ಬೆಂಗಳೂರು : ಕ್ರಿಕೆಟ್ ಬೆಟ್ಟಿಂಗ್ ಹಾಗೂ ಕ್ಯಾಸಿನೋ ದಂಧೆ ಆರೋಪದ ಮೇಲೆ ಉದ್ಯಮಿ ಹಾಗೂ ನಟ ದೊಡ್ಡಣ್ಣನ ಅಳಿಯ ಕೆ.ಸಿ. ವೀರೇಂದ್ರ ಅವರ ಮೇಲೆ ಪ್ರಕರಣ ದಾಖಲಾಗಿದೆ.

ಪ್ರಕರಣ​ ದಾಖಲು ಆಗುತ್ತಿದ್ದಂತೆ ಕೆ.ಸಿ. ವೀರೇಂದ್ರ (ಪಪ್ಪಿ) ವಿದೇಶಕ್ಕೆ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ ದಾವಣಗೆರೆಯ ಬಡಾವಣೆ ಠಾಣೆಯಲ್ಲಿ ಕೆ.ಸಿ.ವೀರೇಂದ್ರ ಅವರ ಮೇಲೆ ಕೇಸ್​ ದಾಖಲಾಗಿದೆ.

ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯದ ವೇಳೆ ಬೆಟ್ಟಿಂಗ್​​ ಆಡಿದ್ದರು ಎನ್ನುವ ಆರೋಪವಿದೆ. ಅಕ್ಟೋಬರ್​​ 20ರಂದು ಪಂದ್ಯ ನಡೆದಿದ್ದು, ಕ್ರಿಕೆಟ್ ಬೆಟ್ಟಿಂಗ್ ಆಸೆ ಹುಟ್ಟಿಸಿ ಮೊಬೈಲ್ ಆಪ್ ಮೂಲಕ ಹಣ ಸಂಗ್ರಹ ಮಾಡಲಾಗಿದೆ ಎನ್ನುವುದು ಬಯಲಾಗಿದೆ.  ಈ ಸಂಬಂಧ ದಾವಣಗೆರೆಯ ಕಿರಣ್, ಚೇತನ್, ಸೂರಜ್ ಕುಟ್ಟಿ ಮತ್ತು ಪಪ್ಪಿ ವಿರುದ್ಧ ವೆಂಕಟೇಶ್​ ಬಡಾವಣೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಇನ್ನೂ, ಕೆ.ಸಿ.ವೀರೇಂದ್ರ ಬ್ಯಾಂಕ್ ಅಕೌಂಟ್​ ಸೀಜ್ ಆಗಿದ್ದು, ಹಾಗೂ ಚಳ್ಳಕೆರೆ ಕೆನರಾ ಬ್ಯಾಂಕ್ ಸೇರಿ ವಿವಿಧ ಬ್ಯಾಂಕ್​ಗಳ ಅಕೌಂಟ್ ಕೂಡ ಸೀಜ್​​ ಆಗಿದೆ. ವೀರೇಂದ್ರ ಈಗಾಗಲೇ ವಿದೇಶಕ್ಕೆ ಹೋಗಿದ್ದಾರೆ ಎನ್ನಲಾಗಿದ್ದು, ಅವರ ವಿರುದ್ಧ ಈಗಾಗಲೇ ಲುಕ್​ಔಟ್ ನೋಟಿಸ್ ಜಾರಿ ಆಗಿದೆ. ಯಾವುದೇ ಏರ್ ಫೋರ್ಟ್‌ಗೆ ಬಂದರೂ ತಕ್ಷಣ ಬಂಧಿಸಲು ಸೂಚನೆ ನೀಡಲಾಗಿದೆ.

BREAKING NEWS : ‘ಹಿಮಾಚಲ ಪ್ರದೇಶ’ದಲ್ಲಿ ಪ್ರಬಲ ಭೂಕಂಪ ; ಭಯಗೊಂಡು ಮನೆಯಿಂದ ಹೊರ ಓಡಿ ಬಂದ ಜನ |Earthquake

BREAKING NEWS : ‘ಹಿಮಾಚಲ ಪ್ರದೇಶ’ದಲ್ಲಿ ಪ್ರಬಲ ಭೂಕಂಪ ; ಭಯಗೊಂಡು ಮನೆಯಿಂದ ಹೊರ ಓಡಿ ಬಂದ ಜನ |Earthquake

Share.
Exit mobile version