ಕೆಎನ್ಎನ್ ಡಿಜಿಟಲ್ ಡೆಸ್ಕ್ : ಖ್ಯಾತ ನಟ ಪ್ರಭಾಸ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಸಿನಿಮಾ ಚಿತ್ರೀಕರಣ ರದ್ದುಗೊಂಡಿದೆ. ಹೀಗಾಗಿ ನಟನ ಅಭಿಮಾನಿಗಳು ಆತಂಕದಲ್ಲಿದ್ದಾರೆ.
ಇನ್ನು ಪ್ರಭಾಸ್ ಪ್ರಸ್ತುತ ತೀವ್ರ ಜ್ವರದಿಂದ ಬಳಲುತ್ತಿದ್ದು, ಮನೋಡು ಚಿತ್ರದ ಎಲ್ಲಾ ಚಿತ್ರೀಕರಣವನ್ನ ರದ್ದುಗೊಳಿಸಲಾಗಿದೆ. ಇನ್ನು ವೈದ್ಯರು, ನಟನಿಗೆ 10 ದಿನಗಳ ಕಾಲ ವಿಶ್ರಾಂತಿ ಪಡೆಯಲು ಸಲಹೆ ನೀಡಿದ್ದು, ಹೀಗಾಗಿ ಎಲ್ಲಾ ಚಿತ್ರೀಕರಣಗಳನ್ನ ರದ್ದುಗೊಳಿಸಲಾಗಿದೆ.
ಪ್ರಭಾಸ್ ಅವ್ರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಸಧ್ಯ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾರುತಿ ಅವರ ಚಿತ್ರ ಈ ತಿಂಗಳಲ್ಲೇ ಪ್ರಾರಂಭವಾಗಬೇಕಿತ್ತು. ಆದ್ರೆ, ನಟನಿಗೆ ಅನಾರೋಗ್ಯದ ಕಾರಣ ಚಿತ್ರದ ವೇಳಾಪಟ್ಟಿಯನ್ನ ಮುಂದೂಡಲಾಗಿದೆ ಎಂದು ತಿಳಿದುಬಂದಿದೆ. ಅಂದ್ಹಾಗೆ, ನಟ ಪ್ರಭಾಸ್ ಅವರು ಯಾವುದೇ ವಿರಾಮ ಇಲ್ಲದೇ ಚಿತ್ರೀಕರಣದಲ್ಲಿ ನಿರತರಾಗಿರುವುದರಿಂದ ಆನಾರೋಗ್ಯಕ್ಕೆ ಒಳಗಾಗಿರಬೋದು ಎನ್ನಲಾಗ್ತಿದೆ.