ಕೆಎನ್ಎನ್ಡಿಜಿಟಲ್ ಡೆಸ್ಕ್ : ಗಾಯದಿಂದ ಚೇತರಿಸಿಕೊಳ್ಳುತ್ತಿರುವ ರಾಫೆಲ್ ನಡಾಲ್ ಮುಂಬರುವ ಫ್ರೆಂಚ್ ಓಪನ್’ನಲ್ಲಿ ಭಾಗವಹಿಸುವುದಿಲ್ಲ ಎಂದು ಗುರುವಾರ ದೃಢಪಡಿಸಿದ್ದಾರೆ. ನಡಾಲ್ ತಮ್ಮ ವೃತ್ತಿಜೀವನದಲ್ಲಿ 14 ಬಾರಿ ರೋಲ್ಯಾಂಡ್ ಗ್ಯಾರೋಸ್ ಗೆದ್ದಿದ್ದಾರೆ. ಆದ್ರೆ, 2004ರ ನಂತರ ಮೊದಲ ಬಾರಿಗೆ ಅವರು ಫ್ರೆಂಚ್ ಓಪನ್’ನಲ್ಲಿ ಭಾಗವಹಿಸುತ್ತಿಲ್ಲ.
22 ಗ್ರ್ಯಾಂಡ್ ಸ್ಲ್ಯಾಮ್ ವಿಜೇತರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ ರೋಲ್ಯಾಂಡ್ ಗ್ಯಾರೋಸ್’ನಿಂದ ಹೊರಗುಳಿಯುವುದಾಗಿ ದೃಢಪಡಿಸಿದರು. 2023 ತನ್ನ ಆಟದ ವೃತ್ತಿಜೀವನದ ಕೊನೆಯ ಸೀಸನ್ ಆಗಿರಬಹುದು ಎಂದು ಸುಳಿವು ನೀಡುವ ಮೊದಲು, ಸ್ವಲ್ಪ ಸಮಯದವರೆಗೆ ಹೊರಗುಳಿಯುವ ಸಾಧ್ಯತೆಯಿದೆ ಎಂದು ಸ್ಪೇನ್ ಆಟಗಾರ ಬಹಿರಂಗಪಡಿಸಿದರು.
“ನಾನು ರೋಲ್ಯಾಂಡ್ ಗ್ಯಾರೋಸ್ ಆಡಲು ಸಾಧ್ಯವಾಗುವುದಿಲ್ಲ. ಆಸ್ಟ್ರೇಲಿಯಾದಲ್ಲಿ ನಾನು ಹೊಂದಿದ್ದ ಸಮಸ್ಯೆಗೆ ಪರಿಹಾರವನ್ನ ಕಂಡುಹಿಡಿಯಲು ನಮಗೆ ಸಾಧ್ಯವಾಗಲಿಲ್ಲ” ಎಂದು ಖ್ಯಾತ ಟೆನಿಸ್ ತಾರೆ ಹೇಳಿದರು.
ದ್ವಿತೀಯ ಪಿಯು ಪೂರಕ ಹಾಗೂ ಸಿಇಟಿ ಪರೀಕ್ಷೆ ಸುಗಮವಾಗಿ ನಡೆಸಲು ಕ್ರಮ: ಜಿಲ್ಲಾಧಿಕಾರಿ ಆರ್.ಸೆಲ್ವಮಣಿ
ಎಚ್ ಯುಐಡಿ ಪರಿಚಯಿಸಿದ ನಂತರ ನಿಮ್ಮ ‘ಹಾಲ್ ಮಾರ್ಕ್ ಅಲ್ಲದ’ ಆಭರಣಗಳನ್ನು ನೀವು ಮಾರಾಟ ಮಾಡಬಹುದೇ? ಇಲ್ಲಿದೆ ಮಾಹಿತಿ
ಆಭರಣ ಪ್ರಿಯರಿಗೆ ಬಿಗ್ ಶಾಕ್ ; ಈಗ ನೀವು ನಿಮ್ಮಲ್ಲಿರೋ ‘ಹಳೆಯ ಚಿನ್ನ’ ಮಾರಾಟ ಮಾಡೋಕೆ ಸಾಧ್ಯವಿಲ್ಲ, ಕಾರಣ ಇಲ್ಲಿದೆ.!