BREAKING : ಕಲಬುರ್ಗಿ : ಭೀಮಾ ನದಿಗೆ ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ಬಾಲಕಿಯರು ನೀರುಪಾಲು!

ಕಲಬುರ್ಗಿ : ಬಾಲಕಿಯರು ಇಬ್ಬರು ಬಟ್ಟೆ ತೊಳೆಯಲು ಎಂದು ಭೀಮಾನದಿಗೆ ತೆರಳಿದ್ದಾರೆ. ಈ ವೇಳೆ ಬಟ್ಟೆ ತೊಳೆದ ಬಳಿಕ ನದಿಯಲ್ಲಿ ಈಜಾಡುತ್ತಿದ್ದಾಗ ನದಿಯ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಮೃತಪಟ್ಟಿರುವ ಘಟನೆ ಅಫ್ಜಲ್ ಪುರ ತಾಲೂಕಿನಲ್ಲಿ ನಡೆದಿದೆ. ಹೌದು ಬಟ್ಟೆ ತೊಳೆಯಲು ನದಿಗೆ ಹೋಗಿದ್ದ ಇಬ್ಬರು ಬಾಲಕಿಯರು ನೀರುಪಾಲಾಗಿದ್ದಾರೆ. ಭೂಮಿಕಾ ದೊಡ್ಮನಿ (8) ಶ್ರಾವಣಿ ನಾಟಿಕಾರ್ (11) ನೀರು ಪಾಲಾಗಿರುವ ದುರ್ದೈವಿಗಳು ಎಂದು ತಿಳಿದು ಬಂದಿದೆ. ಭೀಮಾ ನದಿಯಲ್ಲಿ ಈ ಬಾಲಕಿಯರು ಬಟ್ಟೆ ತೊಳೆಯಲು ಎಂದು ಹೋಗಿದ್ದರು. … Continue reading BREAKING : ಕಲಬುರ್ಗಿ : ಭೀಮಾ ನದಿಗೆ ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ಬಾಲಕಿಯರು ನೀರುಪಾಲು!