ಕ್ಯಾಲ್ಶಿಯಂ ನಮ್ಮ ದೇಹಕ್ಕೆ ಎಷ್ಟು ಅಗತ್ಯ ಅನ್ನೋದು ಗೊತ್ತಾ? – Kannada News Now


Food Health Lifestyle

ಕ್ಯಾಲ್ಶಿಯಂ ನಮ್ಮ ದೇಹಕ್ಕೆ ಎಷ್ಟು ಅಗತ್ಯ ಅನ್ನೋದು ಗೊತ್ತಾ?

ಸ್ಪೆಷಲ್ ಡೆಸ್ಕ್ : ಕ್ಯಾಲ್ಶಿಯಂ ಸೇವನೆ ಮಾಡದೆ ಇದ್ದರೆ ಮೂಳೆಗಳು ದುರ್ಬಲವಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಕ್ಯಾಲ್ಶಿಯಂ ಕಡಿಮೆಯಾಗೋದರಿಂದ ಕೇವಲ ಮೂಳೆಗಳ ದುರ್ಬಲತೆ ಮಾತ್ರವಲ್ಲ, ಹಲವಾರು ಸಮಸ್ಯೆಗಳು ಕಾಡುತ್ತವೆ. ಕ್ಯಾಲ್ಶಿಯಂ ಕೊರತೆ ನಿವಾರಣೆ ಮಾಡಲು ಹಾಲು, ಮೊಸರಿ ಸೇವನೆ ಮಾಡಿದರೂ ಸಹ ಹೆಚ್ಚಿನ ಲಾಭ ದೊರೆಯಲಿದೆ.

ಕ್ಯಾಲ್ಶಿಯಂ ಕೊರತೆಯಿಂದ ಮಸಲ್ಸ್‌ ಸೆಳೆತ ಮತ್ತು ನೋವು ಉಂಟಾಗುತ್ತದೆ. ನಿಮಗೆ ಸುಸ್ತಾಗುತ್ತಿದ್ದರೆ, ಉಗುರು ಮತ್ತೆ ಮತ್ತೆ ತುಂಡಾಗುತ್ತಿದ್ದರೆ, ಸೊಂಟ ನೋವು ಕಂಡುಬಂದರೆ ಅದು ಕ್ಯಾಲ್ಶಿಯಂ ಕೊರತೆಯ ಲಕ್ಷಣವಾಗಿದೆ. ನಿದ್ರೆ ಬರದೆ ಇರುವುದು ಹಾಗೂ ಸ್ಟ್ರೆಸ್‌ ಉಂಟಾಗುವುದು ಸಹ ಕ್ಯಾಲ್ಶಿಯಂ ಕೊರತೆಯ ಲಕ್ಷಣವಾಗಿದೆ.

ಕ್ಯಾಲ್ಶಿಯಂ ಕೊರತೆಯಿಂದ ಬ್ಲಡ್‌ ಸರ್ಕ್ಯುಲೇಶನ್‌ ಸರಿಯಾಗುತ್ತದೆ. ಇದರಿಂದ ಹಾರ್ಟ್‌ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.
ಇದರಿಂದ ದೇಹದ ಇಮ್ಯೂನಿಟಿ ಕಡಿಮೆಯಾಗುತ್ತದೆ. ಪದೆ ಪದೆ ಶೀತ -ಕೆಮ್ಮು ಮೊದಲಾದ ಸಮಸ್ಯೆಗಳು ಕಾಡುತ್ತವೆ.
ಕ್ಯಾಲ್ಶಿಯಂ ಕಡಿಮೆಯಾದರೆ ಹಲ್ಲು, ಮೂಳೆಗಳು ದುರ್ಬಲವಾಗುತ್ತವೆ. ಗಂಟುಗಳಲ್ಲಿ ನೋವು ಕಾಣಿಸಿಕೊಳ್ಳುತ್ತವೆ.

ಕ್ಯಾಲ್ಶಿಯಂ ಕೊರತೆ ನಿವಾರಣೆ ಮಾಡಲು ಏನು ಸೇವನೆ ಮಾಡಬೇಕು?
ಎಳ್ಳು , ಚೀಸ್‌ , ಸೋಯಾಬಿನ್, ಬಾದಾಮಿ, ರಾಜ್ಮಾ, ಕಾಬೂಲಿ ಕಡ್ಲೆ , ಗೋಧಿ