ನವದೆಹಲಿ : ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಈ ಅಧಿವೇಶನದಲ್ಲೂ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಪ್ರತಿಧ್ವನಿಸಿದೆ.ಗಡಿ ವಿವಾದದಲ್ಲಿ ಒಡಕ್ಕುಂಟು ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಉಭಯ ರಾಜ್ಯ ಸರ್ಕಾರಗಳು ಒಡಕುಂಟು ಮಾಡಲು ಯತ್ನ ನಡೆದಿದೆ ಎಂದು ಎನ್ ಸಿಪಿ ಸಂಸದೆ ಸುಪ್ರಿತಾ ಹೇಳಿದ್ದಾರೆ.

BIGG NEWS : ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ : ಸಾರ್ವಜನಿಕರು ಕಾನೂನನ್ನು ಕೈಗೆತ್ತಿಕೊಳ್ಳಬಾರದು : ಗೃಹ ಸಚಿವ ಅರಗಜ್ಞಾನೇಂದ್ರ

ಇಂದು ಅಧಿವೇಶನದಲ್ಲಿ ಎನ್ ಸಿಪಿ ಸಂಸದೆ ಸುಪ್ರಿತಾ ಮಾತನಾಡಿದ್ದು, ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದಲ್ಲಿ ಒಡಕ್ಕುಂಟು ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಉಭಯ ರಾಜ್ಯ ಸರ್ಕಾರಗಳು ಒಡಕುಂಟು ಮಾಡಲು ಯತ್ನ ನಡೆದಿದೆ. ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕರ್ನಾಟಕದ ಸಿಎಂ ಹೇಳಿಕೆ ನೀಡುತ್ತಿದ್ದಾರೆ. ಕರ್ನಾಟಕದಲ್ಲಿ ಮಹಾರಾಷ್ಟ್ರದವರ ಮೇಲೆ ಹಲ್ಲೆ ನಡೆದಿದೆ. ಇದಕ್ಕೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಕೇಳಿದ್ದಾರೆ.

ಈ ವೇಳೆ ಮಧ್ಯಪ್ರವೇಶಿಸಿದ ರಾಜ್ಯ ಸಂಸದ ಶಿವಕುಮಾರ್ ಉದಾಸಿ, ಗಡಿ ವಿವಾದ ಪ್ರಕರಣ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿದೆ. ಹೀಗಾಗಿ ಈಗ ಗಡಿ ಬಗ್ಗೆ ಎನ್ ಸಿಪಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಈ ವೇಳೆ ಲೋಕಸಭಾ ಸ್ಪೀಕರ್ ಗಡಿ ವಿವಾದ ಬಗ್ಗೆ ಚರ್ಚೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Share.
Exit mobile version