ಚಿಕ್ಕಮಗಳೂರು: ಯುಗಾದಿ ಹಬ್ಬ ದಿನದಂದೇ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಮೇಗೂರಿನ ಹಿತ್ಲೆಗುಳಿ ಗ್ರಾಮದಲ್ಲಿ ನಕಲಿ ಮದ್ಯ ಸೇವಿಸಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾರೆ.
ಈ ಹಿನ್ನೆಲೆ ರೊಚ್ಚಿಗೆದ್ದ ಗ್ರಾಮದ ಮಹಿಳೆಯರು ಮೃತ ವ್ಯಕ್ತಿಯ ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಮದ್ಯದಂಗಡಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಜಯಪುರ ಠಾಣಾ ಪೊಲೀಸರು ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ.
ಯುಗಾದಿ ಹಬ್ಬ ದಿನದಂದೇ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಮೇಗೂರಿನ ಹಿತ್ಲೆಗುಳಿ ಗ್ರಾಮದಲ್ಲಿ ನಕಲಿ ಮದ್ಯ ಸೇವಿಸಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾರೆ.ಹೀಗಾಗಿ ಗ್ರಾಮದಲ್ಲಿ ಮೌನ ಆವರಿಸಿದೆ. ಗ್ರಾಮದಲ್ಲಿ ದಿನದಿಂದ ದಿನಕ್ಕೆ ನಕಲಿ ಮದ್ಯ ಹಾವಳಿ ಜಾಸ್ತಿಯಾಗಿದೆ. ಅದರ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದ್ದು, ಅನ್ನ ತಡೆಯಲು ಸಾಧ್ಯವಾಗದೇ ಜನರು ಮತ್ತು ಮಹಿಳೆಯರು ಹತಾಶರಾಗಿದ್ದಾರೆ. ಇದೀಗ ಗ್ರಾಮದ ಪುಟ್ಟೇಗೌಡ ಎಂಬವರು ಯುಗಾದಿ ದಿನವೇ ನಕಲಿ ಮದ್ಯ ಸೇವಿಸಿ ಮೃತಪಟ್ಟಿದ್ದಾರೆ. ಈವಗೆರೆ ಹಿತ್ಲೆಗುಳಿ ಗ್ರಾಮದಲ್ಲಿ ಪುಟ್ಟೇಗೌಡ ಸೇರಿ ಕಳೆದ ಕೆಲವು ಸಮಯದಲ್ಲಿ ಮೂವರು ನಕಲಿ ಮದ್ಯಕ್ಕೆ ಬಲಿಯಾಗಿದ್ದಾರೆ.ಈ ಕುರಿತು ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ರೂ ಯಾವದೇ ಪ್ರಯೋಜನೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
BJPಗೆ ಸಚಿವ ವಿ.ಸೋಮಣ್ಣ ಗುಡ್ ಬೈ: ಮಾ.27ರಂದು ಕಾಂಗ್ರೆಸ್ ಪಕ್ಷ ಸೇರ್ಪಡೆ?
BJPಗೆ ಸಚಿವ ವಿ.ಸೋಮಣ್ಣ ಗುಡ್ ಬೈ: ಮಾ.27ರಂದು ಕಾಂಗ್ರೆಸ್ ಪಕ್ಷ ಸೇರ್ಪಡೆ?