ನವದೆಹಲಿ : ಭಾನುವಾರ ನಡೆದ ಸ್ವಿಸ್ ಓಪನ್ ಸೂಪರ್ ಸಿರೀಸ್- 300 2023 ರಲ್ಲಿ ಭಾರತದ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಚೀನಾದ ಟ್ಯಾಂಗ್ ಕಿಯಾನ್ ಮತ್ತು ರೆನ್ ಯು ಕ್ಸಿಯಾಂಗ್ ಅವರನ್ನು 21-19 ಮತ್ತು 24-22 ರಿಂದ ಸೋಲಿಸಿ ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
2022 ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತರಾದ ಸಾತ್ವಿಕ್ ಮತ್ತು ಚಿರಾಗ್ ಅವರು ಚೀನಾದ ಆಟಗಾರರ ವಿರುದ್ಧ ಸೆಣೆದಾಡಿದ್ದರು. 21-19, 24-22 ರಿಂದ 54 ನಿಮಿಷಗಳಲ್ಲಿ ಸೋಲಿಸಿದರು.
ಕಳೆದ ವಾರ ನಡೆದ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಸಾತ್ವಿಕ್ ಮತ್ತು ಚಿರಾಗ್ ಅವರು ಎರಡನೇ ಸುತ್ತಿನಲ್ಲಿ ನಿರ್ಗಮಿಸದ್ದರು. ಭಾರತಕ್ಕೆ ಇದು ಋತುವಿನ ಮೊದಲ ಪ್ರಶಸ್ತಿಯಾಗಿದೆ. ಸಾತ್ವಿಕ್ ಮತ್ತು ಚಿರಾಗ್ 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದ್ದರು.
ಸಿ.ಟಿ ರವಿಗೆ ಸೋಲಿನ ಭೀತಿಯಿಂದ ಮತಿಭ್ರಮಣೆಯಾಗಿದೆ – ಡಿ.ಕೆ. ಶಿವಕುಮಾರ್
BIGG NEWS : ಕೋಲಾರ, ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ : ಸಿದ್ದರಾಮಯ್ಯ |Election 2023
Shocking video..! ರೈಲಿನಿಂದ ಇಳಿಯುವಾಗ ಬೀಳುತ್ತಿದ್ದ’ ಪ್ರಯಾಣಿಕನನ್ನು ರಕ್ಷಿಸಿ, ಜೀವ ಉಳಿಸಿದ ಪೇದೆ’ .!