BREAKING : ಮಹಾರಾಷ್ಟ್ರದ ‘ರಾಸಾಯನಿಕ ಕಾರ್ಖಾನೆ’ಯಲ್ಲಿ ಭಾರೀ ಸ್ಫೋಟ : ಇಬ್ಬರು ದುರ್ಮರಣ, ನಾಲ್ವರಿಗೆ ಗಾಯ

ರಾಯಗಢ : ಮಹಾರಾಷ್ಟ್ರದ ರಾಯಗಢದ ರಾಸಾಯನಿಕ ಕಾರ್ಖಾನೆಯಲ್ಲಿ ಗುರುವಾರ ಭಾರೀ ಸ್ಫೋಟ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನು ದುರಂತದಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಸಧ್ಯ ಐದು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸುವ ಪ್ರಯತ್ನಗಳು ನಡೆಯುತ್ತಿವೆ. ಮುಂಬೈನಿಂದ ಸುಮಾರು 110 ಕಿ.ಮೀ ದೂರದಲ್ಲಿರುವ ರೋಹಾ ಪಟ್ಟಣದ ಧತವ್ ಎಂಐಡಿಸಿ ಪ್ರದೇಶದಲ್ಲಿರುವ ಸಾಧನಾ ನೈಟ್ರೋ ಚೆಮ್ ಲಿಮಿಟೆಡ್’ನಲ್ಲಿ ಬೆಳಿಗ್ಗೆ 11.15ಕ್ಕೆ ಈ ಘಟನೆ ನಡೆದಿದೆ. ವರದಿಯ ಪ್ರಕಾರ, ಪೊಲೀಸ್ ವರಿಷ್ಠಾಧಿಕಾರಿ ಸೋಮನಾಥ್ ಘರ್ಗೆ, “ರಾಸಾಯನಿಕ ಸ್ಥಾವರದ ಶೇಖರಣಾ ಟ್ಯಾಂಕ್’ನಲ್ಲಿ … Continue reading BREAKING : ಮಹಾರಾಷ್ಟ್ರದ ‘ರಾಸಾಯನಿಕ ಕಾರ್ಖಾನೆ’ಯಲ್ಲಿ ಭಾರೀ ಸ್ಫೋಟ : ಇಬ್ಬರು ದುರ್ಮರಣ, ನಾಲ್ವರಿಗೆ ಗಾಯ