ಕೆಎನ್ಎನ್ ಡಿಜಿಟಲ್ ಡೆಸ್ಕ್ : ಗುಂಡೇಟಿನಿಂದ ಆಸ್ಪತ್ರೆ ಸೇರಿದ್ದ ಒಡಿಶಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ನಬ್ ಕಿಶೋರ್ ದಾಸ್ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇಂದು (ಭಾನುವಾರ) ಬೆಳಿಗ್ಗೆ ಗುಂಡೇಟಿಗೆ ಸೇರಿದ್ದ ಸಚಿವ ನಬಾ ಕಿಶೋರ್ ದಾಸ್ ಅವರು ಸಂಜೆ ಕೊನೆಯುಸಿರೆಳೆದಿದ್ದಾರೆ.
ಅಂದ್ಹಾಗೆ, ನಬಾ ಕಿಶೋರ್ ದಾಸ್ ಅವ್ರನ್ನ ಸಹಾಯಕ ಸಬ್ ಇನ್ಸ್ಪೆಕ್ಟರ್ನಿಂದ ಗುಂಡು ಹಾರಿಸಲ್ಪಟ್ಟ ಕೆಲವೇ ಗಂಟೆಗಳ ನಂತರ ಇಂದು ನಿಧನರಾದರು. ಜಾರ್ಸುಗುಡ ಜಿಲ್ಲೆಯ ಬ್ರಜರಾಜನಗರ ಬಳಿಯ ಗಾಂಧಿ ಚೌಕ್ನಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಸಚಿವರ ಎದೆಗೆ ಗುಂಡು ಹಾರಿಸಲಾಗಿದ್ದು, ಅಪೊಲೊ ಆಸ್ಪತ್ರೆಗೆ ದಾಕಲಿಸಲಾಯ್ತು. ಸಧ್ಯ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಅದ್ರಂತೆ, ಸಧ್ಯ “ಗಾಯಗಳನ್ನು ಸರಿಪಡಿಸಲಾಯಿತು ಮತ್ತು ಹೃದಯದ ಪಂಪಿಂಗ್ ಸುಧಾರಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಯಿತು. ಅವರಿಗೆ ತುರ್ತು ಐಸಿಯು ಆರೈಕೆ ನೀಡಲಾಯಿತು. ಆದರೆ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಅವರನ್ನು ಪುನರುಜ್ಜೀವನಗೊಳಿಸಲು ಸಾಧ್ಯವಾಗಲಿಲ್ಲ ಮತ್ತು ಅವರ ಗಾಯಗಳಿಗೆ ಬಲಿಯಾದರು” ಎಂದು ಆಸ್ಪತ್ರೆ ಹೇಳಿಕೆಯಲ್ಲಿ ತಿಳಿಸಿದೆ.