ಚಿಕ್ಕಮಗಳೂರು : ಎಐಟಿ ಸರ್ಕಲ್ನಲ್ಲಿ ಕಾರುವೊಂದರ ಬ್ರೇಕ್ ಡೌನ್ ಆಗಿ ಅಪಘಾತ ಸಂಭವಿಸಿದ್ದು, ಕಾರಿನಲ್ಲಿ ಸಿ.ಟಿ.ರವಿ ಭಾವಚಿತ್ರವುಳ್ಳ ಕ್ಯಾಲೆಂಡರ್, ಮದ್ಯ, ಮಾರಾಕಾಸ್ತ್ರಗಳು ಪತ್ತೆಯಾಗಿದ್ದು ಬೆಳಕಿಗೆ ಬಂದಿದೆ.
ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯದೆಲ್ಲೆಡೆ ಮತದಾರರನ್ನು ಸೆಳೆಯೋದಕ್ಕೆ ಗಿಫ್ಟ್ ಪಾಲಿಟಿಕ್ಸ್ ಶುರುವಾಗಿದ್ದು, ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಲೇ ಇದೆ. ಈ ಬೆನ್ನಲ್ಲೆ ನಿನ್ನೆ ಚಿಕ್ಕಮಗಳೂರು ಎಐಟಿ ಸರ್ಕಲ್ನಲ್ಲಿ ಕಾರುವೊಂದರ ಬ್ರೇಕ್ ಡೌನ್ ಆಗಿ ಅಪಘಾತ ಸಮಯದಲ್ಲೇ ಲಕ್ಷಾಂತರ ಮೌಲ್ಯದ ಮಾಲ್ಗಳು, ಹಾಗೂ ಬಿಜೆಪಿ ನಾಯಕನ ಭಾವಚಿತ್ರ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ
ಈ ವೇಳೆ ಅಪಘಾತಗೊಂಡ ಕಾರು ತಳ್ಳಲು ಮುಂದಾದಾಗ ಚಾಲಕ ಹಾಗೂ ಅಲ್ಲಿದ್ದವರ ನಡುವೆ ಮಾತಿನ ಚಕಮಕಿಯೂ ನಡೆದಿದೆ.ಈ ವೇಳೆ ಕಾರಿನಲ್ಲಿ ಮದ್ಯ, ಲಾಂಗ್ ಹಾಗೂ ಸಿ.ಟಿ.ರವಿ ಭಾವಚಿತ್ರವುಳ್ಳ ಕ್ಯಾಲೆಂಡರ್ ಪತ್ತೆಯಾಗಿತ್ತು. ಅಲ್ಲೇ ಇದ್ದ ಸ್ಥಳೀಯ ಜನರು ಕಾರಿನಲ್ಲಿದ್ದ ಮದ್ಯ, ಲಾಂಗ್ ಹೊರತೆಗೆದಿದ್ದಾರೆ. ಆಗ ಭಯ ಪಟ್ಟು ಕಾರು ಚಾಲಕ ಸ್ಥಳದಿಂದ ಓಡಿಹೋಗಿದ್ದಾನೆ. ಕಾರಿನಲ್ಲಿದ್ದ ಮಾರಾಕಾಸ್ತ್ರಗಳನ್ನು ನಗರ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ವರದಿಯಾಗಿದೆ.
BIG NEWS : ಅರುಣಾಚಲ ಪ್ರದೇಶದಲ್ಲಿ ನಡೆದ ಜಿ20 ಸಭೆಗೆ ಚೀನಾ ಗೈರು : ಮೂಲಗಳು | G20 Meet