗ್ರಿ, ದಿನಸಿ, ಹಣ್ಣು-ತರಕಾರಿ, ಮಾಂಸ ಮತ್ತು ಮೀನಿನ ಮಳಿಗೆಗಳು ಮತ್ತು ಪಶು ಆಹಾರದ ಮಳಿಗೆಗಳು ಬೆಳಿಗ್ಗೆ 6 ರಿಂದ ಬೆಳಿಗ್ಗೆ 10 ಗಂಟೆ ವರೆಗೆ ತೆರೆಯಲು ಅವಕಾಶ.
 • ಹಾಲಿನ ಬೂತ್, ತಳ್ಳುಗಾಡಿಗಳಲ್ಲಿ ತರಕಾರಿ ಮಾರಾಟಕ್ಕೆ ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ಅವಕಾಶ
 • ನ್ಯಾಯಬೆಲೆ ಅಂಗಡಿಗಳು, ಮದ್ಯ ಮಾರಾಟ ಮಳಿಗೆಗಳು ಕೇವಲ ಪಾರ್ಸೆಲ್ ಸೇವೆಗಾಗಿ ಬೆಳಿಗ್ಗೆ 6 ರಿಂದ 10ರವರೆಗೆ ಅವಕಾಶ
 • ದಿನದ 24 ಗಂಟೆಯೂ ಅಗತ್ಯ ವಸ್ತುಗಳ ಹೋಂ ಡೆಲಿವರಿ ಸೇವೆಗೆ ಅವಕಾಶ
 • ದೂರ ಸಂಪರ್ಕ, ಇಂಟರ್ ನೆಟ್, ಪ್ರಸಾರ ಮತ್ತು ಕೇಬಲ್ ಸೇವೆಗಳಿಗೆ ಅನುಮತಿ
 • ಐಟಿ ಮತ್ತು ಐಟಿಇಎಸ್ ಕಂಪನಿಗಳ ಅಗತ್ಯ ಸಿಬ್ಬಂದಿ ಮಾತ್ರ ಕಚೇರಿಗಳಲ್ಲಿ ಕಾರ್ಯ ( ಇತರ ಸಿಬ್ಬಂದಿ ಮನೆಯಿಂದಲೇ ಕಾರ್ಯನಿರ್ವಹಿಸಬೇಕು)
 • ಸ್ಥಳದಲ್ಲಿಯೇ ಕಾರ್ಮಿಕರು, ಸಿಬ್ಬಂದಿ ಲಭ್ಯವಿರುವ ಕೈಗಾರಿಕೆಗಳು, ಉತ್ಪಾದನಾ ಘಟಕಗಳನ್ನು ತೆರೆಯಲು ಅವಕಾಶ
 • ಸ್ಥಳದಲ್ಲಿಯೇ ಕಾರ್ಮಿಕರು, ಕೆಲಸಗಾರರನ್ನು ಹೊಂದಿರುವ ನಿರ್ಮಾಣ ಚಟುವಟಿಕೆ ಹಾಗೂ ರಸ್ತೆ ಕಾಮಗಾರಿ ನಡೆಸಲು ಅನುಮತಿ
 • ಅಗತ್ಯ ವಸ್ತುಗಳ ತಯಾರಿಕಾ ಘಟಕ, ನಿರಂತರ ಕಾರ್ಯನಿರ್ವಹಣೆಯ ಅಗತ್ಯವಿರುವ ತಯಾರಿಕಾ ಘಟಕ ತೆರೆಯಲು ಅನುಮತಿ
 • ಅಂತ್ಯ ಸಂಸ್ಕಾರದಲ್ಲಿ ಗರಿಷ್ಠ 5 ಜನರಿಗೆ ಅವಕಾಶ
 • ಮದುವೆ ಸಮಾರಂಭಗಳಲ್ಲಿ ಗರಿಷ್ಠ 50 ಜನರಿಗೆ ಮಾತ್ರ ಭಾಗವಹಿಸಲು ಅವಕಾಶ

ಲಾಕ್ ಡೌನ್ ಸಂದರ್ಭದಲ್ಲಿ ಯಾವುದಕ್ಕೆ ಅವಕಾಶ.?

 • ಬಸ್, ಮೆಟ್ರೋ ರೈಲು ಸಂಚಾರಕ್ಕೆ ಅವಕಾಶವಿಲ್ಲ
 • ಶಾಲೆ, ಕಾಲೇಜುಗಳು, ಶಿಕ್ಷಣ, ಕೋಚಿಂಗ್ ಸಂಸ್ಥೆಗಳ ತರಗತಿಗಳು ನಡೆಸೋದಕ್ಕೆ ಅವಕಾಶ ಇಲ್ಲ
 • ಸಿನೆಮಾ ಹಾಲ್, ಶಾಂಪಿಂಗ್ ಮಾಲ್, ಜಿಮ್, ಕ್ರೀಡಾ ಸಂಕೀರ್ಣಗಳು, ಕ್ರೀಡಾಂಗಣ, ಈಜುಕೊಳ, ಉದ್ಯಾನವನಗಳು, ಮನರಂಜನಾ ಪಾರ್ಕ್, ಕ್ಲಬ್, ಥಿಯೇಟರ್, ಬಾರ್ ಮತ್ತು ಸಭಾಂಗಣ, ಸಮುದಾಯ ಭವನಗಳಂತಹ ಸ್ಥಳಗಳು ಮುಚ್ಚಲಿವೆ.
 • ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ಮೊದಲಾದ ಹೆಚ್ಚಿನ ಜನ ಸೇರಿವ ಕಾರ್ಯಕ್ರಮಗಳು, ಸಮಾವೇಶಗಳ ನಿಷೇಧ
 • ಎಲ್ಲಾ ಧಾರ್ಮಿಕ ಸ್ಥಳಗಳು, ಪೂಜಾ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧ
 • ಸಾರ್ವಜನಿಕರ ಓಡಾಟ ಕಡ್ಡಾಯವಾಗಿ ನಿಷೇಧ ( ಕೆಲವು ವಿನಾಯಿತಿಗಳನ್ನು ಮಾತ್ರ ನೀಡಲಾಗಿದೆ)
 • ಮಾರ್ಗಸೂಚಿಯಲ್ಲಿ ಅನುಮತಿಸಿದ ಸಂದರ್ಭಗಳನ್ನು ಹೊರತುಪಡಿಸಿ, ಸರ್ಕಾರಿ ಹಾಗೂ ಖಾಸಗಿ ಬಸ್ ಗಳು ಹಾಗೂ ಇತರ ಪ್ರಯಾಣಿಕರ ವಾಹನಗಳ ಸಂಚಾರವನ್ನು ನಿಷೇಧಿಸಿದೆ.

ವರದಿ : ವಸಂತ ಬಿ ಈಶ್ವರಗೆರೆ


CORONAVIRUS KARNATAKA State

ಮಂಡ್ಯ : ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ರಾಜ್ಯಾಧ್ಯಂತ ಮೇ.10 ರಿಂದ ಮೇ.24ರವರೆಗೆ ಸಂಪೂರ್ಣ ಲಾಕ್ ಡೌನ್ ಅನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ.

ಸರ್ಕಾರದ ಮಾರ್ಗಸೂಚಿಯಂತೆ ಮೇ. 10ರ ಬೆಳಿಗ್ಗೆ ಮೇ.24ರ ಬೆಳಿಗ್ಗೆ 6 ಗಂಟೆಯವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದ್ದು, ಮಂಡ್ಯ ಜಿಲ್ಲೆಯಲ್ಲೂ ಲಾಕ್ ಡೌನ್ ಅನ್ನು ಯಶಸ್ವಿಗೊಳಿಸಲು ಪೋಲೀಸ್ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಅಶ್ವಿನಿ ಸುದ್ದಿಗೊಷ್ಟಿಯಲ್ಲಿ ತಿಳಿಸಿದರು.

ನಾಳೆಯಿಂದ ಜಿಲ್ಲೆಯ 11 ಕಡೆಗಳಲ್ಲಿ ಅಂತರ್ ಜಿಲ್ಲಾ ಚೆಕ್ ಪೋಸ್ಟ್ ಗಳನ್ನು ಪೋಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಸಹಯೋಗದೊಂದಿಗೆ ಸ್ಥಾಪಿಸಲಾಗಿದ್ದು, ಅಲ್ಲದೆ ಜಿಲ್ಲೆಯ ಒಳ ಭಾಗದಲ್ಲಿಯೂ ಸಹ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲಾಗಿದ್ದು ಅನಾವಶ್ಯಕವಾಗಿ ಓಡಾಡುವವರನ್ನು ಕಡ್ಡಾಯವಾಗಿ ತಪಾಸಣೆ ನಡೆಸಲಾಗುವುದು.

ಔಷಧಿ ಸೇರಿದಂತೆ ಅತ್ಯವಶ್ಯಕ ವಸ್ತುಗಳ ಖರೀದಿಗೆ ನಡೆದುಕೊಂಡು ಹೋಗಿ ಆಯಾ ವ್ಯಾಪ್ತಿಯ ಪ್ರದೇಶಗಳಲ್ಲಿ ಮಾತ್ರ ಖರೀದಿಗೆ ಅವಕಾಶ ನೀಡಲಾಗಿದೆ.
ಬೈಕ್ ಓಡಾಟವನ್ನು ಸಹ ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿವಂತ ವಾಹನಗಳನ್ನು ಸೀಜ್ ಮಾಡಲಾಗುವುದು, ಅಂತಹವರು ಕೋರ್ಟ್ ನಿಂದಲೇ ವಾಹನಗಳನ್ನು ಪಡೆಯಬೇಕು ಎಂದು ಎಚ್ಚರಿಕೆ ನೀಡಿದರು.

ಹಣ್ಣು ಮತ್ತು ತರಕಾರಿಗಳನ್ನು ಮಾರಾಟ ಮಾಡಲು ತಳ್ಳುವ ಗಾಡಿಗಳಿಗೆ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಅನಾವಶ್ಯಕವಾಗಿ ಓಡಾಟವನ್ನು ನಿಷೇಧಿಸಲು ಜಿಲ್ಲಾದ್ಯಂತ ಆದಷ್ಟು ಕಡೆಗಳಲ್ಲಿ ರಸ್ತೆಗಳನ್ನು ಬಂದ್ ಮಾಡಲಾಗುವುದು. ಹಾಗೂ ಜಿಲ್ಲೆಯಲ್ಲಿ 90 ಕಂಟೋನ್ಮೆಂಟ್ ಪ್ರದೇಶಗಳಿದ್ದು ಅಲ್ಲಿಯೂ ಸಹ ಪೋಲೀಸ್ ಬಂದೋಬಸ್ತ್ ಒದಗಿಸಲಾಗುವುದು ಎಂದರು.

ಇನ್ನು ಮದುವೆ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದು 40 ಮಂದಿ ಮಾತ್ರ ಮದುವೆ ಕಾರ್ಯಕ್ರಮದಲ್ಲಿ ಇರಬೇಕು. ಆಯಾ ತಾಲೂಕಿನ ತಹಶೀಲ್ದಾರ್ ಪಾಸ್ ವಿತರಣೆ ಮಾಡಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಚ್ಚರಿಸಿದರು.

ವರದಿ : ಗಿರೀಶ್ ರಾಜ್ ಮಂಡ್ಯ


CORONAVIRUS KARNATAKA State

ಕೆಎನ್ಎನ್ ಡಿಜಿಟಲ್ ಡೆಸ್ಕ್ : ರಾಜ್ಯಾಧ್ಯಂತ ಕೊರೋನಾ ಸೋಂಕಿನ ಆರ್ಭಟ ಮುಂದುವರೆದಿದೆ. ದಿನವೊಂದಕ್ಕೆ 40 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೋನಾ ಸೋಂಕು ಹೊಸದಾಗಿ ಪರೀಕ್ಷೆಯಿಂದ ದೃಢಪಡುತ್ತಿದೆ. ಈ ಸಮಯದಲ್ಲಿ ಬೇಕಿರೋದು ಸೋಂಕಿತರಾದವರಿಗೆ ಧೈರ್ಯ. ಜೊತೆಗೆ ತಜ್ಞ ವೈದ್ಯರ ಸಲಹೆ. ಹಾಗಿದ್ದರೇ ನೀವು ಕೊರೋನಾ ಸೋಂಕಿತರಾಗಿದ್ದೀರಾ.? ಆಸ್ಪತ್ರೆಗೆ ಅನವಶ್ಯಕ ಭೇಟಿ ಕಡಿಮೆ ಮಾಡಿ, ತಜ್ಞ ವೈದ್ಯರಿಂದ ಆನ್ ಲೈನ್ ನಲ್ಲೇ ಹೇಗೆ ಚಿಕಿತ್ಸೆಯ ಸಲಹೆ ಪಡೆಯಬಹುದು ಎನ್ನುವ ಬಗ್ಗೆ ಮುಂದೆ ಓದಿ..

ಕೊರೋನಾ ಸೋಂಕಿನ ವೈರಸ್ ಅಬ್ಬದ ಈ ಸಂದರ್ಭದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ರಕ್ಷಣೆಯ ತರಾವರಿ ಸುದ್ದಿಗಳು ಹರಿದಾಡುತ್ತಿವೆ. ಹಾಗ್ ಮಾಡಿ, ಹೀಗ್ ಮಾಡಿ ಕೊರೋನಾದಿಂದ ರಕ್ಷಣೆ ಪಡೆಯಿರಿ. ಈ ಆಹಾರ ಸೇವಿಸಿ, ಆ ಆಹಾರ ಸೇವಿಸಬೇಡಿ ಎಂಬುದಾಗಿಯೂ ದಿನಂಪ್ರತಿ ಸುದ್ದಿಗಳು ಹರಿದಾಡೋದನ್ನು ಓದಿದ್ದೀರಿ.. ಅದೇ ರೀತಿಯಾಗಿ ಕೆಲವರು ಪಾಲನೆ ಮಾಡಿಯೂ ಇದ್ದೀರಿ. ಹೀಗಿದ್ದೂ ಕೊರೋನಾ ಸೋಂಕು ಮಾತ್ರ ಶಾಕ್ ಕೊಡದೇ ಬಿಟ್ಟಿಲ್ಲ.

ಹಾಗಾದ್ರೇ.. ನೀವು ಕೊರೋನಾ ಸೋಂಕಿತರಾದಾಗ ಮೊದಲು ಧೈರ್ಯದಿಂದ ಇರಬೇಕು. ಯಾವುದೇ ಕಾರಣಕ್ಕೂ ಭಯವನ್ನು ಮಾತ್ರ ಬೀಳಬಾರದು. ಮನೆಯಲ್ಲೇ ಹೋಂ ಐಸೋಲೇಷನ್ ಆಗಿ. ಹೀಗೆ ಆದಾಗ ಆಸ್ಪತ್ರೆಗೆ ಅನವಶ್ಯಕವಾಗಿ ಭೇಟಿ ಮಾಡೋದನ್ನು ನಿಲ್ಲಿಸಿ. ಮನೆಯಲ್ಲಿಯೇ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಈ ಸಂಜೀವಿನಿ ಓಪಿಡಿ ಆಪ್ ಮೂಲಕ ತಜ್ಞ ವೈದ್ಯರಿಂದ ಸಲಹೆ ಪಡೆಯಬಹುದು.

ಕೊರೋನಾ ಸೋಂಕಿತರು ತಜ್ಞ ವೈದ್ಯರಿಂದ ಹೇಗೆ ಆನ್ ಲೈನ್ ಮೂಲಕ ಸಲಹೆ ಪಡೆಯಬೇಕು.?

 • ನೀವು ಕೊರೋನಾ ಸೋಂಕಿತರಾಗಿ ಹೋಂ ಐಸೋಲೇಷನ್ ಆದ ನಂತ್ರ, ವೈದ್ಯರನ್ನು ಭೇಟಿ ಮಾಡಿ, ಚಿಕಿತ್ಸೆ ಪಡೆಯೋದಕ್ಕಾಗಿ ಮನೆಯಿಂದ ಹೊರಗೆ ಬರೋದು ಅವಶ್ಯಕತೆ ಇಲ್ಲ. ಅದರ ಬದಲಾಗಿ Play Store ಮುಖಾಂತರ in ಆಪ್ ಡೌನ್ ಲೋಡ್ ಮಾಡಿರಿ. ಅಥವಾ ವೆಬ್ ಬ್ರೌಸರ್ ಮೂಲಕ https://esanjeevaniopd.in ಮೂಲಕ ಸರ್ಚ್ ಮಾಡಿ, ಡೌನ್ ಲೋಡ್ ಮಾಡಿಕೊಳ್ಳಿ.
 • ಹೀಗೆ ನೀವು ಇ-ಸಂಜೀವಿನಿ ಓಪಿಡಿ ಆಪ್ ಡೌನ್ ಲೋಡ್ ಮಾಡಿಕೊಂಡ ನಂತ್ರ, ಸೋಂಕಿತರಾದಂತ ನೀವು, ನಿಮ್ಮ ಹೆಸರನ್ನು ನೊಂದಣಿ ಮಾಡಿಕೊಳ್ಳಿ.
 • ನೀವು ಇ-ಸಂಜೀವಿನಿ ಓಪಿಡಿ ಮೂಲಕ ಹೆಸರು ನೊಂದಣಿ ಮಾಡಿಕೊಂಡ ನಂತ್ರ, ನಿಮಗೆ ಟೋಕನ್ ಸಿಗಲಿದೆ. ಆ ಟೋಕನ್(ಓಟಿಪಿ) ಬರಲಿದೆ.
 • ಈ ಬಳಿಕ ನಿಮ್ಮ ನೊಂದಾಯಿತ ಮೊಬೈಲ್ ಸಂಖ್ಯೆ ಬಳಸಿ, ನಿಮ್ಮ ಮೊಬೈಲ್ ಗೆ ಬಂದಿರುವಂತ ಓಟಿಪಿ ಬಳಸಿ, ಇ-ಸಜೀವಿನಿ ಆಪ್ ನಲ್ಲಿ ಲಾಗಿನ್ ಆಗಿ.
 • ಇದೆಲ್ಲ ಆದ ನಂತ್ರ, ರೋಗಿಗೆ ಸಂಬಂಧಿಸಿದ ದಾಖಲೆಗಳು, ಪ್ರಯೋಗಾಲಯ ವರದಿಗಳು ಇದ್ದಲ್ಲಿ ಅಪ್ ಲೋಡ್ ಮಾಡಿ.
 • ಹೀಗೆ ಕೊರೋನಾ ಸೋಂಕಿತರಾದಂತ ನೀವು, ಸೂಚನೆ ಪಡೆದ ಕೂಡಲೇ ಬೆಳಿಗ್ಗ 10 ರಿಂದ ಸಂಜೆ 4ರವರೆಗೆ ತಜ್ಞ ವೈದ್ಯರಿಂದ ಸೋಂಕಿನ ಲಕ್ಷಣಗಳ ಅನುಸಾರವಾಗಿ ಔಷಧಿಯ ಸಲಹೆಯನ್ನು ಪಡೆಯಿರಿ.
 • ನೀವು ಕರೆ ಮಾಡಿ ತಜ್ಞ ವೈದ್ಯರಿಂದ ಮನೆಯಲ್ಲಿಯೇ ಕುಳಿತು ಸಲಹೆಯನ್ನು ಪಡೆಯಬಹುದು. ಇಲ್ಲವೇ ವೀಡಿಯೋ ಮುಖಾಂತರ ಸಂವಾದ ನಡೆಸಿ, ಪೇಷೆಂಟ್ ಪ್ರೊಫೈಲ್ ಮುಖಾಂತರ ವೈದ್ಯರ ಸಲಹೆ ಚೀಟಿ ಪಡೆಯಬಹುದಾಗಿದೆ.

ವರದಿ : ವಸಂತ ಬಿ ಈಶ್ವರಗೆರೆ