ಬೆಂಗಳೂರು :ಇಂದು ನಾಡಿನೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಜೋರಾಗಿದ್ದು,ಈ ನಡುವೆ ಗ್ರಾಹಕರಿಗೆ ಬಿಗ್ ಶಾಕ್ ಎದುರಾಗಿದೆ. ಇಂದು ಹೂವು, ಹಣ್ಣುಗಳ ಬೆಲೆ ದುಪ್ಪಟ್ಟಾಗಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆಹಾನಿಯಾಗಿದ್ದು, ಇದರ ಪರಿಣಾಮ ತರಕಾರಿ, ಹೂವು, ಹಣ್ಣುಗಳ ಬೆಲೆಯಲ್ಲೂ ಭಾರೀ ಏರಿಕೆಯಾಗಿದೆ. ಮಾರುಕಟ್ಟೆಗಳಲ್ಲಿ ಮಲ್ಲಿಗೆ ಹೂವು, ಕನಕಾಂಬರ, ಸೇಬು ಹಣ್ಣು ಸೇರಿದಂತೆ ಹಲವು ಹೂವು, ಹಣ್ಣುಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.
ಇಂದು ಬೆಂಗಳೂರಿನ ಮಾರುಕಟ್ಟೆಯಲ್ಲಿ ಕನಕಾಂಬರ 1 ಕೆಜಿಗೆ 1600ರೂ.ಇದ್ದು, ಮಲ್ಲಿಗೆ, ಮಳ್ಳೆ ಹೂವು 900ರೂ., ಕಾಕಡ ಹೂವು 800ರೂ., ಸೇವಂತಿಗೆ 800ರೂ., ಗುಲಾಬಿ 500ರೂ., ಕಣಗಲೆ 500ರೂ., ಸುಗಂಧರಾಜ 500ರೂ., ತಾವರೆ ಹೂವು (ಜೋಡಿ) 150ರೂ., ಜೋಡಿ ಬಾಳೆಕಂದು 80ರೂ.ಇದೆ.
ಹಣ್ಣುಗಳ ಬೆಲೆಯಲ್ಲೂ ಏರಿಕೆಯಾಗಿದ್ದು, ಸೇಬು 300ರೂ.ಗೆ ಏರಿಕೆಯಾಗಿದ್ದು, ದಾಳಿಂಬೆ 280ರೂ, ಕಿತ್ತಳೆ 200ರೂ., ಮೂಸಂಬಿ 150ರೂ., ಸಪೋಟ 150ರೂ., ದ್ರಾಕ್ಷಿ 200ರೂ, ಸೀತಾಫಲ 200ರೂ.ಗೆ ಮಾರಾಟವಾಗಿದೆ.