ಮುಂಬೈ : ಇಂಡಿಗೋ ವಿಮಾನದಲ್ಲಿ ಮತ್ತೆ ಎಮರ್ಜೆನ್ಸಿ ಬಾಗಿಲು ಓಪನ್ ಮಾಡಿರುವ ಘಟನೆ ಮುಂಬೈ-ನಾಗ್ಪುರ ಮಾರ್ಗದ ವಿಮಾನದಲ್ಲಿ ನಡೆದಿದೆ.
ಮುಂಬೈ-ನಾಗ್ಪುರ ಮಾರ್ಗದ ವಿಮಾನ ಲ್ಯಾಂಡಿಂಗ್ ವೇಳೆ ಪ್ರಯಾಣಿಕರು ವಿಮಾನದ ಎಮರ್ಜೆನ್ಸಿ ಬಾಗಿಲು ಓಪನ್ ಮಾಡಿದ್ದಾರೆ. ಕೂಡಲೇ ಎಚ್ಚೆತ್ತ ಸಿಬ್ಬಂದಿ ಸಂಭವಿಸಬಹುದಾಗಿದ್ದ ಭಾರೀ ಅವಘಡವನ್ನು ತಪ್ಪಿಸಿದ್ದಾರೆ. ಸದ್ಯ ಎಮರ್ಜೆನ್ಸಿ ಬಾಗಿಲು ಓಪನ್ ಮಾಡಿದ ಪ್ರಯಾಣಿಕನನ್ನು ಬಂಧಿಸಲಾಗಿದೆ.
ವರದಿಗಳ ಪ್ರಕಾರ, ಇಂಡಿಗೊ 6 ಇ -5274 ವಿಮಾನದ ಹಿರಿಯ ಕ್ಯಾಬಿನ್ ಸಿಬ್ಬಂದಿ ನೀಡಿದ ದೂರಿನ ಆಧಾರದ ಮೇಲೆ ಪ್ರಯಾಣಿಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ತಿಳಿಸಿದ್ದಾರೆ.
“ನಾಗ್ಪುರದಿಂದ ಮುಂಬೈಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ವಿಮಾನವು ಗಾಳಿಯಲ್ಲಿದ್ದಾಗ ಮತ್ತು ಇಳಿಯಲು ಸಮೀಪಿಸುತ್ತಿರುವಾಗ ತುರ್ತು ನಿರ್ಗಮನದ ಕವರ್ ಅನ್ನು ತೆಗೆದುಹಾಕಲು ಪ್ರಯತ್ನಿಸಿದರು. ವಿಮಾನದಲ್ಲಿದ್ದ ಸಿಬ್ಬಂದಿ ಕ್ಯಾಪ್ಟನ್ಗೆ ಎಚ್ಚರಿಕೆ ನೀಡಿದರು ಮತ್ತು ಪ್ರಯಾಣಿಕರಿಗೆ ಸೂಕ್ತವಾಗಿ ಎಚ್ಚರಿಕೆ ನೀಡಲಾಯಿತು” ಎಂದು ಏರ್ಲೈನ್ಸ್ ತಿಳಿಸಿದೆ.