BREAKING NEWS : ‘ಆಸಿಡ್‌ ಸಂತ್ರಸ್ತರ’ ಮಾಸಾಶನ 3 ಸಾವಿರದಿಂದ 10 ಸಾವಿರಕ್ಕೆ ಹೆಚ್ಚಳ : ಸಿಎಂ ಬೊಮ್ಮಾಯಿ ಘೋಷಣೆ

ಬೆಂಗಳೂರು : ಆಸಿಡ್‌ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ಕೊಟ್ಟಿದ್ದು, ಮಾಸಾಶನವನ್ನ 3 ಸಾವಿರ ರೂಪಾಯಿಗಳಿಂದ 10 ಸಾವಿರ ರೂಪಾಯಿಗಳಿಗೆ ಹೆಚ್ಚಿಸಿದೆ. ಬೆಂಗಳೂರಿನಲ್ಲಿ ಈ ಕುರಿತು ಮಾಹಿತಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆಸಿಡ್‌ ಸಂತ್ರಸ್ತರಿಗೆ 10 ಸಾವಿರ ಮಾಶಾಸಾನ ಹೆಚ್ಚಳ ಮಾಡಿದ್ದೇವೆ. 3 ಸಾವಿರದಿಂದ 10 ಸಾವಿರ ರೂಪಾಯಿಗೆ ಹೆಚ್ಚಳ ಮಾಡಿದ್ದೇವೆ. ನಿರ್ದೇಶನದ ವ್ಯವಸ್ಥೆ ಬಗ್ಗೆ ನಾಳೆಯೊಳಗೆ ಆದೇಶ ಪ್ರಕಟಿಸಲಿದ್ದು, ಆದೇಶ ಪ್ರಕಟಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ” ಎಂದರು.