ನವದೆಹಲಿ : ಕಾಮನ್ ವೆಲ್ತ್ ಗೇಮ್ಸ್ ಟ್ರಯಲ್ಸ್ʼನಲ್ಲಿ 125 ಕೆಜಿ ವಿಭಾಗದ ಫೈನಲ್ʼನಲ್ಲಿ ಸೋತ ನಂತ್ರ ಕುಸ್ತಿಪಟು ಸತೇಂದರ್ ಮಲಿಕ್, ರೆಫರಿ ಜಗಬೀರ್ ಸಿಂಗ್ ಮೇಲೆ ದೈಹಿಕ ಹಲ್ಲೆ ನಡೆಸಿದ್ದರು.
ನಿರ್ಣಾಯಕ ಬೌಟ್ʼನಲ್ಲಿ ಕೇವಲ 18 ಸೆಕೆಂಡುಗಳು ಬಾಕಿ ಇರುವಾಗ ವಾಯುಪಡೆಯ ಕುಸ್ತಿಪಟು 3-0ರಿಂದ ಮುನ್ನಡೆ ಸಾಧಿಸಿದ್ದರು, ಮೋಹಿತ್ ‘ಟೇಕ್-ಡೌನ್’ ನಡೆ ತೆಗೆದುಕೊಂಡ್ರು. ಮತ್ತೊಂದು ಪಾಯಿಂಟ್ʼಗಾಗಿ ಸತೇಂದರ್ ಅವರನ್ನ ಹೊರಗೆ ತಳ್ಳಲು ಯಶಸ್ವಿಯಾದ್ರು.
ಆದಾಗ್ಯೂ, ರೆಫರಿ ವೀರೇಂದ್ರ ಮಲಿಕ್ ಅವರು ‘ಟೇಕ್ ಡೌನ್’ ನಡೆಗಾಗಿ ಮೋಹಿತ್ʼಗೆ ಎರಡು ಪಾಯಿಂಟ್ʼಗಳನ್ನು ನೀಡಲಿಲ್ಲ ಮತ್ತು ಪುಶ್ ಔಟ್ʼಗೆ ಕೇವಲ ಒಂದು ಅಂಕವನ್ನು ನೀಡಿದರು.
ಈ ನಿರ್ಧಾರವು ಮೋಹಿತ್ ಅವರನ್ನ ಅಸಮಾಧಾನಗೊಳಿಸಿತು, ಅವರು ಸವಾಲಿಗೆ ವಿನಂತಿಸಿದರು. ಆದ್ರೆ, ಸತ್ಯದೇವ್ ಮಲಿಕ್ ಅವರು ಸತೇಂದರ್ ಕೂಡ ಬರುವ ಮೊಖ್ರಾ ಗ್ರಾಮಕ್ಕೆ ಸೇರಿದವರಾದ್ದರಿಂದ ನಿಷ್ಪಕ್ಷಪಾತವಾಗಿ ಈ ನಿರ್ಧಾರದಿಂದ ಹಿಂದೆ ಸರಿದಿದ್ದರು.
ಹಿರಿಯ ರೆಫರಿ ಜಗಬೀರ್ ಸಿಂಗ್ ಅವರನ್ನ ಈ ಸವಾಲನ್ನ ಪರಿಶೀಲಿಸಲು ವಿನಂತಿಸಲಾಯಿತು ಮತ್ತು ಟಿವಿ ರೀಪ್ಲೇಗಳ ಸಹಾಯದಿಂದ, ಮೋಹಿತ್‌ಗೆ ಮೂರು ಅಂಕಗಳನ್ನು ನೀಡಬೇಕು ಎಂದು ಅವರು ತೀರ್ಪು ನೀಡಿದರು.
ಸ್ಕೋರ್ 3-3 ಆಯಿತು ಮತ್ತು ಕೊನೆಯವರೆಗೂ ಹಾಗೆಯೇ ಉಳಿಯಿತು, ಮತ್ತು ಅಂತಿಮವಾಗಿ ಮೋಹಿತ್ ಅವರು ಬೌಟ್ʼನ ಕೊನೆಯ ಪಾಯಿಂಟ್ ಗಳಿಸಿದ ಕಾರಣ ಮಾನದಂಡದ ಆಧಾರದ ಮೇಲೆ ವಿಜೇತರೆಂದು ಘೋಷಿಸಲಾಯಿತು.
ಆಗ ತಾಳ್ಮೆ ಕಳೆದುಕೊಂಡ ಸತೇಂದರ್, 57 ಕೆಜಿ ಫೈನಲ್‌ನಲ್ಲಿ ರವಿ ದಹಿಯಾ ಮತ್ತು ಅಮನ್ ಲಾಕ್ ಆಗಿದ್ದ ಮ್ಯಾಟ್ ಎಗೆ ಅಡ್ಡಲಾಗಿ ನಡೆದು, ನೇರವಾಗಿ ಜಗಬೀರ್ ಬಳಿಗೆ ಹೋಗಿ ಅವ್ರ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದರು.
ಅವನು ಮೊದಲು ಜಗಬೀರ್ʼನನ್ನು ನಿಂದಿಸಿ ನಂತ್ರ ಕಪಾಳಮೋಕ್ಷ ಮಾಡಿದರು. ಆಗ ರೆಫರಿ ತನ್ನ ಸಮತೋಲನವನ್ನ ಕಳೆದುಕೊಂಡು ನೆಲದ ಮೇಲೆ ಬಿದ್ದನು. ಇನ್ನು ಐಜಿ ಸ್ಟೇಡಿಯಂನ ಕೆಡಿ ಜಾಧವ್ ಹಾಲ್‌ನಲ್ಲಿ ಈ ಘಟನೆ ಕೋಲಾಹಲ ಸೃಷ್ಟಿಸಿದ್ದರಿಂದ 57 ಕೆಜಿ ಬೌಟ್ ನಿಲ್ಲಿಸಲಾಯಿತು. ನೂರಾರು ಅಭಿಮಾನಿಗಳು, ಅಧಿಕಾರಿಗಳು ಮತ್ತು ಸ್ಪರ್ಧಿಗಳು ಅಂತಹ ದೃಶ್ಯವನ್ನ ನೋಡಿ ಆಘಾತಕ್ಕೊಳಗಾಗಿದ್ದರು.