ನವದೆಹಲಿ:ಬಿಆರ್ ಚೋಪ್ರಾ(BR Chopra) ಅವರ ಮಹಾಭಾರತ (mahabharat)ಶೋನಲ್ಲಿ ಭೀಮನ(Bhim) ಪಾತ್ರವನ್ನು ನಿರ್ವಹಿಸಿದ ಪ್ರವೀಣ್ ಕುಮಾರ್ ಸೋಬ್ತಿ ನಿಧನರಾದರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಅವರು 74 ನೇ ವರ್ಷಕ್ಕೆ ಕಾಲಿಟ್ಟಿದ್ದರು.
ಪಂಜಾಬ್‌ನಿಂದ ಬಂದ ಈ ನಟ ಮಹಾಭಾರತ ಸರಣಿಯಲ್ಲಿ ಭೀಮನ ಪಾತ್ರವನ್ನು ನಿರ್ವಹಿಸಿದ ನಂತರ ಮನೆ ಮಾತಾದರು . ನಟನಾಗುವುದರ ಜೊತೆಗೆ, ಅವರು ಅಥ್ಲೀಟ್ ಆಗಿದ್ದರು ಮತ್ತು ಹ್ಯಾಮರ್ ಮತ್ತು ಡಿಸ್ಕ್ ಥ್ರೋನಲ್ಲಿ ಅಗ್ರ ಆಟಗಾರರಾಗಿದ್ದರು. ಅವರು ಏಷ್ಯನ್ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾಗಿದ್ದರು ಮತ್ತು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು.ಬಿಎಸ್‌ಎಫ್‌ನಲ್ಲಿ(BSF) ಡೆಪ್ಯುಟಿ ಕಮಾಂಡೆಂಟ್ ಆಗಿದ್ದ ಸೋಬ್ತಿ ಅವರು ಏಷ್ಯನ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಹಲವಾರು ಪದಕಗಳನ್ನು ಗೆದ್ದಿದ್ದಾರೆ.ಇದರಲ್ಲಿ ಅವರು ಹಾಂಗ್ ಕಾಂಗ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ವಿಜೇತರಾಗಿದ್ದರು ಹಾಗೂ ಹಲವಾರು ಪದಕಗಳನ್ನು ಗೆದ್ದಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಎರಡು ಬಾರಿ ದೇಶವನ್ನು ಪ್ರತಿನಿಧಿಸಿದ್ದರು. ಅವರು 1960 ಮತ್ತು 70 ರ ದಶಕದಲ್ಲಿ ಅಥ್ಲೆಟಿಕ್ಸ್ನಲ್ಲಿ ಪ್ರಚಂಡ ಜನಪ್ರಿಯತೆಯನ್ನು ಗಳಿಸಿದರು.
ಅವರು ಬಣ್ಣದ ಲೋಕಕ್ಕೆ ಪ್ರವೇಶಿಸಿದ ನಂತರ, ಬಿಆರ್ ಚೋಪ್ರಾ ಅವರನ್ನು ಭೇಟಿಯಾಗುವ ಮೊದಲು ಅವರು ಸುಮಾರು 30 ಚಲನಚಿತ್ರಗಳಲ್ಲಿ ಕೆಲಸ ಮಾಡಿದರು,ನಂತರ ಚೋಪ್ರಾ ಅವರಿಗೆ ಮಹಾಭಾರತದಲ್ಲಿ ಭೀಮನ ಪಾತ್ರ ನೀಡಿದರು. ಉಳಿದದ್ದು ಇತಿಹಾಸ. ಮಹಾಭಾರತದ ಯಶಸ್ಸಿನ ನಂತರ, ಜನರು ಅವರನ್ನು ಅವರ ನಿಜವಾದ ಹೆಸರಿಗಿಂತ ಭೀಮ ಎಂದು ನೆನಪಿಸಿಕೊಂಡರು.
2013 ರಲ್ಲಿ, ಪ್ರವೀಣ್ ಕುಮಾರ್ ಸೋಬ್ತಿ ರಾಜಕೀಯಕ್ಕೆ ಸೇರಿದರು, ಅವರು ಆಮ್ ಆದ್ಮಿ ಪಕ್ಷದ ಟಿಕೆಟ್‌ನಲ್ಲಿ ದೆಹಲಿಯ ವಜೀರ್‌ಪುರದಿಂದ ಸ್ಪರ್ಧಿಸಿ ವಿಫಲರಾಗಿದ್ದರು. ಇದಾದ ಬಳಿಕ ಆಪ್ ತೊರೆದು ಬಿಜೆಪಿ ಸೇರಿದ್ದರು. ಅವರ ಕೊನೆಯ ಚಿತ್ರ 2013 ರಲ್ಲಿ ಬಿಡುಗಡೆಯಾಯಿತು. ಚಿತ್ರದ ಹೆಸರು ‘ಮಹಾಭಾರತ್ ಔರ್ ಬಾರ್ಬರಿಕ್’. ಸೋಬ್ತಿ ಇಲ್ಲಿಯೂ ಭೀಮನ ಪಾತ್ರವನ್ನು ಮಾಡಿದ್ದಾರೆ.