ಕೆಎನ್‌ ಎನ್‌ ನ್ಯೂಸ್‌ : ರಾಜ್ಯದ ಕೆಲವಡೆ ಭಾರಿ ಮಳೆ ಸುರಿಯುತ್ತಿದೆ. ಹೀಗಾಗಿ ಬೆಳಗ್ಗೆ ಜಾವ ವಾಕಿಂಗ್‌ ಹೋಗುವವರಿಗೆ ಕಷ್ಟವಾಗುತ್ತಿದೆ. ಜಿಮ್​​ಗೆ ಹೋಗುವವರು ವಾಹನಗಳಲ್ಲಿ ಹೋಗಿ ಬಂದರೂ ನಡೆಯುತ್ತದೆ.

BIGG NEWS: ರಾಯಚೂರು ಜಿಲ್ಲಾ ಪ್ರವಾಸ ಹಿನ್ನೆಲೆ; ರಾಯರ ದರ್ಶನ ಪಡೆದ ಬಿ.ಸಿ ನಾಗೇಶ್‌ ಕುಟುಂಬ

ಆದರೆ ಜಿಮ್​​​​​​​​ ಅಭ್ಯಾಸ ಇಲ್ಲದೆ ವಾಕಿಂಗ್ ಹೋಗುವವರಿಗೆ ವರ್ಕೌಟ್ ಮಾಡಲು ಮಳೆ ಕೆಲವೊಮ್ಮೆ ಅಡ್ಡಿಯಾಗುತ್ತದೆ.ಆದರೆ ನೀವು ಫಿಟ್ ಆಗಿರಲು ಮನೆಯ ನಾಲ್ಕು ಗೋಡೆಗಳ ನಡುವೆಯೂ ಜಾಗಿಂಗ್ ಮಾಡಬಹುದು. ಇದನ್ನು ಸ್ಪಾಟ್ ಜಾಗಿಂಗ್ ಎಂದು ಕರೆಯಲಾಗುತ್ತದೆ. ಈ ಸ್ಮಾಟ್ ಜಾಗಿಂಗ್ ಮಾಡಲು ಕೋಣೆ ಸ್ವಲ್ಪ ಮಟ್ಟಿಗೆ ವಿಶಾಲವಾಗಿದ್ದರೆ ಸಾಕು.
ಸ್ಪಾಟ್ ಜಾಗಿಂಗ್ ಅತ್ಯಂತ ಅರ್ಥಪೂರ್ಣ ಮತ್ತು ಪರಿಣಾಮಕಾರಿ ವ್ಯಾಯಾಮಗಳಲ್ಲಿ ಒಂದಾಗಿದೆ. ಯಾವುದೇ ವರ್ಕೌಟ್‌ಗೂ ಮುನ್ನ ಸ್ಪಾಟ್ ಜಾಗಿಂಗ್ ಮಾಡಬಹುದು. ಇದು ನಿಮ್ಮ ಸ್ನಾಯುಗಳಿಗೆ ಒತ್ತಡ ನೀಡದೆ ನಿಮ್ಮ ದೇಹವನ್ನು ಬೆಚ್ಚಗಾಗಿಸುತ್ತದೆ ಎನ್ನುತ್ತಾರೆ ಫಿಟ್ನೆಸ್ ತಜ್ಞರು.

BIGG NEWS: ರಾಯಚೂರು ಜಿಲ್ಲಾ ಪ್ರವಾಸ ಹಿನ್ನೆಲೆ; ರಾಯರ ದರ್ಶನ ಪಡೆದ ಬಿ.ಸಿ ನಾಗೇಶ್‌ ಕುಟುಂಬ

ಸಾಮಾನ್ಯ ಜಾಗಿಂಗ್ ಮಾಡುವ ರೀತಿಯಲ್ಲಿಯೇ ಸ್ಪಾಟ್ ಜಾಗಿಂಗ್ ಕೂಡಾ ಮಾಡಬೇಕು. ಆದರೆ ಸ್ಪಾಟ್​​ ಜಾಗಿಂಗ್ ಮಾಡುವಾಗ ಎರಡೂ ಕಾಲುಗಳು ಮತ್ತು ಕೈಗಳು ಕ್ರಿಯೆಯಲ್ಲಿರಬೇಕು. ಆದರೆ ಮುಂದೆ ಸಾಗಲು ಸಾಧ್ಯವಿಲ್ಲ. ನೀವು ಓಡುತ್ತಿರುವಂತೆ ಅಥವಾ ಜಾಗಿಂಗ್ ಮಾಡುತ್ತಿರುವಂತೆ ತೋರುತ್ತಿದೆ. ಆದರೆ ನೀವು ನಿಂತ ಸ್ಥಳದಲ್ಲೇ ಇರುತ್ತೀರಿ. ಇನ್ನೂ ಅರ್ಥವಾಗುವಂತೆ ಹೇಳುವುದಾದರೆ, ನೀವು ಜಿಮ್‌ನಲ್ಲಿ ಟ್ರೆಡ್‌ಮಿಲ್‌ನಲ್ಲಿ ಓಡುತ್ತಿರುವಂತೆ ಕಾಣುತ್ತದೆ. ಆದರೆ ಇಲ್ಲಿ ಯಾವುದೇ ಟ್ರೆಡ್ ಮಿಲ್ ಇಲ್ಲದಿದ್ದರೂ ಸಹ ನೀವು ಅಂತಹ ಕಾರ್ಡಿಯೋ ವ್ಯಾಯಾಮದಿಂದ ಪಡೆಯುವ ಲಾಭವನ್ನೇ ಪಡೆಯುತ್ತೀರಿ.

Share.
Exit mobile version