ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಗೋಡಂಬಿಯಲ್ಲಿ ಅನೇಕ ಪೋಷಕಾಂಶಗಳು ಅಡಗಿದ್ದು, ಅನೇಕ ಆಹಾರಗಳಲ್ಲಿ ಬಳಸಲಾಗುತ್ತದೆ. ಗೋಡಂಬಿ ತಿನ್ನುವುದರಿಂದ ಮೂಳೆಗಳು ಗಟ್ಟಿಯಾಗುತ್ತವೆ. ಇನ್ನಿದನ್ನ ತಿನ್ನುವುದರಿಂದ ಚರ್ಮವು ಆರೋಗ್ಯಕರವಾಗಿರುತ್ತದೆ. ಆದ್ರೆ, ಅತಿಯಾಗಿ ಗೋಡಂಬಿ ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಹಾನಿಯಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಹೌದು, ಗೋಡಂಬಿಯಲ್ಲಿ ಹೆಚ್ಚಿನ ಪ್ರಮಾಣದ ಪೋಷಕಾಂಶಗಳಿರುವುದರಿಂದ ಗೋಡಂಬಿಯನ್ನ ಹೆಚ್ಚು ತಿನ್ನದಂತೆ ಸಲಹೆ ನೀಡಲಾಗುತ್ತದೆ. ಹಾಗಿದ್ರೆ, ಗೋಡಂಬಿಯನ್ನ ಅತಿಯಾಗಿ ಸೇವಿಸುವುದರಿಂದ ಆರೋಗ್ಯಕ್ಕೆ ಆಗುವ ಅಪಾಯಗಳೇನು ಅನ್ನೋದನ್ನ ಈಗ ತಿಳಿಯೋಣಾ.
ಸ್ಥೂಲಕಾಯ ಹೆಚ್ಚಿಸುತ್ತದೆ : ಗೋಡಂಬಿಯಲ್ಲಿ ಹೆಚ್ಚಿನ ಕ್ಯಾಲೋರಿಗಳಿದ್ದು, ಇದನ್ನ ಅತಿಯಾಗಿ ತಿನ್ನುವುದರಿಂದ ಬೊಜ್ಜು ಮತ್ತು ಅಧಿಕ ರಕ್ತದ ಸಕ್ಕರೆಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಅದಕ್ಕಾಗಿಯೇ ಮಧುಮೇಹ ಮತ್ತು ಥೈರಾಯ್ಡ್ ರೋಗಿಗಳು ಗೋಡಂಬಿಯನ್ನ ತಿನ್ನಬಾರದು. ಇನ್ನು ನೀವು ಈಗಾಗಲೇ ಬೊಜ್ಜು ಹೊಂದಿದ್ದರೆ, ನೀವು ಗೋಡಂಬಿ ತಿನ್ನುವುದನ್ನ ತಪ್ಪಿಸಬೇಕು.
ಕಿಡ್ನಿ ಸ್ಟೋನ್ : ಗೋಡಂಬಿಯಲ್ಲಿ ಉತ್ತಮ ಪ್ರಮಾಣದ ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂ ಇದೆ. ಆದ್ದರಿಂದ ಗೋಡಂಬಿಯ ಹೆಚ್ಚಿನ ಸೇವನೆಯು ಕಿಡ್ನಿ ಸ್ಟೋನ್ ಸಮಸ್ಯೆಗಳಿಗೆ ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಈಗಾಗಲೇ ಮೂತ್ರಪಿಂಡದ ಸಮಸ್ಯೆಗಳನ್ನ ಹೊಂದಿದ್ದರೆ, ನೀವು ಗೋಡಂಬಿ ತಿನ್ನುವುದನ್ನ ತಪ್ಪಿಸಬೇಕು. ಯಾಕಂದ್ರೆ, ಗೋಡಂಬಿ ಸೇವನೆಯಿಂದ ಈ ಸಮಸ್ಯೆ ಹೆಚ್ಚುತ್ತದೆ.
ನಿರ್ಜಲೀಕರಣಕ್ಕೆ ಕಾರಣ : ಗೋಡಂಬಿಯಲ್ಲಿ ಫೈಬರ್ ಅಧಿಕವಾಗಿರುತ್ತದೆ. ಹೆಚ್ಚು ಫೈಬರ್ ತಿಂದ ನಂತರ ಕಡಿಮೆ ನೀರು ಕುಡಿದರೆ ನಿರ್ಜಲೀಕರಣ ಉಂಟಾಗಬಹುದು. ಯಾಕಂದ್ರೆ, ಫೈಬರ್ ಸರಿಯಾಗಿ ಕರಗಲು ನೀರಿನ ಅಗತ್ಯವಿದೆ. ದೇಹದಲ್ಲಿ ಹೆಚ್ಚಿನ ಫೈಬರ್ ಇದ್ದಾಗ, ಅದು ದೇಹದಿಂದ ನೀರನ್ನು ಹೀರಿಕೊಳ್ಳುತ್ತದೆ. ಇದು ಮಲಬದ್ಧತೆಯಂತಹ ಸಮಸ್ಯೆಗಳನ್ನ ಸಹ ಉಂಟು ಮಾಡುತ್ತದೆ.
ಶ್ವಾಸಕೋಶದ ಸಮಸ್ಯೆ : ಗೋಡಂಬಿಯಲ್ಲಿ ಕಬ್ಬಿಣಾಂಶ ಹೇರಳವಾಗಿದ್ದು, ಕಬ್ಬಿಣದ ಅತಿಯಾದ ಸೇವನೆಯು ಜೀವಕೋಶದ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಕಬ್ಬಿಣವನ್ನ ಜೀವಕೋಶಗಳಲ್ಲಿ ಸಂಗ್ರಹಿಸಲಾಗುತ್ತದೆ. ಶ್ವಾಸಕೋಶದ ಜೀವಕೋಶಗಳಲ್ಲಿ ಶೇಖರಣೆಗೊಂಡರೆ, ಅಸ್ತಮಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ವ್ಯಕ್ತಿಗೆ ಉಸಿರಾಡಲು ಕಷ್ಟವಾಗುತ್ತದೆ.
BIG NEWS: ‘ಸಿದ್ಧರಾಮಯ್ಯ ಸಂಪುಟ’ದಲ್ಲಿ ಯಾರಿಗೆ ಅವಕಾಶ? ಯಾವ ಖಾತೆ ಹಂಚಿಕೆ? ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ
ಸಾರ್ವಜನಿಕರೇ ಎಚ್ಚರ ; ವಂಚಕರ ಹೊಸ ತಂತ್ರ, ‘OTP, CVV’ ಸಂಖ್ಯೆ ಇಲ್ಲದೇ ಖಾತೆ ಖಾಲಿ ಮಾಡಿ ಬಿಡ್ತಾರೆ ಅಲರ್ಟ್ ಆಗಿರಿ
ವಾಹನ ಸಾವರರೇ, ‘ಬಂಕ್’ನಲ್ಲಿ ಪೆಟ್ರೋಲ್ ಜೊತೆಗೆ ನಿಮಗೆ ಈ 6 ಉಚಿತ ‘ಸೌಲಭ್ಯ’ ಸಿಗುತ್ತೆ, ಬಳಸಿಕೊಳ್ಳಿ