BREAKING: ಟ್ಯಾಂಕರ್ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಒಂದೇ ಗ್ರಾಮದ ಮೂವರ ಸಾವು

ಚಿತ್ರದುರ್ಗ: ಟ್ಯಾಂಕರ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರಿ ಮಾಡುತ್ತಿದ್ದ ಒಂದೇ ಗ್ರಾಮದ ಮೂವರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಕೈನಡು ಗ್ರಾಮದ ಬಳಿ ಇಂದು ಮುಂಜಾನೆ ನಡೆದಿದೆ. ಘಟನೆಯಲ್ಲಿ ಸಾವನ್ನಪಿರುವವರನ್ನು, ಕೈನಡು ಗ್ರಾಮದ ನಿವಾಸಿಗಳಾದ ಉಜ್ಜೀರಪ್ಪ(38), ರವಿಕುಮಾರ(29), ಗಿರೀಶ(23) ತಿಳಿದು ಬಂದಿದ್ದು, ಮೂವರು ಕೂಡ ಒಂದೇ ಗ್ರಾಮದವರು ಎನ್ನಲಾಗಿದೆ. ಘಟನೆ ಸ್ಥಳಕ್ಕೆ ಹೊಸದುರ್ಗ ಪೋಲಿಸರು ಭೇಟಿ ನೀಡಿದ್ದು, ಮೃತ ದೇಹಗಳನ್ನು ಹೊಸದುರ್ಗ ತಾಲೂಕು ಆಸ್ಪತ್ರೆಗೆ ಸಾಗಿಸಿದ್ದು, ತನಿಖೆ ನಡೆಸುತ್ತಿದ್ದಾರೆ ಅಂಥ ತಿಳಿದು ಬಂದಿದೆ.