BREAKING NEWS : ‘4 ಪ್ರದೇಶ’ ರಷ್ಯಾ ಸೇರಿಸುತ್ತಿದ್ದಂತೆ ತ್ವರಿತಗತಿ ‘NATO ಸದಸ್ಯತ್ವ’ ಕೋರಿದ ‘ಉಕ್ರೇನ್’ |Ukraine’s NATO Move

ಕೀವ್: ರಷ್ಯಾ ಔಪಚಾರಿಕವಾಗಿ ಮಾಸ್ಕೋ ವಶದಲ್ಲಿರುವ ಉಕ್ರೇನ್’ನ ನಾಲ್ಕು ಪ್ರದೇಶಗಳನ್ನ ವಶಪಡಿಸಿಕೊಂಡ ನಂತ್ರ ಕೀವ್ ತ್ವರಿತಗತಿಯ ನ್ಯಾಟೋ ಸದಸ್ಯತ್ವವನ್ನ ಕೋರುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶುಕ್ರವಾರ ಹೇಳಿದ್ದಾರೆ. “ನಾವು ಈಗಾಗಲೇ ಮೈತ್ರಿ ಮಾನದಂಡಗಳೊಂದಿಗೆ ನಮ್ಮ ಹೊಂದಾಣಿಕೆಯನ್ನ ಸಾಬೀತುಪಡಿಸಿದ್ದೇವೆ. ನ್ಯಾಟೋಗೆ ತ್ವರಿತ ಸೇರ್ಪಡೆಗಾಗಿ ಉಕ್ರೇನ್‍ನ ಅರ್ಜಿಗೆ ಸಹಿ ಹಾಕುವ ಮೂಲಕ ನಾವು ನಿರ್ಣಾಯಕ ಹೆಜ್ಜೆ ಇಡುತ್ತಿದ್ದೇವೆ” ಎಂದು ಉಕ್ರೇನಿಯನ್ ಅಧ್ಯಕ್ಷರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಝೆಲೆನ್ಸ್ಕಿ ಹೇಳಿದ್ದಾರೆ.