BREAKING: ರಾಜ್ಯ ಸರ್ಕಾರದಿಂದ ಲಕ್ಕುಂಡಿಯ ರಿತ್ತಿ ಕುಟುಂಬಕ್ಕೆ ಬಂಫರ್ ಗಿಫ್ಟ್: ಮನೆ ನಿರ್ಮಾಣಕ್ಕೆ ನಿವೇಶನ, 5 ಲಕ್ಷ ನಗದು

ಗದಗ: ಜಿಲ್ಲೆಯ ಲಕ್ಕುಂಡಿಯಲ್ಲಿ ನಿಧಿ ಸಿಕ್ಕಿದ್ದನ್ನು ಸರ್ಕಾರಕ್ಕೆ ನೀಡಿದಂತ ರಿತ್ತಿ ಕುಟುಂಬಕ್ಕೆ ಸರ್ಕಾರ ಬಂಫರ್ ಗಿಫ್ಟ್ ನೀಡಿದೆ. ಮನೆ ನಿರ್ಮಾಣಕ್ಕೆ ನಿವೇಶನ, ಜೊತೆಗೆ 5 ಲಕ್ಷ ನಗದು ಹಾಗೂ ಕಸ್ತೂರೆವ್ವಗೆ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನೀಡಿದೆ. ಇಂದು ಸಚಿವ ಹೆಚ್.ಕೆ ಪಾಟೀಲ್ ಅವರು ರಿತ್ತಿ ಕುಟುಂಬಕ್ಕೆ 30X40 ಅಳತೆಯ ನಿವೇಶನ, ಮನೆ ನಿರ್ಮಾಣಕ್ಕೆ 5 ಲಕ್ಷ ನಗದನ್ನು ನೀಡಿದರು. ಇದಲ್ಲದೇ ಕಸ್ತೂರೆವ್ವಗೆ ಹೊರಗುತ್ತಿಗೆ ಆಧಾರದಲ್ಲಿ ಕೆಲಸದ ಆದೇಶ ಪತ್ರವನ್ನು ನೀಡಿದರು.