ನವದೆಹಲಿ: ಅಮೆರಿಕ ಮತ್ತು ವೆಸ್ಟ್ ಇಂಡೀಸ್’ನಲ್ಲಿ ನಡೆಯಲಿರುವ 2024ರ ಟಿ 20 ವಿಶ್ವಕಪ್ಗೆ ರೋಹಿತ್ ಶರ್ಮಾ ಅವರನ್ನ ಭಾರತದ ನಾಯಕನನ್ನಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕಾರ್ಯದರ್ಶಿ ಜಯ್ ಶಾ ಖಚಿತಪಡಿಸಿದ್ದಾರೆ.

ರಾಜ್ಕೋಟ್ನ ನಿರಂಜನ್ ಶಾ ಕ್ರೀಡಾಂಗಣದ ಹೆಸರನ್ನ ಅನಾವರಣಗೊಳಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಶಾ, ಕಳೆದ ವರ್ಷ ಏಕದಿನ ವಿಶ್ವಕಪ್ನಲ್ಲಿನ ಸೋಲಿನ ಬಗ್ಗೆ ಮಾತನಾಡಿದರು. ಆದರೆ ಈ ವರ್ಷದ ಕೊನೆಯಲ್ಲಿ ರೋಹಿತ್ ನೇತೃತ್ವದಲ್ಲಿ ಐಸಿಸಿ ಟ್ರೋಫಿಗಾಗಿ ಕಾಯುವಿಕೆಯನ್ನ ಕೊನೆಗೊಳಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

“ನಾವು 2023ರ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಸೋತಿರಬಹುದು. ಆದ್ರೆ, ನಾವು ಸತತ 10 ಪಂದ್ಯಗಳನ್ನ ಗೆಲ್ಲುವ ಮೂಲಕ ಹೃದಯಗಳನ್ನು ಗೆದ್ದಿದ್ದೇವೆ. ಬಾರ್ಬಡೋಸ್ನಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ 2024ರ ಟಿ20 ವಿಶ್ವಕಪ್ ಎತ್ತಿಹಿಡಿಯುತ್ತದೆ ಎಂದು ನನಗೆ ವಿಶ್ವಾಸವಿದೆ” ಎಂದು ಶಾ ಹೇಳಿದರು.

ಭಾರತ ತಂಡದ ನಾಯಕ ರೋಹಿತ್, ಕೋಚ್ ರಾಹುಲ್ ದ್ರಾವಿಡ್ ಮತ್ತು ಪುರುಷರ ಹಿರಿಯ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಅವರ ಸಮ್ಮುಖದಲ್ಲಿ ಜಯ್ ಶಾ ಈ ಹೇಳಿಕೆ ನೀಡಿದ್ದಾರೆ.

 

WATCH : ‘UAE ಭವ್ಯ ಮಂದಿರ’ದಲ್ಲಿ ಸುತ್ತಿಗೆ, ಉಳಿ ಬಳಸಿ ಕಲ್ಲಿನ ಮೇಲೆ ‘ವಸುದೈವ ಕುಟುಂಬಕಂ’ ಎಂದು ಬರೆದ ‘ಪ್ರಧಾನಿ ಮೋದಿ’

ಫೆ.16ರಂದು ‘ರೈತ’ರ ಮೇಲಿನ ದೌರ್ಜನ್ಯ ಖಂಡಿಸಿ ‘ಸಂಯುಕ್ತ ಹೋರಾಟ ಕರ್ನಾಟಕ’ದಿಂದ ಪ್ರತಿಭಟನೆಗೆ ಕರೆ

‘ಚುನಾವಣಾ ಬಾಂಡ್ ಯೋಜನೆ’ಯ ಕಾನೂನು ಸಿಂಧುತ್ವದ ಕುರಿತು ನಾಳೆ ‘ಸುಪ್ರೀಂ’ ತೀರ್ಪು

Share.
Exit mobile version