ಶಿವಮೊಗ್ಗ : ಬಿಜೆಪಿಯ ಹಿರಿಯ ಮುಖಂಡ ಭಾನುಪ್ರಕಾಶ್ ರವರ ಮಗನ ಕಾರಿನ ಮೇಲೆ ಕಲ್ಲು ತೂರಿರುವ ಘಟನೆ ಶುಕ್ರವಾರ ತಡರಾತ್ರಿ ಶಿವಮೊಗ್ಗದ ಸೂಳೆಬೈಲ್ ಸಮೀಪ ನಡೆದಿದೆ.
ಸುಳೆಬೈಲ್ ಸಮೀಪ ಶುಕ್ರವಾರ ರಾತ್ರಿ ನಗರದ ಬೈಪಾಸ್ ರಸ್ತೆಯಲ್ಲಿ ಬಿಜೆಪಿ ಮುಖಂಡ ಮತ್ತು ಮಾಜಿ ಎಂಎಲ್ಸಿ ಎಂ.ಬಿ.ಭಾನುಪ್ರಕಾಶ್ ಅವರ ಪುತ್ರನ ಕಾರಿನ ಮೇಲೆ ಯುವಕರ ಗುಂಪೊಂದು ಕಲ್ಲು ತೂರಾಟ ನಡೆಸಿದ್ದು, ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ರೈತರೇ ಗಮನಿಸಿ : ಪಿಎಂ ಕಿಸಾನ್ ಯೋಜನೆ 11 ಕಂತಿನ ಹಣ ಬಿಡುಗಡೆ ಕುರಿತು ಇಲ್ಲಿದೆ ಮಾಹಿತಿ
ಪೊಲೀಸರ ಪ್ರಕಾರ, ಐದರಿಂದ ಆರು ಜನರ ಗುಂಪು ಕಾರನ್ನು ನಿಲ್ಲಿಸಿ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದೆ. ತುಂಗಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
BIGG NEWS : ಮೈಸೂರಿನಲ್ಲಿ `ಚೋಟಾ ಪಾಕಿಸ್ತಾನ್’ ಘೋಷಣೆ : ಇಬ್ಬರು ಆರೋಪಿಗಳು ಅರೆಸ್ಟ್