ತುಮಕೂರು : ಕಳ್ಳತನದ ಆರೋಪಿ ಮೇಲೆ ಪೊಲೀಸರು ಫೈರಿಂಗ್ ನಡೆಸಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ಬಳಿ ನಡೆದಿದೆ. ಕಳ್ಳತನದ ಆರೋಪಿ ರಿಜ್ವಾನ್ ಮೇಲೆ ಪೊಲೀಸರಿಂದ ಗುಂಡಿನ ದಾಳಿ ನಡೆಸಿದ್ದಾರೆ.ಈ ವೇಳೆ ಆರೋಪಿ ಕಾಲಿಗೆ ಗುಂಡೇಟು ತಗುಲಿದೆ.

ಆಂಧ್ರದ ಹಿಂದೂಪುರ ಮೂಲದ ರಿಜ್ವಾನ್ ಎಂಬವನಿಗೆ ಗುಂಡೆಟ್ಟು ತಗುಲಿದೆ. ಹಲವು ಕಳ್ಳತನ ಕೇಸ್ಗಳಲ್ಲಿ ಆರೋಪಿ ಬೇಕಾಗಿದ್ದ ಎನ್ನಲಾಗಿದೆ.ಈ ವೇಳೆ ಬಂಧಿಸಲು ತೆರಳಿದಾಗ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಆತ್ಮ ರಕ್ಷಣೆಗಾಗಿ ಮಧುಗಿರಿ ಸಿಪಿಐ ಹನುಮಂತರಾಯಪ್ಪರಿಂದ ರಿಜ್ವಾನ್ ಮೇಲೆ ರೈಡಿಂಗ್ ಮಾಡಿದ್ದಾರೆ. ಆರೋಪಿ ಕಾಲಿಗೆ ಗುಂಡೇಟು ತಗುಲಿದೆ.

ಈಜಿಹಳ್ಳಿ ಬಳಿ ಆರೋಪಿ ರಿಜ್ವನ್ ನನ್ನು ಬಂಧಿಸಲು ತೆರಳಿದ್ದಾಗ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಆತ್ಮ ರಕ್ಷಣೆಗಾಗಿ ಆರೋಪಿ ರಿಜ್ವಾನ್ ಮೇಲೆ ಮಧುಗಿರಿ ಸಿಪಿಐ ಫೈರಿಂಗ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮಧುಗಿರಿ ಸಿಪಿಐ ಹನುಮಂತರಾಯಪ್ಪರಿಂದ ಆರೋಪಿ ರಿಜ್ವಾನ್ ಕಾಲಿಗೆ ಗುಂಡೇಟು ಬಿದ್ದಿದೆ.

Share.
Exit mobile version