ಕೆಎನ್ಎನ್ ಡಿಜಿಟಲ್ ಡೆಸ್ಕ್ : ಪಾಕಿಸ್ತಾನದ ಪೇಶಾವರ ನಗರದ ಪೊಲೀಸ್ ಲೈನ್ನಲ್ಲಿರುವ ಮಸೀದಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸತ್ತವರ ಸಂಖ್ಯೆ 93ಕ್ಕೆ ಏರಿದೆ. ಮಂಗಳವಾರ ರಕ್ಷಣಾ ತಂಡ ಅವಶೇಷಗಳಿಂದ ಹಲವರ ಶವಗಳನ್ನು ಹೊರತೆಗೆದಿದ್ದು, ಸಾವಿನ ಸಂಖ್ಯೆ 90 ದಾಟಿದೆ. ಇನ್ನು ಸಾವಿನ ಸಂಖ್ಯೆ 100 ತಲುಪಬಹುದು ಎಂದು ಏಜೆನ್ಸಿಗಳು ಆತಂಕ ವ್ಯಕ್ತಪಡಿಸಿವೆ.
ಡಾನ್ ವರದಿ ಪ್ರಕಾರ, ಸಾವಿನ ಸಂಖ್ಯೆ 100 ದಾಟಿದೆ. ಗಂಭೀರವಾಗಿ ಗಾಯಗೊಂಡ ಹಲವರು ಪೇಶಾವರದ ಲೇಡಿ ರೀಡಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಫೋಟದಲ್ಲಿ ಗಾಯಗೊಂಡವರ ಸಂಖ್ಯೆ 221ಕ್ಕೆ ತಲುಪಿದೆ.
ಏತನ್ಮಧ್ಯೆ, ಭದ್ರತಾ ಏಜೆನ್ಸಿಗಳು ಸ್ಫೋಟದಲ್ಲಿ ತುಂಡರಿಸಿದ ತಲೆ ಸಿಕ್ಕಿದ್ದು, ಈ ತಲೆ ಆತ್ಮಹತ್ಯಾ ಬಾಂಬರ್’ನದ್ದು ಎಂದು ತನಿಖಾ ಸಂಸ್ಥೆಗಳು ಹೇಳುತ್ತವೆ. ನಮಾಜಿಗಳೊಂದಿಗೆ ಮುಂದಿನ ಸಾಲಿನಲ್ಲಿ ನಿಂತಿದ್ದ ಆ ಕಿರಾತಕ ನಮಾಜ್ ವೇಳೆ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದ.
ಸ್ಫೋಟದ ನಂತರ ಮಸೀದಿಯ ಮೇಲ್ಛಾವಣಿಯು ಒಳಬಿದ್ದಿದೆ ಎಂಬ ಅಂಶದಿಂದ ಸ್ಫೋಟದ ತೀವ್ರತೆಯನ್ನ ಅಳೆಯಬಹುದು. ಇನ್ನು ಅನೇಕ ಜನರು ಅದರ ಅವಶೇಷಗಳಲ್ಲಿ ಹೂತುಹೋದರು.
ಸೋಮವಾರ ಮಧ್ಯಾಹ್ನ 1.40ಕ್ಕೆ ಸ್ಫೋಟ ಸಂಭವಿಸಿ 24 ಗಂಟೆಗಳು ಕಳೆದಿವೆ. ತನಿಖಾ ಸಂಸ್ಥೆಗಳು ಇನ್ನೂ ಪ್ರಮುಖ ಸುಳಿವುಗಳನ್ನ ಹುಡುಕುತ್ತಿವೆ. ದಾಳಿಯು ಆತ್ಮಾಹುತಿ ದಾಳಿಯಾಗಿದ್ದು, ದಾಳಿಕೋರನ ತುಂಡರಿಸಿದ ತಲೆಯು ಸ್ಥಳದಲ್ಲಿ ಪತ್ತೆಯಾಗಿದೆ ಎಂದು ರಾಜಧಾನಿ ನಗರ ಪೊಲೀಸ್ ಅಧಿಕಾರಿ ಪೇಶಾವರ್ ಮೊಹಮ್ಮದ್ ಎಜಾಜ್ ಖಾನ್ ಹೇಳಿದ್ದಾರೆ.
ಕರುನಾಡಿಗೆ ಮತ್ತೆ ಮೋದಿ ಆಗಮನ: ಒಂದು ತಿಂಗಳ ಅಂತರದಲ್ಲಿ 3ನೇ ಬಾರಿ ವಿಸಿಟ್ | PM Narendra Modi
GOOD NEWS : ಹಿಂದುಳಿದ ವರ್ಗದ ಯುವಕ, ಯುವತಿಯರಿಗೆ ಗುಡ್ ನ್ಯೂಸ್ : ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನ