ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿಕೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಧಿಕೃತ ಉತ್ತರ ನೀಡಿದೆ. 2023ರ ಏಷ್ಯಾಕಪ್‌ಗಾಗಿ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳುವುದಿಲ್ಲ ಮತ್ತು ಏಷ್ಯಾಕಪ್ ತಟಸ್ಥ ಸ್ಥಳದಲ್ಲಿ ನಡೆಯಲಿದೆ ಎಂದು ಜಯ್ ಶಾ ಮಂಗಳವಾರ ಹೇಳಿದ್ದರು. ಇದೀಗ ಪಿಸಿಬಿ ಇಂತಹ ಹೇಳಿಕೆ ನಿಯಮಗಳಿಗೆ ವಿರುದ್ಧವಾಗಿದ್ದು, ಈ ಬಗ್ಗೆ ತಕ್ಷಣವೇ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆ ಕರೆಯಬೇಕು ಎಂದು ಹೇಳಿದೆ.

ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜಯ್ ಶಾ ಅವರ ಹೇಳಿಕೆಯಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಘಾತಕ್ಕೊಳಗಾಗಿದೆ ಮತ್ತು ನಿರಾಶೆಗೊಂಡಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬುಧವಾರ ಹೇಳಿಕೆ ನೀಡಿದೆ. ಏಷ್ಯಾ ಕಪ್ ಅನ್ನು ತಟಸ್ಥ ಸ್ಥಳಕ್ಕೆ ಸ್ಥಳಾಂತರಿಸುವಂತೆ ಜಯ್ ಶಾ ನೀಡಿರುವ ಹೇಳಿಕೆ ಖಂಡನೀಯ. ಈ ಹೇಳಿಕೆಯನ್ನ ಯಾವುದೇ ಮಂಡಳಿಯ ಸದಸ್ಯರೊಂದಿಗೆ ಮಾತನಾಡದೆ, ಆತಿಥೇಯರೊಂದಿಗೆ ಚರ್ಚಿಸದೆ ನೀಡಲಾಗಿದೆ. ಇದು ದೊಡ್ಡ ಪರಿಣಾಮಗಳನ್ನ ಉಂಟು ಮಾಡಬಹುದು ಎಂದಿದೆ.

ACC ಅಧ್ಯಕ್ಷರ ಹೇಳಿಕೆಗೆ PCB ಪ್ರತಿಕ್ರಿಯೆ

ಏಷ್ಯನ್ ಕ್ರಿಕೆಟ್ ಮಂಡಳಿಯ ಸಭೆಯಲ್ಲಿ ಸುದೀರ್ಘ ಚರ್ಚೆ ಮತ್ತು ಬೆಂಬಲದ ನಂತರ, ಏಷ್ಯಾಕಪ್ ಅನ್ನು ಪಾಕಿಸ್ತಾನದಲ್ಲಿ ನಡೆಸಲು ನಿರ್ಧರಿಸಲಾಯಿತು, ಆದರೆ ಈಗ ಜಯ್ ಶಾ ಅವರ ಹೇಳಿಕೆ ಈ ವಿಷಯಗಳನ್ನು ಉಲ್ಲಂಘಿಸುತ್ತದೆ ಎಂದು ಪಿಸಿಬಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದು 1983ರಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ರಚನೆಯಾದ ಸ್ಫೂರ್ತಿಗೆ ವಿರುದ್ಧವಾಗಿದೆ.

ಇಂತಹ ಹೇಳಿಕೆಗಳು ಏಷ್ಯಾದ ಕ್ರಿಕೆಟ್ ದೇಶಗಳು ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಸಂಬಂಧಗಳಲ್ಲಿ ಉದ್ವಿಗ್ನತೆಯನ್ನು ಉಂಟು ಮಾಡಬಹುದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬೆದರಿಕೆ ಹಾಕಿದೆ. ಇದಲ್ಲದೆ, ಇದು ಭಾರತದಲ್ಲಿ ನಡೆಯಲಿರುವ ಪಾಕಿಸ್ತಾನದ 2023ರ ಏಕದಿನ ವಿಶ್ವಕಪ್ ಅಥವಾ 2031ರವರೆಗೆ ನಡೆಯಲಿರುವ ಇತರ ಕ್ರಿಕೆಟ್ ಪಂದ್ಯಗಳ ಮೇಲೂ ಪರಿಣಾಮ ಬೀರಬಹುದು. ಏಷ್ಯನ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಜಯ್ ಶಾ ಅಥವಾ ಅವರ ಕಚೇರಿಯಿಂದ ಇದುವರೆಗೆ ಯಾವುದೇ ಸ್ಪಷ್ಟನೆ ನೀಡದ ಕಾರಣ, ಈ ಬಗ್ಗೆ ತಕ್ಷಣವೇ ಏಷ್ಯನ್ ಕ್ರಿಕೆಟ್ ಮಂಡಳಿಯ ಸಭೆ ಕರೆಯಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒತ್ತಾಯಿಸಿದೆ.

Share.
Exit mobile version