ಬೆಂಗಳೂರು:ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ (ಬಿಎಡಿಬಿ) ಕಾರ್ಯದರ್ಶಿಯೊಬ್ಬರು ಗುತ್ತಿಗೆದಾರರೊಬ್ಬರಿಂದ 4 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳಿಗೆ ಸೋಮವಾರ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ಎಸ್.ವೈ.ಬಸವರಾಜಪ್ಪ ಅವರು ದೂರುದಾರ-ಗುತ್ತಿಗೆದಾರ ವೈ.ಪಿ.ಸಿದ್ದನಗೌಡ ಅವರಿಂದ 4 ಲಕ್ಷ ರೂ.ಲಂಚ ಕೇಳಿದ್ದರು ಎಂದು ಆರೋಪಿಸಲಾಗಿದೆ.

ಲಂಚದ ಹಣದೊಂದಿಗೆ ಲೋಕಾಯುಕ್ತ ಪೊಲೀಸರು ಬಿಎಡಿಬಿ ಕಾರ್ಯದರ್ಶಿಯನ್ನು ಬಂಧಿಸಿದ್ದಾರೆ.

ಗೌರಿಪುರ ಮತ್ತು ಖಿಲಕನಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ 15 ಸಣ್ಣ ಕಾಮಗಾರಿಗಳಿಗೆ ಗುತ್ತಿಗೆದಾರರು ಟೆಂಡರ್ ಪಡೆದಿದ್ದರು. ಅನುದಾನಕ್ಕಾಗಿ ಗುತ್ತಿಗೆದಾರರು ಬಿಎಡಿಬಿಯಿಂದ ಆಡಳಿತಾತ್ಮಕ ಅನುಮೋದನೆ ಕೋರಿದ್ದರು. ಅವರು ಅನುಮೋದನೆಗಾಗಿ ಒಂದು ವರ್ಷ ಕಾಯುತ್ತಿದ್ದರು’ ಎಂದು ಲೋಕಾಯುಕ್ತ ಎಸ್ಪಿ ಎನ್.ವಾಸುದೇವರಾಮ್ ಸುದ್ದಿಗಾರರಿಗೆ ತಿಳಿಸಿದರು.

“ಏಪ್ರಿಲ್ 30 ರಂದು, ಗುತ್ತಿಗೆದಾರನು ಮಂಡಳಿಯ ಕಾರ್ಯದರ್ಶಿಯನ್ನು ಅವರ ಕಚೇರಿಯಲ್ಲಿ ಭೇಟಿಯಾದರು. ಕಾರ್ಯದರ್ಶಿ ೪ ಲಕ್ಷ ರೂ.ಗಳ ಲಂಚವನ್ನು ಕೋರಿದ್ದರು. ಈ ಸಂಬಂಧ ಗುತ್ತಿಗೆದಾರ ಮೇ 2ರಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಕಚೇರಿಯಲ್ಲಿ ಲಂಚದ ಹಣವನ್ನು ತೆಗೆದುಕೊಳ್ಳುತ್ತಿದ್ದಾಗ ಅಧಿಕಾರಿಗಳು ಬಲೆ ಹಾಕಿ ಕಾರ್ಯದರ್ಶಿಯನ್ನು ಬಂಧಿಸಿದ್ದಾರೆ” ಎಂದು ವಾಸುದೇವರಾಮ್ ಹೇಳಿದರು.

Share.
Exit mobile version