ನವದೆಹಲಿ: ಮಹಿಳಾ ಟಿ 20 ವಿಶ್ವಕಪ್ನ ಸೆಮಿಫೈನಲ್ ಪಂದ್ಯಕ್ಕೆ ಮುಂಚಿತವಾಗಿ ಭಾರತ ತಂಡವು ದೊಡ್ಡ ಹಿನ್ನಡೆಯನ್ನ ಅನುಭವಿಸಿದೆ. ಟೀಮ್ ಇಂಡಿಯಾ ನಾಯಕಿ ಹರ್ಮನ್ ಪ್ರೀತ್ ಕೌರ್ ಮತ್ತು ಆಲ್ ರೌಂಡರ್ ಪೂಜಾ ವಸ್ತ್ರಾಕರ್ ಅನಾರೋಗ್ಯಕ್ಕೆ ಒಳಗಾಗಿದ್ದು, ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದಾರೆ. ಅದೇ ಸಮಯದಲ್ಲಿ, ಹರ್ಮನ್ಪ್ರೀತ್ ಕೌರ್ ಕೂಡ ಈ ಪಂದ್ಯದಲ್ಲಿ ಆಡುವುದು ಕಷ್ಟ. ಈಗೀರುವಾಗ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ದುರ್ಬಲವಾಗಿದ್ದು, ನಾಯಕಿ ಹರ್ಮನ್ಪ್ರೀತ್ ಔಟಾದಾಗ ಆಸ್ಟ್ರೇಲಿಯಾವನ್ನ ಸೋಲಿಸುವುದು ಭಾರತಕ್ಕೆ ಕಷ್ಟವಾಗ್ಬೋದು.
ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್ 2023 ಸೆಮಿ ಫೈನಲ್ ಪಂದ್ಯಕ್ಕೆ ಭಾರತ ತಂಡವನ್ನ ಪ್ರಕಟಿಸಿದ್ದು, ಮೀಸಲು ಸ್ಥಾನದಲ್ಲಿದ್ದ ಭಾರತೀಯ ಸ್ಪಿನ್ನರ್ ಸ್ನೇಹ್ ರಾಣಾ ಅವರನ್ನ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಇನ್ನು ಭಾರತದ ಎಲ್ಲಾ ಗುಂಪು ಹಂತದ ಆಟಗಳಲ್ಲಿ ಕಾಣಿಸಿಕೊಂಡ ಮಧ್ಯಮ ವೇಗಿ ಪೂಜಾ ವಸ್ತ್ರಾಕರ್ ಅವ್ರನ್ನ ಅನಾರೋಗ್ಯ ಕಾರಣದಿಂದ ಪಂದಿಂದ ಹೊರಗಿಡಲಾಗಿದೆ ಎಂದು ಬಿಸಿಸಿಐ ಮಹಿಳಾ ಕ್ರಿಕೆಟ್ ಮಂಡಳಿ ದೃಢಪಡಿಸಿದೆ. ಈ ಆಟಗಾರ್ತಿ ಇದುವರೆಗೆ 44.5ರ ಬೌಲಿಂಗ್ ಸರಾಸರಿಯಲ್ಲಿ ಎರಡು ವಿಕೆಟ್ ಪಡೆದಿದ್ದಾರೆ.
ಅದೇ ಸಮಯದಲ್ಲಿ, ನಾಯಕಿ ಹರ್ಮನ್ಪ್ರೀತ್ ಇನ್ನೂ ಜ್ವರದಿಂದ ಚೇತರಿಸಿಕೊಂಡಿಲ್ಲ. ಹರ್ಮನ್ ಪ್ರೀತ್ ಕೌರ್, ಪೂಜಾ ವಸ್ತ್ರಕರ್ ಮತ್ತು ರಾಧಾ ಯಾದವ್ ಆಸ್ಪತ್ರೆಗೆ ತಲುಪಿ ತಮ್ಮನ್ನು ಪರೀಕ್ಷಿಸಿಕೊಂಡರು. ಹರ್ಮನ್ ಪ್ರೀತ್ ಈ ಪಂದ್ಯದಲ್ಲಿ ಆಡುತ್ತಾರೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪ್ರಸ್ತುತ, ವೈದ್ಯಕೀಯ ತಂಡವು ಎಲ್ಲಾ ಆಟಗಾರ್ತಿಯರನ್ನ ನೋಡಿಕೊಳ್ಳುತ್ತಿದೆ.
ವೇಗದ ಬೌಲಿಂಗ್ ಆಲ್ರೌಂಡರ್ ಪೂಜಾ ವಸ್ತ್ರಾಕರ್ ಬದಲಿಗೆ ಸ್ಪಿನ್ ಆಲ್ರೌಂಡರ್ ಸ್ನೇಹ್ ರಾಣಾ ಅವರನ್ನ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಅದೇ ಸಮಯದಲ್ಲಿ, ಹರ್ಮನ್ಪ್ರೀತ್ ಆಡದಿದ್ದರೆ ಸ್ಮೃತಿ ಮಂಧಾನಾ ಅವರು ತಂಡದ ಕಮಾಂಡ್ ವಹಿಸಿಕೊಳ್ಳಲಿದ್ದಾರೆ. ಹರ್ಮನ್ ಪ್ರೀತ್ ಕೌರ್ ಬದಲಿಗೆ ಹರ್ಲೀನ್ ಡಿಯೋಲ್ ಅಥವಾ ಯಸ್ತಿಕಾ ಭಾಟಿಯಾ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.
UPDATE 🚨 – Pacer Pooja Vastrakar has been ruled out due to an upper respiratory tract infection!
The Event Technical Committee of the ICC Women’s T20 World Cup 2023 has approved @SnehRana15 as a replacement for Pooja Vastrakar in the India squad! #T20WorldCup | #TeamIndia pic.twitter.com/NKiTvp22Hn
— BCCI Women (@BCCIWomen) February 23, 2023
BIGG NEWS: ಅಂದು ಕರ್ನಾಟಕ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಗೆ ‘ATM’ ಆಗಿತ್ತು : ಸಂಡೂರಿನಲ್ಲಿ ಅಮಿತ್ ಶಾ ವಾಗ್ಧಾಳಿ
JOB ALERT : ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ : ‘ಆರೋಗ್ಯ ಇಲಾಖೆ’ಯ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ