ನವದೆಹಲಿ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಧವಾರ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರನ್ನ ಭಾರತದ 49ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ನೇಮಕ ಮಾಡಿದ್ದಾರೆ. ರಾಷ್ಟ್ರಪತಿಗಳು ತಮ್ಮ ನೇಮಕಾತಿ ಆದೇಶಕ್ಕೆ ಸಹಿ ಹಾಕಿದ್ದು, ನ್ಯಾಯಮೂರ್ತಿ ಲಲಿತ್ ಅವ್ರು ಆಗಸ್ಟ್ 27ರಂದು ಸಿಜೆಐ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇನ್ನು ನಿರ್ಗಮಿತ ಸಿಜೆಐ ಎನ್.ವಿ. ರಮಣ ಅವರು ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರನ್ನ ಅವರ ಉತ್ತರಾಧಿಕಾರಿಯಾಗಿ ನೇಮಿಸಿದ್ದಕ್ಕಾಗಿ ಅಭಿನಂದಿಸಿದರು.

ನಿರ್ಗಮಿತ ಮುಖ್ಯ ನ್ಯಾಯಮೂರ್ತಿ ರಮಣ ಅವರು ಒಂದು ದಿನ ಮುಂಚಿತವಾಗಿ (ಆಗಸ್ಟ್ 26 ರಂದು) ನಿವೃತ್ತರಾಗಲಿದ್ದಾರೆ. “ಸಂವಿಧಾನದ 124ನೇ ವಿಧಿಯ ಕಲಂ 2ರ ನಿಬಂಧನೆಗಳಿಂದ ಪ್ರದತ್ತವಾದ ಅಧಿಕಾರವನ್ನ ಚಲಾಯಿಸಲು, ರಾಷ್ಟ್ರಪತಿಗಳು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರನ್ನ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲು ಸಂತೋಷವಾಗಿದೆ” ಎಂದು ಕಾನೂನು ಸಚಿವಾಲಯದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅವ್ರ ನೇಮಕವು ಆಗಸ್ಟ್ 27, 2022ರಿಂದ ಜಾರಿಗೆ ಬರಲಿದ್ದು, ನ್ಯಾಯಮೂರ್ತಿ ಲಲಿತ್ ಅವ್ರು ಮೂರು ತಿಂಗಳಿಗಿಂತ ಕಡಿಮೆ ಅವಧಿಯನ್ನ ಹೊಂದಿರುತ್ತಾರೆ. ಅವರು ನವೆಂಬರ್ 8ರಂದು ತಮ್ಮ 65ನೇ ವಯಸ್ಸಿನಲ್ಲಿ ನಿವೃತ್ತರಾಗಲಿದ್ದಾರೆ.

Share.
Exit mobile version