ಸುಭಾಷಿತ :

Tuesday, January 28 , 2020 2:06 PM

ನಿಮ್ಮ ಮೊಬೈಲ್ ನಲ್ಲಿ CamScanner ಇದ್ದರೆ ಈಗಲೇ ಡಿಲೀಟ್ ಮಾಡಿ…


Friday, August 30th, 2019 9:35 am

ಸ್ಪೆಷಲ್ ಡೆಸ್ಕ್ : ನಿಮ್ಮ ಮೊಬೈಲ್ ನಲ್ಲಿ ಫೋಟೋ, ಫೈಲ್ ಗಳನ್ನೂ ಸ್ಕ್ಯಾನ್ ಮಾಡುವಂತಹ ಹಾಗೂ ಪಿಡಿಎಫ್ ಕನ್ವರ್ಟರ್ ಆಪ್ CamScanner ಇದೆಯೇ? ಹಾಗಿದ್ದರೆ ಈಗಲೇ ಡಿಲೀಟ್ ಮಾಡಿ. ಯಾಕೆಂದರೆ ಇದರಲ್ಲಿ ಕಂಡುಬಂದ ಅಡ್ವರ್ಟೈಸಿಂಗ್ ಮಾಲ್ ವೇರ್ ನಿಂದಾಗಿ ಗೂಗಲ್ ಪ್ಲೇ ಸ್ಟೋರ್ ಈಗಾಗಲೇ ಈ ಆಪ್ ನ್ನು ಡಿಲೀಟ್ ಮಾಡಿದೆ.

ಕಾಸ್ಪೆರ್ಸ್ಕಿ ರೀಸರ್ಚರ್ ತಿಳಿಸಿದಂತೆ CamScanner ನ ಆಂಡ್ರಾಯ್ಡ್ ಆಪ್ ನ ಇತ್ತೀಚಿನ ವರ್ಷನ್ ನಲ್ಲಿ ಮಾರಕವಾದ ಟ್ರೋಜನ್ ಡ್ರಾಪರ್ ಮೊಡ್ಯೂಲ್ ಇದೆ. ಇದು ಗೊಂದಲವನ್ನುಂಟು ಮಾಡುವ ಜಾಹಿರಾತುಗಳನ್ನು ತೋರಿಸುತ್ತದೆ. ಜೊತೆಗೆ ಬಳಕೆದಾರರಿಗೆ ಪೈಡ್ ಸಬ್ ಸ್ಕ್ರಿಪ್ಷನ್ ಮಾಡುವಂತೆ ಕೇಳುತ್ತದೆ. ಇದರಿಂದ ಹಣ ಕಡಿತವಾಗುತ್ತದೆ ಎಂದು ತಿಳಿದು ಬಂದಿದೆ.

ಈಗಾಗಲೇ ಗೂಗಲ್ ಪ್ಲೇ ಸ್ಟೋರ್ ಆಪ್ ಡಿಲೀಟ್ ಮಾಡಿದೆ. ಆದರೆ ಅದಕ್ಕೂ ಮುನ್ನವೇ 100 ಮಿಲಿಯನ್ ಜನ ಇದನ್ನು ಡೌನ್ ಲೋಡ್ ಮಾಡಿದ್ದಾರೆ.

ಈ ಹಿಂದೆ CamScanner ಆಪ್ ಸರಿಯಾಗಿಯೇ ಇತ್ತು. ಆದರೆ ಇತ್ತೀಚಿಗೆ ಕೆಲವೊಂದು ಜಾಹಿರಾತುಗಳು ಕಾಣಿಸಿಕೊಳ್ಳುತ್ತಿದ್ದು, ಆಪ್ ಖರೀದಿ ಮಾಡುವಂತೆ ಮಾಡುತ್ತಿದೆ. ಜೊತೆಗೆ ಇತ್ತೀಚಿನ ವರ್ಷನ್ ನಲ್ಲಿ ದುರುದ್ದೇಶ ಪೂರ್ವಕವಾದ ಜಾಹಿರಾತುಗಳು ಕಾಣಿಸಿಕೊಳ್ಳುತ್ತಿವೆ. ಆದುದರಿಂದ CamScanner ಡಿಲೀಟ್ ಮಾಡಿ ಎಂದು ಕಾಸ್ಪೆರ್ಸ್ಕಿ ರೀಸರ್ಚರ್ ತಿಳಿಸಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions