ವಿಜಯಪುರ : ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಸಿದ್ದು, ಗುಂಡಿನ ದಾಳಿಯಲ್ಲಿ ರೌಡಿಶೀಟರ್‌ ಅಶೋಕ್‌ ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ನೀವರಗಿ ರಸ್ತೆ ಬಳಿ ಗುಂಡಿನ ದಾಳಿ ನಡೆಸಲಾಗಿದೆ. ಗುಂಡಿನ ದಾಳಿಯಲ್ಲಿ ರೌಡಿಶೀಟರ್‌ ಅಶೋಕ್‌ ನನ್ನು ಹತ್ಯೆ ಮಾಡಲಾಗಿದೆ.

ಪೆರೋಲ್‌ ಮೇಲೆ ಇದ್ದ ರೌಡಿಶೀಟರ್‌ ಅಶೋಕ್‌ ಮನೆಯಿಂದ ಹೊರಗೆ ಹೋಗಿದ್ದ ವೇಳೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಬೆನ್ನಿಗೆ ಮೂರಕ್ಕೂ ಹೆಚ್ಚು ಗುಂಡುಗಳು ಬಿದ್ದ ಪರಿಣಾಮ ಅಶೋಕ್‌ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

Share.
Exit mobile version