ಶಿವಮೊಗ್ಗ: ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿವೆ. ಇವುಗಳ ನಿಯಂತ್ರಣಕ್ಕೆ ಲಾರ್ವಾಹಾರಿ ಗಪ್ಪಿ ಮೀನುಗಳನ್ನು ಸಾಕಾಣಿಕೆ ಮಾಡಿ. ಇವುಗಳು ಸೊಳ್ಳೆ ಇಡುವಂತ ಲಾರ್ವಾವನ್ನು ಸೇವಿಸಿ, ಸೊಳ್ಳೆಗಳು ಹೆಚ್ಚಾಗದಂತೆ ಮಾಡುತ್ತವೆ ಎಂಬುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕರೆ ನೀಡಿದ್ದಾರೆ.

ಇಂದು ಸೊರಬ ಸಾರ್ವಜನಿಕ ಆಸ್ಪತ್ರೆ ಇಲ್ಲಿ ಭೇಟಿ ನೀಡಿ ಆಸ್ಪತ್ರೆಯ ಅಭಿವೃದ್ಧಿ ಮತ್ತು ರೋಗಿಗಳಿಗೆ ಇರುವಂತ ಆರೋಗ್ಯ ‌ಸೇವೆಗಳ ಸೌಲಭ್ಯಗಳು, ಡೆಂಗ್ಯೂ ಜ್ವರ ದಾಖಲಾದ ಪ್ರಕರಣಗಳ ಮಾಹಿತಿ ಮತ್ತು ಡೆಂಗ್ಯೂ ಪೀಡಿತರನ್ನು ಉಪಚರಿಸುವ ವಿಧಾನ ಬಗ್ಗೆ ಡೆಂಗ್ಯೂ ಪೀಡಿತರಿಂದ ಮಾಹಿತಿ ಪಡೆದರು ಮತ್ತು ಸಾರ್ವಜನಿಕ ಆಸ್ಪತ್ರೆಯ ಅಭಿವೃದ್ಧಿಗೆ ಅವಶ್ಯಕತೆ ಕುರಿತು ಸಾರ್ವಜನಿಕ ಆಸ್ಪತ್ರೆ ಆಡಳಿತ ಅಧಿಕಾರಿ ಡಾ.ಪ್ರಭು ಸಾಹುಕಾರ್ ಮಾಹಿತಿ ನೀಡಿದರು.

ತಾಲೂಕಿನಲ್ಲಿ ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ಕೈಗೊಂಡಿರುವ ಮುಂಜಾಗ್ರತ ಕ್ರಮಗಳ ಕುರಿತಾಗಿ ತಾಲೂಕು ಆರೋಗ್ಯ ಅಧಿಕಾರಿ ಡಾ.ವಿನಯ್ ಪಾಟೀಲ್ ಅವರು ಸಚಿವರಿಗೆ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ತಾಲೂಕಿನಲ್ಲಿರುವ ಜೈವಿಕ ವಿಧಾನ ಲಾರ್ವಾಹಾರಿ ಗಪ್ಪಿ ಮೀನುಗಳ ಸಾಕಾಣಿಕೆ ತೊಟ್ಟಿಯನ್ನು ಸಚಿವ ಮಧು ಬಂಗಾರಪ್ಪ ಅವರು ಉದ್ಘಾಟಿಸಿದರು. ಆ ಬಳಿಕ  ಸಾರ್ವಜನಿಕರಿಗೆ ಗಪ್ಪಿ ಮೀನು ಸಾಕಾಣಿಕೆ ಮಾಡಲು ಮೀನುಗಳನ್ನು ವಿತರಿಸಿದರು. ಅಲ್ಲದೇ ಸಾರ್ವಜನಿಕರು ಡೆಂಗ್ಯೂ ನಿಯಂತ್ರಣದಲ್ಲಿ ಕೈಜೋಡಿಸುವಂತೆ ಕರೆ ನೀಡಿದರು. .

ಏನಿದು ಲಾರ್ವಾಹಾರಿ ಗಪ್ಪಿ ಮೀನು ಸಾಕಾಣಿಕೆ.?

ಈ ಬಗ್ಗೆ ಸೊರಬ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿನಯ್ ಪಾಟೀಲ್ ಅವರು ಮಾಹಿತಿ ಹಂಚಿಕೊಂಡಿದ್ದು, ಗಪ್ಪಿ ಮೀನು ಹಾಗೂ ಗಾಂಬೂಸಿಯ ಎನ್ನುವಂತ ಲಾರ್ವಾಹಾರಿ ಮೀನುಗಳಿದ್ದಾವೆ. ಆದ್ರೇ ಗಪ್ಪಿ ಮೀನು ನಮ್ಮ ವಾತಾವರಣಕ್ಕೆ ತಕ್ಕಂತೆ ಬದುಕುತ್ತದೆ. ಗಪ್ಪಿ ಮೀನು ಬಿಡೋದರಿಂದ ದೀರ್ಘಾವಧಿಯ ಸೊಳ್ಳೆಯ ಲಾರ್ವಾ ಕಂಟ್ರೋಲ್ ಮಾಡಲಿದೆ. ಡ್ರಮ್, ಬಾನಿ, ಧನ ಕರು ಕುಡಿಯೋಕೆ ತೊಟ್ಟಿಯಲ್ಲಿ ಇವುಗಳನ್ನು ಬಿಟ್ಟರೇ, ಲಾರ್ವಾಗಳನ್ನು ಸೇವಿಸಿ, ಸೊಳ್ಳೆ ಹೆಚ್ಚಾಗೋದನ್ನು ನಿಯಂತ್ರಿಸಲಿದ್ದಾವೆ ಎಂದು ಹೇಳಿದರು.

ಸಣ್ಣ ಸಣ್ಣ ಹುಳು, ಸೊಳ್ಳೆ ಇಡುವಂತ ಲಾರ್ವವನ್ನು ತಿಂದು ಬದುಕಲಿದೆ. ಇದರಿಂದ ಸೊಳ್ಳೆಯಾಗದೇ, ಡೆಂಗ್ಯೂ ನಿಯಂತ್ರಣವಾಗಲಿದೆ. ಸೊರಬ ತಾಲೂಕಿನ 16 ಪಿಹೆಚ್ ಸಿಗಳಲ್ಲಿ ತೊಟ್ಟಿ ಮಾಡಿ, ಗಪ್ಪಿ ಮೀನುಗಳನ್ನು ಸಾಕಾಣಿಕೆ ಮಾಡಲಾಗುತ್ತಿದೆ. ಸಾರ್ವಜನಿಕರು ಯಾರೇ ಬಂದ್ರು ಕೇಳಿದರೂ ಕೊಡಲಾಗುತ್ತದೆ. ಪಂಚಾಯ್ತಿ ವ್ಯಾಪ್ತಿಯಲ್ಲೂ ಗಪ್ಪಿ ಮೀನು ಸಾಕಾಣಿಕೆಗೆ ಸಿಇಓ ಸೂಚನೆ ನೀಡಿದ್ದಾರೆ. ಅಲ್ಲಿಯೂ ಗಪ್ಪಿ ಮೀನುಗಳು ದೊರೆಯಲಿದ್ದಾವೆ. ಜನರು ಪಡೆದು, ಸಾಕಾಣಿಕೆ ಮಾಡುವ ಮೂಲಕ ನಿಮ್ಮ ಮನೆಯ ಸಮೀಪದ ಸೊಳ್ಳೆ ನಿಯಂತ್ರಣ ಮಾಡಿ, ಡೆಂಗ್ಯೂವಿನಿಂದ ದೂರ ಇರಬಹುದಾಗಿದೆ ಎಂಬುದಾಗಿ ತಿಳಿಸಿದರು.

ನಮ್ಮ ಡಾಕ್ಟರ್ ಗಳು ಕೂಡ ಮನೆಯ ತೊಟ್ಟಿ ಸೇರಿದಂತೆ ವಿವಿಧೆಡೆ ಗಪ್ಪಿ ಮೀನುಗಳನ್ನು ಸಾಕಾಣಿಕೆ ಮಾಡಲಾಗುತ್ತಿದೆ. ಹೀಗೆ ಗಪ್ಪಿ ಮೀನು ಸಾಕಾಣಿಕೆ ಮಾಡುವುದರಿಂದ ಸೊಳ್ಳೆಯ ನಿಯಂತ್ರಣವಾಗಲಿದೆ. ದಯವಿಟ್ಟು ಜನರು ಮಳೆಗಾಲದ ಈ ಸಂದರ್ಭದಲ್ಲಿ ಗಪ್ಪಿ ಮೀನು ಸಾಕಾಣಿಕೆ ಮಾಡಿ, ಲಾರ್ವಾ ನಿಯಂತ್ರಣದೊಂದಿಗೆ ಡೆಂಗ್ಯೂ ಹರಡೋದನ್ನು ತಡೆಗಟ್ಟಬಹುದಾಗಿದೆ ಎಂದರು.

ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಟರಾಜ್ ಕೆ.ಎಸ್ ಸೇರಿದಂತೆ ಇತರೆ ಆರೋಗ್ಯಾಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.

ವರದಿ: ವಸಂತ ಬಿ ಈಶ್ವರಗೆರೆ

ಕುವೆಂಪು ವಿಶ್ವವಿದ್ಯಾಲಯದ 34ನೇ ಘಟಿಕೋತ್ಸವ : ಸ್ನಾತಕ/ಸ್ನಾತಕೋತ್ತರ ಪದವಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ತುರ್ತು ಪರಿಸ್ಥಿತಿ ಪ್ರಸ್ತಾಪ ತಪ್ಪಿಸಬಹುದಿತ್ತು: ಲೋಕಸಭಾ ಸ್ಪೀಕರ್ ಭೇಟಿ ಮಾಡಿದ ರಾಹುಲ್ ಗಾಂಧಿ

Share.
Exit mobile version