ಸುಭಾಷಿತ :

Tuesday, April 7 , 2020 6:16 PM

ಕೇಂದ್ರ ಸರ್ಕಾರದಿಂದ ಖಾಸಗಿ ವಲಯದ ನೌಕರರಿಗೆ `ಶುಭಸುದ್ದಿ’!


Thursday, February 20th, 2020 9:22 am

ನವದೆಹಲಿ : ಖಾಸಗಿ ನೌಕರರಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಲು ಮುಂದಾಗಿದ್ದು, ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ನೌಕರರಿಗೆ ಶೀಘ್ರವೇ ಇಪಿಎಫ್ ನಂತೆ ಪಿಂಚಣಿ ಯೋಜನೆಯನ್ನು  ಜಾರಿಗೆ ತರಲು ಮುಂದಾಗಿದೆ.

ಖಾಸಗಿ ನೌಕರರು ಈ ಪಿಂಚಣಿ ಸೌಲಭ್ಯ ಪಡೆಯಲು ತಮ್ಮ ಸಂಬಳದಲ್ಲಿ ಪಿಂಚಣಿ ಹಣ ಕಡಿತವಾಗುತ್ತದೆ. ನೌಕರರು ಮಾಸಿಕ ಕನಿಷ್ಠ 100 ರೂ. ಇಡಬಹುದು. ಕಂಪನಿ ಕೂಡ ಹಣವನ್ನು ನೌಕರರ ಖಾತೆಗೆ ಹಾಕುವಂತ ಯೋಜನೆಗೆ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದ್ದು, ಈ ಯೋಜನೆಯಿಂದ ಲಕ್ಷಾಂತರ ಖಾಸಗಿ ನೌಕರರಿಗೆ ಲಾಭ ಸಿಗಲಿದೆ.

ಈ ಖಾಸಗಿ ನೌಕರರು ನಿಗದಿತ ಸಮಯದ ನಂತರ ಪಿಎಫ್ ಖಾತೆಯ ಮೊತ್ತವನ್ನು ಹಿಂಪಡೆಯಬಹುದು. ಪಿಂಚಣಿ ಮೊತ್ತವನ್ನು ಹಿಂಪಡೆಯುವ ನಿಯಮಗಳು ಕಟ್ಟುನಿಟ್ಟಾಗಿರುತ್ತವೆ ಎಂದು ಕೇಂದ್ರ ಹಣಕಾಸು ಕಾರ್ಯದರ್ಶಿಗಳು ಮಾಹಿತಿ ನೀಡಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions