ಸುಭಾಷಿತ :

Saturday, December 7 , 2019 6:58 PM

`KSRTC’ ನೌಕರರಿಗೆ `ಬಂಪರ್’ ಸುದ್ದಿ : ಅಧಿಕ ಅವಧಿ ವೇತನ ನೀಡುವಂತೆ ಹೈಕೋರ್ಟ್ ಆದೇಶ!


Thursday, December 5th, 2019 6:40 am

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರಿಗೆ ಅಧಿಕ ಅವಧಿ ಭತ್ಯೆ ನೀಡುವಂತೆ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಈ ಕುರಿತು ಆದೇಶ ಹೊರಡಿಸಿದ್ದು, ಅಧಿಕ ಅವಧಿ ಭತ್ಯೆ ನೀಡಬೇಕು ಎಂದು ಆದೇಶಿಸಿದ್ದು,  ಅಧಿಕ ಅವಧಿ ಭತ್ಯೆಯನ್ನು ನೀಡದೆ ಕೆಲಸ ಮಾಡಿಸಿಕೊಳ್ಳುವುದು ಕಾನೂನು ಬಾಹಿರವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಅಧಿಕ ಅವಧಿ ಕೆಲಸ ಮಾಡಿದರೆ ಭತ್ಯೆ ಪಡೆಯುವುದು ಉದ್ಯೋಗಿಗಳ ಹಕ್ಕು ಎಂದು ನ್ಯಾಯಾಲಯ ಹೇಳಿದೆ. ಹೈಕೋರ್ಟ್ ನ ಈ ಆದೇಶದಿಂದ 30 ಸಾವಿರಕ್ಕೂ ಅಧಿಕ ಕೆಎಸ್ ಆರ್ ಟಿಸಿ ನೌಕರರಿಗೆ ಲಾಭ ಸಿಗಲಿದೆ. 2017-18 ನೇ ಸಾಲಿನಲ್ಲಿ ಬೋನಸ್ ನೀಡಿದ್ದ ಕೆಎಸ್ಆರ್ ಟಿಸಿ. ಮೂಲ ವೇತನ ಮತ್ತು ತುಟ್ಟಿಭತ್ಯೆ ಸೇರಿಸಿ 21 ಸಾವಿರಕ್ಕೂ ಕಡಿಮೆ ವೇತನ ಪಡೆದ ಉದ್ಯೋಗಿಗಳಿಗೆ 7 ಸಾವಿರ ರೂ. ಬೋನಸ್ ನೀಡಲು ತೀರ್ಮಾನ ಕೈಗೊಳ್ಳಲಾಗಿತ್ತು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions