ಚಳಿಗಾಲದಲ್ಲಿ ಕೊರೊನಾದ 2ನೇ ತರಂಗದ ಸಾಧ್ಯತೆಯನ್ನ ತಳ್ಳಿ ಹಾಕುವಂತಿಲ್ಲ: ಡಾ.ವಿ.ಕೆ.ಪೌಲ್ – Kannada News Now


India

ಚಳಿಗಾಲದಲ್ಲಿ ಕೊರೊನಾದ 2ನೇ ತರಂಗದ ಸಾಧ್ಯತೆಯನ್ನ ತಳ್ಳಿ ಹಾಕುವಂತಿಲ್ಲ: ಡಾ.ವಿ.ಕೆ.ಪೌಲ್

ಡಿಜಿಟಲ್‌ ಡೆಸ್ಕ್:‌ ಜನ ಆದಾಗ್ಲೇ ಕೊರೊನಾ ಆತಂಕದಲ್ಲಿ ದಿನಕಳೆಯುತ್ತಿದ್ದಾರೆ. ಈ ನಡುವೆ ಚಳಿಗಾಲದಲ್ಲಿ ಕೊರೊನಾದ ಎರಡನೇ ಅಲೆಯ ಸಾಧ್ಯತೆಯನ್ನ ತಳ್ಳಿಹಾಕುವಂತಿಲ್ಲ ಎಂದು ನೀತಿ ಆಯೋಗ ಹೇಳಿದೆ.

ನೀತಿ ಆಯೋಗದ ಮುಖ್ಯಸ್ಥ ವಿಕೆ ಪಾಲ್, “ಭಾರತದಲ್ಲಿ ಚಳಿಗಾಲದ ಅವಧಿಯಲ್ಲಿ ಕೊರೊನಾ ಸೋಂಕುಗಳ ಸಂಭವನೀಯ ಎರಡನೇ ಅಲೆಯನ್ನ ತಳ್ಳಿ ಹಾಕುವಂತಿಲ್ಲ ಎಂದಿದ್ದಾರೆ. ಇನ್ನು ಕಳೆದ ಮೂರು ವಾರಗಳಲ್ಲಿ ಹೊಸ ಕೋವಿಡ್-19 ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆ ಇಳಿಮುಖವಾಗಿದೆ.

ಕಳೆದ 24 ಗಂಟೆಗಳಲ್ಲಿ 61,871 ಹೊಸ ಪ್ರಕರಣಗಳು ದಾಖಲಾಗಿದ್ರೆ, 1,033 ಸಾವುಗಳು ಸಂಭವಿಸಿವೆ. ಭಾರತದಲ್ಲಿ ಕೊರೊನಾ ವೈರಸ್ ಕಾಯಿಲೆ 7,494,551 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಸೋಂಕಿನ ಸಂಖ್ಯೆಗಳ ವಿಷಯದಲ್ಲಿ ವಿಶ್ವದ ಎರಡನೇ ಅತಿ ಹೆಚ್ಚು ಪ್ರಕರಣಗಳು ಭಾರತದಲ್ಲಿವೆ. ಇನ್ನು ಕಳೆದೊಂದು ವಾರದಲ್ಲಿ 374,013 ಹೊಸ ಪ್ರಕರಣಗಳು ದಾಖಲಾಗಿವೆ.
error: Content is protected !!