ನವದೆಹಲಿ : ಬಹು ನಿರೀಕ್ಷಿತ ಮಹಿಳಾ ಪ್ರೀಮಿಯರ್ ಲೀಗ್ (WPL) ಉದ್ಘಾಟನಾ ಆವೃತ್ತಿಯು ಮಾರ್ಚ್ 4 ರಿಂದ 26 ರವರೆಗೆ ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ.
ಸೋಮವಾರ ಐದು ಡಬ್ಲ್ಯುಪಿಎಲ್ ಫ್ರಾಂಚೈಸಿಗಳಿಗೆ ಇಮೇಲ್ ಕಳುಹಿಸಿರುವ ಬಿಸಿಸಿಐ, ಮೊದಲ ಸೀಸನ್ ಸಂಪೂರ್ಣವಾಗಿ ಮುಂಬೈನ ಎರಡು ಸ್ಥಳಗಳಾದ ಬ್ರಬೋರ್ನ್ ಕ್ರೀಡಾಂಗಣ ಮತ್ತು ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ದೃಢಪಡಿಸಿದೆ.
ಬಿಸಿಸಿಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೇಮಂಗ್ ಅಮೀನ್ ಅವರು ಫೆಬ್ರವರಿ 13 ರಂದು ಮುಂಬೈನಲ್ಲಿ ಆಟಗಾರರ ಹರಾಜನ್ನ ಖಚಿತಪಡಿಸಿದ್ದಾರೆ. 1500 ಆಟಗಾರರು ನೋಂದಾಯಿಸಿಕೊಂಡಿದ್ದಾರೆ ಮತ್ತು ಅಂತಿಮ ಪಟ್ಟಿಯನ್ನ ಈ ವಾರದ ಕೊನೆಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಅಮೀನ್ ಹೇಳಿದರು. ಹರಾಜಿನಲ್ಲಿ ಗರಿಷ್ಠ 90 ಆಟಗಾರರನ್ನು ಖರೀದಿಸಬಹುದಾಗಿದ್ದು, ಪ್ರತಿ ತಂಡವು 15 ರಿಂದ 18 ಆಟಗಾರರನ್ನ ಒಳಗೊಂಡಿರುತ್ತದೆ.
WATCH : ‘ಐಎನ್ಎಸ್ ವಿಕ್ರಾಂತ್’ನಲ್ಲಿ ಐತಿಹಾಸಿಕ ಲ್ಯಾಂಡಿಂಗ್ ಮಾಡಿದ ನೌಕಾಪಡೆಯ ‘ದೇಶೀಯ ಲಘು ಯುದ್ಧ ವಿಮಾನ’
ಈ ಬಿಜೆಪಿ ಸರ್ಕಾರದಲ್ಲಿ ಲಂಚಕ್ಕೊಬ್ಬ, ಮಂಚಕ್ಕೊಬ್ಬ ಮಂತ್ರಿ ಸ್ಥಾನ ಕಳೆದುಕೊಂಡವರು – ಡಿಕೆ ಶಿವಕುಮಾರ್
ತಾಯಂದಿರೇ ಎಚ್ಚರ ; ನಿಮ್ಮ ಮಕ್ಕಳಿಗೆ ‘ಹಾಲಿನ’ ಜೊತೆ ಈ ‘ಪಾದಾರ್ಥ’ಗಳನ್ನ ನೀಡಿದ್ರೆ ಅಪಾಯ ತಪ್ಪಿದ್ದಲ್ಲ