ಬೆಂಗಳೂರು: ಮಾಜಿ ಸ್ಪೀಕರ್ ರಮೇಶ್ ಕುಮಾರ್ ( Ex Speaker Ramesh Kumar ) ಅವರು ಮಾತನಾಡಿದ್ದು ಅಕ್ಷಮ್ಯ ಅಪರಾಧವಾಗಿದೆ. ಅವರು ಮಹಿಳೆಯರ ಬಗ್ಗೆ ಅವಮಾನ ಮಾಡಿದ್ದಾರೆ. ಇದು ಗಂಭೀರವಾದ ವಿಚಾರವಾಗಿದ್ದು, ಸದನದಲ್ಲೇ ಅವರ ಹೇಳಿಕೆ ಬಗ್ಗೆ ಕ್ಷಮೆಯನ್ನು ಕೇಳಬೇಕು ಎಂಬುದಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ( BS Yediyurappa ) ಆಗ್ರಹಿಸಿದ್ದಾರೆ.
ಈ ಬಗ್ಗೆ ಬೆಳಗಾವಿಯ ಸುವರ್ಣ ಸೌಧದ ಮುಂದೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕಾಂಗ್ರೆಸ್ ನ ಹಿರಿಯ ಮುಖಂಡರಾಗಿ, ಸದನದಲ್ಲಿ ಗೌರವಯುತವಾಗಿ ಮಾತನಾಡಬೇಕಿದ್ದಂತ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೀಗೆ ಮಾತನಾಡಬಾರದಾಗಿತ್ತು. ಅವರ ಹೇಳಿಕೆಯಿಂದ ಮಹಿಳೆಯರಿಗೆ ಅವಮಾನ ಆಗಿದೆ. ಅವರು ಮಹಿಳೆಯರಿಗೆ ಮೇಲೆ ಹೀಗ್ ಮಾತನಾಡಿದ್ದು ಮಾತ್ರ ಸರಿಯಲ್ಲ ಎಂದರು.
ರಮೇಶ್ ಕುಮಾರ್ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಮಹಿಳೆಯರ ಬಗ್ಗೆ ಅವಮಾನದ ರೀತಿಯಲ್ಲಿ ಮಾತನಾಡಿದ್ದ ಸರಿಯಲ್ಲ. ಅವರು ಸದನದಲ್ಲಿಯೇ ತಮ್ಮ ಹೇಳಿಕೆ ಬಗ್ಗೆ ಕ್ಷಮೆಯಾಚಿಸಬೇಕು ಎಂಬುದಾಗಿ ಒತ್ತಾಯಿಸಿದರು.