Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now
    Facebook Twitter Instagram
    Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now
    • STATE
    • KARNATAKA
    • INDIA
    • WORLD
    • SPORTS
      • CRICKET
      • OTHER SPORTS
    • FILM
      • SANDALWOOD
      • BOLLYWOOD
      • OTHER FILM
    • LIFE STYLE
      • BEAUTY TIPS
    • BUSINESS
    • JOBS
    • CORONA VIRUS
    • AUTOMOBILE
      • BIKE-REVIEWS
      • CAR-REVIEWS
    Kannada News / Top Stories – ಮುಖ್ಯ ವಾರ್ತೆಗಳು, Kannada News, Kannada Breaking News, ಕನ್ನಡ, ಕನ್ನಡ ಸುದ್ದಿ, ಕರ್ನಾಟಕ ವಾರ್ತೆ, ಕನ್ನಡ ವಾರ್ತೆ, Kannada Live News, Karnataka News, ಕನ್ನಡ ಸುದ್ದಿ, Latest News in Kannada, Live news Kannada | Kannada News Now
    Home » ರಾಜಕಾಲುವೆ ಮೇಲೆ ಕಟ್ಟಿದ ಅರಮನೆ, ಮಾಲ್‌ʼಗಳ ಮೇಲೆ ಬುಲ್ಡೋಜರ್‌ ಹೋಗಲ್ಲ, ಬಡವರ ಮನೆಗಳ ಮೇಲೆ ಹರಿಯುತ್ತದೆ – HDK ಕಿಡಿ
    KARNATAKA

    ರಾಜಕಾಲುವೆ ಮೇಲೆ ಕಟ್ಟಿದ ಅರಮನೆ, ಮಾಲ್‌ʼಗಳ ಮೇಲೆ ಬುಲ್ಡೋಜರ್‌ ಹೋಗಲ್ಲ, ಬಡವರ ಮನೆಗಳ ಮೇಲೆ ಹರಿಯುತ್ತದೆ – HDK ಕಿಡಿ

    By Kannada NewsJuly 03, 8:55 pm

    ಬೆಂಗಳೂರು: ರಾಜಕಾಲುವೆಗಳ ಮೇಲೆ ನಿರ್ಮಾಣವಾಗಿರುವ ಮಾಲ್‌ʼಗಳು, ಅರಮನೆಯಂಥ ಭಂಗಲೆಗಳ ಮೇಲೆ ಬುಲ್ಡೋಜರ್‌ʼಗಳು ಹೋಗುವುದಿಲ್ಲ. ಆದರೆ, ಬಡವರು ಯಾರಾದರೂ ಸಣ್ಣ ಮನೆ, ಗುಡಿಸಲು ಕಟ್ಟಿಕೊಂಡಿದ್ದರೆ ಅವರ ಮನೆಗಳ ಮೇಲೆ ಬುಲ್ಡೋಜರ್‌ʼಗಳು ನಿರ್ದಯವಾಗಿ ಹರಿಯುತ್ತವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ( Ex CM HD Kumaraswamy ) ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

    ಹೆಬ್ಬಾಳ ವಿಧಾನಸಭೆ ಕ್ಷೇತ್ರದ ನಾಗೇನಹಳ್ಳಿಯಲ್ಲಿ ಇಂದು ಸಂಜೆ ನಡೆದ ʼಜನತಾಮಿತ್ರʼ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರಕಾರಗಳ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿದರು.

    ಬಡವರಿಗೆ, ಮಧ್ಯಮವರ್ಗದ ಜನರಿಗೆ ಕಡಿಮೆ ದರದಲ್ಲಿ ನಿವೇಶನ, ಮನೆ ಕೊಡಬೇಕಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ. ಅದೊಂದು ಭ್ರಷ್ಟಕೂಪ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

    BREAKING NEWS: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೋವಿಡ್ ನಿಂದ ಗುಣಮುಖ | India captain Rohit Sharma

    ಬೆಂಗಳೂರು ನಗರ ಒಂದರಲ್ಲೇ ಸುಮಾರು ೩೦ ಸಾವಿರಕ್ಕೂ ಹೆಚ್ಚು ಭೂಮಿಯನ್ನು ಭೂಗಳ್ಳರು ಕಬಳಿಸಿದ್ದಾರೆ. ಅದನ್ನು ಮರು ವಶಪಡಿಸಿಕೊಂಡರೆ ಲಕ್ಷಾಂತರ ಬಡವರಿಗೆ ಮನೆ ಕಟ್ಟಿಕೊಡಬಹುದು. ಅಂಥ ಕೆಲಸವನ್ನು ಬಿಡಿಎ ಮಾಡುತ್ತಿಲ್ಲ. ನನಗೊಂದು ಅವಕಾಶ ಕೊಟ್ಟು ನೋಡಿ. ಬೆಂಗಳೂರು ನಗರವನ್ನು ಅಭಿವೃದ್ಧಿಯ ಹಳಿಯ ಮೇಲೆ ತಂದು ನಿಲ್ಲಿಸುತ್ತೇನೆ ಎಂದು ಅವರು ಘೋಷಣೆ ಮಾಡಿದರು.

    ಬೆಂಗಳೂರಿನಲ್ಲಿ ಎಲ್ಲ ಪ್ರದೇಶಗಳು ಸಮಾನವಾಗಿ ಅಭಿವೃದ್ಧಿ ಆಗುತ್ತಿಲ್ಲ. ಶ್ರೀಮಂತರು ವಾಸ ಮಾಡುವ ಪ್ರದೇಶಗಳಿಗೆ ಎಲ್ಲ ಅನುಕೂಲಗಳಿದ್ದರೆ, ಬಡವರ ಬಡಾವಣೆಗಳಿಗೆ ಕೊನೆಪಕ್ಷ ರಸ್ತೆಗಳಿಗೆ ಡಾಂಬರು ಇಲ್ಲ, ವಿದ್ಯುತ್‌ ದೀಪಗಳಿಲ್ಲ. ಯಲಹಂಕ ವಿಧಾನಸಭೆ ಕ್ಷೇತ್ರದ ಬೆಟ್ಟಹಳ್ಳಿ ಗ್ರಾಮಕ್ಕೆ ಹೋದರೆ ರಾಜ್ಯ ಸರಕಾರದ ನಿಜವಾದ ಅಭಿವೃದ್ಧಿ ಮಾದರಿ ಕಣ್ಣಿಗೆ ಕಾಣುತ್ತದೆ ಎಂದು ಹರಿಹಾಯ್ದರು ಕುಮಾರಸ್ವಾಮಿ.

    ಜಮ್ಮುವಿನಲ್ಲಿ ಸಿಕ್ಕಿಬಿದ್ದ ಲಷ್ಕರ್ ಭಯೋತ್ಪಾದಕ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ

    ನಗರದ ಅಭಿವೃದ್ಧಿ, ಅನುದಾನ ಹಂಚಿಕೆಯಲ್ಲಿ ಬಿಜೆಪಿ ಸರಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.

    ಮಾಜಿ ಸಚಿವ ಕಟ್ಟಾ ಮೇಲೆ ಚಾಟಿ ಬೀಸಿದ ಹೆಚ್ಡಿಕೆ

    ಹೆಬ್ಬಾಳ ವಿಧಾನಸಭೆ ಕ್ಷೇತ್ರದಿಂದ ಗೆದ್ದು ಮಂತ್ರಿಯಾಗಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಿರುದ್ಧ ಕಟುವಾದ ಟೀಕೆ ಮಾಡಿದ ಮಾಜಿ ಮುಖ್ಯಮಂತ್ರಿಗಳು; ಕಟ್ಟಾ ಅವರು ಈಗ ಹೆಣ್ಣುಮಕ್ಕಳಿಗೆ ಆರಶಿಣ-ಕುಂಕುಮ ಕೊಡುತ್ತೇನೆ, ಲಲಿತಾ ಸಹಸ್ರನಾಮ ಕಾರ್ಯಕ್ರಮ ಏರ್ಪಡಿಸುತ್ತೇನೆ ಎಂದು ಈಗ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಿಂದ ಜನರ ಬದುಕು ಹಸನಾಗುತ್ತದೆಯೇ? ಅಲ್ಲೆಲ್ಲ ದೊಡ್ಡದಾಗಿ ಮಹಿಳೆಯರನ್ನು ಸೇರಿಸಿ ಪೂಜೆ ಪುನಸ್ಕಾರ ಅಂತ ಹೇಳಿ ಮಂಕೂಬೂದಿ ಎರಚಿ, ಗೆದ್ದುಹೋಗಿ ಮಂತ್ರಿ ಆಗುತ್ತಾರೆ. ಆಮೇಲೆ, ಸರಕಾರಿ ಭೂಮಿಯನ್ನು ಲಪಟಾಯಿಸಿ ಬಳಿಕ ಜಾಮೀನಿಗಾಗಿ ಕೋರ್ಟು ಕಚೇರಿ ಅಂತ ಅಲೆಯುತ್ತಾರೆ ಎಂದು ಪ್ರಹಾರ ನಡೆಸಿದರು.

    ಬೆಂಗಳೂರಿನಲ್ಲಿ ಇವತ್ತು ಅನೇಕ ರಾಜಕಾರಣಿಗಳು, ಸಾರ್ವಜನಿಕ ಹಾಗೂ ಬಡಬಗ್ಗರ ಭೂಮಿಯನ್ನು ಕೊಳ್ಳೆ ಹೊಡೆದು ನೂರಾರು ಕೋಟಿ ಮಾಡಿದ್ದಾರೆ. ಅದೇ ಪಾಪದ ಹಣದಿಂದ ಫುಡ್ ಕಿಟ್‌, ಸಣ್ಣಪುಟ್ಟ ಪ್ರಮಾಣದ ಭಕ್ಷೀಸು ನೀಡಿ ಚುನಾವಣೆ ಗೆಲ್ಲುತ್ತಿದ್ದಾರೆ. ಇಂಥ ಆಮಿಷಗಳಿಗೆ ಜನರು ಮಾರುಹೋಗಬಾರದು. ಹಣ ಪಡೆದು ಸಭೆ ಸಮಾರಂಭಗಳಿಗೆ ಹೋಗಬಾರದು ಎಂದು ಕುಮಾರಸ್ವಾಮಿ ಅವರು ಕರೆ ನೀಡಿದರು.

    ಬೆಂಗಳೂರಿನಲ್ಲಿ ಬಡವರ ಬಂಧು ಕಾರ್ಯಕ್ರದ ಮೂಲಕ ಬೀದಿಬದಿ ವ್ಯಾಪಾರಿಗಳಿಗೆ ನೆರವಾದೆ. ೨೫ ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದೆ. ಇದೆಲ್ಲವನ್ನೂ ಫಲಾನುಭವಿಗಳ ಹೆಸರಿನ ಸಮೇತ ದಾಖಲೆ ಕೊಡಬಲ್ಲೆ, ನರೇಂದ್ರ ಮೋದಿ ಅವರಂತೆ ನಾನು ಬರೀ ಭಾಷಣ ಮಾಡಲ್ಲ ಎಂದರಲ್ಲದೆ, ಮೋದಿ ಹಿಂದೆ ಸುತ್ತುವ ಆತ್ಮೀಯನೊಬ್ಬ ಗಂಟೆಗೆ ೫೩ ಕೋಟಿ ದುಡಿಯುತ್ತಿದ್ದಾನಂತೆ. ಅದು ಹೇಗೆ? ಯಾವ ರೀತಿ? ಇಂಥವರನ್ನು ತೋರಿಸಿ ಭಾರತ ಉದ್ಧಾರವಾಗಿದೆ ಎಂದು ಜಗತ್ತಿಗೆ ತೋರಿಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಕಿಡಿಕಾರಿದರು.

    ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ ಮಾತನಾಡಿದರು. ಹೆಬ್ಬಾಳ ವಿಧಾನಸಭೆ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಮೊಯಿದ್ದೀನ್‌ ಅಲ್ತಾಫ್‌, ದಾಸರಹಳ್ಳಿ ಶಾಸಕ ಮಂಜುನಾಥ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ಹೆಚ್.ಎಂ.ರಮೇಶ್‌ ಗೌಡ ಸೇರಿದಂತೆ ಪಕ್ಷದ ಮುಖಂಡರು, ಅಸಂಖ್ಯಾತ ಕಾರ್ಯಕರ್ತರು ಜನತಾಮಿತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    ಇದಕ್ಕೂ ಮೊದಲು ದಾಸರಹಳ್ಳಿ ವಿಧಾನಸಭೆ ಕ್ಷೇತ್ರದ ವಿವಿಧ ಭಾಗಗಳಲ್ಲಿ ನಡೆದ ಜನತಾಮಿತ್ರ ಜಾಥ ಮತ್ತು ಬಹಿರಂಗ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಸ್ಥಳೀಯ ಶಾಸಕ ಮಂಜುನಾಥ್ ಪಾಲ್ಗೊಂಡಿದ್ದರು.



    breaking news kannada latest news kannada news kannada news live kannada news now kannada online news kannadanews kannadanewsnow dot com kannadanewsnow.com kannadanewsnowdotcom karnataka latest news karnataka news latest news
    best web service company
    Share. Facebook Twitter LinkedIn WhatsApp Email

    Related Posts

    BIGG NEWS : ʻ ನನ್ನ ತಂದೆಗೆ ಹಿಂದುತ್ವವಾದಿಗಳಿಂದ ಜೀವ ಬೆದರಿಕೆ ಇದೆʼ : ಸಿದ್ದರಾಮಯ್ಯ ಪುತ್ರ ಯತೀಂದ್ರ ಪ್ರತಿಕ್ರಿಯೆ

    August 19, 11:01 am

    BIGG NEWS: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಪ್ರಕರಣ: ಇದು BJP ಪ್ರಾಯೋಜಕತ್ವದಿಂದ ಆಗಿರೋದು- ಎಂ.ಬಿ ಪಾಟೀಲ್‌

    August 19, 10:54 am

    ಅತ್ತೆ-ಸೊಸೆ ಕಿರಿಕಿರಿ, ಶತ್ರು ಕಾಡಾಟದಿಂದ ಪರಿಹಾರ, ಇನ್ನು ನಿಮ್ಮ ಗುಪ್ತ ಹಾಗೂ ಕಠಿಣ ಸಮಸ್ಯೆಗಳಿಗೆ ಪರಿಹಾರವಿದೆ ತಾ.19-08-2022 ರ ಶುಕ್ರವಾರದ ರಾಶಿಭವಿಷ್ಯ

    August 19, 10:52 am
    Recent News

    ಬಿರಿಯಾನಿ ಬಿಲ್ ಪಾವತಿ ವಿವಾದ: ಗ್ರಾಹಕನಿಗೆ ಚಾಕುವಿನಿಂದ ಇರಿದು ಮಾಲೀಕ ಎಸ್ಕೇಪ್!

    August 19, 11:02 am

    BIGG NEWS : ʻ ನನ್ನ ತಂದೆಗೆ ಹಿಂದುತ್ವವಾದಿಗಳಿಂದ ಜೀವ ಬೆದರಿಕೆ ಇದೆʼ : ಸಿದ್ದರಾಮಯ್ಯ ಪುತ್ರ ಯತೀಂದ್ರ ಪ್ರತಿಕ್ರಿಯೆ

    August 19, 11:01 am

    BIGG NEWS: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಪ್ರಕರಣ: ಇದು BJP ಪ್ರಾಯೋಜಕತ್ವದಿಂದ ಆಗಿರೋದು- ಎಂ.ಬಿ ಪಾಟೀಲ್‌

    August 19, 10:54 am

    ಅತ್ತೆ-ಸೊಸೆ ಕಿರಿಕಿರಿ, ಶತ್ರು ಕಾಡಾಟದಿಂದ ಪರಿಹಾರ, ಇನ್ನು ನಿಮ್ಮ ಗುಪ್ತ ಹಾಗೂ ಕಠಿಣ ಸಮಸ್ಯೆಗಳಿಗೆ ಪರಿಹಾರವಿದೆ ತಾ.19-08-2022 ರ ಶುಕ್ರವಾರದ ರಾಶಿಭವಿಷ್ಯ

    August 19, 10:52 am
    State News
    KARNATAKA

    BIGG NEWS : ʻ ನನ್ನ ತಂದೆಗೆ ಹಿಂದುತ್ವವಾದಿಗಳಿಂದ ಜೀವ ಬೆದರಿಕೆ ಇದೆʼ : ಸಿದ್ದರಾಮಯ್ಯ ಪುತ್ರ ಯತೀಂದ್ರ ಪ್ರತಿಕ್ರಿಯೆ

    By kannadanewsnowAugust 19, 11:01 am0

    ಬೆಂಗಳೂರು :  ಸಿದ್ದರಾಮಯ್ಯ ಸಾವರ್ಕರ್‌ ಬಗ್ಗೆ ಹೇಳಿಕೆ ನೀಡಿದ ಹಿನ್ನೆಲೆ  ಹಿಂದುತ್ವವಾದಿಗಳಿಂದ ʻತಂದೆಗೆ ಜೀವ ಬೆದರಿಕೆ ಇದೆ’ ಎಂದು ಸಿದ್ದರಾಮಯ್ಯ…


    BIGG NEWS: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಪ್ರಕರಣ: ಇದು BJP ಪ್ರಾಯೋಜಕತ್ವದಿಂದ ಆಗಿರೋದು- ಎಂ.ಬಿ ಪಾಟೀಲ್‌

    August 19, 10:54 am

    ಅತ್ತೆ-ಸೊಸೆ ಕಿರಿಕಿರಿ, ಶತ್ರು ಕಾಡಾಟದಿಂದ ಪರಿಹಾರ, ಇನ್ನು ನಿಮ್ಮ ಗುಪ್ತ ಹಾಗೂ ಕಠಿಣ ಸಮಸ್ಯೆಗಳಿಗೆ ಪರಿಹಾರವಿದೆ ತಾ.19-08-2022 ರ ಶುಕ್ರವಾರದ ರಾಶಿಭವಿಷ್ಯ

    August 19, 10:52 am

    ಬಿಜೆಪಿಗೆ ತಿರುಗೇಟು ಕೊಡಲು ಕಾಂಗ್ರೆಸ್ ಪ್ಲ್ಯಾನ್: ಆಗಸ್ಟ್ 26 ರಂದು ಕೊಡಗಿನಲ್ಲಿ ದೊಡ್ಡ ಮಟ್ಟಕ್ಕೆ ಹೋರಾಟಕ್ಕೆ ಮುಂದಾದ ಕೈ ಪಡೆ

    August 19, 10:51 am

    kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

    Quick Links
    • State
    • Karnataka
    • India
    • World
    • Sports
    • Film
    • Lifestyle
    • Business
    • Jobs
    • Corona Virus
    • Automobile
    contact us

    kannadanewsnow@gmail.com

    FOLLOW US

    breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

    • Home
    • Lifestyle
    • Buy Now
    Copyright © 2022 | All Right Reserved | kannadanewsnow.com
    Digital Partner Blueline Computers

    Type above and press Enter to search. Press Esc to cancel.