ಕಲಬುರ್ಗಿ: ಈಗಾಗಲೇ 545 ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ( PSI Recruitment Scam ) ಹಲವರನ್ನು ಸಿಐಡಿ ಬಂಧಿಸಿದೆ. ಈ ಬಳಿಕ, ಇದೀಗ ಪರೀಕ್ಷೆ ಅಕ್ರಮದಲ್ಲಿ ಮಾಜಿ ಸೈನಿಕರ ಕೋಟಾದಲ್ಲಿ ಪರೀಕ್ಷೆ ಬರೆದು, ಮೊದಲ Rank ಪಡೆದು ಆಯ್ಕೆಯಾಗಿದ್ದಂತ ಆರೋಪಿಯನ್ನು ಬಂಧಿಸಲಾಗಿದೆ.
ಎಸ್ಎಸ್ಸಿ ನೇಮಕಾತಿ: ಶೀಘ್ರವೇ 42,000 ಹುದ್ದೆಗಳಿಗೆ ಅರ್ಜಿ ಆಹ್ವಾನ | SSC recruitment
ಮಾಜಿ ಸೈನಿಕರ ಕೋಟಾದಲ್ಲಿ ಪಿಎಸ್ಐ ನೇಮಕಾತಿಯಲ್ಲಿ ಪರೀಕ್ಷೆ ಬರೆದು, ಅಕ್ರಮವಾಗಿ ಮೊದಲ Rank ಪಡೆದು ಆಯ್ಕೆಯಾಗಿದ್ದಂತ ವಿಶ್ವನಾಥ ಮಾನೆ (38) ಎಂಬಾತನನ್ನು ಸಿಐಡಿ ಬಂಧಿಸಿದೆ. ಬಂಧಿತ ವಿಶ್ವನಾಥ್, ವಿಜಯಪುರದ ಮುದ್ದೇಬಿಹಾಳ ತಾಲೂಕಿನ ಸರೂರು ಗ್ರಾಮದ ನಿವಾಸಿಯಾಗಿದ್ದಾರೆ.
ದೆಹಲಿಗೆ ಪ್ರಯಾಣ ಬೆಳೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್: ನಾಳೆ ಜಂತರ್ ಮಂತರ್ ನಲ್ಲಿನ ಪ್ರತಿಭಟನೆಯಲ್ಲಿ ಭಾಗಿ
ಅಂದಹಾಗೇ ವಿಶ್ವನಾಥ್ ಮಾನೆಯವರು ಪಿಎಸ್ಐ ನೇಮಕಾತಿ ಅಕ್ರಮದ ಕಿಂಗ್ ಪಿನ್ ರುದ್ರಗೌಡ ಪಾಟೀಲ್ ಅವರೊಂದಿಗೆ ಡೀಲ್ ಕುದುರಿಸಿಕೊಂಡು, ಪರೀಕ್ಷೆಯಲ್ಲಿ ಅಕ್ರಮವೆಸಗಿರೋದು ಸಿಐಡಿ ತನಿಖೆಯಲ್ಲಿ ತಿಳಿದು ಬದಿತ್ತು. ಕಲಬುರ್ಗಿಯಲ್ಲಿನ ಖಾಸಗಿ ಶಾಲೆಯಲ್ಲಿ ನಡೆದಿದ್ದಂತ ಪರೀಕ್ಷಾ ಕೇಂದ್ರದಲ್ಲಿ ಬ್ಲೂ ಟೂತ್ ಬಳಸಿ ಪರೀಕ್ಷೆಯಲ್ಲಿ ಅಕ್ರಮವೆಸಗಿದ್ದ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಅವರನ್ನು ಬಂಧಿಸಲಾಗಿದೆ.
40 ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಯೋಜನೆಗಳಿಗೆ ಚಾಲನೆ, 40 ತಿಂಗಳಲ್ಲಿ ಪೂರ್ಣ – ಪ್ರಧಾನಿ ನರೇಂದ್ರ ಮೋದಿ