ಲಂಡನ್ : ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಡೌನಿಂಗ್ ಸ್ಟ್ರೀಟ್ ನಿವಾಸದ ಗೇಟ್’ಗೆ ಕಾರು ಡಿಕ್ಕಿ ಹೊಡೆದಿದ್ದು, ವ್ಯಕ್ತಿಯೊಬ್ಬನನ್ನ ಬಂಧಿಸಲಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
“ಕ್ರಿಮಿನಲ್ ಹಾನಿ ಮತ್ತು ಅಪಾಯಕಾರಿ ಚಾಲನೆಯ ಅನುಮಾನದ ಮೇಲೆ ಸಶಸ್ತ್ರ ಅಧಿಕಾರಿಗಳು ಘಟನಾ ಸ್ಥಳದಲ್ಲಿ ಒಬ್ಬ ವ್ಯಕ್ತಿಯನ್ನ ಬಂಧಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವೆಸ್ಟ್ ಮಿನಿಸ್ಟರ್ ಪೊಲೀಸರು ತಿಳಿಸಿದ್ದಾರೆ.
ಬಿಬಿಸಿ ಪ್ರಕಾರ, ಕಾರು ಗೇಟ್ಗಳಿಗೆ ಡಿಕ್ಕಿ ಹೊಡೆದ ನಂತರ ಅಧಿಕಾರಿಗಳು ವೈಟ್ಹಾಲ್ ರಸ್ತೆಯನ್ನ ಮುಚ್ಚಿದ್ದಾರೆ. ಇನ್ನು ಸಂಜೆ 4:30ಕ್ಕೆ ಈ ಘಟನೆ ನಡೆದಿದ್ದು, ಒಬ್ಬ ವ್ಯಕ್ತಿಯನ್ನ ಬಂಧಿಸಲಾಗಿದೆ ಎಂದು ವೆಸ್ಟ್ ಮಿನಿಸ್ಟರ್ ಪೊಲೀಸರು ಟ್ವೀಟ್’ನಲ್ಲಿ ತಿಳಿಸಿದ್ದಾರೆ.
ವಿಪಕ್ಷಗಳ ಬಹಿಷ್ಕಾರದ ನಡುವೆಯೇ ‘ಸಂಸತ್ ಭವನ’ ಉದ್ಘಾಟನೆಗೆ 24 ಪಕ್ಷಗಳು ಭಾಗಿ, JDS-BSP ಕೂಡ ಸೇರ್ಪಡೆ
JOB ALERT : ಉದ್ಯೋಗಾಂಕ್ಷಿಗಳ ಗಮನಕ್ಕೆ : ಮೇ 29 ರಂದು ಉಡುಪಿಯಲ್ಲಿ ‘ಉದ್ಯೋಗ ಮೇಳ ಆಯೋಜನೆ
ಆರ್ಥಿಕ ಹಿಂಜರಿತಕ್ಕೆ ಬಲಿಪಶುವಾಯ್ತು ಈ ದೇಶ, ಅಧಿಕೃತ ಅಂಕಿ-ಅಂಶಗಳಿಂದ ಮಾಹಿತಿ ಬಹಿರಂಗ