ದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನವು (Budget Session) ಜನವರಿ 31 ರಿಂದ ಪ್ರಾರಂಭವಾಗಲಿದೆ. ಫೆ. 1ರಂದು ಬಜೆಟ್ (Budget) ಮಂಡನೆಯಾಗಲಿದ್ದು, ಫೆ. 11ರಂದು ಬಜೆಟ್ ಅಧಿವೇಶನದ ಮೊದಲ ಭಾಗ ಮುಕ್ತಾಯಗೊಳ್ಳಲಿದೆ. ಬಳಿಕ ಬಜೆಟ್ ಮೇಲಿನ ಚರ್ಚೆ ಅಧಿವೇಶ ಮಾರ್ಚ್ 14ರಿಂದ ಆರಂಭವಾಗಲಿದ್ದು, ಏಪ್ರಿಲ್ 8ಕ್ಕೆ ಅಧಿವೇಶನ ಮುಕ್ತಾಯಗೊಳ್ಳಲಿದೆ.
ಬಜೆಟ್ ಮೊದಲ ದಿನ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿಗಳಾ ರಮನಾಥ್ ಕೋವಿಂದ್ ಅವರು ಭಾಷಣ ಮಾಡಲಿದ್ದಾರೆ. ಫೆ. 1ರಂದು ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಆಯವ್ಯಯ ಪತ್ರ ಮಂಡಿಸಲಿದ್ದಾರೆ
ಕೋವಿಡ್ -19 ಪ್ರಕರಣಗಳ ಹೆಚ್ಚಳದ ನಡುವೆಯೇ ಕೇಂದ್ರ ಬಜೆಟ್ ಅಧಿವೇಶನದ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಐದು ಸಂಸತ್ತಿನ ಅಧಿವೇಶನಗಳನ್ನು ಮೊಟಕುಗೊಳಿಸಲಾಗಿದೆ. ಇನ್ನು ಈ ಅಧಿವೇಶನವು ಉತ್ತರ ಪ್ರದೇಶ, ಪಂಜಾಬ್ ಮತ್ತು ಉತ್ತರಾಖಂಡ್ ಸೇರಿದಂತೆ ಐದು ರಾಜ್ಯಗಳ ಚುನಾವಣೆಗ ಸಂದರ್ಭದಲ್ಲಿಯೇ ನಡೆಯಲಿದೆ.
ಕೋವಿಡ್ ಸೋಂಕು ಹೆಚ್ಚಿರುವ ಸಂದರ್ಭದಲ್ಲಿ ನಡೆಯುತ್ತಿರುವ ಈ ಅಧಿವೇಶನದ ವೇಳೆ ರಾಜ್ಯಸಭೆ ಮತ್ತು ಲೋಕಸಭೆಯ ಸಾಮಾಜಿಕ ಅಂತರ ಕಾಯ್ದಗೊಂಡು ಆಸನ ವ್ಯವಸ್ಥೆಗಳು ಸೇರಿದಂತೆ ಕೋವಿಡ್ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿವೇಶನಕ್ಕೂ ಮುನ್ನ ಕೋವಿಡ್ ಪರಿಸ್ಥಿತಿ ಕುರಿತು ವಿಶ್ಲೇಷಣೆ ನಡೆಸಲಾಗುವುದು. ಈ ಸಂಬಂಧ ವಿವಿಧ ಆಯ್ಕೆಗಳನ್ನು ಪರಿಶೀಲನೆ ನಡೆಸಲಾಗುವುದು. ಈ ತಿಂಗಳ ಅಂತ್ಯದ ವರೆಗೆ ಕೋವಿಡ್ ಪರಿಸ್ಥಿತಿಯನ್ನು ನೋಡಿಕೊಂಡು ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಗುವುದು. ಲೋಕಸಭೆಯ ಸ್ಪೀಕರ್ ಮತ್ತು ರಾಜ್ಯಸಭಾ ಅಧ್ಯಕ್ಷರು ಜನವರಿ 25 ಅಥವಾ 26 ರ ಸುಮಾರಿಗೆ ಸಭೆ ನಡೆಸಿ ಅಧಿವೇಶನವನ್ನು ಹೇಗೆ ನಡೆಸಬೇಕೆಂದು ನಿರ್ಧರಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.
ಹೆತ್ತಮ್ಮನ ಮೇಲೆ ಪಾಪಿ ಮಗನಿಂದ ಅತ್ಯಾಚಾರ: ‘ಪೈಶಾಚಿಕ ಕೃತ್ಯ’ಕ್ಕೆ ಬೆಚ್ಚಿಬಿದ್ದ ಜನತೆ.!
ಕೋವಿಡ್ ಸೋಂಕಿಗೆ ಅನೇಕ ಶಾಸಕರು, ಪ್ರಮುಖ ನಾಯಕರು ಮತ್ತು ಉಭಯ ಸದನಗಳ ಅಧಿಕಾರಿಗಳು ರೋಗಕ್ಕೆ ತುತ್ತಾಗಿರುವುದರಿಂದ ಕೋವಿಡ್ -19 ಪ್ರಕರಣಗಳ ಉಲ್ಬಣದ ಮಧ್ಯೆ ಅಧಿವೇಶನ ಘೋಷಣೆ ಆಗಿದೆ.