ನವದೆಹಲಿ : 2023ರ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಫ್ರಾಂಚೈಸಿ ಪಂಜಾಬ್ ಕಿಂಗ್ಸ್ ದೊಡ್ಡ ಬದಲಾವಣೆ ಮಾಡಿದ್ದು, ತಂಡದ ನಾಯಕತ್ವನನ್ನ ಮಯಾಂಕ್ ಅಗರ್ವಾಲ್ ಬದಲಿಗೆ ಭಾರತದ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ವಹಿಸಿಕೊಳ್ಳಲಿದ್ದಾರೆ ಎಂದು ಘೋಷಿಸಿದೆ.

BIGG NEWS ; ಯು-ಟರ್ನ್ ಹೊಡೆದ ರಿಷಿ ಸುನಕ್ ; ‘COP27 ಶೃಂಗಸಭೆ’ಯಲ್ಲಿ ಭಾಗಿಯಾಗೋದಾಗಿ ಘೋಷಣೆ

ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿದ ಫ್ರಾಂಚೈಸಿ “ಶಿಖರ್ ಧವನ್ ಅವರನ್ನು ಪಂಜಾಬ್ ಕಿಂಗ್ಸ್ ತಂಡದ ನಾಯಕನನ್ನಾಗಿ ಘೋಷಿಸಲು ನಮಗೆ ಸಂತೋಷವಾಗಿದೆ” ಎಂದಿದೆ.

ಅಂದ್ಹಾಗೆ, ಐಪಿಎಲ್ 2022ಕ್ಕೆ ಸ್ವಲ್ಪ ಮೊದಲು ಕೆ. ಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ಗೆ ತೆರಳಲು ನಿರ್ಧರಿಸಿದ ನಂತ್ರ ಅಗರ್ವಾಲ್ ಅವರನ್ನ ನಾಯಕನನ್ನಾಗಿ ನೇಮಿಸಲಾಯಿತು.

ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ಪ್ಲೇ ಆಫ್ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. 2018ರಲ್ಲಿ ಪಂಜಾಬ್ ಫ್ರಾಂಚೈಸಿಗೆ ಸೇರಿದ ಅಗರ್ವಾಲ್, 2022ರ ಐಪಿಎಲ್ ಋತುವಿನಲ್ಲಿ 13 ಪಂದ್ಯಗಳಲ್ಲಿ 16.33 ಸರಾಸರಿಯಲ್ಲಿ ಕೇವಲ 196 ರನ್‍ಗಳನ್ನ ಗಳಿಸಿದ್ದಾರೆ.

ಸಾಲ್ಡರಿಂಗ್ ಗನ್ ಜೊತೆ ಮತ್ತೆ ‘ಡ್ರೋನ್ ಪ್ರತಾಪ್’ ಪ್ರತ್ಯಕ್ಷ : ‘ಅಣ್ಣಾ…ಮಿಕ್ಸಿ ರಿಪೇರಿನಾ’..? ಎಂದು ನೆಟ್ಟಿಗರಿಂದ ಟ್ರೋಲ್ |Drone Prathap

ಒಂದಲ್ಲಾ, ಎರಡಲ್ಲ ವಾಟ್ಸಾಪ್’ನಲ್ಲಿ ಬರ್ತಿವೆ 5 ಅದ್ಭುತ ವೈಶಿಷ್ಟ್ಯ, ಹೇಗೆ ಕಾರ್ಯ ನಿರ್ವಹಿಸುತ್ವೆ ಗೊತ್ತಾ?

Share.
Exit mobile version