ನವದೆಹಲಿ: ದೇಶದ ನೂತನ ಉಪರಾಷ್ಟ್ರಪತಿಯಾಗಿ ಜಗದೀಪ್ ಧನಕರ್ ಆಯ್ಕೆಯಾಗಿದ್ದಾರೆ. ಶನಿವಾರ ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ 528 ಮತಗಳನ್ನ ಪಡೆದ ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್ (ಎನ್ಡಿಎ) ಅಭ್ಯರ್ಥಿ ಧನಕರ್‌, ವಿರೋಧ ಪಕ್ಷದ ಜಂಟಿ ಅಭ್ಯರ್ಥಿ ಮಾರ್ಗರೆಟ್ ಆಳ್ವ ಅವರನ್ನ ಸೋಲಿಸಿದರು. ಈಗ ಅವರು ಆಗಸ್ಟ್ 11ರಂದು ಉಪಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅಂದ್ಹಾಗೆ, ಹಾಲಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರ ಅಧಿಕಾರಾವಧಿ ಆಗಸ್ಟ್ 10ರಂದು ಕೊನೆಗೊಳ್ಳುತ್ತದೆ.

ಅಂದ್ಹಾಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ತೃಣಮೂಲ ಕಾಂಗ್ರೆಸ್ ಶ್ರೀಮತಿ ಆಳ್ವಾ ಅವ್ರ ಹೆಸರನ್ನ ನಿರ್ಧರಿಸುವಾಗ ಸಮಾಲೋಚನೆಗಳ ಕೊರತೆಯಿದೆ ಎಂದು ಆರೋಪಿಸಿ, ಮತದಾನದಿಂದ ದೂರ ಉಳಿದಿತ್ತು. ಈ ಮೂಲಕ ಪ್ರತಿಪಕ್ಷಗಳ ಒಗ್ಗಟ್ಟಿನಲ್ಲಿ ಬಿರುಕುಗಳು ಕಂಡುಬಂದವು.

ಅಂದ್ಹಾಗೆ, 71 ವರ್ಷದ ಜಗದೀಪ್ ಧನಕರ್ ಮೂಲ ಬಿಜೆಪಿಗರಲ್ಲ. ರಾಜಸ್ಥಾನದ ಜುಂಝುನು ಜಿಲ್ಲೆಯಲ್ಲಿ 1951ರ ಮೇ 18ರಂದು ಕಿತಾನಾ ಗ್ರಾಮದ ರೈತಾಪಿ ಕುಟುಂಬದಲ್ಲಿ ಜನಿಸಿದರು. 1989ರಲ್ಲಿ ಜನತಾದಳದ ಅಭ್ಯರ್ಥಿಯಾಗಿ ರಾಜಸ್ಥಾನದ ಜುಂಝುನು ಕ್ಷೇತ್ರದಿಂದ ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧಿಸಿ, ಗೆಲುವು ಕಂಡರು. ನಂತ್ರ ಪಿವಿ ನರಸಿಂಹ ರಾವ್ ಅವ್ರು ಪ್ರಧಾನಿಯಾದ ಬಳಿಕ ಕಾಂಗ್ರೆಸ್ ಸೇರ್ಪಡೆಯಾದರು. 1993ರಲ್ಲಿ ಕಿಶನ್‌ಗಡ ಕ್ಷೇತ್ರದಿಂದ ರಾಜಸ್ಥಾನದ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾದರು. ನಂತ್ರ ಅಶೋಕ್ ಗೆಹ್ಲೋಟ್ ಅಧಿಕಾರಕ್ಕೆ ಬಂದ್ಮೇಲೆ ಅಂದ್ರೆ 2008ರಲ್ಲಿ ಬಿಜೆಪಿಗೆ ಸೇರ್ಪಡೆಯಾದ್ರು. ಇನ್ನು 2019ರ ಜುಲೈ 30ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಧನಕರ್ ಅವರನ್ನು ಪಶ್ಚಿಮ ಬಂಗಾಳ ರಾಜ್ಯಪಾಲರನ್ನಾಗಿ ನೇಮಿಸಿದರು.

Share.
Exit mobile version