ಬೆಂಗಳೂರು: ನಗರದ ರಸ್ತೆ ಬದಿ ಮತ್ತು ಪಾದಚಾರಿ ಮಾರ್ಗದಲ್ಲಿ ಹಾಕಿರುವಂತ ಪೈಪು ಹಾಗೂ ಕಟ್ಟಡ ನಿರ್ಮಾಣ ವಸ್ತುಗಳನ್ನು ನಾಲ್ಕು ದಿನಗಳಲ್ಲಿ ತೆರವುಗೊಳಿಸಬೇಕು ಎಂಬುದಾಗಿ ಬಿಬಿಎಂಪಿ ಮುಖ್ಯ ಆಯುಕ್ತರು ( BBMP Chief Commissioner ) ಖಡಕ್ ಆದೇಶ ಹೊರಡಿಸಿದ್ದಾರೆ.

BIG NEWS: ‘ಶಾಲಾ-ಕಾಲೇಜು’ಗಳಲ್ಲಿ ‘ಮಾದಕ ವ್ಯಸನ ನಿಗ್ರಹ ಕ್ಲಬ್’ ಸ್ಥಾಪಿಸಿ: ‘ಶಿಕ್ಷಣ ಇಲಾಖೆ’ಗೆ ‘ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ’ ಸೂಚನೆ

ಈ ಕುರಿತಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ( BBMP Chief Commissioner Tushar Girinath ) ಅವರು ಆದೇಶ ಹೊರಡಿಸಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಹಲವು ಕಡೆಗಳಲ್ಲಿ ರಸ್ತೆ ಬದಿ ಮತ್ತು ಪಾದಚಾರಿ ಮಾರ್ಗದಲ್ಲಿ ಕಟ್ಟಡ ನಿರ್ಮಾಣದ ವಸ್ತು ಮತ್ತು ಪೈಪುಗಳಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿರುತ್ತದೆ. ಆದ್ದರಿಂದ ತಕ್ಷಣದಿಂದ ಆಯಾ ವಲಯದ ಎಲ್ಲಾ ಮುಖ್ಯ ಇಂಜಿನಿಯರ್ ಗಳು ರಸ್ತೆ ಬದಿ ಮತ್ತು ಪಾದಚಾರಿ ಮಾರ್ಗದಲ್ಲಿ ಇರುವ ಪೈಪು ಹಾಗೂ ಕಟ್ಟಡ ನಿರ್ಮಾಣ ವಸ್ತುಗಳನ್ನು ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

Job Alert: ‘ಉದ್ಯೋಗಾಕಾಂಕ್ಷಿ’ಗಳಿಗೆ ಭರ್ಜರಿ ಸಿಹಿಸುದ್ದಿ: ‘ರಾಜ್ಯ ಸರ್ಕಾರ’ದಿಂದ ‘ಬ್ಯಾಕ್ ಲಾಗ್ ಹುದ್ದೆ’ ಭರ್ತಿಗೆ ಗ್ರೀನ್ ಸಿಗ್ನಲ್

ಮುಂದುವರಿದು, ತೆರವುಗೊಳಿಸಿರುವ ಬಗ್ಗೆ ಜಿಯೋ ಟ್ಯಾಗ್ ಫೋಟೊ ಸಮೇತ ವರದಿಯನ್ನು ಎಲ್ಲಾ ವಿಭಾಗಗಳ ಕಾರ್ಯಪಾಲಕ ಅಭಿಯಂತರರುಗಳು ದಿನಾಂಕ: 21.08.2022ರ ಸಂಜೆ 4.00 ಘಂಟೆ ಒಳಗಾಗಿ ಪ್ರಧಾನ ಅಭಿಯಂತರರಿಗೆ ವರದಿ ನೀಡಲು ಆದೇಶಿಸಿದೆ. ಇದನ್ನು ತೆರವುಗೊಳಿಸುವಲ್ಲಿ ವಿಫಲವಾದರೆ ಅಥವಾ ವರದಿ ನೀಡದಿದ್ದರೆ ಸಂಬಂಧಪಟ್ಟ ಮುಖ್ಯ ಅಭಿಯಂತರರು ಮತ್ತು ಕಾರ್ಯಪಾಲಕ ಅಭಿಯಂತರರುಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ.

Share.
Exit mobile version