ಕೊಚ್ಚಿ: ದೇಶದಲ್ಲಿ ಮಂಕಿಪಾಕ್ಸ್ ನ ಎರಡನೇ ಪ್ರಕರಣ ಪತ್ತೆಯಾಗಿದೆ. ಎರಡೂ ಪ್ರಕರಣಗಳು ಕೇರಳದಲ್ಲಿ ಪತ್ತೆಯಾಗಿವೆ. ರೋಗಲಕ್ಷಣಗಳನ್ನು ತೋರಿಸಿದ ನಂತರ ವ್ಯಕ್ತಿಯನ್ನು ಕಣ್ಣೂರಿನ ಪರಿಯಾರಾಮ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ ಎನ್ನಲಾಗಿದೆ. ಸೋಂಕಿತರ ಮಾದರಿಯನ್ನು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾಗಿದ್ದು, ಅಲ್ಲಿ ವರದಿ ಪಾಸಿಟಿವ್ ಬಂದಿದೆ ಅಂತ ರಾಜ್ಯ ಆರೋಗ್ಯ ಕಾರ್ಯದರ್ಶಿ ಇದನ್ನು ದೃಢಪಡಿಸಿದ್ದಾರೆ. ಈ ವ್ಯಕ್ತಿ ವಿದೇಶದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು ಎನ್ನಲಾಗಿದೆ.

ಕೇರಳ ಆರೋಗ್ಯ ಇಲಾಖೆಯು ರಾಜ್ಯದ ಎಲ್ಲಾ ಐದು ವಿಮಾನ ನಿಲ್ದಾಣಗಳಲ್ಲಿ ಕಣ್ಗಾವಲು ಹೆಚ್ಚಿಸಿದೆ. ವ್ಯಕ್ತಿ ವಿಮಾನ ನಿಲ್ದಾಣವನ್ನು ತಲುಪಿದಾಗ, ಪರೀಕ್ಷೆಯ ಸಮಯದಲ್ಲಿ ಅವನಿಗೆ ರೋಗಲಕ್ಷಣಗಳು ಕಂಡುಬಂದವು, ನಂತರ ಅವನನ್ನು ನೇರವಾಗಿ ಆಸ್ಪತ್ರೆಗೆ ಕಳುಹಿಸಲಾಯಿತು. ಮಂಕಿಪಾಕ್ಸ್ ನ ಮೊದಲ ಪ್ರಕರಣವು ಕೇರಳದಲ್ಲೇ ಕಂಡುಬಂದಿದೆ. ಆ ವ್ಯಕ್ತಿ ಯುಎಇಯಿಂದ ಹಿಂದಿರುಗಿದ್ದರು. ಅವರೊಂದಿಗೆ ಸಂಪರ್ಕಕ್ಕೆ ಬಂದ ಟ್ಯಾಕ್ಸಿ ಚಾಲಕರು, ಕುಟುಂಬ ಸದಸ್ಯರು ಮತ್ತು ಸಹ ಪ್ರಯಾಣಿಕರನ್ನು ಸಹ ನಿಗಾದಲ್ಲಿ ಇರಿಸಲಾಗಿದೆ ಎನ್ನಲಾಗಿದೆ.

Share.
Exit mobile version