ಬೆಂಗಳೂರು: ಉದ್ದೇಶಪೂರ್ವಕವಾಗಿಯೇ ಕಾರನ್ನು ( Car ) ಹಿಂಬದಿಯಾಗಿ ಚಲಾಯಿಸುವಂತೆ ಮಾಡಿ, ಉದ್ಯಮಿಯ ( Businessman ) ಮೊಮ್ಮಗ ಬೀದಿನಾಯಿಯ ( Street Dog ) ಮೇಲೆ ಕಾರು ಹತ್ತಿಸಿ, ವಿಕೃತಿ ಮೆರೆದಿರುವಂತ ಘಟನೆ ಬೆಂಗಳೂರಿನ ಜಯನಗರದಲ್ಲಿ ನಡೆದಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿತ್ತು.
ಸದ್ಯ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ( Bengaluru ) ಜಯನಗರ 1ನೇ ಬ್ಲಾಕ್ ನ 10ನೇ ಬಿ ಮೈನ್ ರಸ್ತೆಯಲ್ಲಿ ಉದ್ಯಮಿ ಆದಿಕೇಶವುಲು ನಾಯ್ಡು ಮೊಮ್ಮಗ ಆದಿ ಕೇಶವನನ್ನು ಪೊಲೀಸರು ಬಂಧಿಸಿದ್ದಾರೆ. ರಸ್ತೆಯ ಪಕ್ಕದಲ್ಲಿ ಮಲಗಿದ್ದಂತ ಬೀದಿ ನಾಯಿಯ ಮೇಲೆ ಉದ್ದೇಶ ಪೂರ್ವಕವಾಗಿ ಆಡಿ ಕಾರು ಹತ್ತಿಸಿ, ವಿಕೃತಿ ಮೆರೆದಿರೋ ಘಟನೆ ಸಿಸಿಟಿವಿ ದೃಶ್ಯಾವಳಿಯಿಂದ ತಿಳಿದು ಬಂದಿತ್ತು. ಉದ್ಯಮಿ ಆದಿಕೇಶವುಲು ನಾಯ್ಡು ಮೊಮ್ಮಗ ಆದಿ ಕೇಶವ ಇಂತಹ ವಿಕೃತಿ ಮೆರೆದಿದ್ದನು.
ಪ್ರಕರಣ ಸಂಬಂಧ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬದ್ರಿ ಎಂಬುವವರು ನೀಡಿದ ದೂರಿನ ಮೇರೆಗೆ ಇದೀಗ ಪೊಲೀಸರು ಆದಿಕೇಶವುಲು ನಾಯ್ಡು ಮೊಮ್ಮಗ ಆದಿ ಕೇಶವನನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಉದ್ಯಮಿ ಆದಿಕೇಶವುಲು ನಾಯ್ಡು ಮೊಮ್ಮಗ ಆದಿ ಕೇಶವನನ್ನು ಪೊಲೀಸರು ಬಂಧಿಸಿದ್ದಾರೆ. ರಸ್ತೆಯ ಪಕ್ಕದಲ್ಲಿ ಮಲಗಿದ್ದಂತ ಬೀದಿ ನಾಯಿಯ ಮೇಲೆ ಉದ್ದೇಶ ಪೂರ್ವಕವಾಗಿ ಆಡಿ ಕಾರು ಹತ್ತಿಸಿ, ವಿಕೃತಿ ಮೆರೆದಿರೋ ಘಟನೆ ಸಿಸಿಟಿವಿ ದೃಶ್ಯಾವಳಿಯಿಂದ ತಿಳಿದು ಬಂದಿತ್ತು. ಆಡಿ ಕಾರನ್ನು ಬೇಕೆಂದೇ ರಿವರ್ಸ್ ತೆಗೆದಿಕೊಂಡು ಹೋಗಿ, ರಸ್ತೆಯಲ್ಲಿ ಮಲಗಿದ್ದಂತ ಬೀದಿ ನಾಯಿಯ ಮೇಲೆ ಹತ್ತಿಸಲಾಗಿದೆ. ಕಾರು ಹತ್ತಿದಂತ ರಭಸಕ್ಕೆ ನಾಯಿ ವಿಲ ವಿಲ ಒದ್ದಾಡಿ ಸ್ಥಳದಲ್ಲಿಯೇ ಪ್ರಾಣಬಿಟ್ಟಿರೋದಾಗಿ ತಿಳಿದು ಬಂದಿದೆ.
BREAKING NEWS: ಟೋಯಿಂಗ್ ವಾಹನದಲ್ಲಿ ಕ್ಯಾಮರಾ, ಮೈಕ್ ಕಡ್ಡಾಯ : ಬಿ.ಆರ್. ರವಿಕಾಂತೇಗೌಡ
PPF Account: ನಿಮ್ಮ ಪಿಪಿಎಫ್ ಖಾತೆಯನ್ನು ವರ್ಗಾವಣೆ ಮಾಡಬೇಕಾದರೆ ಮಾಹಿತಿ ಇಲ್ಲಿದೆ