ನವದೆಹಲಿ : ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದು, ಈತನ ವಿರುದ್ಧ ವಿಜಯವಾಡ ಪಟಮಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಐಕ್ಯ ಕಾಪುನಾಡು ರಾಜ್ಯಾಧ್ಯಕ್ಷ ಬೇತು ರಾಮಮೋಹನ ರಾವ್, ಟ್ವಿಟರ್’ನಲ್ಲಿ ಕಾಪುಗಳ ಬಗ್ಗೆ ಅನುಚಿತ ಕಾಮೆಂಟ್ ಮಾಡಿದ ರಾಮ್ ಗೋಪಾಲ್ ವರ್ಮಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಐ ಕಾಶಿ ವಿಶ್ವನಾಥ್ ಅವ್ರಿಗೆ ಮಂಗಳವಾರ ಪಟಮಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ರಾಮ್ ಗೋಪಾಲ್ ವರ್ಮಾ ಸಾಮಾಜಿಕ ಜಾಲತಾಣಗಳಲ್ಲಿ ಜಾತಿ-ಜಾತಿಗಳ ನಡುವೆ ಗದ್ದಲ ಎಬ್ಬಿಸಲು ಪೋಸ್ಟ್ ಹಾಕುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಟಿಡಿಪಿ ಮುಖ್ಯಸ್ಥ ಚಂದ್ರಬಾಬು, ಜನಸೇನಾ ಅಧ್ಯಕ್ಷ ಪವನ್ ಭೇಟಿ ಕುರಿತು ರಾಮ್ ಗೋಪಾಲ್ ವರ್ಮಾ ಮಾಡಿರುವ ವರ್ಮಾ ಟ್ವೀಟ್ ಸಂಚಲನ ಮೂಡಿಸುತ್ತಿದೆ. “ಕಮ್ಮ ಅವ್ರು ಕಾಪುವನ್ನ ಹಣಕ್ಕಾಗಿ ಮಾರುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಆರ್ಐಪಿ ಕಾಪುಗಳೇ, ಕಮ್ಮಾ ಜನರಿಗೆ ಅಭಿನಂದನೆಗಳು” ಎಂದು ವರ್ಮಾ ಟ್ವೀಟ್ ಮಾಡಿದ್ದಾರೆ.
ಈ ಕಾಮೆಂಟ್ಗಳು ರಾಜಕೀಯ ವಲಯದಲ್ಲಿ ಮಾತ್ರವಲ್ಲದೇ ಕಾಪು ಮತ್ತು ಕಮ್ಮ ಜಾತಿಯಲ್ಲೂ ಆಕ್ರೋಶಕ್ಕೆ ಕಾರಣವಾಗಿವೆ. ಯಾವಾಗಲೂ ಸೆನ್ಸೇಷನಲ್ ಕಾಮೆಂಟ್ಗಳನ್ನ ಮಾಡುವ ವರ್ಮಾ, ಈ ಬಾರಿ ಕಾಮೆಂಟ್ಗಳ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ರಾಜಕೀಯ ಮತ್ತು ಜಾತಿಗೆ ಸಂಬಂಧಿಸಿದಂತೆ ಮಾಡಲಾಗಿದೆ.
BREAKING NEWS : ಕರ್ನಾಟಕದ ಮೂವರು ಬಾಲಕರಿಗೆ ‘ಶೌರ್ಯ ಪ್ರಶಸ್ತಿ’ ಪ್ರದಾನ |National Bravery Award
ಚಳಿಗಾಲದಲ್ಲಿ ʼಪಾತ್ರೆ ತೊಳೆಯಲು ಸಮಸ್ಯೆʼಯೇ? ಈ ಸಲಹೆಗಳನ್ನು ಅನುಸರಿಸಿ | Cleaning Tips