ಸುಭಾಷಿತ :

Monday, February 24 , 2020 10:12 PM

ಇನ್ಮುಂದೆ ‘ಸಿಎಂ ಬಿಎಸ್‌ವೈ’ ಮನೆ ದಾರಿಗೆ ‘ಮಾಧ್ಯಮದವರಿಗೆ ನೋ ಎಂಟ್ರಿ’!


Friday, September 6th, 2019 10:20 am

ಬೆಂಗಳೂರು: ಇಲ್ಲಿನ ಡಾಲರ್ಸ್‌ ಕಾಲೊನಿಯಲ್ಲಿರುವ ಸಿ.ಎಂ ಬಿಎಸ್‌ವೈಯವರ ಮನೆ ದಾರಿಗೆ ಮಾಧ್ಯಮದವರಿಗೆ ಪ್ರವೇಶವನ್ನು ನಿರಾಕರಣೆ ಮಾಡಲಾಗಿದೆ.
ಸಿಎಂ ಮನೆ ದಾರಿಗೆ ಬಾರದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಬಂದೋಬಸ್ತ್‌ನಲ್ಲಿರುವ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದ್ದು, ಸ್ಥಳಕ್ಕೆ ತೆರಳಿದ ಮಾಧ್ಯಮದವರಿಗೆ ದಯವಿಟ್ಟು ಇಲ್ಲಿಂದೆ ನೀವು ತೆರಳಿ ಅನ್ನೋ ಮಾತುಗಳನ್ನು ಪೊಲೀಸರು ಹೇಳುತ್ತಿದ್ದು, ಹಿರಿಯ ಪೊಲೀಸ್‌ ಅಧಿಕಾರಿಗಳ ಆದೇಶದ ಮೇರೆಗೆ ನಾವು ಕೆಲಸ ಮಾಡಬೇಕಾಗಿದ್ದು, ನಮ್ಮ ಪರಿಸ್ಥಿತಿಯನ್ನು ತಿಳಿದುಕೊಳ್ಳಿ ಅಂತ ಮಾಧ್ಯಮದವರನ್ನು ಮನವಿ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಇನ್ನು ಮೊನ್ನೆ ಸಿಎಂ ಮನೆಗೆ ಆಗಮಿಸಿದ್ದ ವಿಕಲಚೇತನ ವ್ಯಕ್ತಿಯನ್ನು ಪೊಲೀಸರು ಮಾನವೀಯತೆ ಮರೆತು ಕಳುಹಿಸಿಕೊಟ್ಟಿದ್ದರು, ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿತ್ತು ಕೂಡ ಹೀಗಾಗಿ ಸಿಎಂ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಮಾಧ್ಯಮಗಳಿಗೆ ಪ್ರವೇಶವನ್ನು ನಿಷೇಧ ಮಾಡಿದ್ದಾರೆ ಎನ್ನಲಾಗುತ್ತಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Astrology
Cricket Score
Poll Questions